ಅಪರಾಧ

ದ್ವಿಚಕ್ರ ವಾಹನದಲ್ಲಿ ಬಾಲಕರ ಟ್ರಿಪ್ಪಲ್‌ ರೈಡ್‌ : ತಂದೆಗೆ 27,500 ರೂ. ದಂಡ

ಮಂಗಳೂರು: ದ್ವಿಚಕ್ರ ವಾಹನದಲ್ಲಿ ಟ್ರಿಪ್ಪಲ್ ರೈಡ್ ಸಂಚಾರ ಮಾಡಿದ ಪ್ರಕರಣದಲ್ಲಿ ಸವಾರನ ತಂದೆಗೆ ನ್ಯಾಯಾಲಯ ಬರೋಬ್ಬರಿ 27,500 ರೂ. ದಂಡ ವಿಧಿಸಿದೆ. ಬಜಪೆಯಲ್ಲಿ ಮೂವರು ಅಪ್ರಾಪ್ತರು ಹೆಲ್ಮೆಟ್‌ ಕೂಡ ಧರಿಸದೆ ದ್ವಿಚಕ್ರ ವಾಹನದಲ್ಲಿ ಟ್ರಿಪ್ಪಲ್‌ ರೈಡ್‌ ಮಾಡುತ್ತಿರುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಬಜ್ಪೆ ಪೊಲೀಸ್ ಠಾಣೆಯ ಪಿಎಸ್‌ಐ ಸಿಬ್ಬಂದಿಯೊಂದಿಗೆ ಆ.28ರಂದು ಸಾಯಂಕಾಲ ಸಮಯಕ್ಕೆ ಬಜ್ಪೆ ಪೇಟೆಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಒಂದು ದ್ವಿಚಕ್ರ ವಾಹನದಲ್ಲಿ ಮೂವರು ಅಪ್ರಾಪ್ತರು ಸಂಚರಿಸುತ್ತಿರುವುದನ್ನು ಪತ್ತೆ ಹಚ್ಚಿದ್ದರು. ಬಳಿಕ ವಾಹನ ಸಹಿತ […]

ದ್ವಿಚಕ್ರ ವಾಹನದಲ್ಲಿ ಬಾಲಕರ ಟ್ರಿಪ್ಪಲ್‌ ರೈಡ್‌ : ತಂದೆಗೆ 27,500 ರೂ. ದಂಡ Read More »

ಅಜಾನ್‌ ಧ್ವನಿ ಹೆಚ್ಚಳ : ದೂರು ದಾಖಲು

ಅನುಮತಿ ಪಡೆಯದೆ ಧ್ವನಿವರ್ಧಕ ಬಳಕೆ ಎಂದು ಆರೋಪ ಬಂಟ್ವಾಳ: ಅಜಾನ್ ಧ್ವನಿ ಹೆಚ್ಚಾಗಿ ಸಾರ್ವಜನಿಕರಿಗೆ ತೊಂದರೆ ನೀಡಲಾಗಿದೆ ಎಂದು ಆರೋಪಿಸಿ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕರಿಯಂಗಳ ಗ್ರಾಮದ ಪುಂಚಮೆ ಎಂಬಲ್ಲಿರುವ ಧಾರ್ಮಿಕ ಶಿಕ್ಷಣದ ಕಟ್ಟಡವೊಂದರಲ್ಲಿ ಇತ್ತೀಚಿಗೆ ನಿರ್ಮಾಣವಾಗಿರುವ ಧಾರ್ಮಿಕ ಕೇಂದ್ರದಲ್ಲಿ ಅನುಮತಿ ಪಡೆಯದೆ ಧ್ವನಿವರ್ಧಕ ಅಳವಡಿಸಿಕೊಂಡು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಧ್ವನಿಯಲ್ಲಿ ದಿನಕ್ಕೆ 5 ಬಾರಿ ಅಜಾನ್ ಕೂಗಿರುವುದರಿಂದ ಸುತ್ತಮುತ್ತಲಿನ ಪರಿಸರದಲ್ಲಿರುವ ಜನರಿಗೆ ತೊಂದರೆಯಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅಜಾನ್‌ ಧ್ವನಿ ಹೆಚ್ಚಳ : ದೂರು ದಾಖಲು Read More »

ಬುರುಡೆ ಕೇಸ್‌ಗೆ ಮತ್ತೆ ಟ್ವಿಸ್ಟ್‌ : ವಿಠಲ ಗೌಡ ಜೊತೆ ರಾತ್ರಿಯೇ ಸ್ಥಳ ಮಹಜರು

ಬಂಗ್ಲೆಗುಡ್ಡೆ ಕಾಡಿನಿಂದ ಬುರುಡೆ ತಂದು ಕೊಟ್ಟದ್ದು ವಿಠಲ ಗೌಡ ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಹಲವು ಮಹತ್ವದ ಬೆಳವಣಿಗೆಗಳು ನಡೆದಿವೆ. ಅಂತಿಮವಾಗಿ ಬುರುಡೆ ತಂದುಕೊಟ್ಟದ್ದು ಸೌಜನ್ಯಾಳ ಮಾವ ವಿಠಲ ಗೌಡ ಎನ್ನುವ ವಿಚಾರ ಬಯಲಾಗಿದ್ದು, ಹೀಗಾಗಿ ನಿನ್ನೆ ರಾತ್ರಿಯೇ ಎಸ್‌ಐಟಿ ತಂಡ ವಿಠಲ ಗೌಡ ಅವರನ್ನು ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಿದೆ. ವಿಠಲ್ ಗೌಡ ಮೊದಲು ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟದಲ್ಲಿರುವ ಬಂಗ್ಲಗುಡ್ಡೆ ಕಾಡಿನಿಂದ ಬುರುಡೆಯನ್ನು ತಂದು ನೀಡಿದ್ದು, ಅದನ್ನು ಚಿನ್ನಯ್ಯನಿಗೆ ಒಪ್ಪಿಸಿರುವುದು

ಬುರುಡೆ ಕೇಸ್‌ಗೆ ಮತ್ತೆ ಟ್ವಿಸ್ಟ್‌ : ವಿಠಲ ಗೌಡ ಜೊತೆ ರಾತ್ರಿಯೇ ಸ್ಥಳ ಮಹಜರು Read More »

ಧರ್ಮಸ್ಥಳ ಪ್ರಕರಣ : ಬುರುಡೆ ಕೇಸ್‌ಗೆ ಕೇರಳದ ರಾಜ್ಯಸಭಾ ಸದಸ್ಯನ ಲಿಂಕ್‌

ಬುರುಡೆ ಗ್ಯಾಂಗ್‌ ಕಮ್ಯುನಿಸ್ಟ್‌ ಸಂಸದನ ನೆರವು ಕೋರಿದ ವಿಚಾರ ಬಹಿರಂಗ ಧರ್ಮಸ್ಥಳ : ಮಾಸ್ಕ್​ಮ್ಯಾನ್ ಚಿನ್ನಯ್ಯ ತಂದಿದ್ದ ತಲೆಬುರುಡೆ ಪ್ರಕರಣದಲ್ಲಿ ಕೇರಳದ ಯೂಟ್ಯೂಬರ್‌ ಮನಾಫ್‌ ಎಂಬವನ ಹೆಸರು ಬೆಳಕಿಗೆ ಬಂದ ಬೆನ್ನಲ್ಲೇ ಇದೀಗ ಕೇರಳದ ಕಮ್ಯುನಿಸ್ಟ್‌ ಸಂಸದರೊಬ್ಬರ ಹೆಸರು ಕೇಳಿಬಂದಿದೆ. ಕಮ್ಯೂನಿಸ್ಟ್ ಪಕ್ಷದ (ಸಿಪಿಐ) ರಾಜ್ಯಸಭಾ ಸದಸ್ಯ ಸಂತೋಷ್ ಕುಮಾರ್ ಎಂಬವರಿಗೆ ಬುರುಡೆ ಪ್ರಕರಣದ ಜೊತೆ ಲಿಂಕ್‌ ಇದೆ ಎಂಬ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ. ಬುರುಡೆ ಗ್ಯಾಂಗ್‌ ತಲೆಬುರುಡೆಯನ್ನು ಆರೋಪಿ ಚಿನ್ನಯ್ಯ, ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ

ಧರ್ಮಸ್ಥಳ ಪ್ರಕರಣ : ಬುರುಡೆ ಕೇಸ್‌ಗೆ ಕೇರಳದ ರಾಜ್ಯಸಭಾ ಸದಸ್ಯನ ಲಿಂಕ್‌ Read More »

ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ : ಕಾನ್‌ಸ್ಟೆಬಲ್‌ ಬಂಧನ

ಮಂಗಳೂರಿನ ಸ್ಪೆಷಲ್ ಆಕ್ಷನ್ ಫೋರ್ಸ್‌ನಲ್ಲಿದ್ದ ಕಾನ್ಸ್‌ಸ್ಟೆಬಲ್‌ ಬೆಂಗಳೂರು: ವಕೀಲೆಯಾಗಿರುವ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಎಸ್‌ಎಎಫ್‌ನ ಪೊಲೀಸ್ ಕಾನ್‌ಸ್ಟೆಬಲ್‌ನನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ. ಸಿದ್ದೇಗೌಡ ಅಲಿಯಾಸ್ ಸಿದ್ದು ಬಂಧಿತ ಕಾನ್‌ಸ್ಟೆಬಲ್‌ ಎಂದು ಗುರುತಿಸಲಾಗಿದೆ. ಸಿದ್ದೇಗೌಡ ಮಂಗಳೂರಿನ ಸ್ಪೆಷಲ್ ಆಕ್ಷನ್ ಫೋರ್ಸ್‌ನಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಕಾರ್ಯನಿರ್ವಹಿಸುತ್ತಿದ್ದ. ಬೆಂಗಳೂರಿನಲ್ಲಿ ವಕೀಲೆಯಾಗಿರುವ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದಾನೆ. ಬಳಿಕ ಜಾತಿ ಕಾರಣ ನೀಡಿ ಮದುವೆಗೆ ನಿರಾಕರಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ವಕೀಲೆ ಬಸವೇಶ್ವರ ನಗರ ಪೊಲೀಸ್

ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ : ಕಾನ್‌ಸ್ಟೆಬಲ್‌ ಬಂಧನ Read More »

ಸೋಷಿಯಲ್‌ ಮೀಡಿಯಾ ಪೋಸ್ಟ್‌ಗಳ ವಿರುದ್ಧ ದೂರು ದಾಖಲಿಸಿದ ಸೌಜನ್ಯಾ ತಾಯಿ

13 ಪೇಜ್‌ಗಳಲ್ಲಿ ಅವಮಾನಕಾರಿ ಸಂದೇಶ ಪೋಸ್ಟ್‌ ಎಂದು ಆರೋಪ ಬೆಳ್ತಂಗಡಿ: ತನ್ನ ವಿರುದ್ದ ಹಾಗೂ ಸೌಜನ್ಯಾ ಪರ ಹೋರಾಟಗಾರರ ವಿರುದ್ಧ ಅಶ್ಲೀಲವಾದ ಬರಹ, ಮಾನಹಾನಿಕರವಾದ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕುತ್ತಿರುವ ಕುರಿತು ಸೌಜನ್ಯಾ ತಾಯಿ ಕುಸುಮಾವತಿ ಸಾಮಾಜಿಕ ಜಾಲತಾಣದ 13 ಖಾತೆಗಳ ವಿರುದ್ಧ ದೂರು ನೀಡಿದ್ದು, ಅದರಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕುಸುಮಾವತಿ ಅವರು ಸಾಮಾಜಿಕ ಜಾಲತಾಣದಲ್ಲಿನ 13 ಪೇಜ್‌ಗಳ ವಿರುದ್ಧ ದೂರು ನೀಡಿದ್ದಾರೆ. ಅದರಂತೆ ಶುಭಾ ರೈ, ಯಶವಂತ ಗಟ್ಟಿ ಕೊಕ್ಕಡ, ದೀಪಕ್

ಸೋಷಿಯಲ್‌ ಮೀಡಿಯಾ ಪೋಸ್ಟ್‌ಗಳ ವಿರುದ್ಧ ದೂರು ದಾಖಲಿಸಿದ ಸೌಜನ್ಯಾ ತಾಯಿ Read More »

ಮಂಗಳೂರು: ಕಾಣೆಯಾಗಿದ್ದ ಕಾರ್ಮಿಕನ ಮೃತದೇಹ ಎರಡು ತಿಂಗಳ ಬಳಿಕ ನೀರಿನ ಟಾಂಕಿಯಲ್ಲಿ ಪತ್ತೆ

ಸುರತ್ಕಲ್ : ಮುಕ್ಕದಲ್ಲಿರುವ ಎಸ್ಟೇಟ್‌ ಒಂದರಿಂದ ನಾಪತ್ತೆಯಾಗಿದ್ದ ಯುವಕನೋರ್ವನ ಮೃತದೇಹ ನೀರಿನ‌ ಟ್ಯಾಂಕ್‌ನಲ್ಲಿ ಪತ್ತೆಯಾಗಿರುವ ಘಟನೆಗೆ ಸಂಬಂಧಿಸಿ ಸುರತ್ಕಲ್ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಪರಂಪುರದ ರತುವಾ ನಿವಾಸಿ ಮುಖೇಶ್ ಮಂಡಲ್ (27) ಎಂಬಾತನನ್ನು ಕೊಲೆಗೈದ ಆರೋಪದಲ್ಲಿ ಪಶ್ಚಿಮ‌ ಬಂಗಾಲ ನಿವಾಸಿ ಲಕ್ಷ್ಮಣ್ ಮಂಡಲ್ ಯಾನೆ ಲಖನ್ ಎಂಬಾತನನ್ನು ಪೊಲೀಸರು ಬಂಧಿಸಿ ಕರೆತಂದಿದ್ದಾರೆ.‌ ಮುಕ್ಕದಲ್ಲಿರುವ ರೋಹನ್ ಎಸ್ಟೇಟ್‌ನಲ್ಲಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಮುಖೇಶ್ ಮಂಡಲ್ ಜೂನ್ 24ರಂದು ಕಾಣೆಯಾಗಿದ್ದು, ಈ ಬಗ್ಗೆ

ಮಂಗಳೂರು: ಕಾಣೆಯಾಗಿದ್ದ ಕಾರ್ಮಿಕನ ಮೃತದೇಹ ಎರಡು ತಿಂಗಳ ಬಳಿಕ ನೀರಿನ ಟಾಂಕಿಯಲ್ಲಿ ಪತ್ತೆ Read More »

ಧರ್ಮಸ್ಥಳ ಪ್ರಕರಣ : ಬುರುಡೆಯನ್ನು ಮಟ್ಟಣ್ಣವರ್‌ ಮಡಿಲಿಗೆ ಹಾಕಿದ ಜಯಂತ್‌

ಷಡ್ಯಂತ್ರದ ಇನ್ನಷ್ಟು ರಹಸ್ಯಗಳು ಬಯಲು ಮಂಗಳೂರು: ಧರ್ಮಸ್ಥಳದ ಬುರುಡೆ ಈಗ ಗಿರೀಶ್ ಮಟ್ಟಣ್ಣನವರ್ ಬುಡಕ್ಕೆ ಬಂದುನಿಂತಿದೆ. ಹೋರಾಟಗಾರ ಜಯಂತ್‌ ಟಿ. ವಿಚಾರಣೆ ವೇಳೆ ಎಸ್ಐಟಿ ಮುಂದೆ ನನಗೆ ಬುರುಡೆ ಕೊಟ್ಟಿದ್ದೇ ಗಿರೀಶ್ ಮಟ್ಟಣ್ಣನವರ್ ಎಂದಿದ್ದಾರೆ. ಬುರುಡೆ ಮೂಲ ಕೆದಕಲು ಗಿರೀಶ್ ಮಟ್ಟಣ್ಣನವರ್ ಮತ್ತು ಜಯಂತ್‌ರನ್ನು ಶುಕ್ರವಾರ ವಿಚಾರಣೆಗೆ ಕರೆಯಲಾಗಿತ್ತು. ಬೆಳ್ತಂಗಡಿಯ ಎಸ್ಐಟಿ ಠಾಣೆಯಲ್ಲಿ ತಡರಾತ್ರಿವರೆಗೂ ಇಬ್ಬರನ್ನು ಪ್ರತ್ಯೇಕವಾಗಿ ಕೂರಿಸಿ ಪ್ರಶ್ನೆಗಳನ್ನು ಕೇಳಲಾಗಿದೆ. ನನಗೆ ಬುರುಡೆ ಕೊಟ್ಟಿದ್ದು ಗಿರೀಶ್ ಮಟ್ಟಣ್ಣನವರ್‌ ಎಂದು ಜಯಂತ್ ಹೇಳಿದ್ದಾರೆ. ಆದರೆ ಗಿರೀಶ್ ಮಟ್ಟಣ್ಣನವರ್

ಧರ್ಮಸ್ಥಳ ಪ್ರಕರಣ : ಬುರುಡೆಯನ್ನು ಮಟ್ಟಣ್ಣವರ್‌ ಮಡಿಲಿಗೆ ಹಾಕಿದ ಜಯಂತ್‌ Read More »

ಧರ್ಮಸ್ಥಳ ಪ್ರಕರಣ: ಕೇರಳಕ್ಕೂ ಇದೆ ಬುರುಡೆ ಷಡ್ಯಂತ್ರದ ನಂಟು

ಕೇರಳದ ಯೂಟ್ಯೂಬರ್‌ ಮೊಬೈಲ್‌ನಲ್ಲಿದೆಯಂತೆ ಬುರುಡೆಯ ಅಸಲಿ ವಿಡಿಯೋ ಮಂಗಳೂರು: ಧರ್ಮಸ್ಥಳದ ವಿರುದ್ಧ ನಡೆದ ಅಪಪ್ರಚಾರದ ಷಡ್ಯಂತ್ರಕ್ಕೆ ಕೇರಳದಲ್ಲೂ ಒಂದು ಲಿಂಕ್‌ ಇರುವುದು ಈಗ ಬಹಿರಂಗವಾಗಿದೆ. ಕೇರಳದ ಮನಾಫ್‌ ಎಂಬ ಯೂಟ್ಯೂಬರ್‌ ಕೇರಳದಲ್ಲಿ ನಿರಂತರವಾಗಿ ಅಪಪ್ರಚಾರ ಮಾಡುತ್ತಿದ್ದ. ನೂರಾರು ಮೃತದೇಹಗಳನ್ನು ಹೂತು ಹಾಕಲಾಗಿದೆ, ದೇವಸ್ಥಾನದವರೇ ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಆತ ಮಲಯಾಳಂ ಯೂಟ್ಯೂಬ್‌ ಚಾನಲ್‌ಗಳು, ಟಿವಿ ವಾಹಿನಿಗಳಲ್ಲಿ ಈತ ಪ್ರಚಾರ ಮಾಡಿದ್ದ. ಈಗ ಈತನೂ ಬುರುಡೆ ಷಡ್ಯಂತ್ರದಲ್ಲಿ ಶಾಮೀಲಾಗಿರುವ ಕುರಿತು ಮಾಹಿತಿ ಲಭ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಎಸ್‌ಐಟಿ ಅವನನ್ನು

ಧರ್ಮಸ್ಥಳ ಪ್ರಕರಣ: ಕೇರಳಕ್ಕೂ ಇದೆ ಬುರುಡೆ ಷಡ್ಯಂತ್ರದ ನಂಟು Read More »

ಧರ್ಮಸ್ಥಳ ಪ್ರಕರಣ : ಜಯಂತ್‌, ಅಭಿಷೇಕ್‌ ತಡರಾತ್ರಿ ತನಕ ವಿಚಾರಣೆ

ಬುರುಡೆ, ಸುಜಾತ ಭಟ್‌ ಎಪಿಸೋಡ್‌ ಹಿನ್ನೆಲೆಯಲ್ಲಿ ಎಸ್‌ಐಟಿ ಗ್ರಿಲ್‌ ಮಂಗಳೂರು: ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದಲ್ಲಿ ಸಾಕ್ಷಿ-ದೂರುದಾರನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ನಂತರ, ಪೊಲೀಸರು ವಶಕ್ಕೆ ಪಡೆದ ತಲೆಬುರುಡೆಯ ತನಿಖೆಯ ಭಾಗವಾಗಿ ಎಸ್‌ಐಟಿ ಅಧಿಕಾರಿಗಳು ಕಾರ್ಯಕರ್ತ ಜಯಂತ್ ಟಿ ಹಾಗೂ ಯೂಟ್ಯೂಬರ್‌ ಅಭೀಷೇಕ್‌ನನ್ನು ಗುರುವಾರ ವಿಚಾರಣೆಗೊಳಪಡಿಸಿದ್ದಾರೆ. ಜಯಂತ್‌ ಟಿ.ಯನ್ನು ತಡರಾತ್ರಿಯವರೆಗೆ ವಿಚಾರಣೆ ನಡೆದಿದ್ದು, ಬಳಿಕ ಬಿಟ್ಟುಕೊಟ್ಟು ಶುಕ್ರವಾರ ಮತ್ತೆ ವಿಚಾರಣೆಗೆ ಹಾಜರಾಗಲು ಹೇಳಿದ್ದಾರೆ. ಧರ್ಮಸ್ಥಳದಲ್ಲಿ ದಾಖಲಾಗಿರುವ ಸುಳ್ಳು ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಗುರುವಾರ ಸುಮಾರು 20 ಸಾಕ್ಷಿಗಳಿಗೆ

ಧರ್ಮಸ್ಥಳ ಪ್ರಕರಣ : ಜಯಂತ್‌, ಅಭಿಷೇಕ್‌ ತಡರಾತ್ರಿ ತನಕ ವಿಚಾರಣೆ Read More »

error: Content is protected !!
Scroll to Top