ಅಪರಾಧ

ಧರ್ಮಸ್ಥಳ ಪ್ರಕರಣ ಪಾರದರ್ಶಕ ತನಿಖೆ : ಪರಮೇಶ್ವರ

ಎಸ್‌ಐಟಿ ವಿವೇಚನೆಯಂತೆ ತನಿಖೆ; ಸರ್ಕಾರದ ಹಸ್ತಕ್ಷೇಪವಿಲ್ಲ ಎಂದು ಸ್ಪಷ್ಟನೆ ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಸಂಪೂರ್ಣ ತನಿಖೆಯನ್ನು ಎಸ್‍ಐಟಿ ಅಧಿಕಾರಿಗಳ ವಿವೇಚನೆಗೆ ಬಿಟ್ಟಿದ್ದೇವೆ. ಇದು ಗಂಭೀರವಾದ ಪ್ರಕರಣವಾದ್ದರಿಂದ ಎಚ್ಚರಿಕೆಯಿಂದ ಪಾರದರ್ಶಕವಾಗಿ ತನಿಖೆ ನಡೆಯುತ್ತಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಧರ್ಮಸ್ಥಳ ಪ್ರಕರಣದಲ್ಲಿ ದೂರುದಾರ ಗುರುತಿಸುವ ಸ್ಥಳಗಳನ್ನು ಎಸ್‍ಐಟಿ ಅಧಿಕಾರಿಗಳು ಅಗೆಯುವ ಬಗ್ಗೆ ತೀರ್ಮಾನ ಮಾಡುತ್ತಾರೆ, ಇದರಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪವಿಲ್ಲ. ಎಸ್‍ಐಟಿ ತಂಡ ಪಾರದರ್ಶಕವಾಗಿ ತನಿಖೆ ತನಿಖೆ ನಡೆಸುವ ವಿಶ್ವಾಸವಿದೆ. ಸಂಪೂರ್ಣ ತನಿಖೆ ಬಳಿಕ ವರದಿಯನ್ನು ಸಲ್ಲಿಸಿದಾಗ ಸರ್ಕಾರ […]

ಧರ್ಮಸ್ಥಳ ಪ್ರಕರಣ ಪಾರದರ್ಶಕ ತನಿಖೆ : ಪರಮೇಶ್ವರ Read More »

ಧರ್ಮಸ್ಥಳ ಪ್ರಕರಣ : ಇಂದು 11ನೇ ಪಾಯಿಂಟ್‌ನಲ್ಲಿ ನೆಲ ಅಗೆಯುವ ಕಾರ್ಯಾಚರಣೆ

ಗುರುತಿಸಿದ ಎಲ್ಲ ಸ್ಥಳಗಳಲ್ಲಿ ಅಗೆಯಲು ತೀರ್ಮಾನ ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಶವಗಳನ್ನು ಹೂತು ಹಾಕಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನೆಲ ಅಗೆಯುವ ಕಾರ್ಯಾಚರಣೆ ಮಂಗಳವಾರವೂ ಮುಂದುವರಿದಿದೆ. ನೇತ್ರಾವತಿ ಸ್ನಾನಘಟ್ಟದ ಬಳಿಯ ಕಾಡಿನಲ್ಲಿ ದೂರುದಾರ ಈ ಹಿಂದೆ ಗುರುತಿಸಿದ್ದ 11ನೇ ಪಾಯಿಂಟ್‌ನಲ್ಲಿ ಎಸ್ಐಟಿ ಇಂದು ಶೋಧ ಕಾರ್ಯಾಚರಣೆ ಆರಂಭಿಸಿದೆ. ಸೋಮವಾರದ ಕಾರ್ಯಾಚರಣೆಯ ವೇಳೆ ದೂರುದಾರ ಈ ಹಿಂದೆ ತೋರಿಸಿದ್ದ 11ನೇ ಜಾಗಕ್ಕಿಂತ ಮುಂದಕ್ಕೆ ಕಾಡಿನೊಳಗೆ ಎಸ್ಐಟಿ ಅಧಿಕಾರಿಗಳನ್ನು ಕರೆದೊಯ್ದಿದ್ದು, ಅಲ್ಲಿ ನೆಲದ ಮೇಲೆಯೇ ಅಸ್ಥಿಪಂಜರದ ಅವಶೇಷಗಳು ಸಿಕ್ಕಿವೆ. ಅವುಗಳನ್ನು ತಜ್ಞರ

ಧರ್ಮಸ್ಥಳ ಪ್ರಕರಣ : ಇಂದು 11ನೇ ಪಾಯಿಂಟ್‌ನಲ್ಲಿ ನೆಲ ಅಗೆಯುವ ಕಾರ್ಯಾಚರಣೆ Read More »

ಪಾಕ್‌ ಪರ ಬೇಹುಗಾರಿಕೆ : ಇನ್ನೋರ್ವನ ಬಂಧನ

ಗಡಿ ಭಾಗದ ಭದ್ರತಾ ನೆಲೆಗಳ ಕುರಿತು ಮಾಹಿತಿ ರವಾನಿಸುತ್ತಿದ್ದ ಬೇಹುಗಾರ ನವದೆಹಲಿ: ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸುತ್ತಿದ್ದ ಮತ್ತೊಬ್ಬ ಶಂಕಿತನನ್ನು ಭದ್ರತಾ ಸಂಸ್ಥೆಗಳು ಬಂಧಿಸಿವೆ. ರಾಜಸ್ಥಾನದ ಜೈಸಲ್ಮೇರ್‌ನ ಚಂದನ್ ಗ್ರಾಮದ ನಿವಾಸಿ ಮಹೇಂದ್ರ ಸಿಂಗ್ ಎಂಬಾತನನ್ನು ಬಂಧಿಸಲಾಗಿದೆ. ಈತ ಜೈಸಲ್ಮೇರ್‌ನ ಡಿಆರ್‌ಡಿಒ ಅತಿಥಿ ಗೃಹದಲ್ಲಿ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದ. ಮಿಲಿಟರಿ ಪರೀಕ್ಷೆಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ವಿಜ್ಞಾನಿಗಳು ಈ ಅತಿಥಿ ಗೃಹದಲ್ಲಿ ತಂಗುತ್ತಿದ್ದರು. ಮಹೇಂದ್ರ ಸಿಂಗ್ ಮೇಲೆ ಪೋಖ್ರಾನ್ ಫೈರಿಂಗ್ ರೇಂಜ್‌ನಂತಹ ಸೂಕ್ಷ್ಮ ಮಿಲಿಟರಿ ಪ್ರದೇಶಗಳ ಬಗ್ಗೆ

ಪಾಕ್‌ ಪರ ಬೇಹುಗಾರಿಕೆ : ಇನ್ನೋರ್ವನ ಬಂಧನ Read More »

ಉಪ್ಪಿನಂಗಡಿ : ತಲೆಮರೆಸಿಕೊಂಡಿದ್ದ ಕುಖ್ಯಾತ ಕಳ್ಳನ ಬಂಧನ

ಐದು ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಆರೋಪಿ ಉಪ್ಪಿನಂಗಡಿ : ಹಲವು ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಐದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಹಾಸನ ಮೂಲದ ಆರೋಪಿ ಸೊಹೈಲ್ ಅಲಿಯಾಸ್ ಸೊಹಿಬ್‌ನನ್ನು (24) ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಒಟ್ಟು ಎಂಟು ಕಳ್ಳತನ ಪ್ರಕರಣಗಳಲ್ಲಿ ಸೊಹೈಲ್ ಭಾಗಿಯಾಗಿರುವುದನ್ನು ಪತ್ತೆಹಚ್ಚಲಾಗಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ 2020 ಮತ್ತು 2022ರಲ್ಲಿ ಅವನ ವಿರುದ್ಧ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. 2020ರಲ್ಲಿ ಬಂಟ್ವಾಳ ಪಟ್ಟಣ ಪೊಲೀಸ್ ಠಾಣೆ ಮತ್ತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ತಲಾ ಒಂದು

ಉಪ್ಪಿನಂಗಡಿ : ತಲೆಮರೆಸಿಕೊಂಡಿದ್ದ ಕುಖ್ಯಾತ ಕಳ್ಳನ ಬಂಧನ Read More »

ಧರ್ಮಸ್ಥಳ ಪ್ರಕರಣ : 15 ವರ್ಷದ ಬಾಲಕಿಯ ಕೊಳೆತ ಶವ ಹೂತಿದ್ದಾರೆ ಎಂದು ದೂರು

ದಿನಕ್ಕೊಂದು ತಿರುವು ಪಡೆಯುತ್ತಿರುವ ಶವ ಹುಡುಕಾಟ ಕಾರ್ಯಾಚರಣೆ ಮಂಗಳೂರು: ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಆರೋಪಿಸಲಾಗಿರುವ ನಿಗೂಢ ಸರಣಿ ಸಾವುಗಳ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ಸೋಮವಾರ ಮತ್ತೊಂದು ದೂರು ನೀಡಲಾಗಿದೆ. ಬೆಳ್ತಂಗಡಿ ತಾಲೂಕಿನ ಇಚಿಲಂಪಾಡಿ ನಿವಾಸಿ ಸಾಮಾಜಿಕ ಹೋರಾಟಗಾರ ಜಯಂತ್ ಸೋಮವಾರ ಮೂವರು ವ್ಯಕ್ತಿಗಳ ಜೊತೆ ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಹೋಗಿ 15 ವರ್ಷಗಳ ಹಿಂದೆ ನಡೆದ ಹದಿಹರೆಯದ ಬಾಲಕಿಯ ನಿಗೂಢ ಸಾವು ಸಂಭವಿಸಿದೆ ಎಂದು

ಧರ್ಮಸ್ಥಳ ಪ್ರಕರಣ : 15 ವರ್ಷದ ಬಾಲಕಿಯ ಕೊಳೆತ ಶವ ಹೂತಿದ್ದಾರೆ ಎಂದು ದೂರು Read More »

ಅಕ್ರಮವಾಗಿ ಶೇಖರಿಸಿಟ್ಟ ಗಾಂಜಾ ವಶಪಡಿಸಿಕೊಂಡ ಪೊಲೀಸರು: ಆರೋಪಿ ಪರಾರಿ

ಬೆಳ್ತಂಗಡಿ: ಕಟ್ಟಡವೊಂದರಲ್ಲಿ ಅಕ್ರಮವಾಗಿ ದಾಸ್ತಾನು ಇಡಲಾಗಿದ್ದ ಗಾಂಜಾ‌ವನ್ನು ಪುಂಜಾಲಕಟ್ಟೆ ‌ಪೊಲೀಸರು ಪತ್ತೆ‌ಹಚ್ಚಿದ್ದು, ಆರೋಪಿ ಪರಾರಿಯಾಗಿದ್ದಾನೆ. ಈ ಪ್ರಕರಣವನ್ನು ಸದ್ಯ ಬೆಳ್ತಂಗಡಿ ಪೊಲೀಸರಿಗೆ ವರ್ಗಾವಣೆ ಮಾಡಲಾಗಿದೆ. ಆರೋಪಿಯನ್ನು ಮದಡ್ಕದ ಚಿಲಿಂಬಿ ನಿವಾಸಿ ರಫೀಕ್ ಎಂಬಾತ ಪರಾರಿಯಾಗಿದ್ದಾನೆ. ಆತನ ಮನೆಯಲ್ಲಿ 160 ಗ್ರಾಂ ಗಾಂಜಾ ಶೇಖರಿಸಿ ಇಡಲಾಗಿತ್ತು. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸರಿಗೆ ಖಚಿತ ಮಾಹಿತಿ ಬಂದಿದ್ದು ದಾಳಿ ನಡೆಸಿದ್ದಾರೆ. ಆರೋಪಿ ರಫೀಕ್ ವಿರುದ್ಧ ಈ ಹಿಂದೆಯೂ ಹಲವಾರು ಗಾಂಜಾ ಪ್ರಕರಣಗಳು ದಾಖಲಾಗಿರುವ ಬಗ್ಗೆ ಮಾಹಿತಿ ಇದೆ.

ಅಕ್ರಮವಾಗಿ ಶೇಖರಿಸಿಟ್ಟ ಗಾಂಜಾ ವಶಪಡಿಸಿಕೊಂಡ ಪೊಲೀಸರು: ಆರೋಪಿ ಪರಾರಿ Read More »

ನೀವು ನಿಜವಾದ ಭಾರತೀಯನೇ ಆಗಿದ್ದರೆ… : ರಾಹುಲ್‌ ಗಾಂಧಿಗೆ ಸುಪ್ರೀಂ ಕೋರ್ಟ್‌ ಛೀಮಾರಿ

ಭಾರತ್‌ ಜೋಡೊ ಯಾತ್ರೆ ಸಂದರ್ಭ ನೀಡಿದ ಹೇಳಿಕೆಗೆ ಸರ್ವೋಚ್ಚ ನ್ಯಾಯಾಲಯದಿಂದ ತೀಕ್ಷ್ಣ ತರಾಟೆ ನವದೆಹಲಿ: ಮಾನನಷ್ಟ ಪ್ರಕಣಣವೊಂದರಲ್ಲಿ ಸುಪ್ರೀಂ ಕೋರ್ಟ್‌ ಇಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿಯನ್ನು ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಂಡಿದ್ದು, ನೀವು ನಿಜವಾದ ಭಾರತೀಯನಾಗಿದ್ದರೆ ಈ ರೀತಿ ಹೇಳುತ್ತಿರಲಿಲ್ಲ ಎಂದು ಛೀಮಾರಿ ಹಾಕಿದೆ. ಇದೇ ವೇಳೆ ಈ ಮಾನನಷ್ಟ ಮೊಕದ್ದಮೆಗೆ ತಡೆ ನೀಡಿದೆ. ಭಾರತದ 2,000 ಕಿ.ಮೀ. ನೆಲವನ್ನು ಚೀನ ಕಬಳಿಸಿದೆ ಎಂಬ ಹೇಳಿಕೆಗೆ ಸಂಬಂಧಿಸಿ ದಾಖಲಾಗಿರುವ ಮಾನನಷ್ಟ ಮೊಕದ್ದಮೆ ವಿಚಾರಣೆ ವೇಳೆ ಸುಪ್ರೀಂ

ನೀವು ನಿಜವಾದ ಭಾರತೀಯನೇ ಆಗಿದ್ದರೆ… : ರಾಹುಲ್‌ ಗಾಂಧಿಗೆ ಸುಪ್ರೀಂ ಕೋರ್ಟ್‌ ಛೀಮಾರಿ Read More »

ಬಂಟ್ವಾಳ: ಗಿಫ್ಟ್‌ ಪಾರ್ಸೆಲ್‌ ನಂಬಿ 2.35 ಲ.ರೂ. ಕಳೆದುಕೊಂಡ ಮಹಿಳೆ

ಬಂಟ್ವಾಳ : ನಿಮಗೆ ಗಿಫ್ಟ್‌ ಪಾರ್ಸೆಲ್‌ ಇದೆ ಎಂದು ನಂಬಿಸಿ ಬಂಟ್ವಾಳದ ಮಹಿಳೆಯೊಬ್ಬರಿಗೆ ಸೈಬರ್‌ ಚೋರರು 2.35 ಲ.ರೂ. ವಂಚಿಸಿದ ಕುರಿತು ಬಂಟ್ವಾಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಬಂಟ್ವಾಳದ ಭಾರತಿ ಕೆ. ಎಂಬ ಮಹಿಳೆಗೆ ಕಳೆದ ವರ್ಷ ಡಿ.3ರಂದು ದೆಹಲಿಯ ಡಿಎಚ್‌ಎಲ್‌ ಕೊರಿಯರ್‌ ಸಂಸ್ಥೆಯಿಂದ ಎಂದು ಹೇಳಿಕೊಂಡು ವಂಚಕರು ಕರೆ ಮಾಡಿದ್ದಾರೆ. ಚಿನ್ನ, ಐಫೋನ್‌ ಮತ್ತು 49 ಲ.ರೂ. ಮೌಲ್ಯದ ಕರೆನ್ಸಿ ಪಾರ್ಸೆಲ್‌ ಇದೆ. ಅದನ್ನು ಬಿಡಿಸಿಕೊಳ್ಳಬೇಕಾದರೆ ಮುಂಗಡವಾಗಿ ತೆರಿಗೆ ಪಾವತಿಸಬೇಕೆಂದು ಎಂದು ಮಹಿಳೆಯನ್ನು ನಂಬಿಸಿದ್ದಾರೆ.

ಬಂಟ್ವಾಳ: ಗಿಫ್ಟ್‌ ಪಾರ್ಸೆಲ್‌ ನಂಬಿ 2.35 ಲ.ರೂ. ಕಳೆದುಕೊಂಡ ಮಹಿಳೆ Read More »

ಅನ್ಯಧರ್ಮದ ಯುವತಿಯನ್ನು ಪ್ರೀತಿಸಿದ ಯುವಕನ ಹತ್ಯೆ

ನಡುರಸ್ತೆಯಲ್ಲಿ ಮಚ್ಚಿನಿಂದ ಕೊಚ್ಚಿ ಹಾಕಿ ಶರಣಾದ ಆರೋಪಿ ಬೆಂಗಳೂರು: ಕೊಪ್ಪಳದ ಬಹದ್ದೂರ ಬಂಡಿ ಎಂಬಲ್ಲಿ ಭಾನುವಾರ ರಾತ್ರಿ ನಡುರಸ್ತೆಯಲ್ಲೇ ಮಚ್ಚಿನಿಂದ ಕೊಚ್ಚಿ ಯುವಕನನ್ನು ಭೀಕರವಾಗಿ ಹತ್ಯೆ ಮಾಡಲಾಗಿದ್ದು, ಇದಕ್ಕೆ ಆತ ಮುಸ್ಲಿಂ ಯುವತಿಯೊಬ್ಬಳನ್ನು ಪ್ರೀತಿಸಿದ್ದು ಕಾರಣ ಎನ್ನಲಾಗಿದೆ. ಗವಿಸಿದ್ದಪ್ಪ ನಿಂಗಜ್ಜ ನಾಯಕ್ (30) ಕೊಲೆಯಾದ ಯುವಕ. ಸಾದಿಕ್ ಕೋಲ್ಕಾರ್​ ಎಂಬ ಯುವಕ ಗವಿಸಿದ್ದಪ್ಪ ನಾಯಕ್​​ನನ್ನು ಕೊಲೆ ಮಾಡಿದ್ದಾನೆ. ಅವನ ಜೊತೆಗೆ ಇನ್ನೂ ಮೂವರಿದ್ದರು ಎನ್ನಲಾಗಿದೆ. ಗವಿಸಿದ್ದಪ್ಪ ನಾಯಕ್ ತಂದೆ ನಿಂಗಜ್ಜ ಟಣಕನಲ್ ಅವರು ಆರೋಪಿ ಸಾದಿಕ್ ಸೇರಿ

ಅನ್ಯಧರ್ಮದ ಯುವತಿಯನ್ನು ಪ್ರೀತಿಸಿದ ಯುವಕನ ಹತ್ಯೆ Read More »

ಧರ್ಮಸ್ಥಳ ಪ್ರಕರಣ : ಕಳೇಬರಗಳ ಪತ್ತೆಗೆ ಜಿಪಿಆರ್‌ ಬಳಸಲು ಒತ್ತಾಯ

ಭೂಮಿಯಡಿಯಲ್ಲಿರುವ ವಸ್ತುಗಳನ್ನು ನಿಖರವಾಗಿ ಗುರುತಿಸುವ ಅತ್ಯಾಧುನಿಕ ರೇಡಾರ್‌ ಮಂಗಳೂರು: ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಹಿಂದೆ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ಹೂತು ಹಾಕಲಾಗಿದೆ ಎನ್ನಲಾದ ಮೃತದೇಹಗಳ ಪತ್ತೆ ಕಾರ್ಯಾಚರಣೆ ಮುಂದುವರಿಯುತ್ತಿದೆ. ಆದರೆ ಇಷ್ಟರತನಕ ನಿರ್ಣಾಯಕ ಎನ್ನಬಹುದಾದ ಯಾವುದೇ ಸಾಕ್ಷಿಗಳು ಸಿಗದಿರುವ ಹಿನ್ನೆಲೆಯಲ್ಲಿ ಗ್ರೌಂಡ್‌ ಪೆನೆಟ್ರೇಟಿಂಗ್‌ ರೇಡಾರ್‌ (ಜಿಪಿಆರ್) ಬಳಸಿ ಹೂತ ಹೆಣಗಳ ಶೋಧ ಕಾರ್ಯ ನಡೆಸಬೇಕೆಂಬ ಒತ್ತಾಯ ಬಲವಾಗುತ್ತಿದೆ. ಜಿಪಿಆರ್ ಬಳಸುವಂತೆ ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾರೆ ಎನ್ನಲಾದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ಎಂಬವರ ತಾಯಿ ಸುಜಾತಾ

ಧರ್ಮಸ್ಥಳ ಪ್ರಕರಣ : ಕಳೇಬರಗಳ ಪತ್ತೆಗೆ ಜಿಪಿಆರ್‌ ಬಳಸಲು ಒತ್ತಾಯ Read More »

error: Content is protected !!
Scroll to Top