ಅಪರಾಧ

ಫೇಸ್‌ಬುಕ್‌ನಲ್ಲಿ ಪ್ರಚೋದನಕಾರಿ ಪೋಸ್ಟ್‌ : ಕೇಸ್‌ ದಾಖಲು

ಮಂಗಳೂರು: ಫೇಸ್‌ಬುಕ್‌ನಲ್ಲಿ ಪ್ರಚೋದನಕಾರಿ ಸಂದೇಶವನ್ನು ಹಂಚಿದ ಆರೋಪದ ಮೇರೆಗೆ ಕಂಕನಾಡಿ ನಗರ ಠಾಣೆಯಲ್ಲಿ ನಝೀರ್ ಮಂಗಳೂರು ಮತ್ತು Gandhian Nehruvian Magar ಎಂಬ ಎರಡು ಫೇಸ್‌ಬುಕ್ ಖಾತೆಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಅ.21ರಂದು ಅಪರಾಹ್ನ 3 ಗಂಟೆಗೆ ತಾನು ಸಾಮಾಜಿಕ ಜಾಲತಾಣಾ ಮಾನಿಟರಿಂಗ್ ನಿಗಾವಣೆ ಕರ್ತವ್ಯದ ಮೇರೆಗೆ ಫೇಸ್‌ಬುಕ್ ವೀಕ್ಷಿಸುತ್ತಿರುವಾಗ ನಝೀರ್ ಮಂಗಳೂರ್ ಎಂಬ ಫೇಸ್‌ಬುಕ್ ಖಾತೆಯಿಂದ Mumthas Abdul Nelyadka ಮತ್ತು Mahesh Vikram Hegde ಎಂಬ ಫೇಸ್‌ಬುಕ್ ಖಾತೆಗಳಿಗೆ ಟ್ಯಾಗ್ ಮಾಡಿರುವ Gandhian Nehruvian […]

ಫೇಸ್‌ಬುಕ್‌ನಲ್ಲಿ ಪ್ರಚೋದನಕಾರಿ ಪೋಸ್ಟ್‌ : ಕೇಸ್‌ ದಾಖಲು Read More »

ಮಹಿಳೆ ಮೇಲೆ ಗ್ಯಾಂಗ್‌ರೇಪ್‌ : ಮೂವರು ಸೆರೆ

ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಪಾಲನೆ ಕುಸಿತಕ್ಕೆ ಸಾರ್ವಜನಿಕರ ಆಕ್ರೋಶ ಬೆಂಗಳೂರು: ಪಶ್ಚಿಮ ಬಂಗಾಳ ಮೂಲದ ಮಹಿಳೆ ಮೇಲೆ ಮಂಗಳವಾರ ರಾತ್ರಿ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಈ ಘೋರ ಕೃತ್ಯ ನಗರದಲ್ಲಿ ಭಾರಿ ಕಳವಳಕ್ಕೆ ಕಾರಣವಾಗಿದೆ. ಅಪರಾಧಿಗಳಿಗೆ ಪೊಲೀಸರ ಭಯ ಇಲ್ಲದಂತಾಗಿದೆ ಎಂದು ಜನರು ಾತಂಕ ವ್ಯಕ್ತಪಡಿಸಿದ್ದಾರೆ. ಬಂಧಿತರನ್ನು ಕಾರ್ತಿಕ್, ಗ್ಲೆನ್ ಮತ್ತು ಸಿಯೋಗ್ ಎಂದು ಗುರುತಿಸಲಾಗಿದೆ. ಮತ್ತಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಗಂಗೊಂಡನಹಳ್ಳಿಯಲ್ಲಿ

ಮಹಿಳೆ ಮೇಲೆ ಗ್ಯಾಂಗ್‌ರೇಪ್‌ : ಮೂವರು ಸೆರೆ Read More »

ನವದೆಹಲಿ : ಎನ್‌ಕೌಂಟರ್‌ನಲ್ಲಿ ನಾಲ್ವರು ದರೋಡೆಕೋರರ ಹತ್ಯೆ

ಪೊಲೀಸರಿಗೆ ಬಹಿರಂಗ ಸವಾಲು ಹಾಕುತ್ತಿದ್ದ ದರೋಡೆ ಗ್ಯಾಂಗ್‌ನ ರಣಬೇಟೆ ನವದೆಹಲಿ: ದೆಹಲಿಯ ರೋಹಿಣಿ ಪ್ರದೇಶದಲ್ಲಿ ಪೊಲೀಸರ ಎನ್‌ಕೌಂಟರ್‌ಗೆ ನಾಲ್ವರು ದರೋಡೆಕೋರರು ಬಲಿಯಾಗಿದ್ದಾರೆ. ಹತ್ಯೆಯಾದವರು ಬಿಹಾರದ ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿದ್ದ ಸಿಗ್ಮಾ ಗ್ಯಾಂಗ್‌ನ ಸದಸ್ಯರು. ದೆಹಲಿ ಮತ್ತು ಬಿಹಾರ ಪೊಲೀಸರ ತಂಡ ಮತ್ತು ದರೋಡೆಕೋರರ ನಡುವೆ ಗುರುವಾರ ತಡರಾತ್ರಿ 2.20ಕ್ಕೆ ರೋಹಿಣಿಯ ಡಾ. ಅಂಬೇಡ್ಕರ್ ಚೌಕ್‌ನಿಂದ ಪನ್ಸಾಲಿ ಚೌಕ್‌ವರೆಗಿನ ಬಹದ್ದೂರ್ ಷಾ ಮಾರ್ಗದಲ್ಲಿ ಗುಂಡಿನ ಚಕಮಕಿ ನಡೆದಿದೆ. ದೆಹಲಿ ಪೊಲೀಸ್ ಮೂಲಗಳ ಪ್ರಕಾರ ಪೊಲೀಸರು ಸಿಗ್ಮಾ ಗ್ಯಾಂಗ್‌ನ ದರೋಡೆಕೋರರನ್ನು

ನವದೆಹಲಿ : ಎನ್‌ಕೌಂಟರ್‌ನಲ್ಲಿ ನಾಲ್ವರು ದರೋಡೆಕೋರರ ಹತ್ಯೆ Read More »

ಮೈಸೂರಿನಲ್ಲಿ ಭ್ರೂಣ ಹತ್ಯೆ ಜಾಲ ಪತ್ತೆ : ಮಹಿಳೆ ಸಹಿತ ಮೂವರು ಸೆರೆ

ಐಷಾರಾಮಿ ಬಂಗಲೆಯಲ್ಲಿ ನಡೆಯುತ್ತಿತ್ತು ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಮೈಸೂರು : ಭ್ರೂಣ ಪತ್ತೆ ಹಾಗೂ ಹತ್ಯೆ ಜಾಲವೊಂದನ್ನು ಮೈಸೂರಿನಲ್ಲಿ ಪೊಲೀಸರು ಆರೋಗ್ಯ ಇಲಾಖೆ ಸಹಕಾರದಿಂದ ಬಯಲಿಗೆಳೆದಿದ್ದಾರೆ. ಕೃತ್ಯಕ್ಕೆ ಸಂಬಂಧಿಸಿ ಓರ್ವ ಮಹಿಳೆ ಸೇರಿ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಬನ್ನೂರಿನ ಪ್ರತಿಷ್ಠಿತ ನರ್ಸಿಂಗ್ ಹೋಂ ಒಂದರ ಕೈವಾಡ ಶಂಕೆ ಕೂಡ ವ್ಯಕ್ತವಾಗಿದ್ದು, ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೈಸೂರು ತಾಲೂಕು ಮೆಲ್ಲಹಳ್ಳಿ ಗ್ರಾಮದ ಬಳಿಯ ಹುನಗನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಐಷಾರಾಮಿ ಬಂಗಲೆಯಲ್ಲಿ ಭ್ರೂಣ ಲಿಂಗ

ಮೈಸೂರಿನಲ್ಲಿ ಭ್ರೂಣ ಹತ್ಯೆ ಜಾಲ ಪತ್ತೆ : ಮಹಿಳೆ ಸಹಿತ ಮೂವರು ಸೆರೆ Read More »

ಮಹಿಳೆಯನ್ನು ಡಿಜಿಟಲ್‌ ಅರೆಸ್ಟ್‌ ಮಾಡಿ 42 ಲ.ರೂ. ಸುಲಿಗೆ

ಮಂಗಳೂರು : ಡಿಜಿಟಲ್ ಅರೆಸ್ಟ್ ಮಾಡಿ ಮಹಿಳೆಯಿಂದ 42 ಲಕ್ಷ ಸುಲಿಗೆ ಮಾಡಿದ ಪ್ರಕರಣವೊಂದು ಮಂಗಳೂರಿನಲ್ಲಿ ಸಂಭವಿಸಿದೆ. ಮಹಿಳೆ ಅಪರಿಚಿತರು ಕರೆ ಮಾಡಿ 42 ಲಕ್ಷ ರೂ. ಆನ್‌ಲೈನ್ ಮೂಲಕ ವಂಚಿಸಿದ ಬಗ್ಗೆ ನಗರದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಸಿದ್ದಾರೆ. ಅ.7ರಂದು ತನ್ನ ಮೊಬೈಲ್‌ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ಮುಂಬೈಯ ಕೊಲಾಬ ಪೊಲೀಸ್ ಠಾಣೆಯಿಂದ ತಾನು ಮಾತನಾಡುತ್ತಿರುವೆ. ನಿಮ್ಮ ಹೆಸರಿನಲ್ಲಿ ಹೊಸ ಸಿಮ್ ಖರೀದಿಸಲಾಗಿದೆ. ಬಳಿಕ ತನ್ನನ್ನು ಮುಂಬೈಗೆ ಬರುವಂತೆ ಹೇಳಿದ್ದಾನೆ. ನನಗೆ ಮುಂಬೈಗೆ ಬರಲು

ಮಹಿಳೆಯನ್ನು ಡಿಜಿಟಲ್‌ ಅರೆಸ್ಟ್‌ ಮಾಡಿ 42 ಲ.ರೂ. ಸುಲಿಗೆ Read More »

ಗುರುವಾಯೂರು ದೇವಸ್ಥಾನದಲ್ಲೂ ಚಿನ್ನ ಕಳವು : 25 ಕೋಟಿ ಅವ್ಯವಹಾರವಾಗಿರುವ ವರದಿ

ಶಬರಿಮಲೆ ಬಳಿಕ ಇನ್ನೊಂದು ಪ್ರಸಿದ್ಧ ದೇವಸ್ಥಾನದ ಚಿನ್ನಕ್ಕೆ ಕನ್ನ ತಿರುವನಂತಪುರಂ : ಶಬರಿಮಲೆಯ ಬಳಿಕ ಇದೀಗ ಕೇರಳದ ಇನ್ನೊಂದು ಪ್ರಸಿದ್ಧ ದೇವಸ್ಥಾನ ಗುರುವಾಯೂರು ದೇವಸ್ಥಾನದಲ್ಲೂ ಬೆಲೆಬಾಳುವ ಆಭರಣಗಳು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಕೇರಳದಲ್ಲಿ 12 ಪ್ರಸಿದ್ಧ ದೇವಸ್ಥಾನಗಳ ಆಡಳಿತ ನಿಭಾಯಿಸುವ ಸರ್ಕಾರದ ಗುರುವಾಯೂರು ದೇವಸ್ವಂ ಮಂಡಳಿಯ ಆಡಿಟಿಂಗ್ ವೇಳೆ ಸಾಕಷ್ಟು ವ್ಯತ್ಯಯಗಳು ಪತ್ತೆಯಾಗಿವೆ. 2019ರಲ್ಲಿ ಮಾಡಲಾದ ಆಡಿಟಿಂಗ್​ನಲ್ಲಿ ಕೆಲ ಗಮನಾರ್ಹ ಸಂಗತಿಗಳು ಬೆಳಕಿಗೆ ಬಂದಿವೆ. ಚಿನ್ನ, ಬೆಳ್ಳಿ, ದಂತ ಇತ್ಯಾದಿ ಹಲವು ವಸ್ತುಗಳು ಕಾಣೆಯಾಗಿರುವುದು ಗೊತ್ತಾಗಿದೆ. ಗೋಲ್ಡ್

ಗುರುವಾಯೂರು ದೇವಸ್ಥಾನದಲ್ಲೂ ಚಿನ್ನ ಕಳವು : 25 ಕೋಟಿ ಅವ್ಯವಹಾರವಾಗಿರುವ ವರದಿ Read More »

ಬೆಂಗಳೂರು ಲಾಡ್ಜ್‌ನಲ್ಲಿ ಪುತ್ತೂರಿನ ಯುವಕ ಮೃತಪಟ್ಟ ಪ್ರಕರಣ : ಪೋಸ್ಟ್‌ಮಾರ್ಟಂ ವರದಿಯಲ್ಲಿದೆ ಕಾರಣ

ಪ್ರೇಯಸಿ ಜೊತೆ ಒಂದು ವಾರ ಲಾಡ್ಜ್‌ನಲ್ಲಿ ತಂಗಿದ್ದ ಯುವಕ ನಿಗೂಢವಾಗಿ ಸಾವಿಗೀಡಾದ ಪ್ರಕರಣ ಪುತ್ತೂರು : ಬೆಂಗಳೂರಿನ ಮಡಿವಾಳದ ಲಾಡ್ಜೊಂದರಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪುತ್ತೂರು ಸಮೀಪದ ಸೇಡಿಯಾಪಿನ ಯುವಕ ತಕ್ಷಿತ್‌ನ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಕಿಡ್ನಿ ವಿಫಲಗೊಂಡಿದ್ದ ಅಂಶ ಪತ್ತೆಯಾಗಿದೆ. ತಕ್ಷಿತ್‌ಗೆ ಕಿಡ್ನಿ ವೈಫಲ್ಯ ಮಾತ್ರವಲ್ಲದೆ ಲಿವರ್ ಸಮಸ್ಯೆ ಹಾಗೂ ಅಸ್ತಮಾ ಕಾಯಿಲೆ ಇತ್ತು ಎನ್ನುವುದು ಪತ್ತೆಯಾಗಿದೆ. ಹೀಗಾಗಿ ಇದೇ ಕಾರಣಕ್ಕೆ ಸಾವನ್ನಪ್ಪಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ತಕ್ಷಿತ್ ಹಾಗೂ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆ ಮಾಡಿಕೊಳ್ಳಬೇಕು

ಬೆಂಗಳೂರು ಲಾಡ್ಜ್‌ನಲ್ಲಿ ಪುತ್ತೂರಿನ ಯುವಕ ಮೃತಪಟ್ಟ ಪ್ರಕರಣ : ಪೋಸ್ಟ್‌ಮಾರ್ಟಂ ವರದಿಯಲ್ಲಿದೆ ಕಾರಣ Read More »

ಪುತ್ತೂರು : ದನ ಸಾಗಿಸುತ್ತಿದ್ದ ಆರೋಪಿಯ ಕಾಲಿಗೆ ಗುಂಡು

ದನಗಳನ್ನು ಸಾಗಿಸುತ್ತಿದ್ದ ವಾಹನವನ್ನು 10 ಕಿ.ಮೀ. ಬೆನ್ನಟ್ಟಿ ಹಿಡಿದ ಪೊಲೀಸರು ಪುತ್ತೂರು : ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಪೊಲೀಸರು ಬೆನ್ನಟ್ಟಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿರುವ ಘಟನೆ ಇಂದು ಬೆಳಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಗುಂಡು ಕಾಲಿಗೆ ತಗುಲಿದ ಆರೋಪಿಯನ್ನು ಕೇರಳದ ಕಾಸರಗೋಡಿನ ಅಬ್ದುಲ್ಲಾ (40 ವರ್ಷ) ಎಂದು ಗುರುತಿಸಲಾಗಿದೆ. ಐಶರ್ ವಾಹನದಲ್ಲಿ 10 ಜಾನುವಾರಗಳನ್ನು ಸಾಗಿಸಲಾಗುತ್ತಿತ್ತು. ಅಬ್ದುಲ್ಲಾ ಈ ವಾಹನದ ಚಾಲಕನಾಗಿದ್ದ. ವಾಹನದಲ್ಲಿ ಇನ್ನೂ ಓರ್ವ ವ್ಯಕ್ತಿ ಇದ್ದ.

ಪುತ್ತೂರು : ದನ ಸಾಗಿಸುತ್ತಿದ್ದ ಆರೋಪಿಯ ಕಾಲಿಗೆ ಗುಂಡು Read More »

ಅಪಾರ್ಟ್‌ಮೆಂಟ್‌ನಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಕಳ್ಳರ ಬಂಧನ

ಮನೆಯವರು ಮಲಗಿರುವಾಗಲೇ 20 ಲ.ರೂ. ಮೌಲ್ಯದ ಸೊತ್ತು ಕಳವು ಮಾಡಿದ್ದ ಚಾಲಾಕಿಗಳು ಮಂಗಳೂರು: ನಗರದ ಲಾಲ್‌ಬಾಗ್‌ನ ಅಪಾರ್ಟ್ಮೆಂಟ್‌ವೊಂದರ ಮೂರು ಫ್ಲಾಟ್‌ಗಳಿಂದ ಮನೆಯವರು ಮಲಗಿರುವಾಗಲೇ ಸುಮಾರು 20 ಲಕ್ಷ ಮೌಲ್ಯದ ಚಿನ್ನಾಭರಣ, ನಗದು, ವಿದೇಶಿ ಕರೆನ್ಸಿ ಮತ್ತು ಮೊಬೈಲ್ ಫೋನ್ ಕಳವುಗೈದ ಪ್ರಕರಣಕ್ಕೆ ಸಂಭಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಅಸ್ಸಾಂನ ಕಾಚಾರ್‌ ಜಿಲ್ಲೆಯ ಅಭಿಜಿತ್ ದಾಸ್ (24) ಹಾಗೂ ದೇಬಾ ದಾಸ್ (21) ಎಂದು ಗುರುತಿಸಲಾಗಿದೆ. ಆರೋಪಿ ಅಭಿಜಿತ್ ದಾಸ್ ಎಂಬಾತನ ಮೇಲೆ

ಅಪಾರ್ಟ್‌ಮೆಂಟ್‌ನಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಕಳ್ಳರ ಬಂಧನ Read More »

ಮಹಿಳೆಗೆ ಅಶ್ಲೀಲ ಸಂದೇಶ ಕಳುಹಿಸಿ ಕಿರುಕುಳ : ಯುವಕ ಸೆರೆ

ನಿಟ್ಟೆ ಅಭಿಷೇಕ್‌ ಆಚಸರ್ಯ ಅತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ನಡೆದ ಕೃತ್ಯ ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಪರಿಶಿಷ್ಟ ಜಾತಿಯ ಮಹಿಳೆಯೊಬ್ಬರಿಗೆ ಜಾತಿ ನಿಂದನೆ ಮತ್ತು ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಅವಮಾನ ಮತ್ತು ಮಾನಸಿಕ ಯಾತನೆಯನ್ನುಂಟು ಮಾಡಿದ ಆರೋಪದ ಮೇಲೆ ಮಂಗಳೂರು ನಗರ ಪೊಲೀಸರು ಯುವಕ ಓರ್ವನನ್ನು ಬಂಧಿಸಿದ್ದಾರೆ. ಮಂಗಳೂರಿನ ಕಾವೂರು ಕಾಪಿಗುಡ್ಡದ ಆಕಾಶ್ ಭವನ ನಿವಾಸಿ ನಿಖಿಲ್ ರಾಜ್ (27) ಸೆರೆಯಾಗಿರುವ ಆರೋಪಿ. ಬೆಳ್ಮಣ್‌ನ ಲಾಡ್ಜ್‌ನಲ್ಲಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಕಾರ್ಕಳದ ನಿಟ್ಟೆ ಪರಪ್ಪಾಡಿಯ ಅಭಿಷೇಕ್ ಆಚಾರ್ಯ ದೂರುದಾರರಿಗೆ

ಮಹಿಳೆಗೆ ಅಶ್ಲೀಲ ಸಂದೇಶ ಕಳುಹಿಸಿ ಕಿರುಕುಳ : ಯುವಕ ಸೆರೆ Read More »

error: Content is protected !!
Scroll to Top