ಸರ್ಕಾರದ ವಿರುದ್ಧ, ವ್ಯವಸ್ಥೆಯ ವಿರುದ್ಧ ಜನರು ತಿರುಗಿಬೀಳುವಂತಾಗಿದೆ: ಸಂಜೀವ ಮಠಂದೂರು | ಹೋರಾಟದ ಕಾವು ತಗ್ಗಿಸಲು ಸಂಘಟನೆಗಳಿಗೆ ಹಣ ಪೂರೈಕೆ: ಪ್ರವೀಣ್ ಕುಂಟ್ಯಾನ ಆರೋಪ | ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆಗೆ ಮಂಗಳೂರಿನಲ್ಲಿ ಜಿಲ್ಲಾ ಹೋರಾಟ ಸಮಿತಿಯಿಂದ ಪ್ರತಿಭಟನೆ
ಮಂಗಳೂರು: ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆಗೆ ಒತ್ತಾಯಿಸಿ ಜಿಲ್ಲಾ ಹೋರಾಟ ಸಮಿತಿ ವತಿಯಿಂದ ಮಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಭಟನೆ ಬುಧವಾರ ಎರಡನೇ ದಿನಕ್ಕೆ ಕಾಲಿಟ್ಟಿತು. ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಸರ್ಕಾರದ ವಿರುದ್ಧ, ವ್ಯವಸ್ಥೆಯ ವಿರುದ್ಧ ಜನರು ತಿರುಗಿ ಬೀಳುವಂತಾಗಿದೆ. ಇಂತಹ ಒಂದು ಹೋರಾಟವನ್ನು ಮಹೇಶ್ ಶೆಟ್ಟಿ ತಿಮರೋಡಿ ಅವರು ಸಂಘಟಿಸಿದ್ದಾರೆ. ನ್ಯಾಯಪರವಾದ ಇಂತಹ ಹೋರಾಟವನ್ನು ವಿರೋಧಿಸುವುದು ಎಷ್ಟು ಸರಿ? ಅಪರಾಧಿ ಯಾರೆಂದು ತಿಳಿಯಬೇಕು ತಾನೇ? ಪ್ರಜಾಪ್ರಭುತ್ವದಲ್ಲಿ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಕೊಡುವ ಕೆಲಸವನ್ನು ಸರ್ಕಾರ […]








