ದಕ್ಷಿಣ ಕನ್ನಡ

ತಂಡದಿಂದ ಹಲ್ಲೆ : ಗಾಯಾಳು ಆಸ್ಪತ್ರೆಗೆ ದಾಖಲು

ಬೆಳ್ಳಾರೆ: ಯುವಕನೊಬ್ಬನ ಮೇಲೆ ತಂಡವೊಂದು ಹಲ್ಲೆ ನಡೆಸಿದ ಘಟನೆ ಶನಿವಾರ ರಾತ್ರಿ ಬೆಳ್ಳಾರೆ ಪೇಟೆಯಲ್ಲಿ ನಡೆದಿದೆ.. ಆಶೀರ್ ಬೆಳ್ಳಾರೆ ಹಲ್ಲೆಯಿಂದ ಗಾಯಗೊಂಡಿದ್ದು, ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ರಾತ್ರಿ 9:30 ಸಮಯಕ್ಕೆ ಬೆಳ್ಳಾರ ಪೇಟೆಯಲ್ಲಿ ಅಜರುದ್ದೀನ್ ಮತ್ತು ಜಮಾಲ್ ಬೆಳ್ಳಾರೆ ಎಂಬವರು ಆಶೀರ್ ಎಂಬ ಯುವಕ ಬೈಕ್ ನಲ್ಲಿ ಬರುವ ವೇಳೆ ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ಕೊಲೆಗೆ ಯತ್ನಿಸಿದ್ದಾರೆ ಎಂಬ ಆರೋಪವು ಕೇಳಿ ಬಂದಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕ

ತಂಡದಿಂದ ಹಲ್ಲೆ : ಗಾಯಾಳು ಆಸ್ಪತ್ರೆಗೆ ದಾಖಲು Read More »

ಚಾರ್ವಾಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ : ಕೃಷಿ ಮೇಳ ಉದ್ಘಾಟನೆ | ದ.ಕ ಜಿಲ್ಲೆ ಮುಂದುವರಿಯಲು ಸಹಕಾರಿ ಸಂಘಗಳೇ ಕಾರಣ : ನಳಿನ್ ಕುಮಾರ್ ಕಟೀಲ್

ಕಾಣಿಯೂರು: ಮೊಳಹಳ್ಳಿ ಶಿವರಾಯರ ದೂದೃಷ್ಠಿಯ ಫಲವಾಗಿ ಇಂದು ಜಿಲ್ಲೆಯಲ್ಲಿ ಸಹಕಾರಿ ಸಂಘಗಳು  ಪ್ರಾಮಾಣಿಕ ಸೇವೆಯಿಂದ ಗಟ್ಟಿಯಾಗಿ ನೆಲೆಯೂರಿ ಜಿಲ್ಲೆಯನ್ನು ಮುಂದುವರಿದ ಜಿಲೆಯನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿವೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಅವರು ಶನಿವಾರ ಕಾಣಿಯೂರಿನಲ್ಲಿ ಚಾರ್ವಾಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ ಆಚರಣೆಯ ಸಲುವಾಗಿ ಆಯೋಜಿಸಲಾಗಿದ್ದ ಕೃಷಿ ಮೇಳವನ್ನು ಉದ್ಘಾಟಸಿ ಮಾತನಾಡಿದರು. ಬ್ರಿಟೀಷರ ಆಳ್ವಿಕೆಯ ಕಾಲಘಟ್ಟದಲ್ಲಿ ದೇಶದಲ್ಲಿ ಆರ್ಥಿಕ ಚಿಂತನೆಗಳೇ ಇಲ್ಲದ , ಸಹಕಾರಿ ವೈವಸ್ಥೆಯೇ ಇಲ್ಲದ, ಆಧುಕಿನಕತೆ, ಮೂಲಭೂತ

ಚಾರ್ವಾಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ : ಕೃಷಿ ಮೇಳ ಉದ್ಘಾಟನೆ | ದ.ಕ ಜಿಲ್ಲೆ ಮುಂದುವರಿಯಲು ಸಹಕಾರಿ ಸಂಘಗಳೇ ಕಾರಣ : ನಳಿನ್ ಕುಮಾರ್ ಕಟೀಲ್ Read More »

ನಿಷೇಧಿತ ಉಗ್ರ ಸಂಘಟನೆ ಪಿಎಫ್ ಐ ಮುಖಂಡನ ಬಳಿ ಅಕ್ರಮ ಪಿಸ್ತೂಲು | ಹಿಂದೂಗಳ ಹತ್ಯೆಗೆ ಸಂಚು | ಉನ್ನತ ಮಟ್ಟದ ತನಿಖೆಗೆ ವಿಶ್ವ ಹಿಂದೂ ಪರಿಷದ್ ನಿಂದ ಆಗ್ರಹ

ಮಂಗಳೂರು: ಮೂಡುಶೆಡ್ಡೆಯಲ್ಲಿ ನಿಷೇಧಿತ ಉಗ್ರ ಸಂಘಟನೆ ಪಿಫ್ಐ ಮುಖಂಡ ಬದ್ರುದ್ದೀನ್  ಅಕ್ರಮ ಪಿಸ್ತೂಲಿನಿಂದ ಗುಂಡು ಹರಿಸಿದ ಪರಿಣಾಮ ಒಬ್ಬ ವ್ಯಕ್ತಿಗೆ ಗಂಭೀರ ಗಾಯವಾಗಿದೆ. ಅಕ್ರಮವಾಗಿ ಪಿಸ್ತೂಲು ಮದ್ದುಗುಂಡುಗಳನ್ನು ಇಟ್ಟುಕೊಂಡು ಹಿಂದುಗಳ ಮತ್ತು ಹಿಂದೂ ಮುಖಂಡರ ಕೊಲೆಗೆ ಸಂಚು ರೂಪಿಸಿತ್ತಿರುವ ಬಗ್ಗೆ ಸಂಶಯ ವ್ಯಕ್ತವಾಗುತ್ತಿದ್ದು, ಪಿಎಫ್ ಐ ಸಂಘಟನೆಯನ್ನು ಇಂತಹದ್ದೇ ಕಾರಣಕ್ಕಾಗಿ ನಿಷೇದಿಸಿದ್ದು ಅಲ್ಲದೆ ಇದರ ಮುಖಂಡರು ಅಕ್ರಮ ಪಿಸ್ತೂಲು ಹೊಂದಿರುವುದು ಇಡೀ ಜಿಲ್ಲೆಯಲ್ಲಿ ಆತಂಕಕ್ಕೆ ಕಾರಣವಾಗಿದೆ. ಹಾಗಾಗಿ ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ನಡೆಸಲು ವಿಶ್ವ

ನಿಷೇಧಿತ ಉಗ್ರ ಸಂಘಟನೆ ಪಿಎಫ್ ಐ ಮುಖಂಡನ ಬಳಿ ಅಕ್ರಮ ಪಿಸ್ತೂಲು | ಹಿಂದೂಗಳ ಹತ್ಯೆಗೆ ಸಂಚು | ಉನ್ನತ ಮಟ್ಟದ ತನಿಖೆಗೆ ವಿಶ್ವ ಹಿಂದೂ ಪರಿಷದ್ ನಿಂದ ಆಗ್ರಹ Read More »

ಮಂಗಳೂರಿನಲ್ಲಿ ಹೈಡ್ರೋವಿಡ್ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಮಂಗಳೂರು : ಮಂಗಳೂರು ನಗರ ಪೊಲೀಸರ ಸಿಸಿಬಿ ಘಟಕವು ಗೋವಾದಿಂದ ಮಂಗಳೂರು ಮತ್ತು ಕೇರಳಕ್ಕೆ ಹೈಡೋವಿಡ್ ಗಾಂಜಾ ಸಾಗಾಟ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ಬಂಧಿಸಿ, 73 ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಂಡಿರುವ ಘಟನೆ ನಡೆದಿದೆ. ಬಂಧಿತ ಆರೋಪಿಯನ್ನು ಶಮೀರ್ ಪಿ.ಕೆ (42) ಎಂದು ಪತ್ತೆಹಚ್ಚಲಾಗಿದೆ. ಬಂಧಿತ  ಶಮೀರ್ ಪಿ.ಕೆಯನ್ನು ಮುಲ್ಕಿ ರಾಷ್ಟ್ರೀಯ ಹೆದ್ದಾರಿ ಬಳಿ ಹಿಡಿದು ಬಂದಿಸಲಾಗಿದೆ. ಆತನಿಂದ 738 ಗ್ರಾಂ ಹೈಡ್ರೋವಿಡ್ ಗಾಂಜಾ, ಕಾರು, ಮೊಬೈಲ್ ಫೋನ್ ಸೇರಿದಂತೆ ಒಟ್ಟು 80 ಲಕ್ಷ

ಮಂಗಳೂರಿನಲ್ಲಿ ಹೈಡ್ರೋವಿಡ್ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ Read More »

ಬೈಕ್ ಗೆ  ಬಸ್‌ ಡಿಕ್ಕಿ | ಬೈಕ್‍ ಸವಾರ ಗಂಭೀರ ಗಾಯ

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಬಸ್ ನಿಲ್ದಾಣ ಜಂಕ್ಷನ್ ಬಳಿ ಬೈಕ್ ಗೆ ತಡೆರಹಿತ ಬಸ್ ಡಿಕ್ಕಿಯಾದ ಘಟನೆ ನಡೆದಿದೆ. ಡಿಕ್ಕಿಯಾದ ಪರಿಣಾಮ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಚಿಕಿತ್ಸೆಗೆ  ದಾಖಲಾಗಿದ್ದಾರೆ. ಗಾಯಗೊಂಡವರನ್ನು ಮುಲ್ಕಿ ಅಂಚೆ ಕಚೇರಿಯ ಅಂಚೆಪಾಲಕ ಕೊಲ್ಲೂರು ನಿವಾಸಿ ಪಾಂಡುರಂಗ ರಾವ್ ಎನ್ನಲಾಗಿದೆ. ಗಾಯಾಳು ಪಾಂಡುರಂಗ ರಾವ್ ತಮ್ಮ ಬೈಕ್ ನಲ್ಲಿ ರಾಷ್ಟ್ರೀಯ ಹೆದ್ದಾರಿ ಮುಲ್ಕಿ ಜಂಕ್ಷನ್ ಬಳಿ ಹೆದ್ದಾರಿ ಕ್ರಾಸ್ ಮಾಡುತ್ತಿದ್ದ ವೇಳೆ  ಉಡುಪಿ ಕಡೆಯಿಂದ ಸರ್ವಿಸ್ ರಸ್ತೆಯಲ್ಲಿ ಬಂದ ತಡೆರಹಿತ

ಬೈಕ್ ಗೆ  ಬಸ್‌ ಡಿಕ್ಕಿ | ಬೈಕ್‍ ಸವಾರ ಗಂಭೀರ ಗಾಯ Read More »

ಹೆಜ್ಜೇನು ಕಡಿತ : ಇಬ್ಬರಿಗೆ ಗಂಭೀರ ಗಾಯ

ನೆಲ್ಯಾಡಿ: ಹೆಜ್ಜೇನು ದಾಳಿ ನಡೆಸಿ ಇಬ್ಬರು ಗಾಯಗೊಂಡು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಿನ್ನೆ ಬೆಳಿಗ್ಗೆ ನೆಲ್ಯಾಡಿ ಗ್ರಾಮದ ಮಾದೇರಿ ಸಮೀಪದ ತುಂಬೆತ್ತಡ್ಕ ಎಂಬಲ್ಲಿ ನಡೆದಿದೆ. ಗಾಯಗೊಂಡವರು ಮಾದೇರಿ ತುಂಬೆತ್ತಡ್ಕ ನಿವಾಸಿ ರೂಪಾವತಿ(30) ಹಾಗೂ ತಿಮ್ಮಪ್ಪ ಕುಂಬಾರ(49) ಎನ್ನಲಾಗಿದೆ. ರೂಪಾವತಿ ಎಂಬವರಿಗೆ ಮನೆ ಸಮೀಪವೇ ಏಕಾಏಕಿ ಹೆಜ್ಜೇನುಗಳು ದಾಳಿ ಮಾಡಿವೆ. ಇದರಿಂದ ವಿಚಲಿತಗೊಂಡ ರೂಪಾವತಿ ಜೋರಾಗಿ ಕಿರುಚಿದ್ದಾರೆ.  ರೂಪಾವತಿಯವರ ಬೊಬ್ಬೆ ಕೇಳಿ ಪಕ್ಕದ ಮನೆಯ ತಿಮ್ಮಪ್ಪ ಕುಂಬಾರ ಎನ್ನುವವರು ರಕ್ಷಣೆಗಾಗಿ ಗೋಣಿ ಚೀಲ ಹಿಡಿದು ಬಂದಿದ್ದರು.

ಹೆಜ್ಜೇನು ಕಡಿತ : ಇಬ್ಬರಿಗೆ ಗಂಭೀರ ಗಾಯ Read More »

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮನೆ ಧ್ವಂಸ

ಕಡಬ : ವಿದ್ಯುತ್ ಶಾರ್ಟ್ ಸಕ್ಯೂಟ್‌ನಿಂದ ಮನೆ ಸಂಪೂರ್ಣವಾಗಿ ಸುಟ್ಟಿರುವ ಘಟನೆ ಕಡಬ ತಾಲೂಕು ಆಲಂಕಾರು ಗ್ರಾಮದ ನೆಕ್ಕಿಲಾಡಿಯಲ್ಲಿ ನಡೆದಿದೆ. ವಿನೋದಾ ಎಂಬವರ ಮನೆ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಸುಮಾರು ರಾತ್ರಿ 8 ರ ವೇಳೆ ವಿದ್ಯುತ್ ಶಾರ್ಟ್ ಸಕ್ಯೂಟ್‌  ಸಂಭವಿಸಿದೆ. ಈ ವೇಳೆ  ಮನೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ವಿನೋದ ಅವರ ಮನೆ ಕಡೆ ತೆರಳಿ ನೋಡಿದಾಗ  ಬೆಂಕಿ ಮನೆಯೊಳಗೆ ಆವರಿಸಿಕೊಂಡಿರುವುದು  ಬೆಳಕಿಗೆ ಬಂದಿದೆ. ತಕ್ಷಣ ಮನೆಯೊಡತಿಗೆ ವಿಚಾರ ತಿಳಿಸಿ ಮನೆ ಬಾಗಿಲು ಮುರಿದು

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮನೆ ಧ್ವಂಸ Read More »

ಸಾಲಭಾದೆಯಿಂದ ಯುವಕ ಆತ್ಮಹತ್ಯೆ

ಮೂಡಬಿದಿರೆ : ಸಾಲ ಭಾದೆಯಿಂದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಡುಬಿದ್ರೆಯಲ್ಲಿ ಬುಧವಾರ ಸಂಜೆ ನಡೆದಿದೆ. ನಸ್ರುಲ್ಲಾ(29) ಆತ್ಮಹತ್ಯೆ ಮಾಡಿಕೊಂಡ ಯುವಕ ಎನ್ನಲಾಗಿದೆ. ವಿದೇಶದಲ್ಲಿ ಉದ್ಯೋಗದಲ್ಲಿದ್ದ ನಸ್ರುಲ್ಲಾ ಎಂಬುವವರು  ಮೂರು ತಿಂಗಳ ಹಿಂದೆ ಊರಿಗೆ ಮರಳಿದ್ದರು. ಈ ವೇಳೆ ಸಾಲದ ಚಿಂತೆಯಲ್ಲಿದ್ದರೆನ್ನಲಾಗಿದೆ. ಮನೆಯಲ್ಲಿದ್ದ ಸಮಯದಲ್ಲಿ ಸಾಲ ಕೊಟ್ಟ ಬ್ಯಾಂಕ್ ನವರು, ಸಾಲದವರು ಆತನ ಮನೆಗೆ ಬಂದು ಹೋಗುತ್ತಿದ್ದರೆನ್ನಲಾಗಿದ್ದು, ಇದರಿಂದ ಮಾನಸಿಕವಾಗಿ ನೊಂದಿದ್ದರು. ಬುಧವಾರ ಬೆಡ್ ರೂಂನಲ್ಲಿ ಫ್ಯಾನಿಗೆ ಚೂಡಿದಾರದ ವೇಲಿನಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ

ಸಾಲಭಾದೆಯಿಂದ ಯುವಕ ಆತ್ಮಹತ್ಯೆ Read More »

ಲಂಚ ಸ್ವೀಕರಿಸಿದ ನಿಮಿತ್ತ ಮುಲ್ಕಿ ಕಂದಾಯ ನಿರೀಕ್ಷಕನ ಜಾಮೀನು ಅರ್ಜಿ ರದ್ದು

ಮಂಗಳೂರು : ಲಂಚ ಸ್ವೀಕರಿಸುತ್ತಿದ್ದ ವೇಳೆ  ಸಿಕ್ಕಿಬಿದ್ದು ನ್ಯಾಯಾಂಗ ಬಂಧನದಲ್ಲಿರುವ ಮೂಲ್ಕಿ ಕಂದಾಯ ನಿರೀಕ್ಷಕ ಜಿ.ಎಸ್‌.ದಿನೇಶ್ ಅವರ ಜಾಮೀನು ಅರ್ಜಿಯನ್ನು ಮಂಗಳೂರು ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯ ವಜಾಗೊಳಿಸಿದೆ. ನ್ಯಾಯಾಧೀಶೆ ಸಂಧ್ಯಾ ಎಸ್ ಅರ್ಜಿಯನ್ನು ವಜಾಗೊಳಿಸಿ, ನ್ಯಾಯಾಂಗ ಬಂಧನವನ್ನು ವಿಸ್ತರಿಸಿದ್ದಾರೆ. 2024ರ ಡಿಸೆಂಬರ್ 19ರಂದು 4 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಿನೇಶ್ ಅವರನ್ನು ಬಂಧಿಸಿದ್ದಲ್ಲದೆ, ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಲೋಕಾಯುಕ್ತ ಸಂಸ್ಥೆಯ ಪರವಾಗಿ ವಿಶೇಷ

ಲಂಚ ಸ್ವೀಕರಿಸಿದ ನಿಮಿತ್ತ ಮುಲ್ಕಿ ಕಂದಾಯ ನಿರೀಕ್ಷಕನ ಜಾಮೀನು ಅರ್ಜಿ ರದ್ದು Read More »

ಸುರತ್ಕಲ್ ನ ಹೊಸಬೆಟ್ಟು ಸಮುದ್ರಕ್ಕೆ ಪ್ರವಾಸ ಬಂದ ಮೂವರು ನೀರಿನಲ್ಲಿ ಕೊಚ್ಚಿಹೋಗಿ ಮೃತ್ಯು

ಮಂಗಳೂರು: ಸುರತ್ಕಲ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಸಮುದ್ರದ ಜೆಟ್ಟಿ ಬಳಿ ಇರುವ ಬೀಚ್ ಗೆ ಪ್ರವಾಸಕ್ಕೆ ಬಂದು ನೀರಿಗೆ ಇಳಿದ ಮೂವರು ನೀರು ಪಾಲಾದ ಘಟನೆ ಇಂದು ನಡೆದಿದೆ. ಚಿತ್ರದುರ್ಗ ಜಿಲ್ಲೆಯ ುಪ್ಪರಿಗೇನಹಳ್ಳಿ ನಿವಾಸಿ ಮಂಜುನಾಥ್, ಶಿವಮೊಗ್ಗದ ಶಿವಕುಮಾರ್ ಹಾಗೂ ಬೆಂಗಳೂರಿನ ಸತ್ಯವೇಲು ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟವರು. ಮಂಗಳವಾರ ರಾತ್ರಿ ಬೆಂಗಳೂರಿನಿಂದ ಕಾರಿನಲ್ಲಿ ಹೊರಟು ಇಂದು ಮಧ್ಯಾಹ್ನ 12.30 ಕ್ಕೆ ಹೊಸಬೆಟ್ಟು ಬಳಿ ಇರುವ ಬೀಚ್ ಗೆ ಪ್ರವಾಸ ನಿಟ್ಟಿನಲ್ಲಿ ಬಂದಿದ್ದರು ಎನ್ನಲಾಗಿದೆ. ಈ ಸಂದರ್ಭ

ಸುರತ್ಕಲ್ ನ ಹೊಸಬೆಟ್ಟು ಸಮುದ್ರಕ್ಕೆ ಪ್ರವಾಸ ಬಂದ ಮೂವರು ನೀರಿನಲ್ಲಿ ಕೊಚ್ಚಿಹೋಗಿ ಮೃತ್ಯು Read More »

error: Content is protected !!
Scroll to Top