ದಕ್ಷಿಣ ಕನ್ನಡ

ಕದ್ರಿ: ವೀಸಾ ಅವಧಿ ಮೀರಿದ ಆರೋಪದಡಿ ವಿದೇಶಿಯರು ವಶಕ್ಕೆ!

ಮಂಗಳೂರು: ವೀಸಾ ಅವಧಿ ಮೀರಿದ ಬಳಿಕವೂ ನಗರದಲ್ಲಿ ವಾಸವಾಗಿದ್ದ ಇಬ್ಬರು ವಿದೇಶಿಯರನ್ನು ಕದ್ರಿ ಪೊಲೀಸರು ವಶಕ್ಕೆ ಪಡೆದಿರುವುದಾಗಿ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ. ಘಾನಾ ದೇಶದ ಸಲಾಂ ಕ್ರಿಸ್ಟೆನ್ ಮತ್ತು ನೈಜೀರಿಯಾದ ಅಂಕಿತೋಲ ವೀಸಾ ಅವಧಿ ಮೀರಿದ ಬಳಿಕವೂ ನಗರದಲ್ಲಿ ಉಳಕೊಂಡಿದ್ದರು ಎನ್ನಲಾಗಿದೆ. ‌ ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ ಹಸ್ತಾಂತರಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಕದ್ರಿ: ವೀಸಾ ಅವಧಿ ಮೀರಿದ ಆರೋಪದಡಿ ವಿದೇಶಿಯರು ವಶಕ್ಕೆ! Read More »

ಹೈಟೆನ್ಷನ್ ವಿದ್ಯುತ್ ಕಂಬದಲ್ಲಿ ಹಸಿರು ಬಳ್ಳಿಗಳ ಟೆನ್ಷನ್!! | ಅವಘಡ ಸಂಭವಿಸುವ ಮೊದಲೇ ಎಚ್ಚೆತ್ತುಕೊಳ್ಳಬೇಕಿದೆ ಆಡಳಿತ

ಬೆಳ್ತಂಗಡಿ : ತಾಲೂಕಿನ ಗುರುವಾಯನಕೆರೆ ಜಂಕ್ಷನ್’ನಿಂದ ಉಪ್ಪಿನಂಗಡಿಯ ಕಡೆಗೆ ಕವಲೊಡೆಯುವ ರಸ್ತೆ ಮಾರ್ಗದಲ್ಲಿ ಸುಮಾರು 1.8 ಕಿ. ಮೀ. ದೂರ ಕ್ರಮಿಸಿದಾಗ ಸಿಗುವ ಪುಟ್ಟ ಊರು ಪಣೆಜಾಲು. ಅಲ್ಲಿನ ಮುಖ್ಯ ರಸ್ತೆಯ ಪಕ್ಕದಲ್ಲಿ ಹಾದು ಹೋಗುತ್ತಿರುವ ಹೈ ವೋಲ್ಟೇಜ್ ವಿದ್ಯುತ್ ಪ್ರಸರಣ ಮಾರ್ಗದ ಐದಾರು ಭಾರೀ ಗಾತ್ರದ ತಂತಿಗಳನ್ನು ಹೊತ್ತು ನಿಂತಿದೆ ಒಂದು ಅಲಕ್ಷಿತ ಬಡಪಾಯಿ ವಿದ್ಯುತ್ ಕಂಬ. ಹಸಿರುವಾದ ಹೆಚ್ಚುತ್ತಿರುವ ಈ ದಿನಮಾನಗಳಿಗೆ ಪೂರಕವೋ ಎಂಬಂತೆ ಮೈತುಂಬಾ ಹಸಿರು ಬಳ್ಳಿಗಳಿಂದ ಆಚ್ಛಾದಿತವಾಗಿ ನಿಂತಿದೆ ಒಂದು ಸೊರಗಿದ

ಹೈಟೆನ್ಷನ್ ವಿದ್ಯುತ್ ಕಂಬದಲ್ಲಿ ಹಸಿರು ಬಳ್ಳಿಗಳ ಟೆನ್ಷನ್!! | ಅವಘಡ ಸಂಭವಿಸುವ ಮೊದಲೇ ಎಚ್ಚೆತ್ತುಕೊಳ್ಳಬೇಕಿದೆ ಆಡಳಿತ Read More »

ಸುಬ್ರಹ್ಮಣ್ಯದಲ್ಲಿ ‘ಪೂರ್ವಿ ಸಾಮಾನ್ಯ ಸೇವಾ ಕೇಂದ್ರ’ ಶುಭಾರಂಭ

ಸುಬ್ರಹ್ಮಣ್ಯ: ಸರಕಾರಿ ಸೇವೆ ಸಹಿತಿ ಹಲವು ಸೇವೆಗಳನ್ನು ಕ್ಲಪ್ತ ಸಮಯದಲ್ಲಿ ಒದಗಿಸಲಿರುವ ‘ಪೂರ್ವಿ ಸಾಮಾನ್ಯ ಸೇವಾ ಕೇಂದ್ರ’ ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿಯ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ಶುಕ್ರವಾರ ಶುಭಾರಂಭಗೊಂಡಿತು. ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತ ಕಲ್ಲಾಜೆ ಸೇವಾ ಕೇಂದ್ರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಚ್.ಎಲ್. ವೆಂಕಟೇಶ್ ಮಾತನಾಡಿ, ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಹಾಗೂ ಸಂಜೀವಿನಿ ಒಕ್ಕೂಟದ ಒಡಂಬಡಿಕೆಯಿಂದ ಸೇವೆ ಸಲ್ಲಿಸಲಿರುವ ಕೇಂದ್ರ ಸರಕಾರದ ಮಹತ್ವದ ಯೋಜನೆ ಇದಾಗಿದೆ. ಮಹಿಳೆಯರು

ಸುಬ್ರಹ್ಮಣ್ಯದಲ್ಲಿ ‘ಪೂರ್ವಿ ಸಾಮಾನ್ಯ ಸೇವಾ ಕೇಂದ್ರ’ ಶುಭಾರಂಭ Read More »

ಇಸ್ರೇಲ್ ಪರ ಪೋಸ್ಟ್ : ಮಂಗಳೂರಿನ ವೈದ್ಯರೊಬ್ಬರು ಬೆಹ್ರೈನ್ ನಲ್ಲಿ ಕೆಲಸದಿಂದ ವಜಾ, ಬಂಧನ

ಮಂಗಳೂರು : ಇಸ್ರೇಲ್ ಪರ ಪೋಸ್ಟ್ ಹಾಕಿರುವ ಕಾರಣಕ್ಕೆ ಭಾರತದ ವೈದ್ಯರೊಬ್ಬರನ್ನು ಕೆಲಸದಿಂದ ವಜಾ ಮಾಡಿದ್ದಲ್ಲದೆ ಬೆಹ್ರೈನ್  ಪೊಲೀಸರು ಬಂಧಿಸಿದ್ದಾರೆ. ಬೆಣೈನಲ್ಲಿ ಹತ್ತು ವರ್ಷಗಳಿಂದ ವೈದ್ಯರಾಗಿರುವ, ಮಂಗಳೂರು ಮೂಲದ ವೈದ್ಯ ಡಾ.ಸುನಿಲ್ ರಾವ್ ಬಂಧಿತ ವೈದ್ಯರಾಗಿದ್ದಾರೆ. ಇಸ್ರೇಲ್ ದೇಶದ ಪರವಾಗಿ ಡಾ.ಸುನಿಲ್ ರಾವ್ ಹಾಕಿದ್ದ ಟ್ವಿಟರ್ ಪೋಸ್ಟ್ ಜಾಲತಾಣದಲ್ಲಿ ವೈರಲ್ ಆಗಿತ್ತು. ಕೆಲವರು ಈ ಪೋಸ್ಟ್ ನ್ನು ಬೆಹ್ರೈನ್ ಆಡಳಿತಕ್ಕೆ ಟ್ಯಾಗ್ ಮಾಡಿ, ಕ್ರಮಕ್ಕೆ ಆಗ್ರಹ ಮಾಡಿದ್ದರು. ಪ್ಯಾಲೆಸ್ತೀನ್ ವಿರೋಧಿಸಿ ಪೋಸ್ಟ್ ಹಾಕಿದ್ದಾರೆಂದು ಆಡಳಿತದ ಗಮನಕ್ಕೆ ತಂದಿದ್ದರು.

ಇಸ್ರೇಲ್ ಪರ ಪೋಸ್ಟ್ : ಮಂಗಳೂರಿನ ವೈದ್ಯರೊಬ್ಬರು ಬೆಹ್ರೈನ್ ನಲ್ಲಿ ಕೆಲಸದಿಂದ ವಜಾ, ಬಂಧನ Read More »

ಬೈಕ್ ಚಕ್ರಕ್ಕೆ ಸಿಲುಕಿದ ಸೀರೆ:  ಮಹಿಳೆಗೆ ಗಂಭೀರ ಗಾಯ

ಸುಳ್ಯ: ಬೈಕಿನಲ್ಲಿ ತೆರಳುತ್ತಿದ್ದಾಗ ಬೈಕ್ ಚಕ್ರಕ್ಕೆ ಮಹಿಳೆಯೊಬ್ಬರ ಸೀರೆ ಸೆರಗು ಸುತ್ತಿಕೊಂಡ ಪರಿಣಾಮ ಬೈಕ್‍ನಿಂದ ಬಿದ್ದು ಗಂಭೀರ ಗಾಯಗೊಂಡ ಘಟನೆ ಜಾಲ್ಸೂರು ಗ್ರಾಮದ ಸೋಣಂಗೇರಿಯಲ್ಲಿ ಇಂದು ನಡೆದಿದೆ. ಎಲಿಮಲೆ ನಿವಾಸಿ ಶಾಂಭವಿ ಘಟನೆಯಿಂದ ಗಂಭೀರ ಗಾಯಗೊಂಡವರು ಬೈಕ್‍ನಲ್ಲಿ ಹಿಂಬದಿ ಕುಳಿತು ಸುಳ್ಯಕ್ಕೆ ಬರುತ್ತಿದ್ದ ಸಂದರ್ಭ ಅವರ ಸೀರೆ ಬೈಕ್‍ ಚಕ್ರಕ್ಕೆ ಸುತ್ತಿಕೊಂಡಿದೆ. ಬೈಕ್‍ನಿಂದ ಬಿದ್ದ ಅವರನ್ನು ಸ್ಥಳೀಯರು ಸುಳ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬಂದಿದೆ.

ಬೈಕ್ ಚಕ್ರಕ್ಕೆ ಸಿಲುಕಿದ ಸೀರೆ:  ಮಹಿಳೆಗೆ ಗಂಭೀರ ಗಾಯ Read More »

ಬೀಚ್ ಗೆ ತೆರಳಿದ್ದ ವಿಟ್ಲದ ವಿದ್ಯಾರ್ಥಿನಿ ನಿಶಾ ಮೃತ್ಯು!

ವಿಟ್ಲ: ಬೀಚಿಗೆ ತೆರಳಿದ್ದ ವಿದ್ಯಾರ್ಥಿಗಳಲ್ಲಿ ಓರ್ವ ವಿದ್ಯಾರ್ಥಿನಿ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಸುರತ್ಕಲ್ ಸಮೀಪದ ಚಿತ್ರಾಪುರ ಬೀಚಿನಲ್ಲಿ ನಡೆದಿದೆ. ಮೃತರನ್ನು ನೇಪಾಳ ಮೂಲದ ವಿಟ್ಲದಲ್ಲಿದ್ದ ನಿಶಾ (15) ಎಂದು ಗುರುತಿಸಲಾಗಿದೆ. ವಿಟ್ಲ ಮೂಲದ ದಿಗಂತ (15), ದಿವ್ಯರಾಜ್ (15), ತೇಜಸ್ (14), ಕೀರ್ತನ್ (16), ಅಶ್ಮಿತಾ (15), ನಿಶಾ (15) ಇವರೆಲ್ಲರೂ ಕುಳಾಯಿ ಚಿತ್ರಾಪುರ ಬೀಚ್ ಗೆ ನೀರಲ್ಲಿ ಆಟ ಆಡಲು ತೆರಳಿದ್ದರು. ಆಡವಾಡುತ್ತಿದ್ದಾಗ ನೀರಿನ ಅಲೆಯ ರಭಸಕ್ಕೆ ಮುಳುಗಿದ್ದು, ಹತ್ತಿರದ ಮೀನುಗಾರರು ಮತ್ತು ಸ್ಥಳೀಯರು

ಬೀಚ್ ಗೆ ತೆರಳಿದ್ದ ವಿಟ್ಲದ ವಿದ್ಯಾರ್ಥಿನಿ ನಿಶಾ ಮೃತ್ಯು! Read More »

ದೇವಸ್ಥಾನದ ಸುತ್ತ ಕೇಸರಿ ಧ್ವಜ: ಶರಣ್ ಪಂಪ್‌ವೆಲ್ ವಿರುದ್ಧ ಪ್ರಕರಣ!

ಮಂಗಳೂರು: ಮಂಗಳಾದೇವಿ ದೇವಸ್ಥಾನದ ಸುತ್ತ ಕೇಸರಿ ಧ್ವಜ ಅಳವಡಿಸಿದ್ದಕ್ಕಾಗಿ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್’ವೆಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಚಟುವಟಿಕೆಯಲ್ಲಿ ತೊಡಗಿರುವ ಆರೋಪದ ಮೇಲೆ ಮಂಗಳೂರು ನಗರ ಪೊಲೀಸರು ಶರಣ್ ಪಂಪ್’ವೆಲ್ ಹಾಗೂ ಇತರರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಂಗಳೂರು ಮಂಗಳಾದೇವಿ ದೇವಸ್ಥಾನದ ಸುತ್ತಮುತ್ತಲಿನ ಹಿಂದೂಗಳು ನಡೆಸುತ್ತಿದ್ದ ಅಂಗಡಿಗಳ ಮೇಲೆ ಕೇಸರಿ ಧ್ವಜ ಅಳವಡಿಸಿದ್ದರು. ಈ ಕ್ರಮ ಧಾರ್ಮಿಕ ವೈಷಮ್ಯವನ್ನು ಕೆರಳಿಸುವ ಸಾಮರ್ಥ್ಯ ಹೊಂದಿವೆ ಎಂದು ಪೊಲೀಸ್ ಕಮೀಷನರ್

ದೇವಸ್ಥಾನದ ಸುತ್ತ ಕೇಸರಿ ಧ್ವಜ: ಶರಣ್ ಪಂಪ್‌ವೆಲ್ ವಿರುದ್ಧ ಪ್ರಕರಣ! Read More »

ಪಿಲಿಗೊಬ್ಬು 2023ಕ್ಕೆ ರಾಜ್ ಬಿ. ಶೆಟ್ಟಿ, ದಿಗಂತ್ ಸೇರಿದಂತೆ ತಾರಾ ಮೆರುಗು | ಪಿಲಿಗೊಬ್ಬು, ಫುಡ್ ಫೆಸ್ಟ್ ವೈಭವವನ್ನು ಬಣ್ಣಿಸಿದ ಸಹಜ್ ರೈ, ಪುತ್ತೂರು ಉಮೇಶ್ ನಾಯಕ್

ಪುತ್ತೂರು: ವಿಜಯ ಸಾಮ್ರಾಟ್ ನೇತೃತ್ವದಲ್ಲಿ ಪುತ್ತೂರುದ ಪಿಲಿಗೊಬ್ಬು 2023 ಹಾಗೂ ಫುಡ್ ಫೆಸ್ಟ್ ಅಕ್ಟೋಬರ್ 22ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಆಯೋಜಿಸಲಾಗಿದೆ ಎಂದು ಪುತ್ತೂರು ಪಿಲಿಗೊಬ್ಬು ಗೌರವಾಧ್ಯಕ್ಷ ಸಹಜ್ ರೈ ಬಳಜ್ಜ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಳು ನಾಡಿನ ಧಾರ್ಮಿಕ ಹಿನ್ನೆಲೆ ಇರುವ ಜಾನಪದ ಕಲೆ. ಈ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪುತ್ತೂರುದ ಪಿಲಿಗೊಬ್ಬು ಹಾಗೂ ಫುಡ್ ಫೆಸ್ಟ್  ಅಥವಾ ಹುಲಿ ವೇಷ ಕುಣಿತ ಸ್ಪರ್ಧೆ ಹಾಗೂ ಅಹಾರ ಮೇಳ,

ಪಿಲಿಗೊಬ್ಬು 2023ಕ್ಕೆ ರಾಜ್ ಬಿ. ಶೆಟ್ಟಿ, ದಿಗಂತ್ ಸೇರಿದಂತೆ ತಾರಾ ಮೆರುಗು | ಪಿಲಿಗೊಬ್ಬು, ಫುಡ್ ಫೆಸ್ಟ್ ವೈಭವವನ್ನು ಬಣ್ಣಿಸಿದ ಸಹಜ್ ರೈ, ಪುತ್ತೂರು ಉಮೇಶ್ ನಾಯಕ್ Read More »

ಲಂಚ ಸ್ವೀಕಾರ : ಇಂಜಿನಿಯರ್ ಲೋಕಾಯುಕ್ತ ಬಲೆಗೆ

ಮಂಗಳೂರು : ಕಾಮಗಾರಿ ನಡೆದ ಬಳಿಕ ಸ್ಥಳದಲ್ಲಿರುವ ಮೆಟೀರಿಯಲ್ ಪರಿಶೀಲನೆ ನಡೆಸಿ ವರದಿ ನೀಡಲು ಗುತ್ತಿಗೆದಾರರೊಬ್ಬರಿಂದ ಲಂಚ ಬೇಡಿಕೆ ಇಟ್ಟಿದ್ದ ಮಂಗಳೂರು ಲೋಕೋಪಯೋಗಿ ಸಹಾಯಕ ಕಾರ್ಯಪಾಲ ಇಂಜಿನಿಯರ್ ಕಚೇರಿಯ ಗುಣ ಭರವಸೆ ಉಪವಿಭಾಗದ ಕಿರಿಯ ಇಂಜಿನಿಯರೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಿರಿಯ ಇಂಜಿನಿಯರ್ -2 ಅಗಿರುವ ರೋನಾಲ್ಡ್ ಲೋಬೋ ಲೋಕಾಯುಕ್ತ ಬಲೆಗೆ ಬಿದ್ದವರು. ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದಲ್ಲಿ ಕಾಮಗಾರಿ ನಡೆಸಿದ ಬಳಿಕ ಸ್ಥಳದಲ್ಲಿದ್ದ ಮೆಟೀರಿಯಲ್ ಪರಿಶೀಲನೆಗೆ ಬೆಳ್ತಂಗಡಿಯ ಗುತ್ತಿಗೆದಾರರೊಬ್ಬರಿಂದ 20 ಸಾವಿರ ರೂ. ಲಂಚದ ಬೇಡಿಕೆ

ಲಂಚ ಸ್ವೀಕಾರ : ಇಂಜಿನಿಯರ್ ಲೋಕಾಯುಕ್ತ ಬಲೆಗೆ Read More »

ತಾಲೂಕಿನ ಏಕೈಕ ಬೀಕೊನ್ ಡಿಜಿಟಲ್ ಗ್ರಂಥಾಲಯ ಉದ್ಘಾಟಿಸಿದ ಶಾಸಕ ಅಶೋಕ್ ರೈ | ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಅನುಷ್ಠಾನಗೊಳಿಸಿದ ಗ್ರಾಪಂ

ಪುತ್ತೂರು: ಕಾನೂನಿನ ಹಿಂದೆ ನಾವು ಹೋಗುವುದಲ್ಲ. ಕಾನೂನು ತೊಡಕು ಪರಿಹರಿಸಿಕೊಂಡು ಜನರ ಕೆಲಸ ಮಾಡಿಕೊಡಬೇಕು. ಸರಿಯಾದ ಮತ್ತು ಪ್ರಾಮಾಣಿಕ ಸೇವೆ ನೀಡುವುದು ಜನಪ್ರತಿನಿಧಿಗಳು ಮತ್ತು ಪಂಚಾಯಿತಿ ಸಿಬ್ಬಂದಿಗಳ ಕರ್ತವ್ಯ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಆರ್ಯಾಪು ಗ್ರಾ.ಪಂ. ಅಮೃತ ಉದ್ಯಾನವನ ಹಾಗೂ ತಾಲೂಕಿನ ಏಕೈಕ ಬೀಕೊನ್ ಡಿಜಿಟಲ್ ಗ್ರಂಥಾಲಯ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿ ಹಳ್ಳಿಯ ಜನರೂ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು ಮತ್ತು ವಿದ್ಯುತ್‌ನಿಂದ ವಂಚಿತರಾಗಬಾರದು. ಇದಕ್ಕಾಗಿ ನಾನು ಹೋರಾಟ ಮಾಡಲೂ ಸಿದ್ಧನಿದ್ದೇನೆ.

ತಾಲೂಕಿನ ಏಕೈಕ ಬೀಕೊನ್ ಡಿಜಿಟಲ್ ಗ್ರಂಥಾಲಯ ಉದ್ಘಾಟಿಸಿದ ಶಾಸಕ ಅಶೋಕ್ ರೈ | ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಅನುಷ್ಠಾನಗೊಳಿಸಿದ ಗ್ರಾಪಂ Read More »

error: Content is protected !!
Scroll to Top