ದಕ್ಷಿಣ ಕನ್ನಡ

ಬಳ್ಪ ಕಾಡಿನಲ್ಲಿ ಮಂಗಗಳ ಮೃತದೇಹ ಪತ್ತೆ!

ಸುಳ್ಯ: ತಾಲೂಕಿನ ಬಳ್ಪ ರಕ್ಷಿತಾರಣ್ಯದ  ಗುತ್ತಿಗಾರು-ಬಳ್ಪ ರಸ್ತೆ ನಡುವೆ ರಸ್ತೆ ಬದಿಯಲ್ಲಿ ಮಂಗಗಳ ಮೃತದೇಹ ಪತ್ತೆಯಾಗಿದೆ. ಸುಮಾರು 30 ಕ್ಕೂ ಅಧಿಕ ಮಂಗಗಳು ಸತ್ತು ಬಿದ್ದಿರುವ ಸ್ಥಿತಿಯಲ್ಲಿದೆ. ಮಧ್ಯಾಹ್ನದ ವೇಳೆ ಸಾಮಾಜಿಕ ಜಾಲತಾಣದ ಮೂಲಕ ಮಂಗಗಳ ಮೃತದೇಹ ಇರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಬಳ್ಪ ಕಾಡಿನಲ್ಲಿ ಮಂಗಗಳ ಮೃತದೇಹ ಪತ್ತೆ! Read More »

ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ

ಸುಬ್ರಹ್ಮಣ್ಯ: ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಏನೆಕಲ್ಲು ಗ್ರಾಮದಲ್ಲಿ ನಡೆದಿದೆ. ಕಡಬ ತಾಲೂಕಿನ ಏನೆಕಲ್ಲು ಗ್ರಾಮದ ಕುಕ್ಕಪ್ಪನ ಮನೆ ಮೋಹನ ಕುಮಾರ(51) ಆತ್ಮಹತ್ಯೆ ಮಾಡಿಕೊಂಡವರು. ಇತ್ತೀಚೆಗೆ ಮನೆ ನಿರ್ಮಾಣಕ್ಕಾಗಿ ಕೈ ಸಾಲ ಹಾಗೂ ಕೃಷಿ ಚಟುವಟಿಕೆಗಳಿಗೆ ಬ್ಯಾಂಕು ಸಾಲಗಳನ್ನು ಮಾಡಿಕೊಂಡಿದ್ದರು ಎನ್ನಲಾಗಿದೆ. ಮಾಡಿದ ಸಾಲವನ್ನು ತೀರಿಸಲಾಗದೇ ಬೇಸರದಿಂದ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಮುಂಜಾನೆ ಎಂದಿನಂತೆ ತೋಟಕ್ಕೆ ಹೋದವರು ಎಷ್ಟು ಹೊತ್ತಾದರೂ ಮನೆಗೆ ಬಾರದೇ ಇದ್ದಾಗ ಮನೆಯವರು ತೋಟದಲ್ಲಿ ಹುಡುಕಾಡಿದಾಗ

ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ Read More »

ಎಲಿಮಲೆ ಶಾಲಾ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

ಸುಳ್ಯ : ಹತ್ತನೇ ತರಗತಿ ವಿದ್ಯಾರ್ಥಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯ ತಾಲೂಕಿನಲ್ಲಿ ಶುಕ್ರವಾರ ನಡೆದಿದೆ. ಸುಳ್ಯ ತಾಲೂಕಿನ ಎಲಿಮಲೆ ಸರಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಶಮಂತ್ ಆತ್ಮಹತ್ಯೆ ಮಾಡಿಕೊಂಡಾತ. ಮೂಲತಃ ಚೊಕ್ಕಾಡಿಯವರಾಗಿರುವ, ಪ್ರಸ್ತುತ ನೆಲ್ಲೂರು ಕೆಮ್ರಾಜೆ ಗ್ರಾಮದ ಹೊಟ್ಟುಚೋಡಿಯಲ್ಲಿ ನೆಲೆಸಿರುವ ದಿ| ವಾಸುದೇವ ಎಂಬವರ ಪುತ್ರ ಶಮಂತ್ ಶುಕ್ರವಾರ ಬೆಳಿಗ್ಗೆ 6 ಗಂಟೆಯ ಸುಮಾರಿಗೆ ಮನೆಯಿಂದ ಹೊರಟು ಬಂದು ಶಾಲಾ ಆವರಣದ ಶೌಚಾಲಯದ ಹಿಂಬದಿ ಗಿಡವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಎಲಿಮಲೆ ಶಾಲಾ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ Read More »

ತಾಯಿ-ಮಗು ನಾಪತ್ತೆ : ಪೊಲೀಸರಿಗೆ ದೂರು

ಮಂಗಳೂರು: ಪತ್ನಿ ಹಾಗೂ ಮೂರು ವರ್ಷದ ಪುತ್ರ ನಾಪತ್ತೆಯಾಗಿರುವ ಬಗ್ಗೆ ಬಜಪೆ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ. ಬಜ್ಜೆಯ ಕೆ.ಪಿ. ನಗರದ ಶಾಹಿಸ್ತಾ ಮಂಜೀಲ್‌ನ ಅಹ್ಮದ್ ಮನ್ಸೂದ್ ಅವರ ಪತ್ನಿ ಶರೀನಾ ವೈ. (24) ಹಾಗೂ ಮಗ ಮಹ್ಮದ್ ತೋಹಾರ್ (3) ಎಂದು ಗುರುತಿಸಲಾಗಿದೆ. ಅಹ್ಮದ್ ಮನ್ಸೂದ್ ಅವರು ತಾಯಿ ಮತ್ತು ಪತ್ನಿಯೊಂದಿಗೆ ವಾಸವಾಗಿದ್ದು ಸುಮಾರು 6 ವರ್ಷಗಳ ಹಿಂದೆ ಸುಳ್ಯದ ಶರಿನಾ (24) ಅವರನ್ನು ವಿವಾಹವಾಗಿದ್ದರು. ದಂಪತಿಗಳಿಗೆ 3 ವರ್ಷದ ಗಂಡು ಮಗುವಿದೆ. ಶರೀನಾ  ಗರ್ಭಿಣಿಯಾಗಿದ್ದು

ತಾಯಿ-ಮಗು ನಾಪತ್ತೆ : ಪೊಲೀಸರಿಗೆ ದೂರು Read More »

ಮಾರಕಾಸ್ತ್ರದಿಂದ ಇರಿದು ಯುವಕನ ಹತ್ಯೆ; ಆರೋಪಿಗಳ ಬಂಧನ

ಉಳ್ಳಾಲ : ಯುವಕನೊಬ್ಬನ್ನು ಮಾರಕಾಸ್ತ್ರದಿಂದ ಇರಿದು ಹತ್ಯೆಗೈದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೊಲ್ಯ ಸಾರಸ್ವತ ಕಾಲನಿಯ ಶಾಲೆಯೊಂದರ ಬಳಿ ಬುಧವಾರ ರಾತ್ರಿ ನಡೆದಿದೆ. ಹತ್ಯಗೀಡಾದ ಯುವಕನನ್ನು ವರುಣ್‌ ಗಟ್ಟಿ(28) ಎಂದು ಗುರುತಿಸಲಾಗಿದೆ. ಆರೋಪಿಗಳಾದ ಸೂರಜ್‌ ಮತ್ತು ರವಿರಾಜ್‌ ಎಂಬವರನ್ನು ಉಳ್ಳಾಲ ಠಾಣಾ ಪೋಲೀಸರು ವಶಕ್ಕೆ ಪಡೆದಿದ್ದಾರೆ. ಬಿಯರ್‌ ಕುಡಿದು ಬಾಟಲಿಯನ್ನು ರಸ್ತೆಗೆ ಎಸೆದಿದ್ದನ್ನು ಪ್ರಶ್ನಿಸಿದಕ್ಕೆ ಕೊಲೆಗೈಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಶಾಲೆಯ ಮುಂಭಾಗದ ಕಟ್ಟೆಯೊಂದರಲ್ಲಿ ಕುಳಿತು ಸೂರಜ್‌ ಮತ್ತು ರವಿರಾಜ್‌ ಬಿಯರ್‌ ಕುಡಿದು ಬಾಟಲಿಯನ್ನು ರಸ್ತೆಗೆ

ಮಾರಕಾಸ್ತ್ರದಿಂದ ಇರಿದು ಯುವಕನ ಹತ್ಯೆ; ಆರೋಪಿಗಳ ಬಂಧನ Read More »

ನಾಳೆಯಿಂದ ಬೆಂಗಳೂರು-ಮಂಗಳೂರು ರೈಲು ಸಂಚಾರ ರದ್ದು | ಇಲ್ಲಿದೆ ವಿವರ

ಬೆಂಗಳೂರು: ಕಾಮಗಾರಿ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ಮಂಗಳೂರು ಮಧ್ಯೆ ಡಿ.14 ರಿಂದ ಡಿ.22ರ ವರೆಗೆ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ನೈಋತ್ಯ ರೈಲ್ವೆ, ಮಾರ್ಗ ಮಧ್ಯೆ ತುರ್ತು ನಿರ್ವಹಣಾ ಕೆಲಸ ಕೈಗೊಳ್ಳುವುದರಿಂದ ರೈಲುಗಳನ್ನು ರದ್ದುಗೊಳಿಸಲಾಗಿದೆ. ಡಿ.14 ರಿಂದ 18 ರ ಅವಧಿಯಲ್ಲಿ ಮಧ್ಯಾಹ್ನ 2 ರಿಂದ ಸಂಜೆ 6ರ ವರೆಗೆ ಮತ್ತು ಸಂಜೆ 6 ರಿಂದ ರಾತ್ರಿ 8ರ ವರೆಗೆ ಲೈನ್ ಬ್ಲಾಕ್, ಸಿಗ್ನಲ್ ಮತ್ತು ದೂರ ಸಂಪರ್ಕ ಬ್ಲಾಕ್ ಜಾರಿಯಲ್ಲಿರಲಿದೆ. ಈ

ನಾಳೆಯಿಂದ ಬೆಂಗಳೂರು-ಮಂಗಳೂರು ರೈಲು ಸಂಚಾರ ರದ್ದು | ಇಲ್ಲಿದೆ ವಿವರ Read More »

ಮಂಗಳಾದೇವಿ ದೇವಸ್ಥಾನದ ಹೆಸರನ್ನು ಬೋಳಾರ್‌ ಶೇಕ್‌ ಉಮರ್‌ ಸಾಹೇಬ್‌ ಕಾಂಪೌಂಡು ಎಂದು ತಿದ್ದಿದ ಕಿಡಿಗೇಡಿಗಳು!!

ಮಂಗಳೂರು: ಮಂಗಳಾದೇವಿ ನೆಲೆಯಾಗಿರುವ ಕ್ಷೇತ್ರ ಮಂಗಳಾಪುರ. ಈ ಮಂಗಳಾಪುರವೇ ಮುಂದೆ ಮಂಗಳೂರು ಎಂದಾಯಿತು ಎನ್ನುತ್ತವೆ ಇತಿಹಾಸ. ಇಂತಹ ಐತಿಹಾಸಿಕ, ಧಾರ್ಮಿಕ ಕ್ಷೇತ್ರದ ಹೆಸರನ್ನು ಗೂಗಲ್ ಮ್ಯಾಪಿನಲ್ಲಿ ತಿದ್ದಿರುವ ಘಟನೆ ನಡೆದಿದ್ದು, ಆಕ್ರೋಶ ವ್ಯಕ್ತವಾಗಿದೆ. ಬೋಳಾರದ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ಹೆಸರನ್ನು ಗೂಗಲ್‌ ಮ್ಯಾಪ್‌ನಲ್ಲಿ “ಬೋಳಾರ್‌ ಶೇಕ್‌ ಉಮರ್‌ ಸಾಹೇಬ್‌ ಕಾಂಪೌಂಡು’ ಎಂದು ಬರೆದಿರುವುದು ಇದೀಗ ಬೆಳಕಿಗೆ ಬಂದಿದೆ. ದೇವಸ್ಥಾನದ ಪಾವಿತ್ರ್ಯಕ್ಕೆ ಧಕ್ಕೆ ತರುವ ಹಾಗೂ ಹಿಂದೂಗಳ ಧಾರ್ಮಿಕ ಭಾವನೆಗೆ ಘಾಸಿಯನ್ನುಂಟು ಮಾಡುವ ಮತ್ತು ಸಾಮರಸ್ಯವನ್ನು ಭಂಗ

ಮಂಗಳಾದೇವಿ ದೇವಸ್ಥಾನದ ಹೆಸರನ್ನು ಬೋಳಾರ್‌ ಶೇಕ್‌ ಉಮರ್‌ ಸಾಹೇಬ್‌ ಕಾಂಪೌಂಡು ಎಂದು ತಿದ್ದಿದ ಕಿಡಿಗೇಡಿಗಳು!! Read More »

ಗಾಳಿಯಲ್ಲಿ ತೇಲಿದ ಕಲ್ಲು: ಕಳಂಜದಲ್ಲೊಂದು ವಿಸ್ಮಯ!!

ಕೆಲವು ಸೆಕೆಂಡುಗಳ ಕಾಲ ಕಲ್ಲೊಂದು ಗಾಳಿಯಲ್ಲಿ ತೇಲಾಡುವ ಘಟನೆ ಸುಳ್ಯ ತಾಲೂಕಿನ ಕಳಂಜದ ತಂಟೆಪ್ಪಾಡಿಯಲ್ಲಿ ನಡೆದಿದೆ. ಈ ಘಟನೆ ವಿಸ್ಮಯ ಮೂಡಿಸಿದ್ದು, ಇದು ಹೇಗೆ ಸಾಧ್ಯ ಎಂಬ ಚರ್ಚೆಯೂ ನಡೆಯುತ್ತಿದೆ. ತಂಟೆಪ್ಪಾಡಿಯ ಧನುಶ್ರೀ ಎಂಬವರು ಮೊಬೈಲಿನಲ್ಲಿ ಸೆರೆ ಹಿಡಿದಿರುವ ಚಿತ್ರ ಇದಾಗಿದೆ. ಎಂದಿನಂತೆ ಕಾಲೇಜಿಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ರಸ್ತೆ ಬದಿಯ ಕಲ್ಲೊಂದು ನೆಲ ಬಿಟ್ಟು, ಗಾಳಿಯಲ್ಲಿ ತೇಲಾಡುತ್ತಿರುವುದನ್ನು ಕಂಡಿದ್ದಾರೆ. ಅಚ್ಚರಿ ಪಟ್ಟ ಅವರು, ತಮ್ಮ ಮೊಬೈಲಿನಲ್ಲಿ ಅದನ್ನು ಸೆರೆ ಹಿಡಿದಿದ್ದಾರೆ. ಇದೀಗ ಈ ಫೊಟೋ ಸಾಮಾಜಿಕ

ಗಾಳಿಯಲ್ಲಿ ತೇಲಿದ ಕಲ್ಲು: ಕಳಂಜದಲ್ಲೊಂದು ವಿಸ್ಮಯ!! Read More »

ಕಂಬಳ ಕೋಣಗಳ ಯಜಮಾನ ಕಟ್ಟಡದಿಂದ ಬಿದ್ದು ಸಾವು !

ಪೂಂಜಾಲಕಟ್ಟೆ: ಹಳೆಯ ಕಟ್ಟಡದ ಮೇಲ್ಚಾವಣಿ ಕೆಡಹುವ ಸಂದರ್ಭದಲ್ಲಿ ಕೆಳಗೆ ಬಿದ್ದು ಕಂಬಳ ಕೋಣಗಳ ಯಜಮಾನ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ತೆಂಕಕಜೆಕಾರು ಎಂಬಲ್ಲಿ ನಡೆದಿದೆ. ಬಡಗಕಜೆಕಾರು ಗ್ರಾಮದ ಕುಲೆಂಜಿಕೋಡಿ ನಿವಾಸಿ ಸುಂದರ ಪೂಜಾರಿ (55) ಮೃತಪಟ್ಟವರು. ವೃತ್ತಿಯಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಸುಂದರ ಪೂಜಾರಿ ತೆಂಕಕಜೆಕಾರಿನ ವಿಜಯಾ ಎಂಬವರ ದೈವಸ್ಥಾನ ಕಟ್ಟಡ ಕೆಡಹುವ ಕೆಲಸಕ್ಕೆ ಹೋಗಿದ್ದು ಗೋಡೆಯ ಮೇಲಿನಿಂದ ಸ್ಲಾಬ್‌ ತೆಗೆಯುವ ವೇಳೆ ಸ್ಲಾಬ್‌ ಸಹಿತ ಕೆಳಕ್ಕೆ ಬಿದ್ದಿದ್ದರು. ಗಂಭೀರ ಗಾಯಗೊಂಡ

ಕಂಬಳ ಕೋಣಗಳ ಯಜಮಾನ ಕಟ್ಟಡದಿಂದ ಬಿದ್ದು ಸಾವು ! Read More »

ಬಸ್ಸಿಗೆ ಹತ್ತುವ ವೇಳೆ ಚಿನ್ನದ ಸರ ಕಳವು !

ಬೆಳ್ತಂಗಡಿ: ಬಸ್ಸಿಗೆ ಹತ್ತುವ ವೇಳೆ ಚಿನ್ನ ಕಳವು ಮಾಡಿರುವ ಘಟನೆ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಉಜಿರೆ ಗ್ರಾಮದ ವಾರಿಜ ಟಿ. (53) ಮಂಗಳವಾರ ಸಂಜೆ ಬೆಳ್ತಂಗಡಿ ಬಸ್ಸು ನಿಲ್ದಾಣದಲ್ಲಿ ಧರ್ಮಸ್ಥಳಕ್ಕೆ ಹೋಗುವ ಕೆಎಸ್ಸಾಆರ್ಟಿಸಿ ಬಸ್ ಗೆ ಹತ್ತುವ ವೇಳೆ ಘಟನೆ ನಡೆದಿದೆ. ವಾರಿಜ ಅವರು ಕೊರಳಿನಲ್ಲಿ ಧರಿಸಿದ್ದ ಚಿನ್ನದ ಸರವನ್ನು ಯಾರೋ ಅನಾಮಿಕರು ಎಳೆದು ತೆಗೆದಿದ್ದಾರೆ. ಈ ಸಂದರ್ಭ ಅವರು ಬೊಬ್ಬೆ ಹೊಡೆದಿದ್ದಾರೆ. ಆದರೆ ಬಸ್ಸಿನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದುದರಿಂದ ಕಳ್ಳ ಯಾರೆಂದು ಪತ್ತೆಯಾಗಿಲ್ಲ ಎಂದು

ಬಸ್ಸಿಗೆ ಹತ್ತುವ ವೇಳೆ ಚಿನ್ನದ ಸರ ಕಳವು ! Read More »

error: Content is protected !!
Scroll to Top