ಮಹಿಳೆ ನಾಪತ್ತೆ : ಕಡಬ ಠಾಣೆಯಲ್ಲಿ ಪ್ರಕರಣ ದಾಖಲು
ಕಡಬ: ಕಡಬ ಠಾಣಾ ವ್ಯಾಪ್ತಿಯ ಐತ್ತೂರು ಗ್ರಾಮದ ಮಹಿಳೆಯೊಬ್ಬರು ನಾಪತ್ತೆಯಾದ ಕುರಿತು ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐತ್ತೂರು ಗ್ರಾಮದ ಓಟೆಕಜೆ ಸಿ.ಆರ್.ಸಿ. ಕಾಲೋನಿ ನಿವಾಸಿ ಮಂಜುಳಾ ನಾಪತ್ತೆಯಾದ ಮಹಿಳೆ. ಬಿಳಿನೆಲೆಯಲ್ಲಿರುವ ಅಂಗಡಿಯೊಂದರಲ್ಲಿ ವಾಹನ ಇನ್ಸೂರೆನ್ಸ್ ಏಜೆನ್ಸಿಯಾಗಿ ಕೆಲ ಮಾಡಿಕೊಂಡಿದ್ದರು. ಕೆಲಸಕ್ಕೆಂದು ಮನೆಯಿಂದ ಹೊರ ಹೋದೆ ಮಹಿಳೆ ಬಳಿಕ ನಾಪತ್ತೆಯಾಗಿದ್ದರು. ಆಕೆಯ ಮೊಬೈಲ್ ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ಈ ಕುರಿತು ಪತಿ ಶಿವಕುಮಾರ್ ಕಡಬ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಮಹಿಳೆ ನಾಪತ್ತೆ : ಕಡಬ ಠಾಣೆಯಲ್ಲಿ ಪ್ರಕರಣ ದಾಖಲು Read More »









