ಅಪರಾಧ

ಫ್ಲ್ಯಾಟ್ ನಿಂದ ಜಿಗಿದು ಬಾಲಕಿ ಆತ್ಮಹತ್ಯೆ

ಉಡುಪಿ: ಬಾಲಕಿಯೊಬ್ಬಳು ಫ್ಲ್ಯಾಟ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಉಡುಪಿ ಜಿಲ್ಲೆಯ ಹೆರ್ಗ ಸಮೀಪದ ಫ್ಲ್ಯಾಟ್ ಒಂದರಲ್ಲಿ ನಡೆದಿದೆ. ಪ್ರಜ್ಞಾ(13) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಮಣಿಪಾಲದ ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಪ್ರಜ್ಞಾ, ಬಾಲಕಿ ಇತ್ತೀಚಿನ ಕೆಲ ತಿಂಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು ಎಂದು ಹೇಳಲಾಗಿದೆ. ಫ್ಲ್ಯಾಟ್ ಒಂದರ ಎಂಟನೇ ಮಹಹಡಿಯಿಂದ ಜಿಗಿದ ಬಾಲಕಿ ನೆಲಕ್ಕೆ ಅಪ್ಪಳಿಸಿ ಗಂಭೀರ ಗಾಯಗೊಂಡಿದ್ದರು. ತಕ್ಷಣ ಪೋಷಕರು ಆಕೆಯನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ […]

ಫ್ಲ್ಯಾಟ್ ನಿಂದ ಜಿಗಿದು ಬಾಲಕಿ ಆತ್ಮಹತ್ಯೆ Read More »

ಕಲ್ಲೇಗ ಟೈಗಸ್೯ ತಂಡದ ಮುಖ್ಯಸ್ಥ ಬರ್ಬರ ಕೊಲೆ | ಸೋಮವಾರ ಮಧ್ಯರಾತ್ರಿ ಮೂರು ಜನರ ತಂಡ ದಾಳಿ ಮಾಡಿರುವ ಶಂಕೆ ! | ದೇರಳಕಟ್ಟೆ ಆಸ್ಪತ್ರೆಗೆ ಮೃತದೇಹ ರವಾನೆ!

ಪುತ್ತೂರು: ಪುತ್ತೂರಿನ ಪ್ರಸಿದ್ಧ ಹುಲಿವೇಷ ತಂಡವಾದ ಕಲ್ಲೇಗ ಟೈಗಸ್೯ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ (24) ಅವರನ್ನು ಸೋಮವಾರ ತಡರಾತ್ರಿ ನೆಹರೂನಗರದಲ್ಲಿ ತಲವಾರಿನಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನೆಹರೂ ನಗರದ ವಿವೇಕಾನಂದ ಕಾಲೇಜು ರಸ್ತೆಯಲ್ಲಿ ಮಧ್ಯರಾತ್ರಿ ತಂಡವೊಂದು ದಾಳಿ ಮಾಡಿ ಹತ್ಯೆ ಮಾಡಿದೆ. ಮಾತುಕತೆಗೆ ಬರಲು ಹೇಳಿ ದಾಳಿ ಮಾಡಲಾಗಿದೆ ಎಂಬ ಮಾಹಿತಿ ಲಭಿಸಿದೆ. ಕಾಲೇಜು ರಸ್ತೆಯಲ್ಲಿ ದಾಳಿ ಮಾಡುತ್ತಿದ್ದಂತೆ ಅಕ್ಷಯ್ ಅಲ್ಲಿಂದ ಓಡಿದ್ದು, ದುಷ್ಕರ್ಮಿಗಳ ತಂಡ ಬೆನ್ನಟ್ಟಿಕೊಂಡು ಹೋಗಿದೆ. ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ

ಕಲ್ಲೇಗ ಟೈಗಸ್೯ ತಂಡದ ಮುಖ್ಯಸ್ಥ ಬರ್ಬರ ಕೊಲೆ | ಸೋಮವಾರ ಮಧ್ಯರಾತ್ರಿ ಮೂರು ಜನರ ತಂಡ ದಾಳಿ ಮಾಡಿರುವ ಶಂಕೆ ! | ದೇರಳಕಟ್ಟೆ ಆಸ್ಪತ್ರೆಗೆ ಮೃತದೇಹ ರವಾನೆ! Read More »

ಕಲ್ಲೇಗ ಟೈಗರ್ಸ್ ಪ್ರಮುಖ ಅಕ್ಷಯ್ ದುಷ್ಕರ್ಮಿಗಳಿಂದ ಹತ್ಯೆ

ಪುತ್ತೂರು:  ಕಲ್ಲೆಗ ಟೈಗರ್ಸ್ ನ ಪ್ರಮುಖ ನಾಯಕರೊಬ್ಬರನ್ನು ತಲವಾರಿನಿಂದ ಕಡಿದು ಹತ್ಯೆಗೈದ ಘಟನೆ ಇದೀಗ ಪುತ್ತೂರಿನ ನೆಹರೂ ನಗರದಲ್ಲಿ ನಡೆದಿದೆ. ಕಲ್ಲೇಗ ಟೈಗರ್ಸ್‍ ನ ಮುಖ್ಯಸ್ಥ ಅಕ್ಷಯ್‍ ಕಲ್ಲೇಗ ಹತ್ಯೆಗೀಡಾದ ಯುವಕ ನೆಹರೂನಗರದಲ್ಲಿ ಇರುವ ವೇಳೆ ತಂಡವೊಂದು ಆಗಮಿಸಿ ಏಕಾಏಕಿ ತಲವಾರಿನಿಂದ ದಾಳಿ ನಡೆಸಿ ಹತ್ಯೆ ಮಾಡಿದೆ. ಸ್ಥಳಕ್ಕೆ ಪುತ್ತೂರು ನಗರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ.

ಕಲ್ಲೇಗ ಟೈಗರ್ಸ್ ಪ್ರಮುಖ ಅಕ್ಷಯ್ ದುಷ್ಕರ್ಮಿಗಳಿಂದ ಹತ್ಯೆ Read More »

ಕುಸಿದು ಬಿದ್ದು ವಿದ್ಯಾರ್ಥಿನಿ ಉಷಾ ಮೃತ್ಯು

ಚಿಕ್ಕಮಗಳೂರು: ವಿದ್ಯಾರ್ಥಿನಿಯೋರ್ವಳು ಕುಸಿದು ಬಿದ್ದು ಮೃತಪಟ್ಟ ಘಟನೆ ಚಿಕ್ಕಮಗಳೂರಿನ ಅಜ್ಜಂಪುರ ತಾಲ್ಲೂಕಿನ ಸೊಕ್ಕೆ ಗ್ರಾಮದ ವಸತಿ ಶಾಲೆಯೊಂದರಲ್ಲಿ ನಡೆದಿದೆ. ಉಷಾ (13) ಮೃತ ವಿದ್ಯಾರ್ಥಿನಿಯಾಗಿದ್ದಾಳೆ. ಶನಿವಾರ ಬೆಳಗ್ಗೆ ವಸತಿ ಶಾಲೆಯಲ್ಲಿ ತಲೆ ಸುತ್ತು ಬಂದು ಬಿದ್ದಿದ್ದಾಳೆ. ಕೂಡಲೇ ವಸತಿ ಶಾಲೆಯ ಪ್ರಾಂಶುಪಾಲರು 108 ಆಂಬುಲೆನ್ಸ್ ಮೂಲಕ ಅಜ್ಜಂಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಆದರೆ, ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.  ಮೃತ ಉಷಾ ಹಲವು ವರ್ಷಗಳಿಂದ ಟಿ.ಬಿ. ಖಾಯಿಲೆಯಿಂದ ಬಳಲುತ್ತಿದ್ದಳು ಎಂದು ವಸತಿ ಶಾಲೆಯ

ಕುಸಿದು ಬಿದ್ದು ವಿದ್ಯಾರ್ಥಿನಿ ಉಷಾ ಮೃತ್ಯು Read More »

ಹಗಲು ಪೊಲೀಸ್ ಡ್ಯೂಟಿ, ರಾತ್ರಿ ಕಳ್ಳತನ | ಮುಖ್ಯ ಪೇದೆಯ ಬಂಧನ

ಚಿಕ್ಕಬಳ್ಳಾಪುರ:  ಹಗಲು ಪೊಲೀಸ್ ಡ್ಯೂಟಿ, ರಾತ್ರಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಮುಖ್ಯ ಪೇದೆಯೊಬ್ಬನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ ಘಟನೆ ನಡೆದಿದೆ. ಚಿಕ್ಕಬಳ್ಳಾಪುರದ ಹೊರಠಾಣೆಯ ಮುಖ್ಯಪೇದೆ ಸಿದ್ದರಾಮರೆಡ್ಡಿ ಬಂಧಿತ ಆರೋಪಿ. ಬೆಳಗ್ಗೆ ವೇಳೆ ಪೊಲೀಸ್‌ ಡ್ಯೂಟಿ ಮಾಡೋದು, ರಾತ್ರಿಯಾಗುತ್ತಿದ್ದಂತೆ ಕಳ್ಳತನದ ಡ್ಯೂಟಿ ಮಾಡುತ್ತಿದ್ದ ಮುಖ್ಯಪೇದೆ ಸಿದ್ದರಾಮರೆಡ್ಡಿ ಇದೀಗ ಬಂಧಿಸಿ ಅಟ್ಟಲಾಗಿದೆ. ಪೊಲೀಸಪ್ಪನೇ ಕಳ್ಳತನಕ್ಕೆ ಇಳಿಯೋದೂ ಅಲ್ಲದೆ; ಎಂಓಬಿ ಅಪರಾಧಿಯೊಬ್ಬನನ್ನು ಕೂಡ ಕಳ್ಳತನ ಮಾಡಲು ಜೊತೆಯಾಗಿ ಇಟ್ಟುಕೊಂಡಿದ್ದ ಈ ಘನಂಧಾರಿ ಪೊಲೀಸಪ್ಪ ಎಂಬುದು ಮತ್ತಷ್ಟು ಬೇಸರದ ಸಂಗತಿ. ಕೇರಳ ಮತ್ತು

ಹಗಲು ಪೊಲೀಸ್ ಡ್ಯೂಟಿ, ರಾತ್ರಿ ಕಳ್ಳತನ | ಮುಖ್ಯ ಪೇದೆಯ ಬಂಧನ Read More »

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕಿ ಪ್ರತಿಮಾ ಕೊಲೆಗೆ ಬಿಗ್ ಟ್ವಿಸ್ಟ್ | ಕೊಲೆ ಆರೋಪದಲ್ಲಿ ಕಾರು ಚಾಲಕ ಕಿರಣ್ ಬಂಧನ

ಬೆಂಗಳೂರು: ಸರ್ಕಾರಿ ಕರ್ತವ್ಯದಲ್ಲಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಪ್ರತಿಮಾ ಅವರ ಕೊಲೆಗೆ ಸಂಬಂಧಪಟ್ಟಂತೆ ಇದೀಗ ಬಿಗ್ ಅಪ್ಡೇಟ್ ಸಿಕ್ಕಿದ್ದು, ಪ್ರತಿಮಾ ಅವರ ಹಿಂದಿನ ಕಾರು ಚಾಲಕನೊಬ್ಬ ಈ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಸುಬ್ರಮಣ್ಯ ಠಾಣೆಯ ಪೊಲೀಸ್ ಅಧಿಕಾರಿಗಳು ಕಾರು ಚಾಲಕ ಕಿರಣ್ ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಪ್ರತಿಮಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಪ್ರತಿಮಾ ಅವರ ಕಾರು ಚಾಲಕನಾಗಿದ್ದ ಕಿರಣನೇ ಹತ್ಯೆ ಮಾಡಿರಬಹುದು ಎಂಬ ಶಂಕೆ

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕಿ ಪ್ರತಿಮಾ ಕೊಲೆಗೆ ಬಿಗ್ ಟ್ವಿಸ್ಟ್ | ಕೊಲೆ ಆರೋಪದಲ್ಲಿ ಕಾರು ಚಾಲಕ ಕಿರಣ್ ಬಂಧನ Read More »

ಪಂಜದ ಯುವಕ ಪಾಂಡಿಚೇರಿಯಲ್ಲಿ ಸಮುದ್ರಪಾಲು

ಸುಳ್ಯ, ನ.5: ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಸುಳ್ಯ ತಾಲೂಕಿನ ಪಂಜದ ಯುವಕನೊಬ್ಬ ಪಾಂಡಿಚೇರಿಯಲ್ಲಿ ಸಮುದ್ರ ಪಾಲಾದ ಘಟನೆ ಸಂಭವಿಸಿದೆ. ಪಂಜದ ಕೂತ್ಕುಂಜ ಗ್ರಾಮದ ಚಿದ್ಗಲ್ಲು ಗೋಪಾಲ್ ಎಂಬವರ ಪುತ್ರ ಬಿಪಿನ್ ನೀರುಪಾಲಾದ ಯುವಕ. ಬಿಪಿನ್ ಬೆಂಗಳೂರಿನ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದು, ಶನಿವಾರ ಗೆಳೆಯರೊಂದಿಗೆ ಪಾಂಡಿಚೇರಿಗೆ ಹೋಗಿದ್ದು ಬಳಿಕ ಅಲ್ಲಿನ ಬೀಚ್‌ಗೆ ತೆರಳಿದ್ದ ವೇಳೆ ಸಮುದ್ರಪಾಲಾಗಿದ್ದಾರೆ. ರವಿವಾರ ಯುವಕನ ಮೃತದೇಹ ಪತ್ತೆಯಾಗಿದೆ. ಮೃತರು ತಂದೆ, ತಾಯಿ, ಸಹೋದರಿಯನ್ನು ಅಗಲಿದ್ದಾರೆ.

ಪಂಜದ ಯುವಕ ಪಾಂಡಿಚೇರಿಯಲ್ಲಿ ಸಮುದ್ರಪಾಲು Read More »

ನಾಪತ್ತೆಯಾದವರ ಮೃತದೇಹ ಬಾವಿಯಲ್ಲಿ ಪತ್ತೆ

ಪುತ್ತೂರು: ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಕಬಕದಲ್ಲಿ ನಡೆದಿದೆ. ಕಡಬಕ ಗ್ರಾಮದ ತೋಟಗಾರಿಕೆ ಇಲಾಖೆ ಬಳಿಯ ಜನತಾ ಕಾಲನಿ ನಿವಾಸಿ ವಿ.ಪಿ.ವೇಣು (44) ಮನೆ ಸಮೀಪದ ಬಾವಿಗೆ ಬಿದ್ದು ಮೃತಪಟ್ಟವರು. ಪಿ.ಕೆ.ವಿಜಯ ಎಂಬವರ ಪುತ್ರರಾಗಿರುವ ವೇಣು ಅವರು ಹಲವು ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರು. ನ.4 ರಂದು ಕಾಣೆಯಾಗಿದ್ದ ಅವರನ್ನು ಹುಡುಕಾಡಿದಾಗ ಮನೆ ಸಮೀಪದ ಸರಕಾರಿ ಬಾವಿ ಬಳಿ ಚಪ್ಪಲಿ ಇರುವ ಮಾಹಿತಿ ತಿಳಿದು ಅಗ್ನಿಶಾಮಕ ದಳದವರನ್ನು ಕರೆಸಲಾಗಿತ್ತು. ಅಗ್ನಿಶಾಮಕ ದಳದವರು

ನಾಪತ್ತೆಯಾದವರ ಮೃತದೇಹ ಬಾವಿಯಲ್ಲಿ ಪತ್ತೆ Read More »

ಜಿಂಕೆ ಮಾಂಸ ಸಾಗಾಟ | ಇಬ್ಬರು ಆರೋಪಿಗಳ ಬಂಧನ

ವಿರಾಜಪೇಟೆ: ರಕ್ಷಿತಾರಣ್ಯದಿಂದ ಬೇಟೆಯಾಡಿ ಎರಡು ಜಿಂಕೆಗಳನ್ನು ಕೊಂದು ಮಾಂಸ ಮಾಡಿ ಕಾರಿನಲ್ಲಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ವಿರಾಜಪೇಟೆ ಪೊಲೀಸ್ ಅರಣ್ಯ ಸಂಚಾರಿ ದಳದವರು ಯಶಸ್ವಿಯಾಗಿದ್ದು, ಬಂಧಿತರಿಂದ ಮಾಂಶ ವಶಪಡಿಸಿಕೊಂಡಿದ್ದಾರೆ. ಬೇಟೋಳಿ ಗ್ರಾಮದ ನಿವಾಸಿ ವಿರಾಜಪೇಟೆ ಬೇಕರಿಯೊಂದರ ಮಾಲೀಕ ಎಂ.ಎಂ ಅಜೀಜ್ (45), ನೆಹರು ನಗರ ನಿವಾಸಿ ಆಟೋ ಚಾಲಕ ಹುಸೈನ್ ಸಿ.ಎ.ಅಲಿಯಾಸ್ ಜಂಶೀರ್ (32) ಬಂಧಿತ ಆರೋಪಿಗಳು. ಪೊಲೀಸ್ ಅರಣ್ಯ ಸಂಚಾರಿ ದಳದ ಉಪನಿರೀಕ್ಷಕ ಎಂ.ಸಿ.ಮುತ್ತಣ್ಣ ಅವರಿಗೆ ದೊರೆತ ಖಚಿತ ಮಾಹಿತಿ ಮೇಲೆ ಪೆರುಂಬಾಡಿ ಕಡೆಯಿಂದ

ಜಿಂಕೆ ಮಾಂಸ ಸಾಗಾಟ | ಇಬ್ಬರು ಆರೋಪಿಗಳ ಬಂಧನ Read More »

ಗಣಿ-ಭೂ ವಿಜ್ಞಾನ ಇಲಾಖೆ ಅಧಿಕಾರಿ ಪ್ರತಿಮಾ ದುಷ್ಕರ್ಮಿಗಳಿಂದ ಹತ್ಯೆ

ಬೆಂಗಳೂರು: ಗಣಿ-ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಯೋರ್ವರನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಇಂದು ಬೆಂಗಳೂರಿನ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗಣಿ-ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಪ್ರತಿಮಾ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಅಧಿಕಾರಿ. ಪ್ರತಿಮಾ ಅವರು ದೊಡ್ಡಕಲ್ಲಸಂದ್ರದ ಅಪಾರ್ಟೆಂಟ್‌ವೊಂದರಲ್ಲಿ ಒಬ್ಬರೇ ವಾಸಿಸುತ್ತಿದ್ದರು. ವಿವಾಹಿತರಾಗಿದ್ದು, ಪ್ರತಿಮಾ ಪತಿ ಮತ್ತು ಮಗ ತೀರ್ಥಹಳ್ಳಿಯಲ್ಲಿ ವಾಸವಿದ್ದರು. ರಾತ್ರಿ ಪ್ರತಿಮಾ ಅವರಿಗೆ ಸಹೋದರ ಕರೆ ಮಾಡಿದ್ದ ಆದರೆ ಕರೆ ಸ್ವೀಕರಿಸಿರಲಿಲ್ಲ. ಬೆಳಿಗ್ಗೆ ಮನೆ ಬಳಿ ಬಂದು ನೋಡಿದಾಗ

ಗಣಿ-ಭೂ ವಿಜ್ಞಾನ ಇಲಾಖೆ ಅಧಿಕಾರಿ ಪ್ರತಿಮಾ ದುಷ್ಕರ್ಮಿಗಳಿಂದ ಹತ್ಯೆ Read More »

error: Content is protected !!
Scroll to Top