ಅಪರಾಧ

ತಮಿಳುನಾಡು ಮೂಲದ ಸೈಟ್ ಇಂಜಿನಿಯರ್ ಸಂಶಯಾಸ್ಪದ ರೀತಿಯಲ್ಲಿ ಮೃತ್ಯು

ಉಪ್ಪಿನಂಗಡಿ: ಕೆಎನ್‍ಆರ್ ಸಂಸ್ಥೆಯಲ್ಲಿ ಸೈಟ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ತಮಿಳುನಾಡು ಮೂಲದ ವ್ಯಕ್ತಿಯೊಬ್ಬರು ಸಂಶಯಾಸ್ಪದವಾಗಿ ಮೃತಪಟ್ಟ ಘಟನೆ ಪರ್ನೆಯಲ್ಲಿ ನಡೆದಿದೆ. ತಮಿಳುನಾಡು ಮೂಲದ ಅನೂಫ್ (47) ಮೃತಪಟ್ಟವರು. ಅನೂಫ್ ಅವರು ರಾಷ್ಟ್ರೀಯ ಹೆದ್ದಾರಿ ವಿಸ್ತರಣಾ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಕೆಎನ್‍ಆರ್ ಸಂಸ್ಥೆಯಲ್ಲಿ ಸೈಟ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಅ.21 ರಂದು ಉಪ್ಪಿನಂಗಡಿ ಪ್ರದೇಶದಲ್ಲಿ ಕೆಲಸ ನಿರ್ವಹಿಸಲು ವರ್ಗಾವಣೆಯಾಗಿ ಬಂದಿದ್ದರು. ಪೆರ್ನೆಯ ಮುಸ್ತಾಫ ಎಂಬವರ ಮಾಲಕತ್ವದ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಅ.22 ರಂದು ಸಹೋದ್ಯೋಗಿಯೊಬ್ಬರು ಮನೆಗೆ […]

ತಮಿಳುನಾಡು ಮೂಲದ ಸೈಟ್ ಇಂಜಿನಿಯರ್ ಸಂಶಯಾಸ್ಪದ ರೀತಿಯಲ್ಲಿ ಮೃತ್ಯು Read More »

ನಿವೃತ್ತ ಬ್ಯಾಂಕ್ ಉದ್ಯೋಗಿ ಶವ ಬಾವಿಯಲ್ಲಿ ಪತ್ತೆ

ಉಡುಪಿ: ನಿವೃತ್ತ ಬ್ಯಾಂಕ್ ಉದ್ಯೋಗಿಯೊಬ್ಬರ ಶವ ಅವರ ಮನೆ ಆವರಣದಲ್ಲಿರುವ ಬಾವಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಉಡುಪಿ ಒಳಕಾಡು ನಾರಾಯಣ ರಾವ್ ಕಂಪೌಂಡ್ ನ ನಿವೃತ್ತ ಬ್ಯಾಂಕ್ ಉದ್ಯೋಗಿ ಸದಾನಂದ ಕುಂದರ್ (65) ಎಂಬವರ ಶವ ಪತ್ತೆಯಾಗಿರುವುದು. ಘಟನಾ ಸ್ಥಳಕ್ಕೆ ನಗರ ಪೊಲೀಸ್ ಠಾಣೆಯ ಎಎಸ್‍ಐ ಅರುಣ್ ಹಂಗಾರಕಟ್ಟೆ, ಹೆಡ್ ಕಾನ್‍ ಸ್ಟೇಬಲ್ ಗಳಾದ ಹರೀಶ್ ನಾಯ್ಕ್‍, ಶಂಕರ್ ಭೇಟಿ ನೀಡಿದ್ದು, ಘಟನೆಗೆ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.

ನಿವೃತ್ತ ಬ್ಯಾಂಕ್ ಉದ್ಯೋಗಿ ಶವ ಬಾವಿಯಲ್ಲಿ ಪತ್ತೆ Read More »

ಮಾಲಕರ ವಿಶ್ವಾಸ ಗಿಟ್ಟಿಸಿದ್ದ ಕೆಲಸದವನಿಂದಲೇ ಭಾರೀ ಕಳ್ಳತನ!

ಬಂಟ್ವಾಳ: ಬಿಲ್ಡರ್ ಓರ್ವರ ಮನೆಯ ಕೆಲಸಕ್ಕಿದ್ದಾತ ಲಕ್ಷಾಂತರ ರೂ ಮೌಲ್ಯದ ನಗ ಹಾಗೂ ನಗದನ್ನು ಕಳುವು ಮಾಡಿ ಪರಾರಿಯಾಗಿರುವ ಘಟನೆ ಫರಂಗಿಪೇಟೆ ಎಂಬಲ್ಲಿ ನಡೆದಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಪುದು ಗ್ರಾಮದ ಕೋಡಿಮಜಲು ನಿವಾಸಿಯಾಗಿರುವ ಇಮಾದ್ ಬಿಲ್ಡರ್ ಮಾಲಕ ಮೊಹಮ್ಮದ್ ಝಫರುಲ್ಲಾ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಕಪಾಟಿನೊಳಗೆ ಇರಿಸಲಾಗಿದ್ದ ಲಕ್ಷಾಂತರ ಬೆಲೆ ಬಾಳುವ ಚಿನ್ನಾಭರಣ ಸಹಿತ ಲಕ್ಷಾಂತರ ರೂ ಹಣವನ್ನು ಮನೆಯ ಕೆಲಸದಾತನೇ ಕದ್ದುಕೊಂಡು ಹೋಗಿರುವುದಾಗಿ ಪೋಲೀಸರಿಗೆ ದೂರು ನೀಡಲಾಗಿದೆ. ಸುಮಾರು 2,75,0000

ಮಾಲಕರ ವಿಶ್ವಾಸ ಗಿಟ್ಟಿಸಿದ್ದ ಕೆಲಸದವನಿಂದಲೇ ಭಾರೀ ಕಳ್ಳತನ! Read More »

ಬಾವಿಯಲ್ಲಿ ಪತ್ತೆಯಾದ ಹೆಡ್’ಕಾನ್’ಸ್ಟೇಬಲ್ ಮೃತದೇಹ!

ಕಾರ್ಕಳ: ನಾಪತ್ತೆಯಾಗಿದ್ದ ಹೆಡ್ ಕಾನ್‍ ಸ್ಟೇಬಲ್ ರೊಬ್ಬರ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ. ಕಾರ್ಕಳ ನಗರ ಠಾಣೆಯ ಹೆಡ್ ಕಾನ್‍ಸ್ಟೇಬಲ್ ಶೃತಿನ್ ಶೆಟ್ಟಿ (35) ಎಂಬವರ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ.ಶೃತಿನ್ ಶೆಟ್ಟಿ ಅ.19 ರಂದು ನಾಪತ್ತೆಯಾಗಿದ್ದರು. ಸೋಮವಾರ ಕಾರ್ಕಳ ಪುಚ್ಚೇರಿ ಸಮೀಪದ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ. ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಾವಿಯಲ್ಲಿ ಪತ್ತೆಯಾದ ಹೆಡ್’ಕಾನ್’ಸ್ಟೇಬಲ್ ಮೃತದೇಹ! Read More »

ಕದ್ರಿ: ವೀಸಾ ಅವಧಿ ಮೀರಿದ ಆರೋಪದಡಿ ವಿದೇಶಿಯರು ವಶಕ್ಕೆ!

ಮಂಗಳೂರು: ವೀಸಾ ಅವಧಿ ಮೀರಿದ ಬಳಿಕವೂ ನಗರದಲ್ಲಿ ವಾಸವಾಗಿದ್ದ ಇಬ್ಬರು ವಿದೇಶಿಯರನ್ನು ಕದ್ರಿ ಪೊಲೀಸರು ವಶಕ್ಕೆ ಪಡೆದಿರುವುದಾಗಿ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ. ಘಾನಾ ದೇಶದ ಸಲಾಂ ಕ್ರಿಸ್ಟೆನ್ ಮತ್ತು ನೈಜೀರಿಯಾದ ಅಂಕಿತೋಲ ವೀಸಾ ಅವಧಿ ಮೀರಿದ ಬಳಿಕವೂ ನಗರದಲ್ಲಿ ಉಳಕೊಂಡಿದ್ದರು ಎನ್ನಲಾಗಿದೆ. ‌ ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ ಹಸ್ತಾಂತರಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಕದ್ರಿ: ವೀಸಾ ಅವಧಿ ಮೀರಿದ ಆರೋಪದಡಿ ವಿದೇಶಿಯರು ವಶಕ್ಕೆ! Read More »

ಮತ್ತೊಂದು ಚುನಾವಣಾ ಟಿಕೆಟ್ ವಂಚನೆ ಪ್ರಕರಣ ಬೆಳಕಿಗೆ! | 2.55 ಕೋಟಿ ರೂ. ಪಂಗನಾಮ!

ಬೆಂಗಳೂರು: ರಾಜ್ಯದಲ್ಲಿ ಮತ್ತೊಂದು ಚುನಾವಣಾ ಟಿಕೆಟ್ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ನಾಲ್ವರ ವಿರುದ್ಧ ಪೊಲೀಸ್ ಎಫ್ ಐಆರ್ ದಾಖಲಾಗಿದೆ. ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೋಟಿ ಕೋಟಿ ವಂಚನೆ ಮಾಡಿರುವ ಪ್ರಕರಣ ಇದಾಗಿದ್ದು, ಕೊಟ್ಟೂರು ನಿವಾಸಿ, ನಿವೃತ್ತ ಎಂಜಿನಿಯರ್‌ ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಗರಿಬೊಮ್ಮನಹಳ್ಳಿ ಎಸ್‌ಸಿ ಮೀಸಲು ವಿಧಾನಸಭಾ ಕ್ಷೇತ್ರದ ಟಿಕೆಟ್ ಕೊಡಿಸುವುದಾಗಿ ಶಿವಮೂರ್ತಿ ಎಂಬುವವರಿಗೆ ನಾಲ್ವರ ತಂಡವು ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ

ಮತ್ತೊಂದು ಚುನಾವಣಾ ಟಿಕೆಟ್ ವಂಚನೆ ಪ್ರಕರಣ ಬೆಳಕಿಗೆ! | 2.55 ಕೋಟಿ ರೂ. ಪಂಗನಾಮ! Read More »

ಕತ್ತರಿಸಿದ ದನದ ಕಿವಿ ಪತ್ತೆ

ವಿಟ್ಲ: ದನವೊಂದರ ಕಿವಿ ಕತ್ತರಿಸಿ ಎಸೆದು ಹೋದ ಘಟನೆ ಕೆಲಿಂಜ ಕೊಟ್ಟಾರಿಕಟ್ಟೆ ಬಸ್ ನಿಲ್ದಾಣದ ಸಮೀಪ ಬೆಳಕಿಗೆ ಬಂದಿದೆ. ವೀರಕಂಭ ಗ್ರಾಮದ ಕೊಟ್ಟಾರಿಕಟ್ಟೆ ಬಸ್ ನಿಲ್ದಾಣದಲ್ಲಿ ಇಂದು ಮುಂಜಾನೆ ಕತ್ತರಿಸಿದ ದನದ ಕಿವಿ ಪತ್ತೆಯಾಗಿದೆ. ಸ್ಥಳೀಯರು ವಿಟ್ಲ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಜಮಾಯಿಸಿ ಕೃತ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಕತ್ತರಿಸಿದ ದನದ ಕಿವಿ ಪತ್ತೆ Read More »

ನೇಣು ಬಿಗಿದು ಪುಣಚದ ಶ್ರೀಕೃಷ್ಣ ಆತ್ಮಹತ್ಯೆ

ವಿಟ್ಲ: ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲದ ಪುಣಚದಲ್ಲಿ ನಡೆದಿದೆ. ಪುಣಚ ಚೆಕ್ಕುತ್ತಿ ನಿವಾಸಿ ಶ್ರೀಕೃಷ್ಣ (26) ಆತ್ಮಹತ್ಯೆ ಮಾಡಿಕೊಂಡವರು ಸೆಂಟ್ರಿಂಗ್ ಕೆಲಸ ಮಾಡುತ್ತಿರುವ ಶ್ರೀಕೃಷ್ಣ ಅವರ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೃತರು ತಾಯಿ, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ನೇಣು ಬಿಗಿದು ಪುಣಚದ ಶ್ರೀಕೃಷ್ಣ ಆತ್ಮಹತ್ಯೆ Read More »

ದಯಾ ನಾಯಕ್ ತಂಡದ ಭರ್ಜರಿ ಕಾರ್ಯಾಚರಣೆ!!

ಮುಂಬಯಿ: ಕೈಂ ಬ್ರಾಂಚ್‌ನ ಬಾಂದ್ರಾ 9ರ ಘಟಕದ ಅಧಿಕಾರಿಗಳ ತಂಡದ ಸೀನಿಯರ್ ಇನ್ಸ್‌ಪೆಕ್ಟರ್ ದಯಾ ನಾಯಕ್ ಅವರ ನೇತೃತ್ವದಲ್ಲಿ ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 16 ಕೋಟಿ ರೂ. ಮೌಲ್ಯದ 5.089 ಕೆಜಿ ಎಂಡಿ (ಮೆಫೆಡೋನ್) ಡ್ರಗ್ಸ್‌ನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದೆ. ಖಾರ್ ಪಶ್ಚಿಮದ ಖಾರ್ದಂಡದ ಕಾರ್ಟರ್ ರೋಡ್‌ನ ಖಲಾ ಮೈದಾನ ಸಮೀಪದ ಸ್ಮಶಾನದ ಬಳಿ ಈ ಕಾರ್ಯಾಚರಣೆ ನಡೆಸಲಾಯಿತು. ಬಂಧಿತ ಆರೋಪಿಗಳನ್ನು ರಾಹುಲ್ ಕಿಸಾನ್ ಗವಾಲಿ ಮತ್ತು ಅತುಲ್ ಕಿಸಾನ್ ಗವಾಲಿ (32)

ದಯಾ ನಾಯಕ್ ತಂಡದ ಭರ್ಜರಿ ಕಾರ್ಯಾಚರಣೆ!! Read More »

ಬಾಯೊಳಗೆ, ತಲೆಕೂದಲಲ್ಲಿ ಪತ್ತೆಯಾಯ್ತು ಅಕ್ರಮ ಚಿನ್ನ!

ಮಂಗಳೂರು: ದುಬೈನಿಂದ ಮಂಗಳೂರಿಗೆ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಇಬ್ಬರಿಂದ ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಸುಮಾರು 11 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದುಬೈನಿಂದ ಮಂಗಳೂರಿಗೆ ಏರ್ ಇಂಡಿಯಾ ವಿಮಾನದ ಮೂಲಕ ಆಗಮಿಸಿದ ಓರ್ವ ಪುರುಷ ಹಾಗೂ ಮಹಿಳೆಯನ್ನು ತಪಾಸಣೆ ನಡೆಸಿದ ವೇಳೆ ಅಕ್ರಮವಾಗಿ ಚಿನ್ನ ಸಾಗಿಸುತ್ತಿರುವುದು ಪತ್ತೆಯಾಗಿದೆ. ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಓರ್ವ ಪ್ರಯಾಣಿಕ ಮುಖಕ್ಕೆ ಮಾಸ್ಕ್ ಧರಿಸಿದ್ದು, ಆತನನ್ನು

ಬಾಯೊಳಗೆ, ತಲೆಕೂದಲಲ್ಲಿ ಪತ್ತೆಯಾಯ್ತು ಅಕ್ರಮ ಚಿನ್ನ! Read More »

error: Content is protected !!
Scroll to Top