ಅಪರಾಧ

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ 46 ಲ.ರೂ. ಚಿನ್ನಾಭರಣ ಕಳವು

ತಲೆಯ ಬಳಿ ಇಟ್ಟಿದ್ದ ಬ್ಯಾಗಿನಲ್ಲಿದ್ದ ಆಭರಣಗಳನ್ನು ಎಗರಿಸಿರುವ ಕಳ್ಳರು ಉಡುಪಿ: ಮುಂಬೈಯಿಂದ ಉಡುಪಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಬ್ಯಾಗ್‌ನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಆದ ಘಟನೆ ಮತ್ಸ್ಯಗಂಧ ರೈಲಿನಲ್ಲಿ ಸಂಭವಿಸಿದೆ. ಮುಂಬೈ ಚೆಂಬೂರಿನ ಹೆಲ್ಮೀನಾ ಸಾಲಿನ್ಸ್ ಎಂಬವರು ಮಗಳು, ಪತಿ ಮತ್ತು ಮೊಮ್ಮಗಳೊಂದಿಗೆ ಡಿ.26ರಂದು ಮಧ್ಯಾಹ್ನ ಮತ್ಸ್ಯಗಂಧ ರೈಲಿನಲ್ಲಿ ಒಡವೆಗಳಿದ್ದ ಒಂದು ವ್ಯಾನಿಟಿ ಬ್ಯಾಗ್, ಬಟ್ಟೆಗಳಿದ್ದ ಹ್ಯಾಂಡ್ ಬ್ಯಾಗ್ ಮತ್ತು ಸೂಟ್‌ಕೇಸ್‌ಗಳೊಂದಿಗೆ ಉಡುಪಿಗೆ ಪ್ರಯಾಣಿಸುತಿದ್ದರು. ಹೆಲ್ಮೀನಾ ಸಾಲಿನ್ಸ್ ಒಡವೆಗಳಿದ್ದ ವ್ಯಾನಿಟಿ ಬ್ಯಾಗನ್ನು ತನ್ನ ತಲೆಯ […]

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ 46 ಲ.ರೂ. ಚಿನ್ನಾಭರಣ ಕಳವು Read More »

ಬೆಂಗಳೂರಿಲ್ಲಿ ಡ್ರಗ್ಸ್‌ ಫ್ಯಾಕ್ಟರಿ ಪತ್ತೆ : 55.88 ಕೋಟಿ ರೂ. ಮೌಲ್ಯದ ಮಾದಕವಸ್ತು ವಶ

ಮಹಾರಾಷ್ಟ್ರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಹಲವೆಡೆ ಡ್ರಗ್ಸ್‌ ಫ್ಯಾಕ್ಟರಿ ಪತ್ತೆ ಬೆಂಗಳೂರು: ಮಹಾರಾಷ್ಟ್ರದ ಕೊಂಕಣ ವಿಭಾಗದ ಪೊಲೀಸರು ಬೆಂಗಳೂರಲ್ಲಿ ವಿವಿಧೆಡೆ ದಾಳಿ ನಡೆಸಿ 55.88 ಕೋಟಿ ರೂ. ಮೌಲ್ಯದ ಡ್ರಗ್ಸ್​ ವಶಪಡಿಸಿಕೊಂಡಿದ್ದು, ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ. ಆರ್‌ಜೆ ಇವೆಂಟ್ ಹೆಸರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ನಡೆಸುತ್ತಿರುವುದು ಪತ್ತೆಯಾಗಿದ್ದು, ಬೆಂಗಳೂರಿಗರನ್ನು ಬೆಚ್ಚಿ ಬೀಳಿಸಿದೆ. ಮುಂಬೈನಲ್ಲಿ ಇತ್ತೀಚೆಗೆ 1.5 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿತ್ತು. ಈ ವೇಳೆ ಅರೆಸ್ಟ್​​ ಆಗಿದ್ದ ಅಬ್ದುಲ್ಲ ಖಾದರ್ ಶೇಕ್ ಎಂಬಾತ ವಿಚಾರಣೆ ವೇಳೆ

ಬೆಂಗಳೂರಿಲ್ಲಿ ಡ್ರಗ್ಸ್‌ ಫ್ಯಾಕ್ಟರಿ ಪತ್ತೆ : 55.88 ಕೋಟಿ ರೂ. ಮೌಲ್ಯದ ಮಾದಕವಸ್ತು ವಶ Read More »

ಬಜಪೆ : ನೈತಿಕ ಪೊಲೀಸ್‌ಗಿರಿ ಆರೋಪದಲ್ಲಿ ಇಬ್ಬರ ಬಂಧನ

ಗೋಮಾಂಸ ಸಾಗಿಸುತ್ತಿದ್ದ ಬೈಕ್‌ ಅಡ್ಡಗಟ್ಟಿ ಹಲ್ಲೆಗೈದ ಪ್ರಕರಣ ಮಂಗಳೂರು: ಬಜಪೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಸಂಭವಿಸಿದ ಘಟನೆಯೊಂದಕ್ಕೆ ಸಂಬಂಧಿಸಿ ನೈತಿಕ ಪೊಲೀಸ್‌ಗಿರಿ ನಡೆಸಿದ ಆರೋಪದಡಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ಎಡಪದವು ನಿವಾಸಿಗಳಾದ ಸುಮಿತ್ ಭಂಡಾರಿ (21) ಹಾಗೂ ರಜತ್ ನಾಯ್ಕ್ (30) ಎಂದು ಗುರುತಿಸಲಾಗಿದೆ. ಗೋಮಾಂಸ ಸಾಗಿಸುತ್ತಿದ್ದ ಅಬ್ದುಲ್ ಸತ್ತಾರ್ ಹಾಗೂ ಅವರ 11 ವರ್ಷದ ಪುತ್ರಿಯ ಮೇಲೆ ಹಲ್ಲೆ ನಡೆಸಿದ ಆರೋಪ ಅವರ ಮೇಲೆ ಇದೆ. ಅಬ್ದುಲ್ ಸತ್ತಾರ್ ಎಂಬವರು ತಮ್ಮ ಪುತ್ರಿಯೊಂದಿಗೆ

ಬಜಪೆ : ನೈತಿಕ ಪೊಲೀಸ್‌ಗಿರಿ ಆರೋಪದಲ್ಲಿ ಇಬ್ಬರ ಬಂಧನ Read More »

ಪುತ್ತೂರು: ಸರ ಕಳ್ಳಿಯರ ಬಂಧನ

ಪುತ್ತೂರು: ದೇಗುಲದಲ್ಲಿ ಮಹಿಳೆಯೊಬ್ಬರ ಚಿನ್ನದ ಸರವನ್ನು ಕಳ್ಳತನ ಮಾಡಿದ ಮೂವರು ಕಳ್ಳಿಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳನ್ನು ತಮಿಳುನಾಡು ಮೂಲದ ಮಾರಿ, ಕಾಳಿಯಮ್ಮ ಯಾನೆ ಭಗವತಿ, ಶೀತಲ್ ಯಾನೆ ಪ್ರಿಯಾ ಎಂದು ಗುರುತಿಸಲಾಗಿದೆ. ಕೆಮ್ಮಿಂಜೆಯ ಯಮುನಾ ಎಂಬವರ ‌ಸರವನ್ನು ಕೆಮ್ಮಿಂಜೆ ಗ್ರಾಮದ ದೇವಸ್ಥಾನದಲ್ಲಿ ಕಳ್ಳತನ ಮಾಡಲಾಗಿತ್ತು. ಸುಮಾರು 14 ಗ್ರಾಂ ತೂಕದ ಸರವನ್ನು ಅವರು ಊಟ ಮಾಡಿ ಕೈ ತೊಳೆಯುವ ಸಮಯದಲ್ಲಿ ಕದಿಯಲಾಗಿತ್ತು. ಈ ಸಂಬಂಧ ಅವರು ಪೊಲೀಸರಿಗೆ ದೂರು ನೀಡಿದ್ದರು. 60 ಸಾವಿರ ಮೌಲ್ಯದ

ಪುತ್ತೂರು: ಸರ ಕಳ್ಳಿಯರ ಬಂಧನ Read More »

ವೃತ್ತಿಗೆ ಸಂಬಂಧಿಸಿ ಜಗಳ: ಪತ್ನಿಯನ್ನು ಕೊಂದು ಪೊಲೀಸರಿಗೆ ಶರಣಾದ ಪತಿ

ಬೆಂಗಳೂರು: ಕೆಲಸದ ವಿಷಯಕ್ಕೆ ದಂಪತಿ ನಡುವೆ ನಡೆದ ಜಗಳ ಪತ್ನಿಯ ಹತ್ಯೆಯಲ್ಲಿ ಅಂತ್ಯವಾದ ಘಟನೆ ಸಂಪಿಗೆಹಳ್ಳಿಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಆಯೆಷಾ ಸಿದ್ದಿಕಿ ಎಂದು ಗುರುತಿಸಲಾಗಿದೆ. ಆರೋಪಿ ಪತಿ ಸೈಯದ್ ಜಬಿ ಪೊಲೀಸರಿಗೆ ಶರಣಾಗಿದ್ದಾನೆ. ಕಳೆದ ಮೂರು ತಿಂಗಳ ಹಿಂದೆಯಷ್ಟೇ ಇವರಿಬ್ಬರ ವಿವಾಹವಾಗಿತ್ತು. ಆಯೆಷಾಗೆ ಇದು ಮೂರನೇ ಮದುವೆಯಾಗಿದ್ದು, ಆಕೆಯ ವೃತ್ತಿಗೆ ಸಂಬಂಧಿಸಿದಂತೆ ಪತಿ ಅಸಮಾಧಾನ ಹೊಂದಿದ್ದ. ಆಯೆಷಾ ಮಸಾಜ್ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದು, ಇದು ಸೈಯದ್‌ಗೆ ಇಷ್ಟವಿರಲಿಲ್ಲ. ಕೆಲಸ ಬಿಡುವಂತೆ ಆಕೆಗೆ ಒತ್ತಡ ಹೇರುತ್ತಿದ್ದರೂ ಆಕೆ

ವೃತ್ತಿಗೆ ಸಂಬಂಧಿಸಿ ಜಗಳ: ಪತ್ನಿಯನ್ನು ಕೊಂದು ಪೊಲೀಸರಿಗೆ ಶರಣಾದ ಪತಿ Read More »

ನೇಮೋತ್ಸವದಲ್ಲಿ ಮಹಿಳೆಯ ಸರಕದ್ದ ಮಹಿಳೆಯರ ಬಂಧನ

ಗಂಟೆ ಹೊಡೆಯುವ ನೆಪದಲ್ಲಿ ವೃದ್ಧೆಯ ಸರ ಎಗರಿಸಿದ್ದ ಮಹಿಳೆಯರು ಉಡುಪಿ: ಕಾಪು ತಾಲೂಕಿನ ಹೆಜಮಾಡಿ ಗರಡಿಯಲ್ಲಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ನೇಮೋತ್ಸವ ವೇಳೆ ವೃದ್ಧೆಯ ಚಿನ್ನದ ಸರವನ್ನು ಕಳ್ಳತನ ಮಾಡಿದ ಮೂವರು ಮಹಿಳೆಯರನ್ನು ಪಡುಬಿದ್ರೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ತಮಿಳುನಾಡು ಕೃಷ್ಣಗಿರಿ ನಿವಾಸಿಗಳಾದ ಶೀತಲ್, ಕಾಳಿಯಮ್ಮ ಮತ್ತು ಮಾರಿ ಎಂದು ಗುರುತಿಸಲಾಗಿದೆ. ಹೆಜಮಾಡಿ ಗರಡಿಯಲ್ಲಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ನೇಮೋತ್ಸವ ನಡೆಯುತ್ತಿದ್ದ ವೇಳೆ ಮೂವರು ಮಹಿಳೆಯರು ಹೆಜಮಾಡಿ ನಿವಾಸಿ ಕಮಲ ಎಂಬ ವೃದ್ಧ ಕುತ್ತಿಗೆಯಲ್ಲಿದ್ದ

ನೇಮೋತ್ಸವದಲ್ಲಿ ಮಹಿಳೆಯ ಸರಕದ್ದ ಮಹಿಳೆಯರ ಬಂಧನ Read More »

ಧರ್ಮಸ್ಥಳ ಪ್ರಕರಣ : ವರದಿ ಮೇಲಿನ ತೀರ್ಪು ಮತ್ತೆ ಮುಂದೂಡಿಕೆ

ವರದಿಯ ಕೆಲವು ಭಾಗಗಳನ್ನು ಜಯಂತ್‌ಗೆ ನೀಡಿದ ನ್ಯಾಯಾಲಯ ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣ ಬಗ್ಗೆ ಎಸ್ಐಟಿ ಅಧಿಕಾರಿಗಳು ಬೆಳ್ತಂಗಡಿ ಕೋರ್ಟ್‌ಗೆ ಸಲ್ಲಿಸಿದ್ದ ವರದಿಯ ಬಗ್ಗೆ ಡಿ.26ಕ್ಕೆ ನಿಗದಿಪಡಿಸಲಾಗಿದ್ದ ಆದೇಶವನ್ನು ಡಿ.29ಕ್ಕೆ ಬೆಳ್ತಂಗಡಿ ನ್ಯಾಯಾಲಯ ಮುಂದೂಡಿದೆ ಬೆಳ್ತಂಗಡಿ ಎಸ್ಐಟಿ ಅಧಿಕಾರಿಗಳು ಬೆಳ್ತಂಗಡಿ ನ್ಯಾಯಾಲಯಕ್ಕೆ ನ.20ರಂದು ಚಿನ್ನಯ್ಯ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ, ವಿಠಲ್ ಗೌಡ, ಸುಜಾತ ಭಟ್ ವಿರುದ್ಧ ಸುಳ್ಳು ಸಾಕ್ಷಿ ವರದಿಯನ್ನು ಸೆಕ್ಷನ್‌ 215ರ ಅಡಿಯಲ್ಲಿ ಸಲ್ಲಿಸಿದ್ದರು. ಈ ವರದಿಯ ಬಗ್ಗೆ ಬೆಳ್ತಂಗಡಿ

ಧರ್ಮಸ್ಥಳ ಪ್ರಕರಣ : ವರದಿ ಮೇಲಿನ ತೀರ್ಪು ಮತ್ತೆ ಮುಂದೂಡಿಕೆ Read More »

ಕಡಬ : ಬಾರ್‌ ಮಾಲೀಕನಿಗೆ 6.5 ಲ.ರೂ. ವಂಚಿಸಿ ಮ್ಯಾನೇಜರ್‌ ಪಲಾಯನ

ಕಡಬ : ಬಾರ್ ಸಿಬ್ಬಂದಿಯೋರ್ವ ವ್ಯವಹಾರದಲ್ಲಿ ವಂಚಿಸಿ ಪರಾರಿಯಾಗಿರುವ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಳಿನೆಲೆ ಗ್ರಾಮದ ವಿಶಾಲ್ ಸ್ಟೀಫನ್ (25) ಎಂಬವರು ಠಾಣೆಗೆ ದೂರು ನೀಡಿದ್ದಾರೆ. ಸ್ಟೀಫನ್ ಅವರ ತಾಯಿ ನೆಟ್ಟಣ ಎಂಬಲ್ಲಿ ಬಾರ್ ಹೊಂದಿದ್ದು, ಬಾರ್‌ನಲ್ಲಿ ಕಡಬದ ಹುಂಚಪ್ಪಡಿ ನಿವಾಸಿ ಹರ್ಷಿತ್ ಬಿ.ಕೆ. ಎಂಬಾತ ಸುಮಾರು 7 ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಆತನೇ ನಿತ್ಯದ ಹಣಕಾಸಿನ ವ್ಯವಹಾರ, ಸ್ಟಾಕ್ ನಿರ್ವಹಣೆ ಹಾಗೂ ಮೇಲ್ವಿಚಾರಣೆ ನಿರ್ವಹಿಸುತ್ತಿದ್ದ. ಡಿ.21ರಂದು ಸ್ಟೀಫನ್ ಬಾರಿನ ವಹಿವಾಟು ಬಗ್ಗೆ

ಕಡಬ : ಬಾರ್‌ ಮಾಲೀಕನಿಗೆ 6.5 ಲ.ರೂ. ವಂಚಿಸಿ ಮ್ಯಾನೇಜರ್‌ ಪಲಾಯನ Read More »

ನವವಿವಾಹಿತೆ ಆತ್ಮಹತ್ಯೆ ಪ್ರಕರಣ : ಪತಿಯೂ ಆತ್ಮಹತ್ಯೆ, ಅತ್ತೆ ಆತ್ಮಹತ್ಯೆ ಯತ್ನ

ಹನಿಮೂನ್‌ನಿಂದ ಅರ್ಧಕ್ಕೆ ವಾಪಸು ಬಂದು ಆತ್ಮಹತ್ಯೆ ಮಾಡಿಕೊಂಡಿರುವ ನವವಿವಾಹಿತೆ ಬೆಂಗಳೂರು: ನವವಿವಾಹಿತೆ ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ಗಾನವಿ ಪತಿ ಸೂರಜ್ ಆತ್ಮಹತ್ಯೆ ಮಾಡಿಕೊಂಡರೆ ಅತ್ತೆ ಜಯಂತಿ ಆತ್ಮಹತ್ಯೆಗೆ ಯತ್ನಿಸಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಗಾನವಿ ಆತ್ಮಹತ್ಯೆಯ ಬಳಿಕ ಸೂರಜ್‌, ಜಯಂತಿ, ಸೂರಜ್‌ ಸಹೋದರ ಸಂಜಯ್‌ ಮಹಾರಾಷ್ಟ್ರದ ನಾಗ್ಪುರಕ್ಕೆ ತೆರಳಿದ್ದರು. ಖಾಸಗಿ ಹೋಟೆಲಿನಲ್ಲಿ ಸೂರಜ್‌ ಆತ್ಮಹತ್ಯೆ ಮಾಡಿಕೊಂಡರೆ, ಆತ್ಮಹತ್ಯೆಗೆ ಯತ್ನಿಸಿದ ಜಯಂತಿ ಈಗ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಶುಕ್ರವಾರ ಸಂಜೆ ಸೂರಜ್ ಆತ್ಮಹತ್ಯೆ

ನವವಿವಾಹಿತೆ ಆತ್ಮಹತ್ಯೆ ಪ್ರಕರಣ : ಪತಿಯೂ ಆತ್ಮಹತ್ಯೆ, ಅತ್ತೆ ಆತ್ಮಹತ್ಯೆ ಯತ್ನ Read More »

ಮೈಸೂರು ಸ್ಫೋಟ : ಮೃತರ ಸಂಖ್ಯೆ ಮೂರಕ್ಕೇರಿಕೆ

ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಸಂಭವಿಸಿದ ಸ್ಫೋಟ ಮೈಸೂರು: ನಗರದ ಅಂಬಾವಿಲಾಸ ಅರಮನೆ ಬಳಿ ಸಂಭವಿಸಿದ ಹೀಲಿಯಂ ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡಿದ್ದ ಮತ್ತೋರ್ವ ಮಹಿಳೆ ಲಕ್ಷ್ಮಿ ಎಂಬವರು ಕೂಡ ಸಾವನ್ನಪ್ಪಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ಲಕ್ಷ್ಮೀ ಅವರ ಮಗಳು ಡಿಂಪಲ್​​ ದುರಂತದಿಂದ ಬಚಾವ್‌ ಆಗಿದ್ದಾರೆ. ಬಲೂನ್‌ ಮಾರಾಟ ಮಾಡುತ್ತಿದ್ದ ವೇಳೆ ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಸಂಭವಿಸಿದ ಸ್ಫೋಟದಿಂದ ಗಾಯಗೊಂಡಿದ್ದ ಲಕ್ಷ್ಮಿ ಅವರನ್ನ ಕೆ.ಆರ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಂಗಳೂರು ಮೂಲದ ಲಕ್ಷ್ಮಿ ಕುಟುಂಬದ

ಮೈಸೂರು ಸ್ಫೋಟ : ಮೃತರ ಸಂಖ್ಯೆ ಮೂರಕ್ಕೇರಿಕೆ Read More »

error: Content is protected !!
Scroll to Top