ಅಪರಾಧ

ಮಂಗಳೂರು : ಗಸ್ತು ನಿರತ ಪೊಲೀಸರ ಮೇಲೆ ಹಲ್ಲೆ ಮಾಡಿದವ ಸೆರೆ

ಮಂಗಳೂರು: ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಕಂಕನಾಡಿ ನಗರ ಠಾಣೆ ಎಎಸ್ಸೈ ಅಶೋಕ್ ಕೆ. ಮತ್ತು ಸಿಬ್ಬಂದಿ ಸುರೇಂದ್ರ ಕುಮಾರ್‌ ಅವರಿಗೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಆರೋಪಿ ಹಾಸನ ಜಿಲ್ಲೆಯ ಸಕಲೇಶಪುರದ ಹಲಸೋಗೆ ಗ್ರಾಮದ ನಿವಾಸಿ ಸುಲೈಮಾನ್ (42) ಎಂಬಾತನನ್ನು ಬಂಧಿಸಲಾಗಿದೆ. ಸೆ.2ರಂದು ರಾತ್ರಿ 12.45ಕ್ಕೆ ಅಶೋಕ್ ಸಿಬ್ಬಂದಿಯೊಂದಿಗೆ ರೌಂಡ್ಸ್‌ನಲ್ಲಿದ್ದಾಗ ನಾಗುರಿಯಲ್ಲಿ ಚಿಕ್‌ಗ್ರಿಲ್ ಎಂಬ ಅಂಗಡಿ ಬಳಿ ಓಣಿಯಲ್ಲಿ ಐದಾರು ದ್ವಿಚಕ್ರ ವಾಹನಗಳ ಸಮೇತ ಏಳೆಂಟು ಮಂದಿ ನಿಂತಿದ್ದರು. ತಕ್ಷಣ ಎಎಸ್ಸೈ ಯಾಕೆ ಇಲ್ಲಿ […]

ಮಂಗಳೂರು : ಗಸ್ತು ನಿರತ ಪೊಲೀಸರ ಮೇಲೆ ಹಲ್ಲೆ ಮಾಡಿದವ ಸೆರೆ Read More »

ಸಹಪಾಠಿಗೆ ಮಗು ಕರುಣಿಸಿದ ಪ್ರಕರಣ : ಆರೋಪಿ ಜಾಮೀನಿನಲ್ಲಿ ಬಿಡುಗಡೆ

ಎರಡು ತಿಂಗಳಿಂದ ಮಂಗಳೂರು ಜೈಲಿನಲ್ಲಿದ್ದ ಶ್ರೀಕೃಷ್ಣ ಜೆ.ರಾವ್‌ ಪುತ್ತೂರು: ಕರಾವಳಿಯಲ್ಲಿ ಭಾರಿ ವಿವಾದ ಸೃಷ್ಟಿಸಿದ್ದ ಸಹಪಾಠಿ ಯುವತಿಗೆ ಮಗು ಕರುಣಿಸಿದ ಪ್ರಕರಣದ ಆರೋಪಿ ಶ್ರೀಕೃಷ್ಣ ಜೆ.ರಾವ್‌ಗೆ ನ್ಯಾಯಾಲಯ ಜಾಮೀನು ನೀಡಿದೆ. ಪುತ್ತೂರಿನ ಬಿಜೆಪಿ ಮುಖಂಡ ಪಿ.ಜಿ.ಜಗನ್ನಿವಾಸ್ ರಾವ್ ಅವರ ಪುತ್ರ ಶ್ರೀಕೃಷ್ಣ ಜೆ.ರಾವ್ ಸಹಪಾಠಿ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿ ಗರ್ಭಿಣಿಯನ್ನಾಗಿ ಮಾಡಿದ್ದ. ಯುವತಿಗೆ ಮಗು ಜನಿಸಿದ್ದು, ಈಗಲೂ ಈ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಚಲನವುಂಟು ಮಾಡುತ್ತಿದೆ. ಮದುವೆಯಾಗಲು ನಿರಾಕರಿಸಿ ವಂಚಿಸಿರುವ ಆರೋಪದಲ್ಲಿ

ಸಹಪಾಠಿಗೆ ಮಗು ಕರುಣಿಸಿದ ಪ್ರಕರಣ : ಆರೋಪಿ ಜಾಮೀನಿನಲ್ಲಿ ಬಿಡುಗಡೆ Read More »

ಆನ್‌ಲೈನ್‌ ಟ್ರೇಡಿಂಗ್‌ ನೆಪದಲ್ಲಿ 1 ಕೋ.ರೂ.ಗೂ ಅಧಿಕ ವಂಚನೆ : ಆರು ಆರೋಪಿಗಳ ಬಂಧನ

ಟೆಲಿಗ್ರಾಮ್‌, ವಾಟ್ಸಪ್‌ನಲ್ಲಿ ಪರಿಚಯ ಮಾಡಿಕೊಂಡು ಮೋಸ ಮಾಡುತ್ತಿದ್ದ ಆರೋಪಿಗಳು ಉಡುಪಿ : ಆನ್‌ಲೈನ್‌ ಟ್ರೆಡಿಂಗ್‌ ನಡೆಸಿ ಮೋಸ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿ ಹೂಡಿಕೆದಾರರನ್ನು ವಂಚಿಸಲು ಬಳಸಲಾಗುತ್ತಿದ್ದ ಮೊಬೈಲ್ ಫೋನ್‌ಗಳು ಮತ್ತು 6 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಸುರತ್ಕಲ್‌ನ ಕೋಡಿಕೆರೆ ಗ್ರಾಮದ ಪ್ರೇಮ್ ನಗರದ ಮೊಹಮ್ಮದ್ ಕೈಸ್ (20), ಪಡುಬಿದ್ರಿ ಹೆಜಮಾಡಿಯ ಮಂಜತೋಟದ ಅಹ್ಮದ್ ಅನ್ವೀಜ್ (20), ಬಂಟ್ವಾಳ ತಾಲೂಕಿನ ಸಫ್ವಾನ್ (30) ಮತ್ತು ತಸೀರ್ (31), ಮೈಸೂರು ಜಿಲ್ಲೆಯ

ಆನ್‌ಲೈನ್‌ ಟ್ರೇಡಿಂಗ್‌ ನೆಪದಲ್ಲಿ 1 ಕೋ.ರೂ.ಗೂ ಅಧಿಕ ವಂಚನೆ : ಆರು ಆರೋಪಿಗಳ ಬಂಧನ Read More »

ಧರ್ಮಸ್ಥಳ ಪ್ರಕರಣ: ಸಮೀರ್ ‌ಮನೆಯಲ್ಲಿ ಶೋಧ ನಡೆಸಿದ ಬೆಳ್ತಂಗಡಿ ಪೊಲೀಸರು

ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಯೂಟ್ಯೂಬರ್ ಸಮೀರ್ ಮನೆಯಲ್ಲಿ ಇಂದು ಬೆಳ್ತಂಗಡಿ ಪೋಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಬಾಡಿಗೆ ಮನೆಗೆ ನ್ಯಾಯಾಲಯದ ಸರ್ಚ್ ವಾರಂಟ್ ಪಡೆದ ಪೊಲೀಸರು ವಿಧಿ ವಿಜ್ಞಾನ ಪ್ರಯೋಗಾಲಯದ ಸೋಕೋ ಸಿಬ್ಬಂದಿ ಜೊತೆ ತೆರಳಿ, ಸಮೀಕ್ಷೆ ವಿಡಿಯೋ ತಯಾರಿಸುತ್ತಿದ್ದ ಸ್ಥಳದಲ್ಲಿ ಶೋಧ ನಡೆಸಿರುವುದಾಗಿದೆ. ಈ ವೇಳೆ ಮನೆಯಲ್ಲೇ ಇದ್ದ ಸಮೀರ್ ಪೊಲೀಸರ ಕಾರ್ಯಾಚರಣೆಗೆ ಸಹಕರಿಸಿದ್ದಾಗಿ ತಿಳಿದು ಬಂದಿದೆ. ಸಮೀರ್ ‌ವಿಡಿಯೋ ತಯಾರಿಗೆ ಬಳಸಿದ ಹಾರ್ಡ್ ಡಿಸ್ಕ್, ಕಂಪ್ಯೂಟರ್ ಸೇರಿದಂತೆ ಹಲವಾರು

ಧರ್ಮಸ್ಥಳ ಪ್ರಕರಣ: ಸಮೀರ್ ‌ಮನೆಯಲ್ಲಿ ಶೋಧ ನಡೆಸಿದ ಬೆಳ್ತಂಗಡಿ ಪೊಲೀಸರು Read More »

ಧರ್ಮಸ್ಥಳ ಪ್ರಕರಣ: ಚೆನ್ನಯ್ಯ ಪರ ಇದ್ದ ವಕೀಲರುಗಳ ಮೇಲೆ ದೂರು ದಾಖಲು

ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬುರುಡೆ ಪ್ರಕರಣದ ದೂರುದಾರ ಮತ್ತು ಸದ್ಯ ಆರೋಪಿ ಸ್ಥಾನದಲ್ಲಿರುವ ಚೆನ್ನಯ್ಯನ ಪರ ಇದ್ದ ವಕೀಲರುಗಳ ‌ಮೇಲೆ ಧರ್ಮಸ್ಥಳ ಗ್ರಾಮಸ್ಥರ ಪರವಾಗಿ ರಾಜೇಂದ್ರ ಅಜ್ರಿ ಎಂಬವರು ದೂರು ನೀಡಿದ್ದಾರೆ. ಸುಪ್ರೀಂ ಕೋರ್ಟ್ ನ್ಯಾಯವಾದಿ ಕೆ.ವಿ. ಧನಂಜಯ್ ಮತ್ತು ತಂಡದ ವಿರುದ್ಧ ದೂರು ನೀಡಲಾಗಿದೆ. ಆರೋಪಿ ಚೆನ್ನಯ್ಯ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಧನಂಜಯ್ ಅವರಿಗೆ ನೀಡಿದ್ದಾಗಿ ತಿಳಿಸಿದ್ದು, ಆ ದಾಖಲೆಗಳ ಬಗ್ಗೆ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಪ್ರಕರಣದ ಆರಂಭದಲ್ಲಿ

ಧರ್ಮಸ್ಥಳ ಪ್ರಕರಣ: ಚೆನ್ನಯ್ಯ ಪರ ಇದ್ದ ವಕೀಲರುಗಳ ಮೇಲೆ ದೂರು ದಾಖಲು Read More »

ಮಹಿಳಾ ಎಸ್ಪಿಯನ್ನು ನಾಯಿಗೆ ಹೋಲಿಸಿದ ಶಾಸಕನ ವಿರುದ್ಧ ಕೇಸ್‌

ಬೆಂಗಳೂರು : ದಾವಣಗೆರೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯನ್ನು ಶಾಮನೂರು ಮನೆತನದ ನಾಯಿಗೆ ಹೋಲಿಸಿ ಅವಮಾನ ಮಾಡಿದ ಆರೋಪದ ಮೇರೆಗೆ ಹರಿಹರದ ಬಿಜೆಪಿ ಶಾಸಕ ಬಿ.ಪಿ. ಹರೀಶ್‌ ವಿರುದ್ಧ ದಾವಣಗೆರೆಯ ಕೆಟಿಜೆ ನಗರ ಪೊಲೀಸ್‌ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ. ಶಾಸಕ ಬಿ.ಪಿ. ಹರೀಶ್‌ ತಮ್ಮ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಸ್ವತಃ ಎಸ್ಪಿ ಉಮಾ ಪ್ರಶಾಂತ್‌ ಠಾಣೆಗೆ ದೂರು ನೀಡಿದ್ದರು. ಇದನ್ನು ಆಧರಿಸಿ ಭಾರತೀಯ ನ್ಯಾಯ ಸಂಹಿತೆ(ಬಿಎನ್‌ಎಸ್‌) ಕಾಲಂ 79 (ಮಹಿಳೆಯ ಮಾನಕ್ಕೆ ಕುಂದುಂಟು ಮಾಡುವುದು) ಹಾಗೂ

ಮಹಿಳಾ ಎಸ್ಪಿಯನ್ನು ನಾಯಿಗೆ ಹೋಲಿಸಿದ ಶಾಸಕನ ವಿರುದ್ಧ ಕೇಸ್‌ Read More »

ಹನಿಟ್ರ್ಯಾಪ್‌ ಜಾಲಕ್ಕೆ ಕೆಡವಿ ಹಣ ಕಿತ್ತುಕೊಂಡ ಮಹಿಳೆ ಸಹಿತ ಆರು ಮಂದಿ ಸೆರೆ

ಆರೋಪಿಗಳ 18 ಲ.ರೂ. ಮೌಲ್ಯದ ಎರಡು ಕಾರುಗಳು ವಶ ಉಡುಪಿ: ಕುಂದಾಪುರ ಸಮೀಪ ಕಾರ್ಯಾಚರಿಸುತ್ತಿದ್ದ ಹನಿಟ್ರ್ಯಾಪ್ ಜಾಲವೊಂದನ್ನು ಬೇಧಿಸಿರುವ ಪೊಲೀಸರು ಮಹಿಳೆ ಸಹಿತ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ನಾವುಂದ ಬಡಾಕೆರೆಯ ಸವದ್ ಯಾನೆ ಅಚ್ಚು (28), ಗುಲ್ವಾಡಿ ಗಾಂಧಿ ಕಟ್ಟೆಯ ಸೈಪುಲ್ಲಾ(38), ಹಂಗಳೂರು ಗ್ರಾಮದ ಮೊಹಮ್ಮದ್ ನಾಸೀರ್ ಶರೀಫ್(36), ಕುಂಭಾಶಿ ಮೂಡುಗೋಪಾಡಿ ಜನತಾ ಕಾಲೋನಿಯ ಅಬ್ದುಲ್ ಸತ್ತಾರ್(23), ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಾಗೋಡಿಯ ಅಬ್ದುಲ್ ಅಝೀಝ್(26) ಮತ್ತು ಕುಂದಾಪುರ ಎಂ.ಕೋಡಿಯ ಆಸ್ಮಾ(43) ಬಂಧಿತ ಆರೋಪಿಗಳು.

ಹನಿಟ್ರ್ಯಾಪ್‌ ಜಾಲಕ್ಕೆ ಕೆಡವಿ ಹಣ ಕಿತ್ತುಕೊಂಡ ಮಹಿಳೆ ಸಹಿತ ಆರು ಮಂದಿ ಸೆರೆ Read More »

ಮಂಗಳೂರು : ಫ್ಲ್ಯಾಟ್‌ನಿಂದ 9.46 ಲ.ರೂ. ಚಿನ್ನಾಭರಣ ಕಳವು

ಮಂಗಳೂರು : ನಗರದ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ವೊಂದರಿಂದ ಸುಮಾರು 9.46 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವಾದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಜಗದೀಶ್ ಎಂಬವರ ಮನೆಯಲ್ಲಿ ಕಳ್ಳತನವಾಗಿದೆ. ಜಗದೀಶ್‌ ಮತ್ತವರ ಮಕ್ಕಳು ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಈ ಫ್ಲ್ಯಾಟ್‌ನಲ್ಲಿ ಜಗದೀಶ್‌ರ ಪತ್ನಿ ಒಬ್ಬರೇ ಇದ್ದರು. ಅವರ ಆರೋಗ್ಯ ಸರಿ ಇಲ್ಲದ ಕಾರಣ ಮಹಿಳೆಯೊಬ್ಬರನ್ನು ಮನೆ ಕೆಲಸಕ್ಕೆ ಇಟ್ಟುಕೊಂಡಿದ್ದರು. ಮನೆ ಕೆಲಸದಾಕೆ ಕಳೆದ ಜು.21ರಿಂದ ಕೆಲಸಕ್ಕೆ ಬರುವುದನ್ನು ನಿಲ್ಲಿಸಿದ್ದಳು. ಫೋನ್ ಕರೆಗಳನ್ನು ಕೂಡ ಸ್ವೀಕರಿಸುತ್ತಿರಲಿಲ್ಲ. ಬಳಿಕ ಜಗದೀಶ್‌ರ ಪತ್ನಿಯ ಆರೋಗ್ಯದಲ್ಲಿ

ಮಂಗಳೂರು : ಫ್ಲ್ಯಾಟ್‌ನಿಂದ 9.46 ಲ.ರೂ. ಚಿನ್ನಾಭರಣ ಕಳವು Read More »

ಚೆನ್ನಯ್ಯ SIT ಕಸ್ಟಡಿ ಅಂತ್ಯ: ಬೆಳ್ತಂಗಡಿ ಕೋರ್ಟ್‌ಗೆ ಹಾಜರು

ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣದ ದೂರುದಾರ ಆರೋಪಿ ಚೆನ್ನಯ್ಯನ SIT ಕಸ್ಟಡಿ ಅಂತ್ಯವಾಗಿದ್ದು, ಆತನನ್ನು ಇಂದು ಬೆಳ್ತಂಗಡಿ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ. ಆತನನ್ನು ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅವರ ಸಮ್ಮುಖದಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ಹೆಚ್ಚುವರಿ ಮಾಹಿತಿ ಪಡೆಯಲು ಮತ್ತೆ SIT ಅಧಿಕಾರಿಗಳು ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಚೆನ್ನಯ್ಯ SIT ಕಸ್ಟಡಿ ಅಂತ್ಯ: ಬೆಳ್ತಂಗಡಿ ಕೋರ್ಟ್‌ಗೆ ಹಾಜರು Read More »

ಧರ್ಮಸ್ಥಳ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್: ಕಾಡಿನ ಕೆಲ ಪ್ರದೇಶಗಳಲ್ಲಿ ಗಿಡ ನೆಟ್ಟು ಸ್ಥಳ ಗುರುತಿಸಿದ್ದ ಬುರುಡೆ ಗ್ಯಾಂಗ್

ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣದ ಬುರುಡೆ ವಿಷಯಕ್ಕೆ ಸಂಬಂಧಿಸಿದ ಹಾಗೆ ಕಳೆದ ಒಂದು ವರ್ಷದಿಂದಲೇ ತಯಾರಿ ನಡೆದಿತ್ತು. ಚೆನ್ನಯ್ಯನ ಮೂಲಕ ಕಾಡಿನಲ್ಲಿ ಕೆಲವು ಸ್ಥಳಗಳನ್ನು ಗುರುತು ಮಾಡಿ ಅಲ್ಲಿ ಗಿಡಗಳನ್ನು ನೆಡಲಾಗಿತ್ತು ಎಂಬ ಅಂಶ SIT ಗೆ ಗೊತ್ತಾಗಿದೆ. ದೂರುದಾರ ಆರೋಪಿ ಚೆನ್ನಯ್ಯ‌ನನ್ನು ಕಳೆದ ಕೆಲ ದಿನಗಳಿಂದಲೂ SIT ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಚೆನ್ನಯ್ಯನ ಪಾತ್ರ ಸೃಷ್ಟಿಯಾದಾಗಿಂದ ಈ ವರೆಗಿನ ಎಲ್ಲಾ ವಿಚಾರಗಳನ್ನು ಕ್ರಮಬದ್ಧವಾಗಿ ಜೋಡಿಸುವ ಕಾರ್ಯ ನಡೆಯುತ್ತಿದೆ. ಗಿರೀಶ್ ಮಟ್ಟಣ್ಣನವರ್ ತಂಡ ಕಳೆದ ಒಂದು ವರ್ಷದ

ಧರ್ಮಸ್ಥಳ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್: ಕಾಡಿನ ಕೆಲ ಪ್ರದೇಶಗಳಲ್ಲಿ ಗಿಡ ನೆಟ್ಟು ಸ್ಥಳ ಗುರುತಿಸಿದ್ದ ಬುರುಡೆ ಗ್ಯಾಂಗ್ Read More »

error: Content is protected !!
Scroll to Top