ನಾಪತ್ತೆಯಾದ ವ್ಯಕ್ತಿಯ ಶವ ಪತ್ತೆ
ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಪುಳುವಾರು ನಿವಾಸಿಯೊಬ್ಬರು ಕಳೆದ ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದು, ಇದೀಗ ಅವರ ಮೃತದೇಹ ಚಿಕ್ಕಮುಡ್ನೂರು ಗ್ರಾಮದ ಗುತ್ತಿಕಲ್ಸ್ ಎಂಬಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಚಿಕ್ಕಮುಡ್ನೂರು ಗ್ರಾಮದ ಪುಳುವಾರು ನಿವಾಸಿ ಶಿವಪ್ಪ ಗೌಡ (45) ಎಂಬವರ ಮೃತದೇಹ ಪತ್ತೆಯಾಗಿದೆ. ಶಿವಪ್ಪ ಗೌಡ ಮಾ.`17 ರಂದು ಕೆಲಸಕ್ಕೆ ಹೋಗಿ ಬರುತ್ತೇನೆ ಎಂದು ಮನೆಯಿಂದ ಹೊರ ಹೋಗಿದ್ದರು. ಬಳಿಕ ವಾಪಾಸು ಬಾರದೆ ನಾಪತ್ತೆಯಾಗಿದ್ದರು. ಇದೀಗ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ನಾಪತ್ತೆಯಾದ ವ್ಯಕ್ತಿಯ ಶವ ಪತ್ತೆ Read More »










