ಅಪರಾಧ

ಮಾದಕ ವಸ್ತು ಸಹಿತ ಆರೋಪಿಯೋರ್ವ ಪೊಲೀಸ್‍ ವಶಕ್ಕೆ !

ಉಪ್ಪಿನಂಗಡಿ: ಮಾದಕ ವಸ್ತು ಸಹಿತ ಆರೋಪಿಯೋರ್ವನನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಳ್ತಂಗಡಿ ಇಳಂತಿಲ ನಿವಾಸಿ ಯಾಸಿರ್ (29) ಬಂಧಿ ಆರೋಪಿಯಾಗಿದ್ದು, ಉಪ್ಪಿನಂಗಡಿ ಗ್ರಾಮದ ಕೂಟೇಲು ದರ್ಗಾ ಶರೀಫ್‍ ಬಳಿ ಈತನನ್ನು ಪಡೆದಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣಾ ಪೊಲೀಸ್‌ ಉಪ ನಿರೀಕ್ಷಕ ರಾಜೇಶ್ ಕೆ.ವಿ ಮತ್ತು ಸಿಬ್ಬಂದಿಗಳು ವಾಹನ ತಪಾಸಣೆ ಸಂದರ್ಭ ಕಾರನ್ನು ನಿಲ್ಲಿಸಲು ಸೂಚಿಸಿದಾಗ ಚಾಲಕ ವಾಹನವನ್ನು ನಿಲ್ಲಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ಆತನನ್ನು ತಡೆದು ವಿಚಾರಣೆ  ಕಾರನ್ನು ಪರಿಶೀಲಿಸಿದಾಗ ಅದರಲ್ಲಿ 13,000 ರೂ. ಮೌಲ್ಯದ 6.4 […]

ಮಾದಕ ವಸ್ತು ಸಹಿತ ಆರೋಪಿಯೋರ್ವ ಪೊಲೀಸ್‍ ವಶಕ್ಕೆ ! Read More »

ಸಮಾಜರತ್ನ ಕಾಪು ಲೀಲಾಧರ ಶೆಟ್ಟಿ ಸಾಕುಮಗಳ ಅಪಹರಣ | ನಾಲ್ವರು ಆರೋಪಿಗಳ ಬಂಧನ

ಉಡುಪಿ: ಸಮಾಜರತ್ನ ಕಾಪು ಲೀಲಾಧರ ಶೆಟ್ಟಿ ಅವರ ಸಾಕು ಮಗಳು ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಪು ಪೊಲೀಸರು ಆಕೆಯ ಸ್ನೇಹಿತ ಸೇರಿದಂತೆ ನಾಲ್ವರನ್ನು ಕಾಸರಗೋಡು ಜಿಲ್ಲೆಯ ಕುಂಬ್ಳೆ ಬಳಿ ಬಂಧಿಸಿದ್ದಾರೆ. ಸ್ನೇಹಿತ ಶಿರ್ವ ನಿವಾಸಿ ಗೀರಿಶ್ (20), ಮತ್ತು ನಾಪತ್ತೆಯಾಗಲು ಸಹಕರಿಸಿದ ಶಿರ್ವ ನಿವಾಸಿ ರೂಪೇಶ್ (22), ಜಯಂತ್ (23) ಹಾಗೂ ಮಜೂರು ನಿವಾಸಿ ಮೊಹ್ಮದ್ ಅಝೀಜ್  ಬಂಧಿತ ಆರೋಪಿಗಳು ಲೀಲಾಧರ ಶೆಟ್ಟಿಯವರು 16 ವರ್ಷಗಳ ಹಿಂದೆ ಹೆಣ್ಣು ಮಗುವನ್ನು ದತ್ತು ಪಡೆದಿದದ್ದು ಆಕೆ ಮನೆ ಬಿಟ್ಟು

ಸಮಾಜರತ್ನ ಕಾಪು ಲೀಲಾಧರ ಶೆಟ್ಟಿ ಸಾಕುಮಗಳ ಅಪಹರಣ | ನಾಲ್ವರು ಆರೋಪಿಗಳ ಬಂಧನ Read More »

ಖೋಟಾ ನೋಟು ಚಲಾವಣೆಗೆ ಯತ್ನ | ಆರೋಪಿ ಬಂಧನ

ಮಂಗಳೂರು : ಖೋಟಾ ನೋಟು ಚಲಾವಣೆ ಮಾಡಲು ಯತ್ನಿಸುತ್ತಿದ್ದ ಕೇರಳ ಮೂಲದ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಕಂಕನಾಡಿ ಬಳಿ ಬಂಧಿಸಿದ್ದಾರೆ. ಮಂಜೇಶ್ವರದ ಆಬುಪಡ್ಡು ನಿವಾಸಿ ಪ್ರಶ್ಚಿತ್ (25) ಬಂಧಿತ ಆರೋಪಿ. ಆರೋಪಿ 500 ರೂ., 200 ರೂ., 100 ರೂ. ಮುಖಬೆಲೆಯ ಖೋಟಾ ನೋಟುಗಳನ್ನು ಚಲಾವಣೆ ಮಾಡಿದ್ದು, ಈವರೆಗೆ ಸುಮಾರು 8 ರಿಂದ 9 ಸಾವಿರ ರೂ. ಖೋಟಾ ನೋಟುಗಳನ್ನು ಚಲಾವಣೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿಯಿಂದ 500 ರೂ. ಮುಖಬೆಲೆಯ 3 ನೋಟುಗಳು, 200

ಖೋಟಾ ನೋಟು ಚಲಾವಣೆಗೆ ಯತ್ನ | ಆರೋಪಿ ಬಂಧನ Read More »

ಸಂಸತ್ ಭದ್ರತಾ ವೈಫಲ್ಯ | ಮತ್ತೋರ್ವ ಆರೋಪಿ ಬಂಧನ

ನವದೆಹಲಿ: ಸಂಸತ್ ಭವನದಲ್ಲಿ ನಡೆದಿದ್ದ ಭದ್ರತಾ ವೈಫಲ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿ ಮಹೇಶ್ ಕುಮಾವತ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ದೆಹಲಿಯ ಪಟಿಯಾಲ ಹೌಸ್‌ ಕೋರ್ಟ್‌ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಡಿ.14ರ ರಾತ್ರಿ ಲಲಿತ್ ಝಾ ಪೊಲೀಸರಿಗೆ ಶರಣಾಗಿದ್ದು, ಇದೇ ವೇಳೆ ಝಾ ಜೊತೆಗಿದ್ದ ಮಹೇಶ್ ಕುಮಾವತ್ ನನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ರಾಜಸ್ಥಾನದಲ್ಲಿ ಝಾ ಅಡಗಿಕೊಳ್ಳಲು ಮಹೇಶ್ ನೆರವಾಗಿದ್ದರು ಎಂದು ಹೇಳಲಾಗಿದೆ. ವಿಚಾರಣೆಗೆ ಒಳಗಾಗಿರುವ ಮಹೇಶ್, ಸಂಸತ್ತಿನ ಭದ್ರತೆ ಉಲ್ಲಂಘಿಸಿದ ತಂಡದ

ಸಂಸತ್ ಭದ್ರತಾ ವೈಫಲ್ಯ | ಮತ್ತೋರ್ವ ಆರೋಪಿ ಬಂಧನ Read More »

ಕೆಎಸ್‌ಆರ್‌ಟಿಸಿ ಯ ನಿವೃತ್ತ ಟಿಸಿ ಶಾಂತರಾಮ ವಿಟ್ಲ ಆತ್ಮಹತ್ಯೆ

ಪುತ್ತೂರು: ಕೆಎಸ್‌ಆರ್‌ಟಿಸಿ ನಿವೃತ್ತ ಟಿಸಿ, ಭಾರತೀಯ ಮಜ್ದೂರು ಸಂಘದ ಮುಖಂಡ ಶಾಂತರಾಮ ವಿಟ್ಲ ಪತ್ತೂರಿನ ಬಪ್ಪಳಿಗೆಯಲ್ಲಿರುವ ತಮ್ಮ ಸ್ವಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಾಂತರಾಮ ವಿಟ್ಲ ಅವರು ಜನಪರ ಕಾರ್ಯಗಳಲ್ಲಿ ತಮ್ಮನ್ನು ಗುರುತಿಸಿಕೊಂಡವರು. ಹಲವಾರು ಸಮಾಜ ಮುಖಿ ಕಾರ್ಯಗಳ ಮೂಲಕ ಅಶಕ್ತರ ಬಾಳಿಗೆ ಬೆಳಕಾಗಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೃತರು ಪತ್ನಿ ಪ್ರಮೀಶಾ ಎಸ್‌ ಶೆಟ್ಟಿ, ಮಕ್ಕಳಾದ ಶ್ರೇಯಾ ಹಾಗೂ ಸ್ನೇಹಾ ಶೆಟ್ಟಿ, ಕುಟುಂಬಸ್ಥರನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಕೆಎಸ್‌ಆರ್‌ಟಿಸಿ ಯ ನಿವೃತ್ತ ಟಿಸಿ ಶಾಂತರಾಮ ವಿಟ್ಲ ಆತ್ಮಹತ್ಯೆ Read More »

ಬಳ್ಪ ಕಾಡಿನಲ್ಲಿ ಮಂಗಗಳ ಮೃತದೇಹ ಪತ್ತೆ!

ಸುಳ್ಯ: ತಾಲೂಕಿನ ಬಳ್ಪ ರಕ್ಷಿತಾರಣ್ಯದ  ಗುತ್ತಿಗಾರು-ಬಳ್ಪ ರಸ್ತೆ ನಡುವೆ ರಸ್ತೆ ಬದಿಯಲ್ಲಿ ಮಂಗಗಳ ಮೃತದೇಹ ಪತ್ತೆಯಾಗಿದೆ. ಸುಮಾರು 30 ಕ್ಕೂ ಅಧಿಕ ಮಂಗಗಳು ಸತ್ತು ಬಿದ್ದಿರುವ ಸ್ಥಿತಿಯಲ್ಲಿದೆ. ಮಧ್ಯಾಹ್ನದ ವೇಳೆ ಸಾಮಾಜಿಕ ಜಾಲತಾಣದ ಮೂಲಕ ಮಂಗಗಳ ಮೃತದೇಹ ಇರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಬಳ್ಪ ಕಾಡಿನಲ್ಲಿ ಮಂಗಗಳ ಮೃತದೇಹ ಪತ್ತೆ! Read More »

ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ

ಸುಬ್ರಹ್ಮಣ್ಯ: ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಏನೆಕಲ್ಲು ಗ್ರಾಮದಲ್ಲಿ ನಡೆದಿದೆ. ಕಡಬ ತಾಲೂಕಿನ ಏನೆಕಲ್ಲು ಗ್ರಾಮದ ಕುಕ್ಕಪ್ಪನ ಮನೆ ಮೋಹನ ಕುಮಾರ(51) ಆತ್ಮಹತ್ಯೆ ಮಾಡಿಕೊಂಡವರು. ಇತ್ತೀಚೆಗೆ ಮನೆ ನಿರ್ಮಾಣಕ್ಕಾಗಿ ಕೈ ಸಾಲ ಹಾಗೂ ಕೃಷಿ ಚಟುವಟಿಕೆಗಳಿಗೆ ಬ್ಯಾಂಕು ಸಾಲಗಳನ್ನು ಮಾಡಿಕೊಂಡಿದ್ದರು ಎನ್ನಲಾಗಿದೆ. ಮಾಡಿದ ಸಾಲವನ್ನು ತೀರಿಸಲಾಗದೇ ಬೇಸರದಿಂದ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಮುಂಜಾನೆ ಎಂದಿನಂತೆ ತೋಟಕ್ಕೆ ಹೋದವರು ಎಷ್ಟು ಹೊತ್ತಾದರೂ ಮನೆಗೆ ಬಾರದೇ ಇದ್ದಾಗ ಮನೆಯವರು ತೋಟದಲ್ಲಿ ಹುಡುಕಾಡಿದಾಗ

ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ Read More »

ಎಲಿಮಲೆ ಶಾಲಾ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

ಸುಳ್ಯ : ಹತ್ತನೇ ತರಗತಿ ವಿದ್ಯಾರ್ಥಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯ ತಾಲೂಕಿನಲ್ಲಿ ಶುಕ್ರವಾರ ನಡೆದಿದೆ. ಸುಳ್ಯ ತಾಲೂಕಿನ ಎಲಿಮಲೆ ಸರಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಶಮಂತ್ ಆತ್ಮಹತ್ಯೆ ಮಾಡಿಕೊಂಡಾತ. ಮೂಲತಃ ಚೊಕ್ಕಾಡಿಯವರಾಗಿರುವ, ಪ್ರಸ್ತುತ ನೆಲ್ಲೂರು ಕೆಮ್ರಾಜೆ ಗ್ರಾಮದ ಹೊಟ್ಟುಚೋಡಿಯಲ್ಲಿ ನೆಲೆಸಿರುವ ದಿ| ವಾಸುದೇವ ಎಂಬವರ ಪುತ್ರ ಶಮಂತ್ ಶುಕ್ರವಾರ ಬೆಳಿಗ್ಗೆ 6 ಗಂಟೆಯ ಸುಮಾರಿಗೆ ಮನೆಯಿಂದ ಹೊರಟು ಬಂದು ಶಾಲಾ ಆವರಣದ ಶೌಚಾಲಯದ ಹಿಂಬದಿ ಗಿಡವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಎಲಿಮಲೆ ಶಾಲಾ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ Read More »

ತಾಯಿ-ಮಗು ನಾಪತ್ತೆ : ಪೊಲೀಸರಿಗೆ ದೂರು

ಮಂಗಳೂರು: ಪತ್ನಿ ಹಾಗೂ ಮೂರು ವರ್ಷದ ಪುತ್ರ ನಾಪತ್ತೆಯಾಗಿರುವ ಬಗ್ಗೆ ಬಜಪೆ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ. ಬಜ್ಜೆಯ ಕೆ.ಪಿ. ನಗರದ ಶಾಹಿಸ್ತಾ ಮಂಜೀಲ್‌ನ ಅಹ್ಮದ್ ಮನ್ಸೂದ್ ಅವರ ಪತ್ನಿ ಶರೀನಾ ವೈ. (24) ಹಾಗೂ ಮಗ ಮಹ್ಮದ್ ತೋಹಾರ್ (3) ಎಂದು ಗುರುತಿಸಲಾಗಿದೆ. ಅಹ್ಮದ್ ಮನ್ಸೂದ್ ಅವರು ತಾಯಿ ಮತ್ತು ಪತ್ನಿಯೊಂದಿಗೆ ವಾಸವಾಗಿದ್ದು ಸುಮಾರು 6 ವರ್ಷಗಳ ಹಿಂದೆ ಸುಳ್ಯದ ಶರಿನಾ (24) ಅವರನ್ನು ವಿವಾಹವಾಗಿದ್ದರು. ದಂಪತಿಗಳಿಗೆ 3 ವರ್ಷದ ಗಂಡು ಮಗುವಿದೆ. ಶರೀನಾ  ಗರ್ಭಿಣಿಯಾಗಿದ್ದು

ತಾಯಿ-ಮಗು ನಾಪತ್ತೆ : ಪೊಲೀಸರಿಗೆ ದೂರು Read More »

ಹಲ್ಲೆಗೆ ಯತ್ನಿಸಿ, ಜೀವ ಬೆದರಿಕೆ ಒಡ್ಡಿದ ಇಬ್ಬರ ಮೇಲೆ ಪ್ರಕರಣ ದಾಖಲು

ಪುತ್ತೂರು: ವ್ಯಕ್ತಿಯೋರ್ವರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆಗೆತ್ನಿಸಿ, ಜೀವ ಬೆದರಿಕೆ ಒಡ್ಡಿದ ಘಟನೆ ಪುತ್ತೂರು ನಗರದ ಕಿಲ್ಲೆ ಮೈದಾನದ ಕ್ಯಾಂಟೀನ್ ಒಂದರಲ್ಲಿ ಗುರುವಾರ ನಡೆದಿದೆ. ಮಂಜುನಾಥ ಹಾಗೂ ಪ್ರಶಾಂತ ಯಾನೆ ಪಚ್ಚು ಎಂಬವರು ಹಲ್ಲೆಗೆ ಯತ್ನಿಸಿರುವುದಾಗಿ ಆರೋಪಿಸಲಾಗಿದ್ದು, ಆರ್ಯಾಪು ಗ್ರಾಮ ಪುತ್ತೂರು ತಾಲೂಕು ಮೇರ್ಲ ಮನೆ ನಿವಾಸಿ ಪಿ ಕೇಶವ ಸುವರ್ಣ (67) ಎಂಬವರು ಗುರುವಾರ ಮಧ್ಯಾಹ್ನ ಕಿಲ್ಲೆ ಮೈದಾನದ ಬಳಿಯಿರುವ ಕ್ಯಾಂಟೀನ್ ನಲ್ಲಿ ಊಟ ಮಾಡುತ್ತಿದ್ದ ವೇಳೆ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆಗೆ ಯತ್ನಿಸಿ

ಹಲ್ಲೆಗೆ ಯತ್ನಿಸಿ, ಜೀವ ಬೆದರಿಕೆ ಒಡ್ಡಿದ ಇಬ್ಬರ ಮೇಲೆ ಪ್ರಕರಣ ದಾಖಲು Read More »

error: Content is protected !!
Scroll to Top