ಅಪರಾಧ

ಧರ್ಮಸ್ಥಳ ಪ್ರಕರಣ : ಮುಸುಕುಧಾರಿಯನ್ನು ಎಸ್‌ಐಟಿ ವಶದಲ್ಲಿಟ್ಟುಕೊಳ್ಳಲು ಆಗ್ರಹಿಸಿ ಪತ್ರ

ವಕೀಲರು, ಉಜಿರೆಯ ಖಾಸಗಿ ವ್ಯಕ್ತಿಗಳ ಮನೆಯಲ್ಲಿರು ಬಗ್ಗೆ ಉಲ್ಲೇಖ ಮಂಗಳೂರು: ಧರ್ಮಸ್ಥಳ ಪ್ರಕರಣದ ಕೇಂದ್ರ ಬಿಂದುವಾಗಿರುವ ಮುಸುಕುಧಾರಿ ವ್ಯಕ್ತಿಯನ್ನು ಎಸ್‌ಐಟಿ ತನ್ನ ವಶದಲ್ಲಿಯೇ ಇಟ್ಟುಕೊಂಡು ತನಿಖೆ ಮುಂದುವರಿಸಬೇಕೆಂದು ಆಗ್ರಹಿಸಿ ಬೆಳ್ತಂಗಡಿಯ ನಿವಾಸಿಯೊಬ್ಬರು ಎಸ್‌ಐಟಿಗೆ ಪತ್ರ ಬರೆದಿದ್ದಾರೆ. ಬೆಳ್ತಂಗಡಿ ನಿವಾಸಿ ಶ್ಯಾಮ ಸುಂದರ ಎಂಬವರು ಈ ಪತ್ರ ಬರೆದಿದ್ದು, ಅನಾಮಿಕ ಮುಸುಕುಧಾರಿ ವ್ಯಕ್ತಿ 13 ಸ್ಥಳಗಳನ್ನು ಈಗಾಗಲೇ ತೋರಿಸಿದ್ದಾನೆ. ಆತ ಗುರುತಿಸಿದ 12 ಸ್ಥಳಗಳಲ್ಲಿ ಎಸ್‌ಐಟಿ ತಂಡ ತನಿಖೆ ನಡೆಸಿದೆ. ಆರಂಭದಲ್ಲಿ ಅನಾಮಿಕ ವ್ಯಕ್ತಿ ತನ್ನ ವಕೀಲರ ಜೊತೆ […]

ಧರ್ಮಸ್ಥಳ ಪ್ರಕರಣ : ಮುಸುಕುಧಾರಿಯನ್ನು ಎಸ್‌ಐಟಿ ವಶದಲ್ಲಿಟ್ಟುಕೊಳ್ಳಲು ಆಗ್ರಹಿಸಿ ಪತ್ರ Read More »

ವೃದ್ಧನನ್ನು ಡಿಜಿಟಲ್‌ ಅರೆಸ್ಟ್‌ ಮಾಡಿ 1.77 ಕೋ. ರೂ. ವಂಚನೆ

ಪೊಲೀಸರ ಸೋಗಿನಲ್ಲಿ ಕರೆ ಮಾಡಿ ಹೆದರಿಸಿದ್ದ ವಂಚಕರು ಬೆಂಗಳೂರು: ಸೈಬರ್‌ ಚೋರರು ವೃದ್ಧರೊಬ್ಬರನ್ನು ಒಂದು ವಾರ ಡಿಜಿಟಲ್‌ ಟರೆಸ್ಟ್‌ ಮಾಡಿ ಬರೋಬ್ಬರಿ 1.77 ಕೋಟಿ ರೂ. ಎಗರಿಸಿದ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ. ಪೊಲೀಸರ ಸೋಗಿನಲ್ಲಿ ವೃದ್ಧರನ್ನು ಒಂದು ವಾರ ಡಿಜಿಟಲ್‌ ಬಂಧನದಲ್ಲಿಟ್ಟಿದ್ದರು. ಸೈಬರ್‌ ವಂಚನೆಗೆ ಒಳಗಾದ ಜಿ.ವಸಂತ್‌ಕುಮಾರ್‌ (81) ಎಂಬುವರು ಪೂರ್ವ ವಿಭಾಗದ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದಾನಂದ ನಗರ ಬಳಿಯ ಎನ್‌ಜಿಇಎಫ್‌ ಲೇಔಟ್‌ ನಿವಾಸಿಯಾದ ವಸಂತ್‌ಕುಮಾರ್‌ ಅವರಿಗೆ ಸಂದೀಪ್‌ ಜಾಧವ್‌ ಎಂಬಾತ ಜುಲೈ

ವೃದ್ಧನನ್ನು ಡಿಜಿಟಲ್‌ ಅರೆಸ್ಟ್‌ ಮಾಡಿ 1.77 ಕೋ. ರೂ. ವಂಚನೆ Read More »

ಧರ್ಮಸ್ಥಳ ಪ್ರಕರಣ : ಗಿರೀಶ್‌ ಮಟ್ಟಣ್ಣನವರ್‌, ತಿಮರೋಡಿ, ಸಮೀರ್‌ ವಿರುದ್ಧ ಎಫ್‌ಐಆರ್‌

ಖಾಸಗಿ ವಾಹಿನಿ ವರದಿಗಾರರ ಮೇಲೆ ಹಲ್ಲೆ ಮಾಡಿದ ಕೇಸ್‌ ದಾಖಲು ಮಂಗಳೂರು: ಖಾಸಗಿ ವಾಹಿನಿಯ ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಗಿರೀಶ್‌ ಮಟ್ಟಣನವರ್‌ , ಮಹೇಶ್‌ ಶೆಟ್ಟಿ ತಿಮರೋಡಿ ಮತ್ತು ಯೂಟ್ಯೂಬರ್‌ ಸಮೀರ್‌ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ವರದಿಗಾರ ಹರೀಶ್‌ ಅವರ ದೂರಿನಂತೆ ಬಿಎನ್‌ಎಸ್‌ ಸೆಕ್ಷನ್‌ 115(2), 189(2), 191(2), 351(2), 352, 190 ಅಡಿ ಎಫ್‌ಐಆರ್‌ ದಾಖಲಾಗಿದೆ. ಎಫ್‌ಐಆರ್‌ನಲ್ಲಿ ಗಿರೀಶ್‌ ಮಟ್ಟಣನವರ್‌ (ಎ1), ಮಹೇಶ್‌ ಶೆಟ್ಟಿ ತಿಮರೋಡಿ(ಎ2) ಯೂಟ್ಯೂಬರ್‌ ಸಮೀರ್‌(ಎ3),

ಧರ್ಮಸ್ಥಳ ಪ್ರಕರಣ : ಗಿರೀಶ್‌ ಮಟ್ಟಣ್ಣನವರ್‌, ತಿಮರೋಡಿ, ಸಮೀರ್‌ ವಿರುದ್ಧ ಎಫ್‌ಐಆರ್‌ Read More »

ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ : ಇ.ಡಿ.ಯಿಂದಲೂ ತನಿಖೆ

ಮೂರು ವರ್ಷದ ಹಿಂದೆ ಆಟೋರಿಕ್ಷಾದಲ್ಲಿ ಬಾಂಬ್‌ ಸ್ಫೋಟಗೊಂಡ ಪ್ರಕರಣ ಮಂಗಳೂರು : ಮಂಗಳೂರಿನ ಕಂಕನವಾಡಿ ಬಳಿ 2022ರಲ್ಲಿ ಆಟೋರಿಕ್ಷಾದಲ್ಲಿ ಸಂಭವಿಸಿದ್ದ ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದ ತನಿಖೆಗೆ ಈಗ ಜಾರಿ ನಿರ್ದೇಶನಾಲಯ ಎಂಟ್ರಿ ಕೊಟ್ಟಿದೆ. ಹಣ ಅಕ್ರಮ ವರ್ಗಾವಣೆ ತಡೆ ಕಾಯಿದೆಯಡಿ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದೆ. ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದ ಮುಖ್ಯ ಆರೋಪಿ ಸೈಯದ್ ಯಾಸೀನ್​ನ ಬ್ಯಾಂಕ್​ ಖಾತೆಯನ್ನು ಜಪ್ತಿ ಮಾಡಲಾಗಿದೆ. ಉಗ್ರ ಸಂಘಟನೆಯನ್ನು ಭಾರತದಾದ್ಯಂತ ವಿಸ್ತರಿಸುವುದು, ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ

ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ : ಇ.ಡಿ.ಯಿಂದಲೂ ತನಿಖೆ Read More »

ಗಂಧದ ಮರ ಕಳ್ಳತನ : ಮೂವರು ಬಂಧನ

ರಾತ್ರಿ ಹೊತ್ತು ತೋಟದಲ್ಲಿದ್ದ 9 ಗಂಧದ ಮರ ಕಡಿದು ಸಾಗಿಸಿದ್ದ ಆರೋಪಿಗಳು ಕಾರ್ಕಳ: ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ನಿಟ್ಟೆ ಗ್ರಾಮದ ದಿನೇಶ್ ಶೆಟ್ಟಿಗಾರ್ ಎಂಬವರ ತೋಟದಲ್ಲಿದ್ದ 4 ಲಕ್ಷ ಮೌಲ್ಯದ ಒಟ್ಟು 9 ಶ್ರೀಗಂಧದ ಮರಗಳನ್ನು ಜೂನ್ 16ರಂದು ರಾತ್ರಿ ಕಳ್ಳತನ ಮಾಡಿಕೊಂಡು ಹೋಗಿದ್ದ ಬಂಟ್ವಾಳದ ಓರ್ವನ ಸಹಿತ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅವರಿಂದ ಕಳವು ಮಾಡಲಾದ ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆ 2023 ಕಲಂ 86,87 ಕರ್ನಾಟಕ ಅರಣ್ಯ ಕಾಯ್ದೆ1963ರಂತೆ

ಗಂಧದ ಮರ ಕಳ್ಳತನ : ಮೂವರು ಬಂಧನ Read More »

ಧರ್ಮಸ್ಥಳ ಪ್ರಕರಣ : ಬಿಗುವಿನ ಪರಿಸ್ಥಿತಿ ನಡುವೆಯೇ ಇಂದು 13ನೇ ಪಾಯಿಂಟ್‌ ಶೋಧ

ಕ್ಷೇತ್ರಕ್ಕೆ ಅವಮಾನ ಮಾಡುತ್ತಿರುವವರ ವಿರುದ್ಧ ಸಿಡಿದ ಧರ್ಮಸ್ಥಳ ಗ್ರಾಮಸ್ಥರು ಮಂಗಳೂರು: ಬುಧವಾರ ನಡೆದ ಹಲ್ಲೆ, ಘರ್ಷಣೆಯ ಅಹಿತಕರ ಘಟನೆಯ ಬಳಿಕ ಧರ್ಮಸ್ಥಳದ ಪರಿಸ್ಥಿತಿ ಪ್ರಕ್ಷುಬ್ಧಗೊಂಡಿದ್ದು, ಇದರ ನಡುವೆಯೇ ಇಂದು ಅತಿ ಮಹತ್ವದ್ದು ಎನ್ನಲಾಗಿರುವ 13ನೇ ಪಾಯಿಂಟ್‌ನಲ್ಲಿ ಅಗೆತ ಕಾರ್ಯಾಚರಣೆ ನಡೆಯಲಿದೆ. ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣದ ಉತ್ಖನನ ಕಾರ್ಯ ಕೊನೆಯ ಹಂತಕ್ಕೆ ಬಂದು ನಿಂತಿದೆ. ಈ ನಡುವೆ ಕೊನೆಯ ಪಾಯಿಂಟ್ ಆಗಿರುವ 13ನೇ ಜಾಗದ ಉತ್ಖನನ ವಿಶೇಷ ತನಿಖಾ ತಂಡ ಕಗ್ಗಂಟಾಗಿದೆ. ದೂರುದಾರ ಮುಸುಕುಧಾರಿ ತೋರಿಸಿದ

ಧರ್ಮಸ್ಥಳ ಪ್ರಕರಣ : ಬಿಗುವಿನ ಪರಿಸ್ಥಿತಿ ನಡುವೆಯೇ ಇಂದು 13ನೇ ಪಾಯಿಂಟ್‌ ಶೋಧ Read More »

5 ವರ್ಷದ ಬಾಲಕಿ ಮೇಲೆ ಮಸೀದಿಯಲ್ಲಿ ಅತ್ಯಾಚಾರ: ಆರೋಪಿ ಬಂಧನ

ಬೆಳಗಾವಿ: ಯರಗಟ್ಟಿ ಪಟ್ಟಣದ ಮಸೀದಿಯಲ್ಲಿ 2023 ರ ಅಕ್ಟೋಬರ್ ತಿಂಗಳಲ್ಲಿ ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದ ಆರೋಪಿ ತುಫೆಲಹ್ಮದ್ ದಾದಾಪೀರ್ ನಾಗರ್ಚಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣ ಹಿಂದೂ ಕಾರ್ಯಕರ್ತ ಪುನೀತ್ ಕೆರೇಹಳ್ಳಿ ಅವರು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಮಸೀದಿ ಒಳಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪೋಸ್ಟ್ ಮಾಡಿದ ಕಾರಣಕ್ಕೆ ಬೆಳಕಿಗೆ ಬಂದಿದೆ. ಟ್ವಿಟರ್ ಮೂಲಕ ಈ ಮಾಹಿತಿ ತಿಳಿದ ತಕ್ಷಣವೇ ಬೆಳಗಾವಿ ಪೊಲೀಸರು ಆರೋಪಿಯ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

5 ವರ್ಷದ ಬಾಲಕಿ ಮೇಲೆ ಮಸೀದಿಯಲ್ಲಿ ಅತ್ಯಾಚಾರ: ಆರೋಪಿ ಬಂಧನ Read More »

ಪಿಗ್ಮಿ ಸಂಗ್ರಹಕನಿಂದ ನಗದು ಕಳವು: ಆರೋಪಿ ಆರೆಸ್ಟ್

ಬ್ರಹ್ಮಾವರ: ಬೈಕಿನ ಸೈಟ್ ಬಾಕ್ಸ್‌ನಿಂದ ನಗದು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಅಂತರ್ ರಾಜ್ಯ ಕಳವು ಆರೋಪಿಯನ್ನು ಬ್ರಹ್ಮಾವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಬಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಂತೋಷ ಹನುಮಂತ ಕಟ್ಟಿಮನಿ (39) ಎಂದು ಗುರುತಿಸಲಾಗಿದೆ. ಈತನಿಂದ ಕಳವು ಮಾಡಿದ 32,000ರೂ. ನಗದು ಹಾಗೂ ಮೊಬೈಲ್ ಫೋನ್ ವಶಪಡಿಸಕೊಳ್ಳಲಾಗಿದೆ. ಸೊಸೈಟಿಯೊಂದರ ಪಿಗ್ಮಿ ಸಂಗ್ರಹಕ ಅ.4ರಂದು ಸಂಜೆ ಬ್ರಹ್ಮಾವರ ಶಿವಳ್ಳಿ ಹೋಬೆಲ್ ಎದುರುಗಡೆ ಕರ್ನಾಟಕ ಬ್ಯಾಂಕ್ ಎಟಿಎಮ್ ಬಳಿ ಪಿಗ್ಮಿ ಕಲೆಕ್ಷನ್ ಮಾಡಿದ ನಗದನ್ನು ಬೈಕ್‌ನ

ಪಿಗ್ಮಿ ಸಂಗ್ರಹಕನಿಂದ ನಗದು ಕಳವು: ಆರೋಪಿ ಆರೆಸ್ಟ್ Read More »

ಸ್ವಾಮೀಜಿಗೆ ಆನ್‌ಲೈನ್‌ನಲ್ಲಿ ಬಂತು ಮುಸ್ಲಿಂ ಟೋಪಿ!

ಮೂಲ ಧರ್ಮ ಮರೆಮಾಚಿದ ಹಿನ್ನೆಲೆಯಲ್ಲಿ ಮಠ ತೊರೆದಿದ್ದ ಸ್ವಾಮೀಜಿಯ ನಡೆ ಬಗ್ಗೆ ಅನುಮಾನ ಚಾಮರಾಜನಗರ : ಮೂಲ ಧರ್ಮ ಮರೆಮಾಚಿ ಗುಂಡ್ಲುಪೇಟೆಯ ಲಿಂಗಾಯತ ಮಠವೊಂದಕ್ಕೆ ಮಠಾಧೀಶರಾಗಿದ್ದ ಮುಸ್ಲಿಂ ಯುವಕನ ಹೆಸರಿಗೆ ಆನ್‌ಲೈನ್‌ ಮೂಲಕ ಮುಸ್ಲಿಂ ಟೋಪಿ ಬಂದಿರುವುದು ಮತ್ತು ಅವರ ಕೆಲವು ಫೋಟೊ ಮತ್ತು ವಿಡಿಯೋಗಳು ಬಹಿರಂಗವಾಗಿ ಹೊಸ ವಿವಾದ ಸೃಷ್ಟಿಯಾಗಿದೆ. ಲಿಂಗದೀಕ್ಷೆ ಪಡೆದು ಮಠಾಧೀಶರಾಗಿದ್ದ ಮುಸ್ಲಿಂ ಯುವಕ ತಮ್ಮ ಮೂಲ ಧರ್ಮದ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡದೆ ಹಾಗೂ ತಮ್ಮ ದಾಖಲಾತಿಗಳಲ್ಲಿ ಮೂಲಧರ್ಮದ ಹೆಸರನ್ನು ಉಳಿಸಿಕೊಂಡಿರುವುದು

ಸ್ವಾಮೀಜಿಗೆ ಆನ್‌ಲೈನ್‌ನಲ್ಲಿ ಬಂತು ಮುಸ್ಲಿಂ ಟೋಪಿ! Read More »

ಬೆಳ್ತಂಗಡಿ : ಕೆಎಸ್‌ಆರ್‌ಟಿಸಿ ಬಸ್ಸಿಗೆ ಕಲ್ಲೆಸೆತ

ಬೆಳ್ತಂಗಡಿ: ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸಿಗೆ ಧರ್ಮಸ್ಥಳ ಗ್ರಾಮದ ಪುದುವೆಟ್ಟು ಕ್ರಾಸ್ ಬಳಿ ಕಲ್ಲು ಹೊಡೆದು ಹಾನಿಯುಂಟುಮಾಡಿದ ಘಟನೆ ಮಂಗಳವಾರ ಸಂಭವಿಸಿದ್ದು, ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಧರ್ಮಸ್ಥಳ ಡಿಪ್ಪೋದ ಸಂಚಾರ ನಿಯಂತ್ರಕ ಪಿ ದಾವೂದ್ ಎಂಬವರು ಬಸ್ಸಿಗೆ ಅಜ್ಞಾತ ದುಷ್ಕರ್ಮಿಗಳು ಕಲ್ಲು ಹೊಡೆದಿರುವ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಕೆ.ಎ 21 ಎಫ್ 0103 ನಂಬರ್‌ನ ಬಸ್ಸನ್ನು ಚಾಲಕ ಧರ್ಮಸ್ಥಳದಿಂದ ಸುಬ್ರಹ್ಮಣ್ಯದ ಕಡೆಗೆ ಚಲಾಯಿಸುತ್ತಿದ್ದ ವೇಳೆ ಧರ್ಮಸ್ಥಳ ಗ್ರಾಮದ ಪುದುವೆಟ್ಟು ಕ್ರಾಸ್

ಬೆಳ್ತಂಗಡಿ : ಕೆಎಸ್‌ಆರ್‌ಟಿಸಿ ಬಸ್ಸಿಗೆ ಕಲ್ಲೆಸೆತ Read More »

error: Content is protected !!
Scroll to Top