ಅಪರಾಧ

ಮಂಗಳೂರು: 6 ವರ್ಷದ ಹಿಂದೆ ಸ್ವಾಧಾರ ಕೇಂದ್ರದಿಂದ ಕಾಣೆಯಾದ 3 ಮಹಿಳೆಯರ ಮಾಹಿತಿ ನೀಡಲು ಮನವಿ

ಮಂಗಳೂರು: ನಗರದ ಜಪ್ಪಿನಮೊಗರು ಪ್ರಜ್ಞಾ ಸ್ವಾಧಾರ ಕೇಂದ್ರದಲ್ಲಿದ್ದ ಮೂವರು ಮಹಿಳೆಯರು ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೋಲೀಸ್ ವರದಿಯ ಪ್ರಕಾರ ಬೆಂಗಳೂರಿನ ಉತ್ತರಹಳ್ಳಿ ನಿವಾಸಿಗಳಾದ ರಾಣಿ (26) ಮತ್ತು ಸೋನಿಯಾ (19) ಹಾಗೂ ವಾರಸುದಾರರಿಲ್ಲದೆ ಆಶ್ರಯ ಕೇಂದ್ರದಲ್ಲಿ ವಾಸಿಸುತ್ತಿದ್ದ ಕೋಲ್ಕತ್ತ ಮೂಲದ ನರ್ಗಿಸ್ (35) ಎಂಬವರು 2019ರ ಫೆಬ್ರವರಿ 4ರಂದು ಸ್ವಾಧಾರ ಕೇಂದ್ರದ ಹಿಂಬದಿಯಿಂದ ಓಡಿ ಹೋಗಿದ್ದಾರೆ. ರಾಣಿಯ ಎತ್ತರ 152 ಸೆಂ.ಮೀ., ಗೋಧಿ ಮೈಬಣ್ಣ, […]

ಮಂಗಳೂರು: 6 ವರ್ಷದ ಹಿಂದೆ ಸ್ವಾಧಾರ ಕೇಂದ್ರದಿಂದ ಕಾಣೆಯಾದ 3 ಮಹಿಳೆಯರ ಮಾಹಿತಿ ನೀಡಲು ಮನವಿ Read More »

ಮಾಲ್‌ನಲ್ಲಿ ಉದ್ಯೋಗಿಯಾಗಿದ್ದ ಮಹಿಳೆ ನಾಪತ್ತೆ

ಮಂಗಳೂರು: ನಗರದ ಮಾಲ್‌ವೊಂದರಲ್ಲಿ ಉದ್ಯೋಗಿಯಾಗಿರುವ 24 ವರ್ಷದ ವಿವಾಹಿತ ಯೊಬ್ಬರು ನವೆಂಬರ್ 11ರ ಬೆಳಗ್ಗೆ ಕೆಲಸಕ್ಕೆಂದು ಮನೆಯಿಂದ ಹೊರಟವರು ನಾಪತ್ತೆಯಾಗಿರುವ ಕುರಿತು ಅವರ ಪತಿ ದೂರು ದಾಖಲಿಸಿದ್ದಾರೆ. ನಾಪತ್ತೆಯಾದ ಮಹಿಳೆಯನ್ನು ಜಪ್ಪು ಸೂಟರ್‌ಪೇಟೆಯ ನಿವಾಸಿ ಕುಮಾರ್ ಅವರ ಪತ್ನಿ ಸುಮಾ ಎನ್. (24) ಎಂದು ಗುರುತಿಸಲಾಗಿದೆ. ಸುಮಾ ಅವರು ಸೋಮವಾರ ಬೆಳಗ್ಗೆ ಕೆಲಸಕ್ಕೆಂದು ಮನೆಯಿಂದ ಹೊರಟವರು ಕೆಲಸದ ಸ್ಥಳವನ್ನು ತಲುಪಿಲ್ಲ. ಅವರ ಪತಿ ಕುಮಾರ್ ಅವರು ಸುಮಾ ಅವರಿಗೆ ಕರೆ ಮಾಡಲು ಪ್ರಯತ್ನಿಸಿದಾಗ ಅವರ ಮೊಬೈಲ್ ಸ್ವಿಚ್

ಮಾಲ್‌ನಲ್ಲಿ ಉದ್ಯೋಗಿಯಾಗಿದ್ದ ಮಹಿಳೆ ನಾಪತ್ತೆ Read More »

ಕೆಂಪುಕೋಟೆ ಸ್ಫೋಟಕ್ಕೆ ಟರ್ಕಿ ಲಿಂಕ್‌

ಟರ್ಕಿಯ ವ್ಯಕ್ತಿ ಉಗ್ರರ ಹ್ಯಾಂಡ್ಲರ್‌ ನವದೆಹಲಿ: ಕೆಂಪುಕೋಟೆ ಬಳಿ ಸಂಭವಿಸಿದ ಕಾರು ಬಾಂಬ್‌ ಸ್ಫೋಟಕ್ಕೆ ಟರ್ಕಿ ಜತೆ ಲಿಂಕ್‌ ಇರುವುದು ತನಿಖೆ ವೇಳೆ ಯಿಳಿದುಬಂದಿದೆ. ಬಂಧಿತ ಶಂಕಿತರು ಟರ್ಕಿಯ ರಾಜಧಾನಿ ಅಂಕಾರಾದಿಂದ ಕಾರ್ಯನಿರ್ವಹಿಸುತ್ತಿದ್ದ ಓರ್ವ ಹ್ಯಾಂಡ್ಲರ್‌ ಜೊತೆ ಸಂಪರ್ಕದಲ್ಲಿದ್ದರು ಎನ್ನುವುದನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ. Ukasa ಎಂಬ ಕೋಡ್‌ವರ್ಡ್‌ನಿಂದ ಗುರುತಿಸಲ್ಪಟ್ಟ ಹ್ಯಾಂಡ್ಲರ್ ಜೊತೆ ಎನ್‌ಕ್ರಿಪ್ಟ್ ಮಾಡಿದ ಸಂದೇಶ ವೇದಿಕೆಯಾದ Session ಅಪ್ಲಿಕೇಶನ್ ಬಳಸಿ ಉಗ್ರರು ಸಂಪರ್ಕ ನಡೆಸುತ್ತಿದ್ದರು. Ukasa ಎಂದರೆ ಅರೇಬಿಕ್ ಭಾಷೆಯಲ್ಲಿ ʼಜೇಡʼ ಎಂದು ಅರ್ಥ. ವ್ಯಕ್ತಿಯ

ಕೆಂಪುಕೋಟೆ ಸ್ಫೋಟಕ್ಕೆ ಟರ್ಕಿ ಲಿಂಕ್‌ Read More »

ಉಪ್ಪಿನಂಗಡಿ : ವಿಷ ಸೇವಿಸಿದ್ದ ಬಾಲಕಿ ಚಿಕಿತ್ಸೆ ಫಲಿಸದೆ ಸಾವು

ಉಪ್ಪಿನಂಗಡಿ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನ.12ರಂದು ನಡೆದಿದೆ. ಮೃತಳನ್ನು ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಪಾರಡ್ಕ ನಿವಾಸಿ ಶ್ರೀಧರ ಕುಂಬಾರ ಅವರ ಪುತ್ರಿ ಹರ್ಷಿತಾ (15) ಎಂದು ಗುರುತಿಸಲಾಗಿದೆ. ಉಪ್ಪಿನಂಗಡಿಯ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದ ಹರ್ಷಿತಾ ನವೆಂಬರ್ 4ರಂದು ತಲೆನೋವು ಕಾರಣದಿಂದ ಶಾಲೆಗೆ ತೆರಳದೆ ಮನೆಯಲ್ಲಿ ಉಳಿದಿದ್ದಳು. ಈ ವೇಳೆ ಮನೆಯಲ್ಲಿ ತಂದಿಟ್ಟಿದ್ದ ಹುಲ್ಲಿಗೆ ಸಿಂಪಡಿಸುವ ಕೀಟನಾಶಕವನ್ನು ಸೇವಿಸಿದ್ದಾಳೆ. ಕೂಲಿ ಕೆಲಸಕ್ಕೆ ತೆರಳಿದ್ದ ತಾಯಿ ಮನೆಗೆ

ಉಪ್ಪಿನಂಗಡಿ : ವಿಷ ಸೇವಿಸಿದ್ದ ಬಾಲಕಿ ಚಿಕಿತ್ಸೆ ಫಲಿಸದೆ ಸಾವು Read More »

ಎಸ್‌ಐಟಿ ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್‌

ತಿಮರೋಡಿ, ಮಟ್ಟಣ್ಣವರ್‌ ಸೇರಿ ನಾಲ್ವರ ವಿಚಾರಣೆಗೆ ಎಸ್‌ಐಟಿ ಸಿದ್ಧತೆ ಬೆಂಗಳೂರು: ಧರ್ಮಸ್ಥಳದಲ್ಲಿ ನೂರಾರು ಮೃತದೇಹಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಪ್ರಕರಣ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದ ಮುಂದಿನ ಎಲ್ಲ ಪ್ರಕ್ರಿಯೆಗೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವುಗೊಳಿಸಿದ್ದು ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ನಾಲ್ವರ ವಿಚಾರಣೆ ನಡೆಸಲು ಎಸ್.ಐ.ಟಿ ತಂಡ ಸಿದ್ಧತೆ ನಡೆಸುತ್ತಿದೆ. ಹೈಕೋರ್ಟ್ ಬುಧನಾರ ನೀಡಿದ ಈ ಆದೇಶದಿಂದ ಎಸ್‌ಐಟಿ ತನಿಖೆಗೆ ಹಾಗೂ ಮಹೇಶ್ ಶೆಟ್ಟಿ ಹಾಗೂ ಇತರರ ವಿಚಾರಣೆಗೆ ಇದ್ದ ಅಡೆತಡೆ

ಎಸ್‌ಐಟಿ ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್‌ Read More »

ಕಾರು ಬಾಂಬ್‌ ಸ್ಫೋಟಿಸಿದ್ದು ಡಾ.ಉಮರ್‌ : ಡಿಎನ್‌ಎ ಪರೀಕ್ಷೆಯಲ್ಲಿ ದೃಢ

ಕಾರು ಚಲಾಯಿಸಿದ ವ್ಯಕ್ತಿಯ ಡಿಎನ್‌ಎ ಕುಟುಂಬವರೊಂದಿಗೆ ಮ್ಯಾಚ್‌ ನವದೆಹಲಿ: ಕೆಂಪುಕೋಟೆ ಬಳಿ ಕಾರ್ ಬಾಂಬ್‌ ಸ್ಫೋಟ ಮಾಡಿದ್ದು ಡಾ. ಉಮರ್ ನಬಿ ಎನ್ನುವುದು ಡಿಎನ್‌ಎ ಪರೀಕ್ಷೆಯಲ್ಲಿ ದೃಢಡಪಟ್ಟಿದೆ. ಐ20 ಕಾರನ್ನು ಚಲಾಯಿಸಿದ ವ್ಯಕ್ತಿ ಡಾ.ಉಮರ್‌ ಎಂದು ತನಿಖಾಧಿಕಾರಿಗಳು ಶಂಕಿಸಿದ್ದರು. ಹೀಗಿದ್ದರೂ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡುವಾಗ ಮೃತ ವ್ಯಕ್ತಿ ಉಮರ್‌ ಎನ್ನುವುದಕ್ಕೆ ವೈಜ್ಞಾನಿಕ ದಾಖಲೆಯ ಅಗತ್ಯ ಇತ್ತು. ಈ ಕಾರಣಕ್ಕೆ ಪುಲ್ವಾಮಾದಲ್ಲಿರುವ ಉಮರ್‌ ಕುಟುಂಬಸ್ಥರ ಡಿಎನ್‌ಎ ಸಂಗ್ರಹಿಸಲಾಗಿತ್ತು. ಸ್ಫೋಟದ ನಂತರ ಡಾ.ಉಮರ್‌ ಕಾಲು ಸ್ಟಿಯರಿಂಗ್ ವೀಲ್ ಮತ್ತು ಆಕ್ಸಿಲರೇಟರ್

ಕಾರು ಬಾಂಬ್‌ ಸ್ಫೋಟಿಸಿದ್ದು ಡಾ.ಉಮರ್‌ : ಡಿಎನ್‌ಎ ಪರೀಕ್ಷೆಯಲ್ಲಿ ದೃಢ Read More »

ಗೃಹ ಸಚಿವರ ಟೀಕೆ ಆರೋಪ : ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಬಂಧನ

ಪ್ರತಿಭಟನೆ ಸಭೆಯಲ್ಲಿ ಡಾ.ಜಿ.ಪರಮೇಶ್ವರ ಅವರನ್ನು ಟೀಕಿಸಿದ್ದಕ್ಕೆ ಬಂಧನ ಬೆಂಗಳೂರು: ಗೃಹಸಚಿವ ಡಾ.ಜಿ.ಪರಮೇಶ್ವರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಸಂತೋಷ್ ಕೊಟ್ಯಾನ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ನೀಡಲಾಗುತ್ತಿರುವ ಸೌಲಭ್ಯವನ್ನು ಖಂಡಿಸಿ ಮಂಗಳವಾರ ನಡೆದಿದ್ದ ಬಿಜೆಪಿ ನೇತೃತ್ವದ ಪ್ರತಿಭಟನೆಯಲ್ಲಿ ಸಂತೋಷ್ ಕೊಟ್ಯಾನ್ ಮಾತನಾಡಿದ್ದರು. ಈ ವೇಳೆ ಅವರು ಗೃಹಸಚಿವ ಡಾ.ಪರಮೇಶ್ವರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾಗಿ ಕಾಂಗ್ರೆಸ್ ಕಾರ್ಯಕರ್ತರು ದೂರು ನೀಡಿದ್ದರು. ಕಾಂಗ್ರೆಸ್ ಕಾರ್ಯಕರ್ತರ ದೂರಿನ

ಗೃಹ ಸಚಿವರ ಟೀಕೆ ಆರೋಪ : ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಬಂಧನ Read More »

ಗಣರಾಜ್ಯೋತ್ಸವ ಉಗ್ರರ ಟಾರ್ಗೆಟ್‌

ಜ.26ರಂದು ದಿಲ್ಲಿಯಲ್ಲಿ ಭಾರಿ ವಿಧ್ವಂಸಕ ಕೃತ್ಯ ಎಸಗಲು ಸಂಚು ಮಾಡಿದ್ದರು ಉಗ್ರರು ನವದೆಹಲಿ : ಜನವರಿ 26ರಂದು ಗಣರಾಜ್ಯೋತ್ಸವದ ದಿನ ಕೆಂಪುಕೋಟೆ ಸೇರಿದಂತೆ ದೆಹಲಿಯಲ್ಲಿ ಬೃಹತ್‌ ಮಟ್ಟದ ಸ್ಫೋಟ ನಡೆಸುವುದು ಉಗ್ರರ ಸಂಚಾಗಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಕೆಂಪುಕೋಟೆ ಸಮೀಪ ನವೆಂಬರ್ 10ರಂದು ಕಾರಿನಲ್ಲಿದ್ದ್‌ ಬಾಂಬ್‌ ಸ್ಫೋಟ ಗೊಂಡು 10ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಎನ್​ಐಎ ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ಇಬ್ಬರು ಶಂಕಿತರ ವಿಚಾರಣೆ ನಡೆಸುವಾಗ ಹಲವು ವಿಚಾರಗಳು ಬಹಿರಂಗಗೊಂಡಿವೆ. ದೆಹಲಿ ಸ್ಫೋಟ ಪ್ರಕರಣದಲ್ಲಿ

ಗಣರಾಜ್ಯೋತ್ಸವ ಉಗ್ರರ ಟಾರ್ಗೆಟ್‌ Read More »

ಬಂಟ್ವಾಳ : ಅತ್ತೆ ಮನೆಯಲ್ಲಿದ್ದ ಮುಂಬೈಯ ಯುವತಿ ನಾಪತ್ತೆ

ಬಂಟ್ವಾಳ : ಬೆಂಜನಪದವಿನಲ್ಲಿರುವ ಅತ್ತೆಯ ಮನೆಯಲ್ಲಿ ವಾಸವಾಗಿದ್ದ ಮುಂಬೈ ಮೂಲದ ಅವಿವಾಹಿತ ಯುವತಿಯೊಬ್ಬರು ನವೆಂಬರ್ 9ರಿಂದ ಕಾಣೆಯಾಗಿರುವ ಕುರಿತು ದೂರು ದಾಖಲಾಗಿದೆ. ಬೆಂಜನಪದವಿನ ಶಿವಾಜಿನಗರದ ನಿವಾಸಿ ಮರಿಯಾ ಆಲ್ಬರ್ಟ್ ಡಿಸೋಜಾ ನಾಪತ್ತೆಯಾದ ಯುವತಿ. ಮರಿಯಾ ಒಂದು ವರ್ಷದ ಹಿಂದೆ ತನ್ನ ತಾಯಿಯನ್ನು ಕಳೆದುಕೊಂಡಿದ್ದು, ನಂತರ ಬೆಂಜನಪದವಿನಲ್ಲಿರುವ ತನ್ನ ಅತ್ತೆ ಮೊಲ್ಲಿ ಟೆಲ್ಲಿಸ್ ಅವರೊಂದಿಗೆ ವಾಸವಾಗಿದ್ದಳು. ಆಕೆಯ ತಂದೆ ಆಲ್ಬರ್ಟ್ ಡಿಸೋಜಾ ಮುಂಬೈಯಲ್ಲಿ ನೆಲೆಸಿದ್ದಾರೆ. ನವೆಂಬರ್ 9ರಂದು, ಆಕೆಯ ಅತ್ತೆ ಚರ್ಚ್‌ಗೆ ಹೋಗಿದ್ದರು. ಈ ವೇಳೆ ಮರಿಯಾ ಮನೆಯಿಂದ

ಬಂಟ್ವಾಳ : ಅತ್ತೆ ಮನೆಯಲ್ಲಿದ್ದ ಮುಂಬೈಯ ಯುವತಿ ನಾಪತ್ತೆ Read More »

ಟೆರರ್‌ ಡಾಕ್ಟರ್‌ ಡಾ.ಶಾಹೀನ್‌ ಕೃತ್ಯದಿಂದ ತಂದೆಗೆ ಆಘಾತ

2900 ಕೆಜಿ ಸ್ಫೋಟಕ ಪ್ರಕರಣದಲ್ಲಿ ಸೆರೆಯಾಗಿರುವ ಡಾ.ಶಾಹೀನ್‌ ನವದೆಹಲಿ: ಸ್ಫೋಟಕ ಸಾಗಣೆ ಸಂಬಂಧಿಸಿದಂತೆ ಅರೆಸ್ಟ್‌ ಆಗಿರುವ ಲಖನೌ ಮೂಲದ ವೈದ್ಯೆ ಡಾ. ಶಾಹೀನ್‌ಳ ಕೃತ್ಯ ತಂದೆ ಸೈಯದ್‌ ಅಹ್ಮದ್‌ ಅನ್ಸಾರಿಗೆ ಆಘಾತವುಂಟುಮಾಡಿದೆ. ಸೈಯದ್‌ ಅಹ್ಮದ್‌ ಅನ್ಸಾರಿಗೆ 3 ಮಕ್ಕಳು. ಶೊಯೇಬ್, ಶಾಹೀನ್ ಮತ್ತು ಪರ್ವೇಜ್. ಹಿರಿಯ ಪುತ್ರ ಶೊಯೇಬ್ ಜೊತೆ ಈಗ ವಾಸವಾಗಿದ್ದಾರೆ. ಎರಡನೆಯವಳು ಶಾಹೀನ್. ಮೂರನೇಯವನು ಪರ್ವೇಜ್ ಅನ್ಸಾರಿ. ಶಾಹೀನ್‌ಗೆ ಮಹಾರಾಷ್ಟ್ರದ ವ್ಯಕ್ತಿಯ ಜೊತೆ ಮದುವೆಯಾಗಿತ್ತು. ಆಕೆ ಫರೀದಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದಳು. ನನ್ನ ಮಗಳು ಇಂತಹ

ಟೆರರ್‌ ಡಾಕ್ಟರ್‌ ಡಾ.ಶಾಹೀನ್‌ ಕೃತ್ಯದಿಂದ ತಂದೆಗೆ ಆಘಾತ Read More »

error: Content is protected !!
Scroll to Top