ಮದುವೆ ಪೋಸ್ಟ್ ನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪತಿ| ಕಮೆಂಟ್ಸ್ ನಲ್ಲಿ ಬಯಲಾಯಿತು ಪತ್ನಿಯ ಕಳ್ಳಾಟ | ಕಮೆಂಟ್ ಸಾಕ್ಷಿಯಾಗಿ ದೂರು ದಾಖಲು | ವಿಚಾರಣೆ ವೇಳೆ ಬಿಚ್ಚಿಟ್ಟ ಅಸಲಿ ಸತ್ಯ
ಪುತ್ತೂರು : ಯುವ ಬ್ಯಾಂಕ್ ಉದ್ಯೋಗಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಮದುವೆಯ ಫೋಟೋವನ್ನು ಹಂಚಿಕೊಂಡಿದ್ದು, ಪೋಸ್ಟ್ ಮೂಲಕ ಪತ್ನಿಯ ಕಳ್ಳಾಟ ಬಯಲಾಗಿ ಅಚ್ಚರಿಯುಂಟು ಮಾಡಿದೆ. ಶಿವಚಂದ್ರನ್ ಎಂಬಾತ ಡಾಕ್ಟರ್ ನಿಶಾಂತಿ ಎಂಬಾಕೆಯನ್ನು ಮದುವೆಯಾದ ಸಂಭ್ರಮದಲ್ಲಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆದರೆ ಕಾಮೆಂಟ್ ಬಾಕ್ಸ್ ನಲ್ಲಿ ಬಂದ ಪ್ರತಿಕ್ರಿಯೆ ನೋಡಿ ಆತನಿಗೆ ಶಾಕ್ ಆಗಿದೆ. ಪುತ್ತೂರಿನ ನೆಪೋಲಿಯನ್ ಎಂಬ ವ್ಯಕ್ತಿ ಫೋಟೋದಲ್ಲಿರುವ ಮಹಿಳೆ ನಿಶಾಂತಿ ಅಲ್ಲ, ನನ್ನ ಹೆಂಡತಿ ಮೀರಾ ಎಂದು ಕಾಮೆಂಟ್ ಮಾಡಿದ್ದರು. 2017 ರಲ್ಲಿ […]