ಅಪರಾಧ

ಜಗಳ ವಿಕೋಪಕ್ಕೆ ತಿರುಗಿ ಪತ್ನಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಪತಿ

ಬೆಂಗಳೂರು: ಹಗ್ಗವನ್ನು ಪತ್ನಿಯ ಕತ್ತಿಗೆ ‌ಸುತ್ತಿ ಕೊಲೆಗೈದು, ಬಳಿಕ ತಾನೂ ಅದೇ ಹಗ್ಗದಿಂದ ಪತಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೇಬಿ (60) ಎಂಬವರೇ ಕೊಲೆಯಾದ ದುರ್ದೈವಿ. ಇವರ ಪತಿ ವೆಂಕಟೇಶನ್ (65) ಎಂಬವರೇ ಕೊಲೆ ನಡೆಸಿದ್ದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೆಂಕಟೇಶನ್ ಅವರು ಬಿಎಂ‌ಟಿಸಿ ಚಾಲಕನಾಗಿ ಕೆಲಸ ಮಾಡಿದ್ದು, ಸದ್ಯ ನಿವೃತ್ತಿ ಹೊಂದಿದ್ದರು. ಪತ್ನಿ ಸ್ಟ್ರೋಕ್ ಕಾರಣದಿಂದ ಹಾಸಿಗೆ ಹಿಡಿದಿದ್ದರು. ಈ ದಂಪತಿಯ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಇವರಿಗೆ […]

ಜಗಳ ವಿಕೋಪಕ್ಕೆ ತಿರುಗಿ ಪತ್ನಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಪತಿ Read More »

ಒಂಟಿ ಮಹಿಳೆಯಿದ್ದ ಮನೆಗೆ ನುಗ್ಗಿ ನಗದು, ಚಿನ್ನಾಭರಣ ದೋಚಿದ ಖದೀಮರು

ಮಂಗಳೂರು: ದರೋಡೆಕೋರರು ಮನೆಗೆ ನುಗ್ಗಿ ಮಹಿಳೆಯನ್ನು ಕಟ್ಟಿ ಹಾಕಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ನಡೆಸಿರುವ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಂತ್ರಸ್ಥ ಮಹಿಳೆ ಜಲಜಾ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ. ಜಲಜಾ ಅವರು ಒಂಟಿಯಾಗಿ ವಾಸಿಸುತ್ತಿದ್ದು, ಡಿ. 3 ರ ಮಧ್ಯಾಹ್ನದ ವೇಳೆ ಇಬ್ಬರು ಯುವಕರು ನೀರು ಕೇಳುವ ನೆಪದಲ್ಲಿ ಅವರ ಮನೆಯ ಬಾಗಿಲು ಬಡಿದಿದ್ದಾರೆ. ಆಗ ಜಲಜ ಅವರು ನೀನು ಹೊರಗಡೆ ಇರುವುದಾಗಿ ತಿಳಿಸಿದ್ದಾರೆ. ಕೆಲವು ಹೊತ್ತಲ್ಲೇ ಒಬ್ಬ

ಒಂಟಿ ಮಹಿಳೆಯಿದ್ದ ಮನೆಗೆ ನುಗ್ಗಿ ನಗದು, ಚಿನ್ನಾಭರಣ ದೋಚಿದ ಖದೀಮರು Read More »

ವಂಚಕರ ಪಾಲಾಗುತ್ತಿದ್ದ ವೃದ್ಧ ದಂಪತಿಯ ಲಕ್ಷಗಟ್ಟಲೆ ಹಣ ಉಳಿಸಿದ ಬ್ಯಾಂಕ್‌ ಮ್ಯಾನೇಜರ್‌

ವೃದ್ಧ ದಂಪತಿಯನ್ನು ಡಿಜಿಟಲ್‌ ಅರೆಸ್ಟ್‌ ಮಾಡಿ ಹಣ ದೋಚಲು ಯತ್ನಿಸಿದ್ದ ಸೈಬರ್‌ ಚೋರರು ಮಂಗಳೂರು : ಬ್ಯಾಂಕ್‌ ಮ್ಯಾನೇಜರ್‌ ಒಬ್ಬರ ಸಮಯಪ್ರಜ್ಞೆಯಿಂದಾಗಿ ಸೈಬರ್‌ ವಂಚಕರ ಪಾಲಾಗುತ್ತಿದ್ದ ವೃದ್ಧ ದಂಪತಿಯ ಬರೋಬ್ಬರಿ 84 ಲ.ರೂ. ಉಳಿದಿದೆ. ಕಿನ್ನಿಗೋಳಿಯ ಸಮೀಪದ ದಾಮಸ್‌ಕಟ್ಟೆ ವೃದ್ಧ ದಂಪತಿಯನ್ನು ಸೈಬರ್‌ ವಂಚಕರು ಡಿಜಿಟಲ್‌ ಅರೆಸ್ಟ್‌ ಮಾಎಡಿ ಬೆದರಿಸಿ ಹಣ ಲೂಟಿ ಮಾಡಲು ಯತ್ನಿಸಿದ್ದರು. ಡಿಸೆಂಬರ್ 1ರಂದು ಸಂಜೆ ವಂಚಕರ ತಂಡವೊಂದು ಕಿನ್ನಿಗೋಳಿಯ ದಾಮಸ್ ಕಟ್ಟೆಯ ವೃದ್ಧ ದಂಪತಿಗೆ ಕರೆ ಮಾಡಿ ನೀವು ಯಾರದ್ದೋ ಖಾತೆಯಿಂದ

ವಂಚಕರ ಪಾಲಾಗುತ್ತಿದ್ದ ವೃದ್ಧ ದಂಪತಿಯ ಲಕ್ಷಗಟ್ಟಲೆ ಹಣ ಉಳಿಸಿದ ಬ್ಯಾಂಕ್‌ ಮ್ಯಾನೇಜರ್‌ Read More »

ಕಡಬ : ತಡರಾತ್ರಿ ಮನೆಗೆ ನುಗ್ಗಿದ ಹೆಡ್‌ಕಾನ್‌ಸ್ಟಬಲ್‌ನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಊರವರು

ಮನೆಯವರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನ ಕಡಬ : ತಡರಾತ್ರಿ ಮನೆಯೊಂದಕ್ಕೆ ಅಕ್ರಮ ಪ್ರವೇಶಗೈದ ಕಡಬ ಠಾಣಾ ಹೆಡ್‌ಕಾನ್‌ಸ್ಟೇಬಲ್‌ನನ್ನು ಊರವರೇ ಹಿಡಿದು ಧರ್ಮದೇಟು ಬಿಗಿದು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ. ಕಡಬ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ರಾಜು ನಾಯ್ಕ್ ಆರೋಪಿ. ಮನೆಯವರ ಕೈಗೆ ಸಿಕ್ಕಿಬಿದ್ದಾಗ ಸ್ಥಳದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಮನೆಯ ಸದಸ್ಯರೊಬ್ಬರಿಗೆ ಈತ ಹಲ್ಲೆ ನಡೆಸಿದ್ದಾನೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆ ಕಡಬ ಠಾಣಾ ವ್ಯಾಪ್ತಿಯ ಕೊಯಿಲ ಎಂಬಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಈತ

ಕಡಬ : ತಡರಾತ್ರಿ ಮನೆಗೆ ನುಗ್ಗಿದ ಹೆಡ್‌ಕಾನ್‌ಸ್ಟಬಲ್‌ನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಊರವರು Read More »

ಪೊಲೀಸರ ಕಸ್ಟಡಿಯಿಂದ ತಪ್ಪಿಸಿಕೊಂಡ ಪೋಕ್ಸೋ ಆರೋಪಿಯ ಬಂಧನ

ಕಾಸರಗೋಡು: ಪೊಲೀಸ್ ಕಸ್ಟಡಿಯಿಂದ ಪರಾರಿಯಾದ ಪೋಕ್ಸೋ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ನೆಕ್ರಾಜೆ ಕೊರೆಕ್ಕಾನದ ಅಶ್ವಥ್(19) ಎಂಬವನೇ ಪರಾರಿಯಾಗಿದ್ದ ಆರೋಪಿ. ಪೊಲೀಸರ ಕಸ್ಟಡಿಯಲ್ಲಿದ್ದ ಈತ ಕೆಲಕಾಲ ತಪ್ಪಿಸಿಕೊಂಡಿದ್ದು, ಆತನನ್ನು ಆನೆಬಾಗಿಲು ಬಳಿಯ ಪೊದೆಯೊಂದರಿಂದ ಮತ್ತೆ ಬಂಧಿಸಲಾಗಿದೆ. ಕಾಸರಗೋಡು ನಗರ ಠಾಣೆಗೆ ಕರೆದುಕೊಂಡು ಬಂದ ಸಂದರ್ಭದಲ್ಲಿ ಪೊಲೀಸರ ಕಣ್ತಪ್ಪಿಸಿ ಈತ ಪರಾರಿಯಾಗಿದ್ದ. ತಕ್ಷಣವೇ ಕಾರ್ಯ ಪ್ರವೃತ್ತರಾದ ಪೊಲೀಸರು ಆತನನ್ನು ಮತ್ತೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸರ ಕಸ್ಟಡಿಯಿಂದ ತಪ್ಪಿಸಿಕೊಂಡ ಪೋಕ್ಸೋ ಆರೋಪಿಯ ಬಂಧನ Read More »

ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ

ಮಲ್ಪೆ: ಕೊಡವೂರು ಗ್ರಾಮದ ಮೂಡಬೆಟ್ಟು ಸರ್ಕಾರಿ ಶಾಲೆಯ ಸಮೀಪ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ದಿನೇಶ್ (37) ಎಂಬವರೇ ಮೃತ ದುರ್ದೈವಿ. ಮೃತ ದಿನೇಶ್ ಅವರು ಗರಡಿಮಜಲಿನ ಹೊಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಕಳೆದ ಎರಡು ತಿಂಗಳಿನಿಂದ ಕೆಲಸವಿಲ್ಲದೆ ಇದ್ದರು ಎಂದು ತಿಳಿದು ಬಂದಿದೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ Read More »

ಕರ್ನಾಟಕ ರಾಜ್ಯಪಾಲರ ಮೊಮ್ಮಗನ ವಿರುದ್ಧ ವರದಕ್ಷಿಣೆ ಕಿರುಕುಳ ದೂರು

50 ಲ.ರೂ. ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪ ಭೋಪಾಲ: ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರ ಮೊಮ್ಮಗ ದೇವೇಂದ್ರ ಗೆಹ್ಲೋಟ್ ಅವರ ಪತ್ನಿ ದಿವ್ಯಾ ಗೆಹ್ಲೋಟ್ ವರದಕ್ಷಿಣೆ ಕಿರುಕುಳ, ಕೊಲೆ ಯತ್ನ, ಕೌಟುಂಬಿಕ ಹಿಂಸೆ ಮತ್ತು ತಮ್ಮ ಅಪ್ರಾಪ್ತ ಮಗಳ ಅಪಹರಣದ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ಮಧ್ಯಪ್ರದೇಶದ ರತ್ಲಾಂ ಜಿಲ್ಲೆಯ ಪೊಲೀಸ್ ಅಧೀಕ್ಷಕ ಅಮಿತ್ ಕುಮಾರ್ ಅವರ ಗಮನಕ್ಕೆ ವಿಷಯ ತಲುಪಿದ್ದು, ದಿವ್ಯಾ ತುರ್ತು ಕ್ರಮ ಮತ್ತು ತನ್ನ ನಾಲ್ಕು ವರ್ಷದ ಮಗಳನ್ನು ಸುರಕ್ಷಿತವಾಗಿ ಮರಳಿ

ಕರ್ನಾಟಕ ರಾಜ್ಯಪಾಲರ ಮೊಮ್ಮಗನ ವಿರುದ್ಧ ವರದಕ್ಷಿಣೆ ಕಿರುಕುಳ ದೂರು Read More »

ಆರೋಪಿಯ ಹಣವನ್ನೇ ಕದ್ದುಕೊಂಡು ಹೋದ ಹೆಡ್‌ಕಾನ್‌ಸ್ಟೆಬಲ್‌

11 ಲಕ್ಷ ರೂಪಾಯಿ ಎಗರಿಸಿ ಏನೂ ಗೊತ್ತಿಲ್ಲದಂತೆ ನಾಟಕವಾಡಿದ್ದ ಪೊಲೀಸ್‌ ಸಿಬ್ಬಂದಿ ಬೆಂಗಳೂರು: ಪೊಲೀಸರೇ ಅಪರಾಧ ಕೃತ್ಯಗಳನ್ನು ಎಸಗಿ ಇಲಾಖೆಗೆ ಮಸಿ ಬಳಿಯುತ್ತಿರುವ ಕೃತ್ಯಗಳು ಹೆಚ್ಚುತ್ತಿವೆ. ಈಗ ಮತ್ತೊಬ್ಬ ಪೊಲೀಸ್ ಸಿಬ್ಬಂದಿಯ ಮೇಲೆ ಕಳ್ಳತನ ಆರೋಪ ಬಂದಿದೆ. ನಾಚೆಕೆಗೇಡಿನ ವಿಚಾರವೆಂದರೆ ಪೊಲೀಸ್ ಆಯುಕ್ತರ ಕಚೇರಿಯ ಆವರಣದಲ್ಲಿಯೇ ಈ ಕಳ್ಳತನ ನಡೆದಿದೆ. ಸೈಬರ್ ಪ್ರಕರಣದ ಆರೋಪಿಯನ್ನು ವಿಚಾರಣೆಗೆ ಕರೆತಂದಾಗ ಆತನ ಕಾರಿನಲ್ಲಿದ್ದ 11 ಲಕ್ಷ ರೂ.ತುಂಬಿದ್ದ ಬ್ಯಾಗನ್ನು ಹೆಡ್‌ಕಾನ್‌ಸ್ಟೆಬಲ್‌ ಜಬೀವುಲ್ಲಾ ಕದ್ದಿರುವ ಆರೋಪ ಕೇಳಿಬಂದಿದೆ. ಹಣ ಕಳ್ಳತನ ಮಾಡಿ

ಆರೋಪಿಯ ಹಣವನ್ನೇ ಕದ್ದುಕೊಂಡು ಹೋದ ಹೆಡ್‌ಕಾನ್‌ಸ್ಟೆಬಲ್‌ Read More »

ಪುತ್ತೂರು : ಮಾದಕವಸ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿ ಸೆರೆ

ಪುತ್ತೂರು : ಕಬಕ ಗ್ರಾಮದ ಮುರದಲ್ಲಿರುವ ರೈಲ್ವೆ ಸೇತುವೆ ಬಳಿ ಮಾದಕವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ಆತನಿಂದ 10 ಗ್ರಾಂ ಎಂಡಿಎಂಎ ನಿಷೇಧಿತ ಮಾದಕವಸ್ತು ವಶಕ್ಕೆ ಪಡೆದಿದ್ದಾರೆ. ಶಂಕಿತನನ್ನು ಪುತ್ತೂರು ಕಬಕ ನಿವಾಸಿ ಉಮ್ಮರ್ ಫಾರೂಕ್ (41) ಎಂದು ಗುರುತಿಸಲಾಗಿದ್ದು, ಆತನ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್‌ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ರೈಲ್ವೆ ಸೇತುವೆ ಬಳಿ ವ್ಯಕ್ತಿಯೋರ್ವ ಮಾದಕವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ಎಂಬ ನಿಖರ ಮಾಹಿತಿಯ ಮೇರೆಗೆ ಪುತ್ತೂರು ನಗರ ಪೊಲೀಸ್

ಪುತ್ತೂರು : ಮಾದಕವಸ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿ ಸೆರೆ Read More »

ದೆಹಲಿ ಕಾರು ಬಾಂಬ್‌ ಸ್ಫೋಟ : ಬೆಂಗಳೂರು ಜೈಲಿನಲ್ಲಿ ಎನ್‌ಐಎ ತನಿಖೆ

ಜೈಲಿನಲ್ಲಿರುವ ಉಗ್ರನಿಗೆ ಡಾಕ್ಟರ್‌ ಟೆರರ್‌ಗಳ ಜೊತೆ ಸಂಪರ್ಕದ ಅನುಮಾನ ಬೆಂಗಳೂರು : ದೆಹಲಿ ಕಾರು ಬಾಂಬ್‌ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ತಂಡ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಫೋಟಕ್ಕೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಂಕಿತ ಉಗ್ರ ಮೊಬೈಲ್ ಬಳಕೆ ಮಾಡಿರುವುದಕ್ಕೂ ಸಂಬಂಧ ಇದೆಯಾ ಎಂಬ ಅನುಮಾನ ಮೂಡಿದೆ. ಈಗಾಗಲೇ ಎನ್ಐಎ ದೇಶದ ಹಲವು ಕಡೆ ದಾಳಿಯನ್ನು ನಡೆಸಿ, ಹಲವು ದಾಖಲೆಗಳು ವಶಪಡಿಸಿಕೊಂಡ ತನಿಖೆ ನಡೆಸುತ್ತಿದೆ. ಇತ್ತೀಚೆಗೆ

ದೆಹಲಿ ಕಾರು ಬಾಂಬ್‌ ಸ್ಫೋಟ : ಬೆಂಗಳೂರು ಜೈಲಿನಲ್ಲಿ ಎನ್‌ಐಎ ತನಿಖೆ Read More »

error: Content is protected !!
Scroll to Top