ದಕ್ಷಿಣ ಕನ್ನಡ

ಹತ್ಯೆಯಾದ ಸುಹಾಸ್‍ ಶೆಟ್ಟಿ ಮನೆಗೆ ಬಿ.ವೈ.ವಿಜಯೇಂದ್ರ, ಆರ್.ಅಶೋಕ್‍ ಭೇಟಿ | 25 ಲಕ್ಷ ರೂ. ಪರಿಹಾರ ಘೋಷಣೆ

ಮಂಗಳೂರು: ಬಜ್ಜೆಯಲ್ಲಿ ಕೊಲೆಯಾದ ರೌಡಿ ಶೀಟರ್ ಸುಹಾಶ್ ಶೆಟ್ಟಿ ಮನೆಗೆ ಶುಕ್ರವಾರ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ ನೀಡಿ, ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುಹಾಸ್ ಹತ್ಯೆಗೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಮಂಗಳೂರಿನಲ್ಲಿ ನಡೆದ ಈ ಘಟನೆ ಖಂಡನಾರ್ಹ. ಬಿಜೆಪಿಯು ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ. ಸುಹಾಸ್ ಜೀವಕ್ಕೆ ಬೆದರಿಕೆ ಇದ್ದರೂ ರಕ್ಷಣೆ ಇಲ್ಲದಿರುವುದು ಪೊಲೀಸರ ವೈಫಲ್ಯ, […]

ಹತ್ಯೆಯಾದ ಸುಹಾಸ್‍ ಶೆಟ್ಟಿ ಮನೆಗೆ ಬಿ.ವೈ.ವಿಜಯೇಂದ್ರ, ಆರ್.ಅಶೋಕ್‍ ಭೇಟಿ | 25 ಲಕ್ಷ ರೂ. ಪರಿಹಾರ ಘೋಷಣೆ Read More »

ಹಿಂದೂತ್ವವೇ ನನ್ನ ಸರ್ವಸ್ವ ಎಂದವನ ಉಸಿರು ನಿಲ್ಲಿಸಿದರು | ಸಹಾಸ್‍ ಶೆಟ್ಟಿ ತಾಯಿ ಸುಲೋಚನಾ

ನನ್ನ ಮಗ ಹಿಂದುತ್ವವನ್ನೇ ಉಸಿರಾಗಿಸಿಕೊಂಡು ಹಿಂದೂಗಳನ್ನು ಒಗ್ಗೂಡಿಸಿದ್ದ.  ಸದಾ ಹಿಂದುತ್ವವೇ ನನ್ನ ಉಸಿರು ಎನ್ನುತ್ತಿದ್ದವನ ಉಸಿರನ್ನೇ ಕಸಿದರು ಎಂದು ಹತ್ಯೆಯಾದ ಸುಹಾಸ್ ಶೆಟ್ಟಿ ತಾಯಿ ಸುಲೋಚನಾ ಹೇಳಿದ್ದಾರೆ. ನಿನ್ನೆ ನಾವೆಲ್ಲರೂ ಒಂದು ಮದುವೆ ಕಾರ್ಯಕ್ರಮದಲ್ಲಿ ಇದ್ದವು. ಇಲ್ಲದಿದ್ದರೆ ಪ್ರತಿದಿನದಂತೆ ನಿನ್ನೆಯೂ ಆತನಿಗೆ ಕರೆ ಮಾಡಬೇಕಿತ್ತು. ನಿನ್ನೆ ಮದುವೆ ಕೆಲಸದಲ್ಲಿ ಅವನಿಗೆ ಕರೆ ಮಾಡಲಾಗಲಿಲ್ಲ ಎಂದು ಅವರು ಹೇಳುತ್ತಾರೆ. ಆರೋಪಿಗಳು ಯಾರೇ ಆಗಿರಲಿ ಅವರಿಗೆ ತಕ್ಕ ಶಿಕ್ಷೆಯಾಗಿಬೇಕು, ಇನ್ನೊಮ್ಮೆ ಇಂಥಾ ಘಟನೆಗಳು ನಡೆಯಬಾರದು ಎಂದು ಸುಹಾಸ್ ಶೆಟ್ಟಿ ತಾಯಿ

ಹಿಂದೂತ್ವವೇ ನನ್ನ ಸರ್ವಸ್ವ ಎಂದವನ ಉಸಿರು ನಿಲ್ಲಿಸಿದರು | ಸಹಾಸ್‍ ಶೆಟ್ಟಿ ತಾಯಿ ಸುಲೋಚನಾ Read More »

ಸುಹಾಸ್‌ ಶೆಟ್ಟಿ ಹತ್ಯೆ ಬೆನ್ನಲ್ಲೇ ಇಬ್ಬರ ಕೊಲೆಗೆ ಯತ್ನ

ಕೂದಲೆಳೆ ಅಂತರದಿಂದ ಪಾರಾದ ಇಬ್ಬರು ಯುವಕರು ಉಡುಪಿ: ಮಂಗಳೂರಿನ ಬಜ್ಪೆ ಕಿನ್ನಿಪದವು ಬಳಿ ನಿನ್ನೆ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಆದ ಬೆನ್ನಲ್ಲೇ ಉಡುಪಿ ಸಮೀಪ ಆತ್ರಾಡಿಯಲ್ಲಿ ಮುಸ್ಲಿಂ ಯುವಕನ ಕೊಲೆಗೆ ಯತ್ನಿಸಿರುವ ಘಟನೆ ನಡೆದಿದೆ. ಅಬೂಬಕ್ಕರ್ ಹಲ್ಲೆಗೊಳಗಾದ ಮುಸ್ಲಿಂ ಯುವಕ. ಹಿರಿಯಡಕ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರವಾಗಿ ಕೊಲೆ ಮಾಡಲು ಯತ್ನಿಸಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಮದು ಪೊಲೀಸರು ತಿಳಿಸಿದ್ದಾರೆ. ಸುಶಾಂತ್ ಮತ್ತು ಸಂದೇಶ್ ಪೂಜಾರಿ ಬಂಧಿತ ಆರೋಪಿಗಳು. ನಿನ್ನೆ

ಸುಹಾಸ್‌ ಶೆಟ್ಟಿ ಹತ್ಯೆ ಬೆನ್ನಲ್ಲೇ ಇಬ್ಬರ ಕೊಲೆಗೆ ಯತ್ನ Read More »

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐ ಎ ತನಿಖೆಗೆ ಒತ್ತಾಯಿಸಿ ಅಮಿತ್ ಶಾ ಗೆ ಪತ್ರ ಬರೆದ ಬ್ರಿಜೇಶ್ ಚೌಟ

ನಮ್ಮ ಕಾರ್ಯಕರ್ತ ಸುಹಾಸ್ ಶೆಟ್ಟಿಯವರ ಭೀಕರ ಸಾರ್ವಜನಿಕ ಹತ್ಯೆಯು ಮತ್ತೊಮ್ಮೆ ಕರಾವಳಿಗರ ಹೃದಯದಲ್ಲಿ ಮನಸ್ಸಿನಲ್ಲಿ ಅಳಿಸಲಾಗದ ಆಘಾತ ಸೃಷ್ಟಿಸಿದೆ. ಇಂತಹ ನೋವು ಮೊದಲನೆಯದಲ್ಲ, ಹೊಸತೂ ಅಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ನಮ್ಮ ಭಾಗದ ಹಿಂದೂ ಕಾರ್ಯಕರ್ತರ ಗುರಿಯಾಗಿ ಹತ್ಯೆಗಳ ಪ್ರವೃತ್ತಿ ಹೆಚ್ಚಾಗುತ್ತವೆ ಎಂದು ಸಂಸದ ಬ್ರಿಜೇಶ್ ಚೌಟ ಹೇಳಿದರು. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರನ್ನು ಗುರಿ ಇಟ್ಟು ನಡೆಸಿದ ಹತ್ಯೆಯ ರೀತಿಯಲ್ಲಿಯೇ ಈ ಘಟನೆಯು ನಡೆದಿದೆ. ಈ ರೀತಿಯ ಹತ್ಯೆಯು ಈ ಪ್ರದೇಶದಲ್ಲಿ ಪಿಎಫ್‌ಐ ನಂತಹ

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐ ಎ ತನಿಖೆಗೆ ಒತ್ತಾಯಿಸಿ ಅಮಿತ್ ಶಾ ಗೆ ಪತ್ರ ಬರೆದ ಬ್ರಿಜೇಶ್ ಚೌಟ Read More »

ಮಂಗಳೂರಿನಲ್ಲಿ ಮೇ 6ರ ತನಕ ನಿಷೇಧಾಜ್ಞೆ : ನಗರ ಸಂಪೂರ್ಣ ಸ್ತಬ್ಧ

ಕೆಲವು ಬಸ್‌ಗಳಿಗೆ ಕಲ್ಲುತೂರಾಟ; ಅಂಗಡಿ ಹೋಟೆಲ್‌ಗಳು ಬಂದ್‌ ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಕೊಲೆ ಹಿನ್ನೆಲೆಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿರುವುದನ್ನು ಅನುಸರಿಸಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ತಕ್ಷಣದಿಂದಲೇ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್), 2023ರ ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ. ಈ ಆದೇಶ ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಜಾರಿಗೆ ಬಂದಿದ್ದು, ಮೇ 6 ಬೆಳಗ್ಗೆ 6 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗ್ರವಾಲ್ ಈ ನಿಷೇಧಾಜ್ಞೆಯನ್ನು ತಕ್ಷಣದಿಂದಲೇ ಜಾರಿಗೆ

ಮಂಗಳೂರಿನಲ್ಲಿ ಮೇ 6ರ ತನಕ ನಿಷೇಧಾಜ್ಞೆ : ನಗರ ಸಂಪೂರ್ಣ ಸ್ತಬ್ಧ Read More »

ಹಿಂದೂ ಕಾರ್ಯಕರ್ತ ಸುಹಾಸ್‍ ಶೆಟ್ಟಿ ಹತ್ಯೆ | ಬಂಟ್ವಾಳದಲ್ಲಿ ಅಂತ್ಯಕ್ರಿಯೆಗೆ ತಯಾರಿ

ಮಂಗಳೂರು: ಗುರುವಾರ ಸಂಜೆ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ನಡೆದಿದ್ದು, ಅವರ ಅಂತ್ಯಕ್ರಿಯೆ ಬಂಟ್ವಾಳದಲ್ಲಿ ನಡೆಯಲಿದೆ. ಸುಹಾಸ್ ಶೆಟ್ಟಿ ಅವರ ಮೃತದೇಹ ಮೆರವಣಿಗೆ ಮೂಲಕ ತರಲಾಗುತ್ತಿದ್ದು, ಬಂಟ್ವಾಳ ದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ. ಹತ್ಯೆ ಪ್ರಕರಣವನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಶುಕ್ರವಾರ ದ.ಕ.ಜಿಲ್ಲಾದ್ಯಂತ ಬಂದ್‍ ಗೆ ಕರೆ ನೀಡಿದೆ. ಇಂದು ಬೆಳಿಗ್ಗೆ ಬಂದ್‍ ಗೆ ಕರೆ ನೀಡುತ್ತಿದ್ದಂತೆ ಮಂಗಳೂರಿನಲ್ಲಿ ಕೆಲವು ಬಸ್‍ ಗಳಿಗೆ ಕಲ್ಲು ತೂರಾಟ ನಡೆದ ಘಟನೆಯೂ ನಡೆಯಿತು.

ಹಿಂದೂ ಕಾರ್ಯಕರ್ತ ಸುಹಾಸ್‍ ಶೆಟ್ಟಿ ಹತ್ಯೆ | ಬಂಟ್ವಾಳದಲ್ಲಿ ಅಂತ್ಯಕ್ರಿಯೆಗೆ ತಯಾರಿ Read More »

ಮಂಗಳೂರಿನಲ್ಲಿ ಅಹಿತಕರ ಘಟನೆ | ಮೇ 5 ರ ತನಕ ದ.ಕ. ಜಿಲ್ಲಾದ್ಯಂತ ನಿಷೇದಾಜ್ಞೆ ಜಾರಿ

ಮಂಗಳೂರು: ಗುರುವಾರ ಸಂಜೆ ಮಂಗಳೂರಿನ ಬಜ್ಪೆ ಪರಿಸರ ಹಾಗೂ ಉಳ್ಳಾಲದಲ್ಲಿ ಅಹಿತಕರ ಘಟನೆ ನಡೆದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮೇ 5 ರ ತನಕ ನಿಷೇದಾಜ್ಞೆ ಜಾರಿ ಮಾಡಿ ದ.ಕ.ಜಿಲ್ಲಾಧಿಕಾರಿ ಆದೇಶಿರುತ್ತಾರೆ. ಗುರುವಾರ ಸಂಜೆ ಹಿಂದೂ ಕಾರ್ಯಕರ್ತ ಸುಹಾಸ್‍ ಶೆಟ್ಟಿ ಹತ್ಯೆಯಾದ ಬೆನ್ನಲ್ಲೆ ಉಳ್ಳಾಲದಲ್ಲಿ ಗುಂಪೊಂದು ವ್ಯಕ್ತಿಯೊಬ್ಬನಿಗೆ ಹಲ್ಲೆ ನಡೆಸಿತ್ತು. ಈ ಎರಡು ಪ್ರಕರಣದ ನಡೆದ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರವಾಗಿ ನಿಷೇದಾಜ್ಞೆ ಆದೇಶ ಹೊರಡಿಸಿದ್ದಾರೆ.

ಮಂಗಳೂರಿನಲ್ಲಿ ಅಹಿತಕರ ಘಟನೆ | ಮೇ 5 ರ ತನಕ ದ.ಕ. ಜಿಲ್ಲಾದ್ಯಂತ ನಿಷೇದಾಜ್ಞೆ ಜಾರಿ Read More »

ಆರೋಪಿಗಳ ಸುಳಿವು ಪತ್ತೆ, ಕಾರುಗಳು ವಶ : ಎಡಿಜಿಪಿ ಆರ್.ಹಿತೇಂದ್ರ ಮಾಹಿತಿ

ತನಿಖೆಗೆ ವಿಶೇಷ ತಂಡ ರಚನೆ; ಶಾಂತಿ ಕಾಪಾಡಲು ಮನವಿ ಮಂಗಳೂರು: ಮಂಗಳೂರು ಪೊಲೀಸರು ಆರೋಪಿಗಳ ಸುಳಿವು ಪತ್ತೆ ಹಚ್ಚಿದ್ದಾರೆ. ಸುಹಾಸ್ ಶೆಟ್ಟಿ ಮೇಲೆ ದಾಳಿ ನಡೆಸಿ ಪರಾರಿಯಾದ ಆರೋಪಿಗಳು ಯಾರು ಎಂದು ನಮಗೆ ಗೊತ್ತಾಗಿದೆ. ಆರೋಪಿಗಳ ಬಂಧನಕ್ಕೆ ತಂಡ ರಚನೆ ಮಾಡುತ್ತೇವೆ. ಆರೋಪಿಗಳ ಸುಳಿವನ್ನು ಈಗಾಗಲೇ ಪತ್ತೆ ಹಚ್ಚಿಲಾಗಿದೆ ಎಂದು ಎಡಿಜಿಪಿ ಆರ್.ಹಿತೇಂದ್ರ ಹೇಳಿದ್ದಾರೆ. ಕಾನೂನು ಕೈಗೆತ್ತಿಕೊಂಡವರ ಮೇಲೆ ಕಾನೂನು ರೀತಿ ಕ್ರಮ ಆಗಲಿದೆ ಎಂದು ಹಿತೇಂದ್ರ ಹೇಳಿದ್ದಾರೆ. ಸ್ಥಳದ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಇನ್ನು

ಆರೋಪಿಗಳ ಸುಳಿವು ಪತ್ತೆ, ಕಾರುಗಳು ವಶ : ಎಡಿಜಿಪಿ ಆರ್.ಹಿತೇಂದ್ರ ಮಾಹಿತಿ Read More »

ಮಾರ್ಚ್‌ನಲ್ಲೇ ಸುಹಾಸ್‌ ಶೆಟ್ಟಿ ಹತ್ಯೆಗೆ ಸ್ಕೆಚ್‌ : ಇನ್‌ಸ್ಟಾಗ್ರಾಂ ಪೋಸ್ಟರ್‌ನಿಂದ ಹುಟ್ಟಿದ ಅನುಮಾನ

ಹಂತಕರಿಗೆ ತಪ್ಪಿಸಿಕೊಳ್ಳಲು ಬುರ್ಖಾಧಾರಿ ಮಹಿಳೆಯರ ಸಹಾಯ? ಮಂಗಳೂರು: ನಗರದ ಬಜ್ಪೆ ಕಿನ್ನಿಪದವು ಬಳಿ ನಿನ್ನೆ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಹಂತಕರು ಬರ್ಬರವಾಗಿ ಹತ್ಯೆ ಮಾಡಿದ ಬಳಿಕ ಹಲವು ಬೆಳವಣಿಗೆಗಳು ನಡೆದಿದ್ದು, ಸುಹಾಸ್ ಹತ್ಯೆ ಬೆನ್ನಲ್ಲೇ ‘ಫಿನಿಶ್’ ಅಂತ ಸೋಶಿಯಲ್​ ಮೀಡಿಯಾದಲ್ಲಿ ಒಂದು ಪೋಸ್ಟ್ ವೈರಲ್​ ಆಗಿದ್ದು, ಸದ್ಯ ಸಾಕಷ್ಟು ಕುತೂಹಲ ಮತ್ತು ಚರ್ಚೆಗೆ ಗ್ರಾಸವಾಗಿದೆ. ಮಾರ್ಚ್ 31ರಂದೇ ಸುಹಾಸ್ ಶೆಟ್ಟಿ ಹತ್ಯೆಗೆ ಸ್ಕೆಚ್‌ ಹಾಕಲಾಗಿತ್ತಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಅಂದೇ ಟಾರ್ಗೆಟ್ ಕಿಲ್ಲರ್-03 ಎಂಬ ಇನ್‌ಸ್ಟಾಗ್ರಾಂ

ಮಾರ್ಚ್‌ನಲ್ಲೇ ಸುಹಾಸ್‌ ಶೆಟ್ಟಿ ಹತ್ಯೆಗೆ ಸ್ಕೆಚ್‌ : ಇನ್‌ಸ್ಟಾಗ್ರಾಂ ಪೋಸ್ಟರ್‌ನಿಂದ ಹುಟ್ಟಿದ ಅನುಮಾನ Read More »

ಮಂಗಳೂರು: ಉಳ್ಳಾಲದಲ್ಲಿ ಯುವಕನ ಮೇಲೆ ತಲವಾರಿನಿಂದ ಹಲ್ಲೆ

ಉಳ್ಳಾಲ: ನಿನ್ನೆ ರಾತ್ರಿ ಬಜಪೆ ಸಮೀಪ ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿಯನ್ನು ಸಾಯಿಸಿದ ಹಿನ್ನೆಲೆಯಲ್ಲಿ ಮಂಗಳೂರು ಧಗಧಗಿಸುತ್ತಿರುವಾಗಲೇ ಸಮೀಪದ ಉಳ್ಳಾಲದಲ್ಲಿ ಇನ್ನೊಂದು ಮರಣಾಂತಿಕ ಹಲ್ಲೆ ಸಂಭವಿಸಿದೆ. ಯುವಕನ ಮೇಲೆ ತಂಡವೊಂದು ತಲವಾರಿನಿಂದ ದಾಳಿ ನಡೆಸಿದ ಪರಿಣಾಮ ಆತನಿಗೆ ಗಂಭೀರವಾದ ಗಾಯವಾಗಿದೆ. ಈ ಘಟನೆ ತೊಕ್ಕೊಟ್ಟು ಒಳಪೇಟೆ ಬಳಿ ನಡೆದಿರುವುದು ವರದಿಯಾಗಿದೆ. ಗಾಯಗೊಂಡವನನ್ನು ಅಳೇಕಲ ನಿವಾಸಿ ಫೈಝಲ್ ಎಂದು ಗುರುತಿಸಲಾಗಿದೆ. ಫೈಝಲ್ ಕಲ್ಲಾಪು ಮಾರುಕಟ್ಟೆಗೆ ಬರುತ್ತಿದ್ದ ವೇಳೆ ಒಳಪೇಟೆ ಬಳಿ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮಂಗಳೂರು: ಉಳ್ಳಾಲದಲ್ಲಿ ಯುವಕನ ಮೇಲೆ ತಲವಾರಿನಿಂದ ಹಲ್ಲೆ Read More »

error: Content is protected !!
Scroll to Top