ಸಾಲ ಬಾಧೆಯಿಂದ ನೇಣಿಗೆ ಶರಣು
ಬೆಳ್ತಂಗಡಿ : ಸಾಲಗಾರರ ಬಾಧೆ ತಡೆಯಲಾಗದೆ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕೆಂಗುಡೇಲು ನಿವಾಸಿ, ಪೂವಾಣಿ ಗೌಡ ಮೃತ ಪಟ್ಟ ವ್ಯಕ್ತಿ. ಪೂವಣಿ ಗೌಡರವರು ಅವರದ್ದೆ ತೋಟದಲ್ಲಿ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಪೂವಣಿ ಗೌಡ ಅವರು ಸಾಲ ಬಾಧೆಯಿಂದ ನೊಂದಿದ್ದರು. ಈ ಕಾರಣಕ್ಕಾಗಿ ಆತ್ಮ ಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಸಾಲ ಬಾಧೆಯಿಂದ ನೇಣಿಗೆ ಶರಣು Read More »