ಅಪರಾಧ

ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧವಾದ ಮಹಿಳೆಯ ಮನವೊಲಿಸಿದ ಡೆಲಿವರಿ ಬಾಯ್

ಚೆನ್ನೈ: ಆತ್ಮಹತ್ಯೆ ಮಾಡಿಕೊಳ್ಳುವ ಸಲುವಾಗಿ ಮಹಿಳೆಯೊಬ್ಬರು ‌ಮಧ್ಯರಾತ್ರಿ ವೇಳೆ ಬ್ಲಿಂಕಿಟ್ ಮೂಲಕ ಇಲಿಪಾಶಾಣ ಆರ್ಡರ್ ಮಾಡಿದ್ದು, ಆರ್ಡರ್ ತಂದು ಕೊಡಲು ಬಂದ ಡೆಲಿವರಿ ಬಾಯ್ ಆಕೆಯ ಜೀವ ಉಳಿಸಿದ ಘಟನೆ ನಡೆದಿದೆ. ಈ ವಿಷಯವನ್ನು ಡೆಲಿವರಿ ಕೊಡಲು ಹೋಗಿ, ಮಹಿಳೆಯ ಮನಃಪರಿವರ್ತನೆ ಮಾಡಿದ ಯುವಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಮಧ್ಯರಾತ್ರಿ ಇಲಿ ಪಾಷಾಣದ ಆರ್ಡರ್ ಸಿಕ್ಕಾಗ ನನಗೆ ಅನುಮಾನ ಬಂತು. ಆ ಪಾರ್ಸೆಲ್ ಡೆಲಿವರಿಗೆ ಹೋದಾಗ ಆರ್ಡರ್ ಮಾಡಿದ ಮಹಿಳೆ ಅಳುತ್ತಾ ಬಾಗಿಲು ತೆರೆದರು. ತಾನು ಡೆಲಿವರಿ […]

ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧವಾದ ಮಹಿಳೆಯ ಮನವೊಲಿಸಿದ ಡೆಲಿವರಿ ಬಾಯ್ Read More »

ಕಾರು ವ್ಯಾಪಾರಕ್ಕೆ ಸಂಬಂಧಿಸಿದ ಮಾತುಕತೆ: ಚೂರಿ ಇರಿತ, ದೂರು ದಾಖಲು

ಪುತ್ತೂರು: ಕಾರು ವ್ಯಾಪಾರಕ್ಕೆ ಸಂಬಂಧಿಸಿದ ಮಾತುಕತೆ ನಡೆಸುತ್ತಿದ್ದ ವೇಳೆ ವ್ಯಕ್ತಿಯೊಬ್ಬರಿಗೆ ‌ತಂಡವೊಂದು ಚೂರಿಯಿಂದ ತಿವಿದು, ಹಲ್ಲೆ ನಡೆಸಿರುವ ಘಟನೆ ಕೆದಿಲದ ಸತ್ತಿಕಲ್ಲು ಪೆಟ್ರೋಲ್ ಪಂಪ್ ಬಳಿ ನಡೆದಿದೆ. ಗಾಯಾಳುವನ್ನು ಸರೋಳಿ ನಿವಾಸಿ ಅಬ್ಬುಬಕ್ಕರ್ ರಾಶೀಕ್(28) ಎಂದು ಗುರುತಿಸಲಾಗಿದೆ. ರಾಶೀಕ್ ಅವರಿಗೆ ಬೆಂಗಳೂರಿನ ಶ್ರೀರಾಮ ಫೈನಾನ್ಸ್‌ನವರು ಸ್ವಾಧೀನಕ್ಕೆ ತೆಗೆದುಕೊಂಡ ಇನ್ನೋವಾ ಕಾರನ್ನು ಮಾರಾಟ ಮಾಡಲಾಗಿತ್ತು. ಆದರೆ ಕಾರಿನ ಮಾಲೀಕ ಸೂರಜ್ ಎಂಬವರು ಈ ಕಾರನ್ನು ಮತ್ತೆ ಖರೀದಿ ಮಾಡಲು ತಮ್ಮ ಏಳೆಂಟು ಮಂದಿ ಸ್ನೇಹಿತರ ಜೊತೆಗೆ ರಾಶೀಕ್ ಅವರೊಂದಿಗೆ

ಕಾರು ವ್ಯಾಪಾರಕ್ಕೆ ಸಂಬಂಧಿಸಿದ ಮಾತುಕತೆ: ಚೂರಿ ಇರಿತ, ದೂರು ದಾಖಲು Read More »

ಮಾಜಿ ಸಚಿವ ಈಶ್ವರಪ್ಪನವರಿಗೆ ವಿದೇಶದಿಂದ ಬೆದರಿಕೆ ಕರೆ

ಭದ್ರತೆ ಕಡಿತಗೊಳಿಸಿದ ಹಿನ್ನೆಲೆಯಲ್ಲಿ ಕಳವಳ ಬೆಂಗಳೂರು: ಮಾಜಿ ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಅವರಿಗೆ ವಿದೇಶದಿಂದ ಮತ್ತೊಮ್ಮೆ ಬೆದರಿಕೆ ಕರೆ ಬಂದಿದೆ. ಈ ಸಂಬಂಧ ಅವರು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿದ್ದಾರೆ. ಜ.7ರಂದು ಈಶ್ವರಪ್ಪ ಅವರಿಗೆ ವಿದೇಶದಿಂದ ಬಂದ ಬೆದರಿಕೆ ಕರೆ ಅವರ ಭದ್ರತೆ ಕುರಿತಾಗಿ ಮತ್ತೊಮ್ಮೆ ಆತಂಕ ಹುಟ್ಟುಹಾಕಿದೆ. ಈಶ್ವರಪ್ಪ ಅವರಿಗೆ ಈ ಹಿಂದೆಯೂ ಬೆದರಿಕೆ ಕರೆಗಳು ಬಂದ ಹಿನ್ನೆಲೆ ಪೊಲೀಸ್ ಭದ್ರತೆ ಹಾಗೂ

ಮಾಜಿ ಸಚಿವ ಈಶ್ವರಪ್ಪನವರಿಗೆ ವಿದೇಶದಿಂದ ಬೆದರಿಕೆ ಕರೆ Read More »

ಬುರ್ಖಾ, ಹಿಜಾಬ್‌ ಧರಿಸಿದವರಿಗೆ ಚಿನ್ನದಂಗಡಿಗಳಿಗೆ ಪ್ರವೇಶವಿಲ್ಲ!

ಚಿನ್ನ ಖರೀದಿಸಬೇಕಾದರೆ ಮುಖ ತೋರಿಸಲೇಬೇಕೆಂಬ ನಿಯಮ ಜಾರಿ ಪಾಟ್ನಾ: ಬಿಹಾರದಾದ್ಯಂತ ಆಭರಣದ ಅಂಗಡಿಗಳಲ್ಲಿ ಹಿಜಾಬ್, ನಿಖಾಬ್, ಬುರ್ಖಾ, ಮಾಸ್ಕ್, ಹೆಲ್ಮೆಟ್ ಧರಿಸಿದ ಗ್ರಾಹಕರಿಗೆ ಪ್ರವೇಶವಿಲ್ಲ ಎಂದು ನೋಟಿಸ್ ಹಾಕಲಾಗಿದೆ. ಹಾಗೆಂದು ಇದು ಯಾವುದೇ ಧಾರ್ಮಿಕ ದ್ವೇಷದ ಕ್ರಮವಲ್ಲ. ಮುಖ ಸಂಪೂರ್ಣವಾಗಿ ಅಥವಾ ಭಾಗಶಃ ಮುಚ್ಚಿರುವ ಗ್ರಾಹಕರಿಗೆ ಪ್ರವೇಶ ನಿರಾಕರಿಸುವ ತೀರ್ಮಾನವನ್ನು ಅಲ್ಲಿನ ಆಭರಣ ವ್ಯಾಪಾರಿಗಳು ಕೈಗೊಂಡಿದ್ದಾರೆ. ಆಭರಣ ಅಂಗಡಿಗಳಲ್ಲಿ ಕಳ್ಳತನ ಮತ್ತು ದರೋಡೆ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭದ್ರತೆಯ ದೃಷ್ಠಿಯಿಂದ ಅಖಿಲ ಭಾರತ ಜುವೆಲ್ಲರ್ಸ್ ಮತ್ತು ಗೋಲ್ಡ್

ಬುರ್ಖಾ, ಹಿಜಾಬ್‌ ಧರಿಸಿದವರಿಗೆ ಚಿನ್ನದಂಗಡಿಗಳಿಗೆ ಪ್ರವೇಶವಿಲ್ಲ! Read More »

ಮೇಯಲು ಬಿಟ್ಟಿದ್ದ ದನಗಳನ್ನು ಕದ್ದವ ಸೆರೆ

ವಿಟ್ಲ : ಮೇಯಲು ಬಿಟ್ಟಿದ್ದ ಹಸುಗಳನ್ನು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನನ್ನು ವಿಟ್ಲ ಪೋಲೀಸರು ಬಂಧಿಸಿದ್ದಾರೆ. ಮಂಗಳೂರು ತಾಲೂಕಿನ ಉಳ್ಳಾಲ ನಿವಾಸಿ ಝಲ್ಫಾನ್ ಮಾಲಿಕ್ (30) ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈತ ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ಸೊಸೈಟಿ ಅವಣದಿಂದ ಹುಲ್ಲು ಮೇಯಲು ಹೋಗಿದ್ದ ಗಣೇಶ್ ರೈ ಹಾಗೂ ನಾರಾಯಣ ನಾಯ್ಕ್ ಎಂಬವರ ಒಟ್ಟು 4 ದನಗಳನ್ನು ಕಳ್ಳತನ ಮಾಡಿದ ಅರೋಪಿಯಾಗಿದ್ದು, ಈತನನ್ನು ವಿಟ್ಲ ಪೋಲೀಸರ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಮೇಯಲು ಬಿಟ್ಟಿದ್ದ ದನಗಳನ್ನು ಕದ್ದವ ಸೆರೆ Read More »

ಕುಖ್ಯಾತ ಕ್ರಿಮಿನಲ್‌ ವಿಟ್ಲದಿಂದ ಮೂಡಿಗೆರೆಗೆ ಗಡಿಪಾರು

ವಿಟ್ಲ: ವಿಟ್ಲ ಕಸಬ ಗ್ರಾಮದ ನಿವಾಸಿ ಅಬ್ದುಲ್ ಖಾದರ್ ಯಾನೆ ಶೌಕತ್ ಎಂಬ ಕ್ರಿಮಿನಲ್‌ನನ್ನು ಪೊಲೀಸರು ಚಿಕ್ಕಮಗಳೂರಿಗೆ ಗಡಿಪಾರು ಮಾಡಿದ್ದಾರೆ. ಈತನ ವಿರುದ್ಧ ಹಲ್ಲೆ, ನಿಷೇಧಿತ ಮಾದಕ ವಸ್ತುಗಳ ಸೇವನೆ ಮತ್ತು NDPS ಕಾಯ್ದೆಯಡಿ ಉಲ್ಲಂಘನೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳಿವೆ. ಗುರುವಾರ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಗಡಿಪಾರು ಮಾಡಲಾಗಿದೆ. ವಿಟ್ಲ ಕಸಬ ಗ್ರಾಮ ಬಂಟ್ವಾಳ ತಾಲೂಕಿನ ಅಬ್ದುಲ್‌ ಖಾದರ್‌ ಗಡಿಪಾರು ಆದ ಆರೋಪಿ. ಆರೋಪಿ ವಿರುದ್ಧ ಹಲ್ಲೆ ದೊಂಬಿ, ನಿಷೇಧಿತ ಮಾದಕ ದ್ರವ್ಯ ಸೇವನೆ, ಎನ್‌ಡಿಪಿಎಸ್

ಕುಖ್ಯಾತ ಕ್ರಿಮಿನಲ್‌ ವಿಟ್ಲದಿಂದ ಮೂಡಿಗೆರೆಗೆ ಗಡಿಪಾರು Read More »

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ: ಆತಂಕ ವ್ಯಕ್ತಪಡಿಸಿ ಪ್ರಧಾನಿ ಮೋದಿ ಅವರಿಗೆ ಪೇಜಾವರ ಶ್ರೀ ಪತ್ರ

ಉಡುಪಿ: ನೆರೆಯ ರಾಷ್ಟ್ರ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಅಮಾನವೀಯ ಕೃತ್ಯದ ಬಗ್ಗೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿರುವ ಅವರು ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿ ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಪತ್ರದಲ್ಲಿ ಹಿಂದೂ ಸಮಾಜವು ಯಾವಾಗಲೂ ಶಾಂತಿ ಮತ್ತು ಸಹಬಾಳ್ವೆಯ ತತ್ವಗಳನ್ನು ಪಾಲಿಸುತ್ತಾ ಬಂದಿದೆ. ಯಾರ ಮೇಲೆಯೂ ಹಿಂಸೆಯನ್ನು ಅಸ್ತ್ರವಾಗಿ ಬಳಸಿ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ: ಆತಂಕ ವ್ಯಕ್ತಪಡಿಸಿ ಪ್ರಧಾನಿ ಮೋದಿ ಅವರಿಗೆ ಪೇಜಾವರ ಶ್ರೀ ಪತ್ರ Read More »

ಸಹೋದ್ಯೋಗಿಯ ಕಿರುಕುಳದಿಂದ ನೊಂದು ಠಾಣೆಯಲ್ಲೇ ಹೆಡ್‌ಕಾನ್‌ಸ್ಟೆಬಲ್‌ ಆತ್ಮಹತ್ಯೆ

ಡೆತ್‌ನೋಟ್‌ ಬರೆದಿಟ್ಟು ಸಾವಿಗೆ ಶರಣಾದ ಹೆಡ್‌ಕಾನ್‌ಸ್ಟೆಬಲ್‌ ಮುಹಮ್ಮದ್‌ ಝಕ್ರಿಯಾ ಶಿವಮೊಗ್ಗ : ಸಹೋದ್ಯೋಗಿಯ ಕಿರುಕುಳದಿಂದ ನೊಂದು ಶಿವಮೊಗ್ಗ ಸಂಚಾರ ಪೊಲೀಸ್‌ ಠಾಣೆಯ ಹೆಡ್‌ಕಾನ್‌ಸ್ಟೆಬಲ್‌ ಮುಹಮ್ಮದ್‌ ಝಕ್ರಿಯಾ (55) ಎಂಬವರು ಡೆತ್‌ನೋಟ್ ಬರೆದಿಟ್ಟು ಪಶ್ಚಿಮ ಸಂಚಾರ ಠಾಣೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮುಹಮ್ಮದ್‌ ಝಕ್ರಿಯಾ (55) ಕಳೆದ ಕೆಲವು ದಿನಗಳಿಂದ ರಜೆ ಮೇಲೆ ಇದ್ದು, ಮೂರು ದಿನಗಳ ಹಿಂದಷ್ಟೇ ಕರ್ತವ್ಯಕ್ಕೆ ಹಾಜರಾಗಿದ್ದರು. ಬುಧವಾರ ರಾತ್ರಿ ಶಿವಮೊಗ್ಗ ಬಸ್ ನಿಲ್ದಾಣದ ಬಳಿ ಡ್ಯೂಟಿ ನಿರ್ವಹಿಸಿ ನಂತರ

ಸಹೋದ್ಯೋಗಿಯ ಕಿರುಕುಳದಿಂದ ನೊಂದು ಠಾಣೆಯಲ್ಲೇ ಹೆಡ್‌ಕಾನ್‌ಸ್ಟೆಬಲ್‌ ಆತ್ಮಹತ್ಯೆ Read More »

16ನೇ ಮಹಡಿಯಿಂದ ಜಿಗಿದು ಮಂಗಳೂರಿನ ಟೆಕ್ಕಿ ಆತ್ಮಹತ್ಯೆ

ಖಿನ್ನತೆಯಿಂದ ಬಳಲುತ್ತಿದ್ದ ಸಾಫ್ಟ್‌ವೇರ್‌ ಇಂಜಿನಿಯರ್‌ ಯುವಕ ಬೆಂಗಳೂರು : ನಗರದ ಅಪಾರ್ಟ್‌ಮೆಂಟ್‌ ಕಟ್ಟಡವೊಂದರ 16ನೇ ಫ್ಲೋರ್‌ನಿಂದ ಜಿಗಿದು ಮಂಗಳೂರು ಮೂಲದ ಟೆಕ್ಕಿಯೊಬ್ಬರು ಆತ್ನಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮಂಗಳೂರು ಮೂಲದ ಸಾಫ್ಟ್‌ವೇರ್‌ ಇಂಜಿನಿಯರ್ ನಿಕ್ಷೇಪ್ ಬಂಗೇರ (26) ಸಾವಿಗೀಡಾಗಿರುವ ನತದೃಷ್ಟ ಯುವಕ. ನಿಕ್ಷೇಪ್ ಬಗಲಗುಂಟೆಯ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದರು. ಅವರು 20ನೇ ಮಹಡಿಯ ಫ್ಲಾಟ್‌ನಲ್ಲಿ ವಾಸವಾಗಿದ್ದರು, ಆದರೆ ಬುಧವಾರ ಬೆಳಗ್ಗೆ 16ನೇ ಮಹಡಿಗೆ ಬಂದು ಅಲ್ಲಿಂದ ಕೆಳಗೆ ಜಿಗಿದಿದ್ದಾರೆ ಎಂದು ವರದಿಯಾಗಿದೆ. ನಿಕ್ಷೇಪ್ ವರ್ಕ್ ಫ್ರಂ ಹೋಮ್

16ನೇ ಮಹಡಿಯಿಂದ ಜಿಗಿದು ಮಂಗಳೂರಿನ ಟೆಕ್ಕಿ ಆತ್ಮಹತ್ಯೆ Read More »

ಹುಲಿ ಹಂತಕ ಮಿನಿ ವೀರಪ್ಪನ್‌ ಸೆರೆ

ಪಚ್ಚೆದೊಡ್ಡಿ ಗ್ರಾಮದಲ್ಲಿ ನಡೆದ ಹುಲಿ ಹತ್ಯೆ ಪ್ರಕರಣದ ಆರೋಪಿ ಬೆಂಗಳೂರು : ಮಲೆ ಮಹದೇಶ್ವರ ವನ್ಯಧಾಮದಲ್ಲಿ ನಡೆದಿದ್ದ ದೈತ್ಯ ಹುಲಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಿನಿ ವೀರಪ್ಪನ್‌ನನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. 2025ರ ಅಕ್ಟೋಬರ್‌ 3ರಂದು ಹನೂರು ವಲಯ ಪಚ್ಚೆದೊಡ್ಡಿ ಗ್ರಾಮದ ಬಳಿ ಹುಲಿಯ ತಲೆ, ಭುಜ, ಮುಂದಿನ ಕಾಲುಗಳು ಪತ್ತೆಯಾಗಿತ್ತು. ಈ ಪ್ರಕರಣದ ಬೆನ್ನತ್ತಿದ್ದ ಅರಣ್ಯಾಧಿಕಾರಿಗಳು ಪ್ರಮುಖ ಆರೋಪಿ ಗೋವಿಂದನನ್ನು ಬಂಧಿಸಿದ್ದಾರೆ. ಪ್ರಾಣಿಗಳ ಶಿಕಾರಿ ಮಾಡುವ ಗೋಮವಿಂದ ಮಿನಿ ವೀರಪ್ಪ ಎಂದೇ ಕುಖ್ಯಾತನಾಗಿದ್ದ. ಹುಲಿ ಹತ್ಯೆ

ಹುಲಿ ಹಂತಕ ಮಿನಿ ವೀರಪ್ಪನ್‌ ಸೆರೆ Read More »

error: Content is protected !!
Scroll to Top