ಹೈಟೆನ್ಷನ್ ವಿದ್ಯುತ್ ಕಂಬದಲ್ಲಿ ಹಸಿರು ಬಳ್ಳಿಗಳ ಟೆನ್ಷನ್!! | ಅವಘಡ ಸಂಭವಿಸುವ ಮೊದಲೇ ಎಚ್ಚೆತ್ತುಕೊಳ್ಳಬೇಕಿದೆ ಆಡಳಿತ
ಬೆಳ್ತಂಗಡಿ : ತಾಲೂಕಿನ ಗುರುವಾಯನಕೆರೆ ಜಂಕ್ಷನ್’ನಿಂದ ಉಪ್ಪಿನಂಗಡಿಯ ಕಡೆಗೆ ಕವಲೊಡೆಯುವ ರಸ್ತೆ ಮಾರ್ಗದಲ್ಲಿ ಸುಮಾರು 1.8 ಕಿ. ಮೀ. ದೂರ ಕ್ರಮಿಸಿದಾಗ ಸಿಗುವ ಪುಟ್ಟ ಊರು ಪಣೆಜಾಲು. ಅಲ್ಲಿನ ಮುಖ್ಯ ರಸ್ತೆಯ ಪಕ್ಕದಲ್ಲಿ ಹಾದು ಹೋಗುತ್ತಿರುವ ಹೈ ವೋಲ್ಟೇಜ್ ವಿದ್ಯುತ್ ಪ್ರಸರಣ ಮಾರ್ಗದ ಐದಾರು ಭಾರೀ ಗಾತ್ರದ ತಂತಿಗಳನ್ನು ಹೊತ್ತು ನಿಂತಿದೆ ಒಂದು ಅಲಕ್ಷಿತ ಬಡಪಾಯಿ ವಿದ್ಯುತ್ ಕಂಬ. ಹಸಿರುವಾದ ಹೆಚ್ಚುತ್ತಿರುವ ಈ ದಿನಮಾನಗಳಿಗೆ ಪೂರಕವೋ ಎಂಬಂತೆ ಮೈತುಂಬಾ ಹಸಿರು ಬಳ್ಳಿಗಳಿಂದ ಆಚ್ಛಾದಿತವಾಗಿ ನಿಂತಿದೆ ಒಂದು ಸೊರಗಿದ […]