ಅಪರಾಧ

ಅಡ್ಯನಡ್ಕ ಕರ್ಣಾಟಕ ಬ್ಯಾಂಕ್ ಕಳ್ಳತನ | ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ತನಿಖಾ ತಂಡಕ್ಕೆ ಬಹುಮಾನ ಘೋಷಣೆ

ವಿಟ್ಲ : ಅಡ್ಯನಡ್ಕ ಕರ್ಣಾಟಕ ಬ್ಯಾಂಕ್ ನಲ್ಲಿ ನಡೆದ ನಗದು ಹಾಗೂ ಕೋಟ್ಯಾಂತರ ರೂ. ಚಿನ್ನಾಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ಆರೋಪಿಗಳನ್ನು ಬಂಧಿಸಿದ್ದು, ಈ ಕುರಿತು ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ. ರಿಷ್ಯಂತ್ ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಅವರು ಕಳ್ಳತನದ ಮಾಹಿತಿ ನೀಡಿ, ಬಂಟ್ವಾಳ ಗೂಡಿನ ಬಳಿ ನಿವಾಸಿ ಮಹಮ್ಮದ್ ರಫೀಕ್ ಯಾನೆ ಗೂಡಿನ ಬಳಿ ರಫೀಕ್ (35), ಮಂಜೇಶ್ವರ ಬಿಂಗಿನಾನಿ ನಿವಾಸಿ ಇಬ್ರಾಹಿಂ ಕಲಂದರ್ (41), ಮಂಜೇಶ್ವರ ಗಾಳಿಯಡ್ಕ ನಿವಾಸಿ […]

ಅಡ್ಯನಡ್ಕ ಕರ್ಣಾಟಕ ಬ್ಯಾಂಕ್ ಕಳ್ಳತನ | ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ತನಿಖಾ ತಂಡಕ್ಕೆ ಬಹುಮಾನ ಘೋಷಣೆ Read More »

ಪಾಕ್ ಪರ ಘೋಷಣೆ | ಬಂಧಿತ ಮೂವರು ಆರೋಪಿಗಳಿಗೆ ಜಾಮೀನು

ಬೆಂಗಳೂರು: ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ವಿಧಾನ ಸೌಧದಲ್ಲೇ ಪಾಕಿಸ್ತಾನ್‌ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದ ಮೂವರು ಆರೋಪಿಗಳಿಗೆ ಬೆಂಗಳೂರಿನ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ. ದೆಹಲಿಯ ಕಿಶನ್‌ ಗಂಜ್‌ನ ಮೊಹಮ್ಮದ್ ಇಲ್ತಾಜ್, ಹಾವೇರಿ ಜಿಲ್ಲೆ ಬ್ಯಾಡಗಿಯ ಮೊಹಮ್ಮದ್ ಶಫಿ ನಾಶಿಪುಡಿ, ಬೆಂಗಳೂರಿನ ಜಯಮಹಲ್‌ ನಿವಾಸಿ ಡಿ.ಎಸ್‌ ಮುನಾವರ್ ಅಹ್ಮದ್ ಅವರಿಗೆ ಜಾಮೀನು ಲಭಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಸಯ್ಯದ್ ನಾಸೀರ್ ರಾಜ್ಯಸಭಾ ಚುನಾವಣೆಯಲ್ಲಿ ಜಯಗಳಿಸಿದ ಬೆನ್ನಲ್ಲೇ ನಡೆಸಿದ ವಿಜಯೋತ್ಸವ ಸಂದರ್ಭ

ಪಾಕ್ ಪರ ಘೋಷಣೆ | ಬಂಧಿತ ಮೂವರು ಆರೋಪಿಗಳಿಗೆ ಜಾಮೀನು Read More »

ಕೆಲಸ ಕೊಡಿಸುವ ನೆಪದಲ್ಲಿ ಯುವತಿಯ ಅತ್ಯಾಚಾರ !

ಪುತ್ತೂರು: ಯುವತಿಯೋರ್ವಳನ್ನು ಇಬ್ಬರು ಯುವಕರು ಅತ್ಯಾಚಾರ ಮಾಡಿರುವ ಘಟನೆ ಕೆಮ್ಮಾಯಿಯ ಮನೆಯೊಂದರಲ್ಲಿ ನಡೆದಿದೆ. ವಾಮಂಜೂರು ಮೂಲಕ ಯುವತಿ ಎಂದು ಹೇಳಲಾಗಿದ್ದು, ಕರ್ವೇಲು ಹಾಗೂ ಕಡೇಶ್ವಾಲ್ಯದ ಇಬ್ಬರು ಯುವಕರು ಕೆಲಸ ಕೊಡಿಸುವ ನೆಪದಲ್ಲಿ ಅತ್ಯಾಚಾರ ಮಾಡಿರುವುದಾಗಿ ತಿಳಿದು ಬಂದಿದೆ. ಯುವಕರಿಬ್ಬರು ಪರಾರಿಯಾಗಿದ್ದು, ತಕ್ಷಣ ಶೋಧ ನಡೆಸಿದ ಪೊಲೀಸರ ವಶಕ್ಕೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ. ಯುವತಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.

ಕೆಲಸ ಕೊಡಿಸುವ ನೆಪದಲ್ಲಿ ಯುವತಿಯ ಅತ್ಯಾಚಾರ ! Read More »

ಆ್ಯಸಿಡ್ ಸೇವಿಸಿ ಮಹಿಳೆ ಆತ್ಮಹತ್ಯೆಗೆ ಯತ್ನ

ಬೆಳ್ಳಾರೆ: ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಮಹಿಳೆಯೋರ್ವರು ರಬ್ಬರ್ ಶೀಟ್ ಮಾಡಲು ಬಳಸುವ ಆ್ಯಸಿಡ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಬೆಳ್ಳಾರೆ ನಿವಾಸಿ ಲಕ್ಷ್ಮೀಕಾಂತ ಹೆಗ್ಡೆಯವರ ಪತ್ನಿ ವೀಣಾ ಆತ್ಮಹತ್ಯೆಗೆ ಯತ್ನಿಸಿದವರು. ಮಂಗಳವಾರ ಮಧ್ಯಾಹ್ನ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಮಹಿಳೆಯು ಆ್ಯಸಿಡ್ ಸೇವಿಸಿ ತನ್ನ ಸಹೋದ್ಯೋಗಿಗೆ ಕರೆಮಾಡಿ ತಿಳಿಸಿದ್ದರು. ತಕ್ಷಣ ಮನೆಯವರಿಗೆ ವಿಚಾರ ತಿಳಿಸಿ ಆಟೋ ರಿಕ್ಷದ ಮೂಲಕ ಆಸ್ಪತ್ರೆಗೆ ಸಾಗಿಸಿದ್ದು ಅಷ್ಟರಲ್ಲಿ ಮಹಿಳೆಯು ವಾಂತಿ ಮಾಡಲು ಪ್ರಾರಂಭಿಸಿದ್ದಾರೆ. ಬಳಿಕ ಬೆಳ್ಳಾರೆಯ ಆಸ್ಪತ್ರೆಯ ವೈದ್ಯರ ಸಲಹೆ

ಆ್ಯಸಿಡ್ ಸೇವಿಸಿ ಮಹಿಳೆ ಆತ್ಮಹತ್ಯೆಗೆ ಯತ್ನ Read More »

ಕೆರೆಗೆ ಬಿದ್ದು ಮೃತ್ಯು !

ಪುತ್ತೂರು: ಈಜಲು ಕೆರೆಗೆ ಇಳಿದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕೆದಂಬಾಡಿ ಗ್ರಾಮದ ತಿಂಗಳಾಡಿಯ ಪಟ್ಟೆಯಲ್ಲಿ ಮಾ.11ರಂದು ಸಂಜೆ ನಡೆದಿದೆ. ಕಡಬ ಕರ್ಮಾಯಿ ನಿವಾಸಿ ಕಿರಣ್ ರೈ (40) ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಇವರು ಸಂಜೀವ ರೈ ಎಂ.ರವರ ಪುತ್ರಿ ಮಮತಾರವರನ್ನು ವಿವಾಹವಾಗಿದ್ದು ಪ್ರಸ್ತುತ ಪತ್ನಿ ಮನೆಯಲ್ಲಿ ವಾಸವಾಗಿದ್ದರು. ಮಾ.11ರಂದು ಸಂಜೆ ತೋಟದ ಕೆರೆಗೆ ನೀರು ತರಲೆಂದು ಹೆಂಡತಿಯೊಂದಿಗೆ ತೆರಳಿದ್ದು, ಆ ಬಳಿಕ ನಾನು ಕೆರೆಯಲ್ಲಿ ಈಜಾಡುತ್ತೇನೆ ಎಂದು ಹೇಳಿ ಕೆರೆಗೆ ಇಳಿದವರು ನೀರಲ್ಲಿ ಮುಳುಗಿ

ಕೆರೆಗೆ ಬಿದ್ದು ಮೃತ್ಯು ! Read More »

ಹಾಸ್ಟೇಲ್ ಕಟ್ಟಡದಿಂದ ಬಿದ್ದು ನರ್ಸಿಂಗ್ ವಿದ್ಯಾರ್ಥಿನಿ ಮೃತ್ಯು !

ಬೆಂಗಳೂರು: ಕಟ್ಟಡದಿಂದ ಬಿದ್ದು ನರ್ಸಿಂಗ್ ವಿದ್ಯಾರ್ಥಿಯೋರ್ವರು ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೇರಳದ ಎಲ್ಲಂಪ್ಲಾಕಲ್ ನ ಅನಿಲ (19) ಮೃತಪಟ್ಟ ವಿದ್ಯಾರ್ಥಿನಿ. ಬಿಜು ಹಾಗೂ ಉಡುಂಬಂಜೋಳ ಪಂಚಾಯತ್‍ ಉಪಾಧ್ಯಕ್ಷೆ ಬೀನಾ ಅವರ ಪುತ್ರಿಯಾಗಿರುವ ಅನಿಲ ಹಾಸ್ಟೇಲ್ ಕಟ್ಟಡದಿಂದ ಬಿದ್ದು ಶವವಾಗಿ ಪತ್ತೆಯಾಗಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿನಲ್ಲಿ ಫಿಸಿಯೋಥೆರಪಿ ವಿದ್ಯಾರ್ಥಿನಿಯಾಗಿದ್ದರು. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು.

ಹಾಸ್ಟೇಲ್ ಕಟ್ಟಡದಿಂದ ಬಿದ್ದು ನರ್ಸಿಂಗ್ ವಿದ್ಯಾರ್ಥಿನಿ ಮೃತ್ಯು ! Read More »

ಕಡಬ ಕಾಲೇಜಿನಲ್ಲಿ ಆ್ಯಸಿಡ್ ದಾಳಿ | ಇನ್ನಿಬ್ಬರು ಪೊಲೀಸ್ ವಶಕ್ಕೆ

ಕಡಬ: ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಇನ್ನಿಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಉಪ್ಪಿನಂಗಡಿ ವೃತ್ತ ನಿರೀಕ್ಷಕರ ತಂಡ ತಮಿಳುನಾಡು, ಎರ್ನಾಕುಲಂ ಮತ್ತಿತರ ಪ್ರದೇಶಕ್ಕೆ ತೆರಳಿ ತನಿಖೆ ನಡೆಸಿದ್ದು, ಕೇರಳದಲ್ಲಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಈಗಾಗಲೇ ಆರೋಪಿ ಕೇರಳ ಮೂಲದ ಅಬಿನ್ ಎಂಬಾತನನ್ನು ಬಂಧಿಸಲಾಗಿದ್ದು, ಆತನಿಗೆ ಸಮವಸ್ತ್ರ ಹೊಲಿದುಕೊಟ್ಟ ವ್ಯಕ್ತಿ ಹಾಗೂ ಆ್ಯಸಿಡ್ ನೀಡಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.  

ಕಡಬ ಕಾಲೇಜಿನಲ್ಲಿ ಆ್ಯಸಿಡ್ ದಾಳಿ | ಇನ್ನಿಬ್ಬರು ಪೊಲೀಸ್ ವಶಕ್ಕೆ Read More »

ನೇಣು ಬಿಗಿದು ಆತ್ಮಹತ್ಯೆ !

ಕಡಬ: ತಾಲೂಕಿನ ಏಣಿತ್ತಡ್ಕದಲ್ಲಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಏಣಿತ್ತಡ್ಕ ದಿ.ಈಶ್ವರ ನಾಯ್ಕರ ಪುತ್ರ ಉಮೇಶ್ (36) ಆತ್ಮಹತ್ಯೆ ಮಾಡಿಕೊಂಡವರು. ಸೋಮವಾರ ಮಧ್ಯಾಹ್ನ ಊಟ ಮಾಡಿ ಮನೆಯಿಂದ ಹೊರ ಹೋದವರು ತೋಟದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಜೆ ಅವರ ತಾಯಿ ತೋಟಕ್ಕೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಉಮೇಶ್ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮೃತರು ತಾಯಿ, ಪತ್ನಿ, ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ. ಈ ಕುರಿತು ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣು ಬಿಗಿದು ಆತ್ಮಹತ್ಯೆ ! Read More »

ಅಡ್ಯನಡ್ಕ ಕರ್ಣಾಟಕ ಬ್ಯಾಂಕ್‍ ದರೋಡೆ | ಪ್ರಮುಖ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ

ವಿಟ್ಲ: ಅಡ್ಯನಡ್ಕ ಕರ್ಣಾಟಕ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿಶೇಷ ತಂಡ ಮೂವರು ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನಿಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ರಫೀಕ್ ಯಾನೆ ಗೂಡಿನ ಬಳಿ ರಫೀಕ್, ಮೂಲತಃ ಸುಳ್ಯದ ಕೊಯಿಲ, ಕಾಸರಗೋಡಿನ ಚೌಕಿ ನಿವಾಸಿ ಖಲಂದರ್ ಹಾಗೂ ಬಾಯಾರು ನಿವಾಸಿ ದಯಾನಂದ ಬಂಧಿತ ಪ್ರಮುಖ ಆರೋಪಿಗಳು. ಫೆ. 7 ರಂದು ರಾತ್ರಿ ಬ್ಯಾಂಕ್ ಕಟ್ಟಡದ ಹಿಂಬದಿ ಕಿಟಕಿಯ ಸರಳುಗಳನ್ನು ತುಂಡರಿಸಿ ಒಳನುಗ್ಗಿದ ಆರೋಪಿಗಳು ಕೋಟ್ಯಾಂತರ ಮೌಲ್ಯದ ಚಿನ್ನಾಭರಣ

ಅಡ್ಯನಡ್ಕ ಕರ್ಣಾಟಕ ಬ್ಯಾಂಕ್‍ ದರೋಡೆ | ಪ್ರಮುಖ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ Read More »

ಕಾನೂನು ಬಾಹಿರ ಆಟೋ ಚಾಲನೆ | ದಂಡ ವಿಧಿಸಿದ ಪೊಲೀಸರು | ಚಾಲಕನಿಂದ ಸರಕಾರಿ ವಾಹನಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನ

ಬಂಟ್ವಾಳ: ಆಟೋರಿಕ್ಷಾ ಚಲಾಯಿಸುತ್ತಿದ್ದ ವ್ಯಕ್ತಿಯೋರ್ವನನ್ನು ಟ್ರಾಫಿಕ್ ಪೋಲೀಸರು ತಡೆದು ದಂಡ ಹಾಕಿದ್ದಾರೆ. ಈ ಕಾರಣಕ್ಕೆ ಆವೇಶಕ್ಕೊಳಗಾದ ಆಟೋ ಚಾಲಕ, ಟ್ರಾಫಿಕ್ ಎಸ್.ಐ. ಹಾಗೂ ಸರಕಾರಿ ‌ವಾಹನಕ್ಕೆ ಮತ್ತು ಅಟೋ ರಿಕ್ಷಾಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾದ ಘಟನೆ ಬಿಸಿರೋಡಿನ ‌ಕೈಕಂಬದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಗೂಡಿನಬಳಿ ನಿವಾಸಿ ಮಹಮ್ಮದ್ ಅನ್ಸಾರ್ ಪ್ರಕರಣದ ಆರೋಪಿಯಾಗಿದ್ದು ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ. ಈತ ಕಾನೂನುಬಾಹಿರವಾಗಿ ಯೂನಿಫಾರ್ಮ್‍ ಹಾಕದೆ, ಮೊಬೈಲ್‍ನಲ್ಲಿ ಮಾತನಾಡಿಕೊಂಡು ಆಟೋ ಓಡಿಸುತ್ತಿದ್ದ. ತಕ್ಷಣ ಪೊಲೀಸರು ಈತನನ್ನು ತಡೆಹಿಡಿದು ಎರಡು ಸಾವಿರ

ಕಾನೂನು ಬಾಹಿರ ಆಟೋ ಚಾಲನೆ | ದಂಡ ವಿಧಿಸಿದ ಪೊಲೀಸರು | ಚಾಲಕನಿಂದ ಸರಕಾರಿ ವಾಹನಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನ Read More »

error: Content is protected !!
Scroll to Top