ಅಪರಾಧ

ರಾಮಕುಂಜದಲ್ಲಿ ಗೋಮಾಂಸ ಪತ್ತೆ : ಓರ್ವನ ಬಂಧನ

ಕಡಬ : ಗೋ,ಮಾಂಸ ಪತ್ತೆಯಾದ ಘಟನೆ ಕಡಬ ತಾಲೂಕಿನ ರಾಮಕುಂಜ ಆತೂರು ಸಮೀಪದ ಅಮೈ ಎಂಬಲ್ಲಿ ನಡೆದಿದೆ. ಆಟೋ ರಿಕ್ಷಾದಲ್ಲಿ ಸುಮಾರು 50 ಕೆಜಿ ಗೋ ಮಾಂಸ ಸಾಗುಸುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ಕಡಬ ಪೋಲಿಸರು ಬೆನ್ನಟ್ಟಿ ಹಿಡಿಯುವಲ್ಲಿ ಸಫಲರಾಗಿದ್ದಾರೆ. ಈ ಸಂಬಂಧ ಅಬ್ದುಲ್‌ ಎಂಬಾತನನ್ನು ಬಂಧಿಸಿ ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಾಗಿದೆ. ಕಡಬ ಎಸ್ ಐ ಅಭಿನಂದನ್ ಎಂ. ಎಸ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ ಎಂದು ತಿಳಿದು ಬಂದಿದೆ.

ರಾಮಕುಂಜದಲ್ಲಿ ಗೋಮಾಂಸ ಪತ್ತೆ : ಓರ್ವನ ಬಂಧನ Read More »

ಪತ್ನಿಗೆ ಚೂರಿಯಿಂದ ಇರಿದ ಪತಿ : ಪ್ರಕರಣ ದಾಖಲು

ಸುಳ್ಯ: ಪತ್ನಿಗೆ ಪತಿಯೇ ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ ಜಾಲ್ಸೂರಿನಿಂದ ವರದಿಯಾಗಿದೆ. ಅಶ್ವಿನಿ ಕೆ ವಿ (25) ಪತಿಯಿಂದ ಚೂರಿ ಇರಿತಕ್ಕೊಳಗಾದವರು ಎಂದು ಗುರುತಿಸಲಾಗಿದೆ. ಆರೋಪಿ ಪತಿ ನವೀನ್ ಕುಮಾರ್ ಮತ್ತು ಅಶ್ವಿನಿ ಅವರು 6 ವರ್ಷಗಳ ಹಿಂದೆ ವಿವಾಹವಾಗಿದ್ದು, ಆ ಬಳಿಕ ಆತ ವಿನಃ ಕಾರಣ ಕಿರುಕುಳ ನೀಡುತ್ತಾ ಬಂದಿದ್ದು, ಪತ್ನಿ ಅಶ್ವಿನಿ ಕಳೆದ 4 ವರ್ಷಗಳಿಂದ ತನ್ನ ತವರು ಮನೆಯಾದ ಸುಳ್ಯ ತಾಲೂಕು ಜಾಲ್ಸೂರು ಗ್ರಾಮದ ವಿನೋಭನಗರ ಎಂಬಲ್ಲಿ ವಾಸವಾಗಿದ್ದಾರೆ. ಅಲ್ಲಿಗೂ ಬರುತ್ತಿದ್ದ ಪತಿ

ಪತ್ನಿಗೆ ಚೂರಿಯಿಂದ ಇರಿದ ಪತಿ : ಪ್ರಕರಣ ದಾಖಲು Read More »

ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ಉಪ್ಪಿನಂಗಡಿ: ಗಂಡನೊಂದಿಗೆ ಜಗಳವಾಡಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ  ಮಹಿಳೆಯೋರ್ವರನ್ನು ಯುವಕನೋರ್ವ ರಕ್ಷಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಬನ್ನಿಂಗಳ ಸಮೀಪದ ನಿವಾಸಿಯೋರ್ವರು ಗುರುವಾರ ರಾತ್ರಿ ಸುಮಾರು 9.30 ರಿಂದ 10ರ ನಡುವೆ ಉಪ್ಪಿನಂಗಡಿಯ ನೇತ್ರಾವತಿ ನದಿ ಸೇತುವೆಯ ಮೇಲೆ ಸಂಶಯ ಬರುವಂತೆ ಆ ಕಡೆ, ಈ ಕಡೆ ನಡೆದಾಡುವುದು ಕಾಣಿಸಿಕೊಂಡಿದ್ದು, ಇದನ್ನು ಕಂಡ ರಿಕ್ಷಾ ಚಾಲಕರೋರ್ವರು ಅಲ್ಲಿಯೇ ಸಮೀಪದ ನಿವಾಸಿ ಸಾಮಾಜಿಕ ಕಾರ್ಯಕರ್ತ ಫಯಾಝ್ ಯು.ಟಿ. ಅವರ ಗಮನಕ್ಕೆ ತಂದಿದ್ದರು. ತಕ್ಷಣವೇ ಕಾರ್ಯಪ್ರವೃತರಾದ ಫಯಾಜ್

ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ Read More »

ಹೊಳೆಗೆ ಬಿದ್ದು ವ್ಯಕ್ತಿ ಮೃತ್ಯು

ಸುಳ್ಯ: ಅರಂತೋಡು ಗ್ರಾಮದ ಬಾಜಿನಡ್ಕದ ವ್ಯಕ್ತಿಯೋರ್ವರು ಕಾಲು ಜಾರಿ ಹೊಳೆಗೆ ಬಿದ್ದು ಮೃತಪಟ್ಟ ಘಟನೆ ಇಂದು ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಬಾಜಿನಡ್ಕದ ಚನಿಯ(50) ಎಂದು ಗುರುತಿಸಲಾಗಿದೆ. ಚನಿಯ ಅವರು ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಮನೆ ಸಮೀಪದ ಹೊಳೆಗೆ ಹೋಗಿದ್ದಾರೆ. ಈ ವೇಳೆ ಹೊಳೆಗೆ ಕಾಲು ಜಾರಿ ಬಿದ್ದಿದ್ದಾರೆ. ಚನಿಯ ಅವರು ಹೊಳೆಗೆ ಬಿದ್ದಿದ್ದನ್ನು ಕಂಡ ಹತ್ತಿರದ ಮನೆಯವರು ಬೊಬ್ಬೆ ಹಾಕಿದಾಗ ಹತ್ತಿರ ಇರುವ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಮನ್ಸ ಮುಗೇರರವರು ಓಡಿಬಂದು ನೀರಿಗಿಳಿದು

ಹೊಳೆಗೆ ಬಿದ್ದು ವ್ಯಕ್ತಿ ಮೃತ್ಯು Read More »

ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಬೆಂಕಿ

ಉಡುಪಿ: ಮಣಿಪಾಲದ ಬಬ್ಬುಸ್ವಾಮಿ ದೈವಸ್ಥಾನದ ರಸ್ತೆ ಬದಿ ನಿಲ್ಲಿಸಿದ್ದ ಮಾರುತಿ ರಿಡ್ಜ್ ಕಾರು ಬೆಂಕಿಗಾಹುತಿಯಾದ ಘಟನೆ ತಡರಾತ್ರಿ ನಡೆದಿದೆ. ಕಾರು ಚಾಲಕ ಸೇರಿ ಇನ್ನೋರ್ವ ವ್ಯಕ್ತಿ ಕಾರನ್ನು ರಸ್ತೆ ಬದಿ ನಿಲ್ಲಿಸಿ ಅದರೊಳಗೆ ಮಲಗಿದ್ದರು. ಈ ವೇಳೆ ಕಾರು ಚಾಲಕನಿಗೆ ಕಾರಿನ ಬಾನೆಟ್ ಬಳಿ ಹೊಗೆ ಕಾಣಿಸಿಕೊಂಡಿದ್ದು, ಕಾರಿನಿಂದ ಹೊರಬಂದಿದ್ದಾರೆ. ಬೆಂಕಿಯ ಕೆನ್ನಾಲೆಗೆ ಕಾರು ಸಂಪೂರ್ಣ ಸುಟ್ಟುಹೋಗಿದ್ದು, ಶಾರ್ಟ್ ಸರ್ಕ್ಯೂಟ್ ನಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಕಾರು ಮಾಲೀಕನ ಮಾಹಿತಿ ಮೇರೆಗೆ ಅಗ್ನಿ ಶಾಮಕ ದಳದವರು

ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಬೆಂಕಿ Read More »

ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ ಬಂಧನ

ಬೆಂಗಳೂರು : ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ ಅಟ್ಟಿಕಾ ಬಾಬು ಅಲಿಯಾಸ್ ಬೊಮ್ಮನಹಳ್ಳಿ ಬಾಬು ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಕದ್ದ ಚಿನ್ನ ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆಯ ತುರುವೇಕೆರೆ ಪೊಲೀಸರು ಬುಧವಾರ ಬೊಮ್ಮನಹಳ್ಳಿ ಬಾಬು ಅವರನ್ನು ಪ್ರೇಜರ್ ಟೌನ್ ನಿವಾಸದ ಬಳಿ ಬಂಧಿಸಿದ್ದಾರೆ. ಕಳ್ಳತನ ಮಾಡಿದ ಚಿನ್ನದ ಆಭರಣಗಳನ್ನು ಖರೀದಿ ಮಾಡಿದ ಕುರಿತು ತುರುವೇಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಹಾಗಾಗಿ, ತುರುವೇಕೆರೆ ಸಿಪಿಐ ಲೋಹಿತ್ ಬಿ.ಎನ್ ಹಾಗೂ ತಂಡದಿಂದ ಬಂಧಿಸಲಾಗಿದೆ.

ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ ಬಂಧನ Read More »

ವಿದ್ಯುತ್ ತಂತಿ ತಗುಲಿ ಇಬ್ಬರು ಆಟೋ ಚಾಲಕರು ಮೃತ್ಯು

ಮಂಗಳೂರು : ಮಳೆಗೆ ವಿದ್ಯುತ್ ತಂತಿ ಕಡಿದು ಬಿದ್ದ ಹಿನ್ನಲೆ ಇಬ್ಬರು ಆಟೋ ಚಾಲಕರು ಸಾವನ್ನಪ್ಪಿದ ಘಟನೆ ಮಂಗಳೂರಿನ ರೊಸಾರಿಯೂ ಶಾಲಾ ಹಿಂಭಾಗದಲ್ಲಿ ನಡೆದಿದೆ. ಉಪ್ಪಿನಂಗಡಿ ನಿವಾಸಿ ದೇವರಾಜ್ ಗೌಡ, ಹಾಸನ ಮೂಲದ ರಾಜು ಪಾಲ್ಯ ವಿದ್ಯುತ್ ಶಾಕ್‍ ನಿಂದ ಮೃತಪಟ್ಟವರು. ಮಳೆಗೆ ತುಕ್ಕು ಹಿಡಿದ ವಿದ್ಯುತ್ ತಂತಿ ಹಠಾತ್ತನೆ ತುಂಡಾಗಿ ಆಟೋ ಚಾಲಕನ ಮೇಲೆ ಬಿದ್ದಿದ್ದು, ಆತನನ್ನು ರಕ್ಷಿಸಲು ಹೋದ ಇನ್ನೊಬ್ಬ ಆಟೋ ಚಾಲಕ ಕೂಡ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ

ವಿದ್ಯುತ್ ತಂತಿ ತಗುಲಿ ಇಬ್ಬರು ಆಟೋ ಚಾಲಕರು ಮೃತ್ಯು Read More »

ಪವರ್ ಟಿ ವಿ ಪ್ರಸಾರ ಸ್ಥಗಿತ: ಹೈಕೋರ್ಟ್ ಆದೇಶ

ಬೆಂಗಳೂರು: ಕನ್ನಡ ಸುದ್ದಿ ವಾಹಿನಿ ಪವರ್ ಟಿವಿ ತಕ್ಷಣಕ್ಕೆ ತನ್ನೆಲ್ಲಾ ಕಾರ್ಯಕ್ರಮಗಳ ಪ್ರಸಾರ ನಿಲ್ಲಿಸಬೇಕೆಂದು ಕರ್ನಾಟಕ ಹೈಕೋರ್ಟ್ ಮಂಗಳವಾರ ಆದೇಶ ನೀಡಿದೆ. ಕೇಂದ್ರ ವಲಯದ ಐಜಿ ಬಿಆರ್ ರವಿಕಾಂತೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಎಚ್ಎಂ ರಮೇಶ್ ಗೌಡ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಚಾನೆಲ್ ಗೆ ಪರವಾನಗಿ ನವೀಕರಿಸದ ಹಿನ್ನೆಲೆಯಲ್ಲಿ ಕನ್ನಡ ಸುದ್ದಿ ವಾಹಿನಿ ಪವರ್ ಟಿವಿ ಕೂಡಲೇ ತನ್ನೆಲ್ಲಾ ಕಾರ್ಯಕ್ರಮಗಳ ಪ್ರಸಾರ ಸ್ಥಗಿತಗೊಳಿಸಬೇಕೆಂದು ಕರ್ನಾಟಕ ಹೈಕೋರ್ಟ್, ನಿನ್ನೆ

ಪವರ್ ಟಿ ವಿ ಪ್ರಸಾರ ಸ್ಥಗಿತ: ಹೈಕೋರ್ಟ್ ಆದೇಶ Read More »

ಅಮರನಾಥ ಯಾತ್ರಿಕರಿಗೆ ಭಯೋತ್ಪಾದಕ ದಾಳಿ ಬೆದರಿಕೆ | ಜಮ್ಮು ಕಾಶ್ಮೀರದಲ್ಲಿ ಬಿಗಿ ಭದ್ರತೆ

ಜಮ್ಮು ಕಾಶ್ಮೀರ: ಜೂ. 29ರಿಂದ ಪ್ರಸಿದ್ಧ ಅಮರನಾಥ ಯಾತ್ರೆ ಪ್ರಾರಂಭವಾಗುತ್ತಿದೆ. ಈ ಹಿನ್ನೆಲೆ ಜಮ್ಮು-ಕಾಶ್ಮೀರದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಪೊಲೀಸರು, ಅಮರನಾಥ ಬೇಸ್ ಕ್ಯಾಂಪ್ ಗೂ 3 ಹಂತದ ಭದ್ರತೆ ಒದಗಿಸಲಾಗಿದ್ದು, ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ 260 ಡಿಗ್ರಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ. ಯಾತ್ರೆ ಸಾಗುವ ಹೆದ್ದಾರಿಯ ಸುರಕ್ಷತೆ ಖಾತರಿಗಾಗಿ ವಾಹನಗಳನ್ನು ಪರಿಶೀಲಿಸಲು 60 ಕ್ಯಾಮರಾಗಳು, ಬಾಡಿ ಸ್ಕ್ಯಾನರ್ ಗಳನ್ನು ಅಳವಡಿಸಲಾಗಿದೆ. ಜೊತೆಗೆ ರಂಭಾನ್ ಜಿಲ್ಲೆಯ ಉಧಂಪುರದಿಂದ ಬನಿಹಾಲ್

ಅಮರನಾಥ ಯಾತ್ರಿಕರಿಗೆ ಭಯೋತ್ಪಾದಕ ದಾಳಿ ಬೆದರಿಕೆ | ಜಮ್ಮು ಕಾಶ್ಮೀರದಲ್ಲಿ ಬಿಗಿ ಭದ್ರತೆ Read More »

ಪಟ್ಲ ಬೆಟ್ಟದಲ್ಲಿ ಪ್ರವಾಸಿಗರ ಮೇಲೆ ಹಲ್ಲೆ | ನಾಲ್ವರು ಜೀಪು ಚಾಲಕರ ಬಂಧನ

ದಕ್ಷಿಣ ಕನ್ನಡ, ಹಾಸನ ಮತ್ತು ಕೊಡಗು ಜಿಲ್ಲೆಯ ಮಧ್ಯದಲ್ಲಿರುವ ಪ್ರಸಿದ್ದ ಪ್ರವಾಸಿ ತಾಣ ಬಿಸಿಲೆ ಘಾಟಿಯ ಪಟ್ಲ ಬೆಟ್ಟದಲ್ಲಿ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ ಸ್ಥಳೀಯ ಜೀಪು ಚಾಲಕರ ಬಂಧನವಾಗಿದೆ. ಇತ್ತೀಚೆಗೆ ಪಟ್ಲಬೆಟ್ಟಕ್ಕೆ ತೆರಳಿದ ಮಂಗಳೂರಿನ ಬೈಕರ್ಸ್ ಮೇಲೆ ಸ್ಥಳೀಯ ಜೀಪು ಚಾಲಕರು ಹಲ್ಲೆ ಮಾಡಿದ್ದರು. ಇದೀಗ ನಾಲ್ವರು ಜೀಪು ಚಾಲಕರ ಬಂಧನವಾಗಿದೆ. ಹಾಸನ ಜಿಲ್ಲಾ ಕೇಂದ್ರದಿಂದ ಪಟ್ಲ ಬೆಟ್ಟ 80 ಕಿ.ಮೀ ದೂರದಲ್ಲಿದೆ. ಸುಬ್ರಹ್ಮಣ್ಯದಿಂದ 30ಕಿಮೀ ದೂರದಲ್ಲಿರುವ ಈ ಬೆಟ್ಟ ವೀಕ್ಷಣೆಗೆ ಪ್ರತಿದಿನ ಸಾವಿರಾರು ಪ್ರವಾಸಿಗರು

ಪಟ್ಲ ಬೆಟ್ಟದಲ್ಲಿ ಪ್ರವಾಸಿಗರ ಮೇಲೆ ಹಲ್ಲೆ | ನಾಲ್ವರು ಜೀಪು ಚಾಲಕರ ಬಂಧನ Read More »

error: Content is protected !!
Scroll to Top