ಅಪರಾಧ

ಕಳ್ಳತನ : ಇಬ್ಬರು ಅಂತರ್ ರಾಜ್ಯ ಕಳ್ಳರ ಬಂಧನ

ಮಂಗಳೂರು : ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಕಂಕನಾಡಿ ನಗರ ಠಾಣಾ ಪೊಲೀಸರ ತಂಡ ಇಬ್ಬರು ಅಂತರ್ ರಾಜ್ಯ ಕಳ್ಳರನ್ನು ಬಂಧಿಸಿದೆ. ಕೊಡಗು ಜಿಲ್ಲೆ ವೀರಾಜಪೇಟೆ ಬೆಳ್ಳುರು ಗ್ರಾಮ ನಿವಾಸಿ ಸಚಿನ್ ಮತ್ತು ಕೊಡಗು ಜಿಲ್ಲೆ ಬಾಡಗಾ ಗ್ರಾಮ ನಿವಾಸಿ ನಿಶಾಂತ್ ಬಂಧಿತ ಆರೋಪಿಗಳು. ಮಂಗಳೂರು ನಗರದ ಕುಲಶೇಖರ ದ.ಕ ಸಹಕಾರಿ ಹಾಲು ಒಕ್ಕೂಟದ ಬಳಿಯ ಮನೆಗೆ ನುಗ್ಗಿದ ಕಳ್ಳರು ಮನೆಯಲ್ಲಿದ್ದ 87.5 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ […]

ಕಳ್ಳತನ : ಇಬ್ಬರು ಅಂತರ್ ರಾಜ್ಯ ಕಳ್ಳರ ಬಂಧನ Read More »

ಕಾಂಚನ ಈಶ್ವರ ಭಟ್ ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

ಪುತ್ತೂರು: ಸುದಾನ ಸಂಗೀತ ಕಲಾ ಶಾಲಾ ನಿರ್ದೇಶಕ ವಿದ್ವಾನ್ ಕಾಂಚನ ಈಶ್ವರ ಭಟ್ ಅವರ ಪಡೀಲು ವಿಜಯನಗರ ಬಡವಾಣೆಯಲ್ಲಿರುವ ಮನೆಗೆ ಕಳ್ಳರು ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಕುರಿತು ಇಂದು ಬೆಳಕಿಗೆ ಬಂದಿದೆ. ವಿದ್ವಾನ್ ಕಾಂಚನ ಈಶ್ವರ ಭಟ್ ಅವರು ಸಂಗೀತ ಕಾರ್ಯಕ್ರಮಕ್ಕೆ ಮೈಸೂರಿಗೆ ಹೋಗಿದ್ದು, ಅವರ ಪುತ್ರ ಬೆಂಗಳೂರಿಗೆ ಹೋಗಿದ್ದರು. ಇಂದು ಮನೆಗೆ ಹಿಂದಿರುಗಿದಾಗ ಕಳವಾದ ಕುರಿತು ಬೆಳಕಿಗೆ ಬಂದಿದೆ. ಅವರು ಮನೆಗೆ ಬಂದಾಗ ಮನೆಯ ಎದುರಿನ ಬಾಗಿಲ ಬೀಗ ಮುರಿದು

ಕಾಂಚನ ಈಶ್ವರ ಭಟ್ ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು Read More »

ಅಕ್ರಮ ಗೋ ಸಾಗಾಟ : ಸ್ಥಳೀಯರಿಂದ ದಿಗ್ಬಂಧನ

ಪುತ್ತೂರು: ಅಕ್ರಮ ಗೋವುಗಳನ್ನು ಪಿಕಪ್ ನಲ್ಲಿ ಸಾಗಾಟ ಮಾಡುತ್ತಿದ್ದರು ಎಂಬ ಆರೋಪದಡಿ ಸ್ಥಳೀಯರು ವಾಹನವನ್ನು ಅಡ್ಡಗಟ್ಟಿದ ಮತ್ತು ಜೀಪು ಚಾಲಕ  ಹಾಗೂ ಇನ್ನೋರ್ವರಿಗೆ ದಿಗ್ಭಂಧನ ವಿಧಿಸಿದ ಘಟನೆ ಎಲಿಮಲೆಯ ಅಂಬೆಕಲ್ಲಿನಲ್ಲಿ ನಡೆದಿದೆ. ಪಡ್ಡಾಯರಿನ ಹರೀಶ್ ಮತ್ತು ಕೋಣಾಜೆಯ ಇಬ್ರಾಹಿಂ ಎಂಬವರು ದಿಗ್ಭಂಧನಕ್ಕೆ ಒಳಗಾದವರು. ಸುಳ್ಯದ ಎಲಿಮಲೆಯ ಅಂಬೆಕಲ್ಲು ಕಡೆಯಿಂದ ಇಂದು ಮುಂಜಾನೆ 4 ದನಗಳನ್ನು ಪಿಕಪ್ ವಾಹನದಲ್ಲಿ ತುಂಬಿಸಿ ಸಾಗಾಟ ಮಾಡುತ್ತಿರುವ ಆರೋಪದಲ್ಲಿ ಎಲಿಮಲೆ ಅಂಬೆಕಲ್ಲು ರಸ್ತೆಯ ಕಲ್ಪಣೆ ಎಂಬಲ್ಲಿ ಸ್ಥಳೀಯರು ವಾಹನವನ್ನು ಅಡ್ಡ ಗಟ್ಟಿದರು. ಈ

ಅಕ್ರಮ ಗೋ ಸಾಗಾಟ : ಸ್ಥಳೀಯರಿಂದ ದಿಗ್ಬಂಧನ Read More »

ಮಾಜಿ ಶಾಸಕರ ವಿರುದ್ಧ ಅವಹೇಳನಕಾರಿ ಪೋಸ್ಟ್ | ಆರೋಪಿ ಪ್ರಜ್ವಲ್ ವಿರುದ್ಧ ಪ್ರಕರಣ ದಾಖಲು

ಪುತ್ತೂರು : ಮಾಜಿ ಶಾಸಕ ಸಂಜೀವ ಮಠಂದೂರು ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ಪ್ರಜ್ವಲ್ ರೈ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೇ.17 ರಂದು ವಾಟ್ಸಾಪ್ ಸಾಮಾಜಿಕ ಜಾಲತಾಣದಲ್ಲಿ ಪ್ರಜ್ವಲ್ ರೈ ಎಂಬಾತ ಕೀಳು ಮಟ್ಟದ ಅವಮಾನಕಾರಕ ಪದಗಳನ್ನು ಬಳಸಿ ತೇಜೋವಧೆ ಮಾಡಿದ್ದು, ಸಾಮಾಜಿಕ ಜಾಲತಾಣದ ಮುಖಾಂತರ ರೋಡಿನಲ್ಲಿ “ಕಲ್ಲೇಟು ಬೀಳುವುದು ಖಚಿತ ” ಎಂಬುದಾಗಿ ಜೀವ ಬೆದರಿಕೆ ಹಾಕಿದ್ದ. ಈ ಹಿನ್ನಲೆಯಲ್ಲಿ ಮಾಜಿ ಶಾಸಕರು ಪುತ್ತೂರು ನಗರ ಠಾಣೆಗೆ

ಮಾಜಿ ಶಾಸಕರ ವಿರುದ್ಧ ಅವಹೇಳನಕಾರಿ ಪೋಸ್ಟ್ | ಆರೋಪಿ ಪ್ರಜ್ವಲ್ ವಿರುದ್ಧ ಪ್ರಕರಣ ದಾಖಲು Read More »

ಶಾಸಕ ಹರೀಶ್ ಪೂಂಜ ಬಂಧನ ಸಾಧ್ಯತೆ | ವಕೀಲರ ತಂಡ ಭೇಟಿ

ಬೆಳ್ತಂಗಡಿ : ಹರೀಶ್ ಪೂಂಜ ಬಂಧನ ಸಾಧ್ಯತೆಯಿದ್ದು, ಈ ಹಿನ್ನಲೆಯಲ್ಲಿ ಹರೀಶ್ ಪೂಂಜ ಅವರ ನಿವಾಸಕ್ಕೆ ವಕೀಲರ ತಂಡ ಇಂದು ಭೇಟಿ ನೀಡಿದೆ. ಶಾಸಕ ಹರಿಶ್ ಪೂಂಜ ನಿವಾಸಕ್ಕೆ ಬೇಟಿ ನೀಡಿರುವ ವಕೀಲರ ತಂಡ ಪೊಲೀಸರ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಮನೆಯ ಹೊರಗಡೆ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾಯಿಸಿದ್ದಾರೆ. ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿಯು ನಡೆಯುತ್ತಿದೆ ಎನ್ನಲಾಗಿದೆ.

ಶಾಸಕ ಹರೀಶ್ ಪೂಂಜ ಬಂಧನ ಸಾಧ್ಯತೆ | ವಕೀಲರ ತಂಡ ಭೇಟಿ Read More »

ಪ್ಲಾಸ್ಟಿಕ್ ಬಳಕೆ ಪರಿಶೀಲನೆ | ವಿವಿಧ ಅಂಗಡಿ ಮಳಿಗೆಗೆ ದಾಳಿ ಮಾಡಿದ ನಗರಸಭೆ

ಪುತ್ತೂರು: ಪ್ಲಾಸ್ಟಿಕ್ ಬಳಕೆ ಪರಿಶೀಲನೆ ಕುರಿತು ವಿವಿಧ ವಾಣಿಜ್ಯ ಮಳಿಗೆಗಳಿಗೆ ನಗರಸಭೆ ಇಂದು ದಾಳಿ ಮಾಡಿದೆ. ಕೋರ್ಟ್ ರೋಡ್, ಮುಖ್ಯ ರಸ್ತೆ ಹಾಗೂ ದರ್ಬೆಯ ಕೆಲವು ಅಂಗಡಿ ಮಳಿಗೆಗೆ ದಾಳಿ ಮಾಡಿದ ಅಧಿಕಾರಿಗಳು ವಿವಿಧ ಅಂಗಡಿ ಮಳಿಗೆಗಳಿಂದ ಸುಮಾರು 40 ಕೆ.ಜಿ. ನಿಷೇಧಿತ ಪ್ಲಾಸ್ಟಿಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗರಸಭಾ ಸಹಾಯಕ ಕಾರ್ಯಪಾಲಕ ಅಭಿಯಂತರ ಶಬರಿನಾಥ್ ರೈ, ಕಂದಾಯ ಅಧಿಕಾರಿ ಪಕೀರ ಮೂಲ್ಯ, ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ ಕೆ, ಕಂದಾಯ ವಿಭಾಗದ ಸಿಬ್ಬಂದಿ ಪುರುಷೋತ್ತಮ್ ಹಾಗೂ ಸ್ವಚ್ಛತಾ

ಪ್ಲಾಸ್ಟಿಕ್ ಬಳಕೆ ಪರಿಶೀಲನೆ | ವಿವಿಧ ಅಂಗಡಿ ಮಳಿಗೆಗೆ ದಾಳಿ ಮಾಡಿದ ನಗರಸಭೆ Read More »

ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ | ಪ್ರಮುಖ ಆರೋಪಿಗಳಿಗೆ ಹಣ ಸಹಾಯ ಮಾಡಿದ ಸಹೋದರರು ಎನ್ ಐ ಎ ವಶಕ್ಕೆ

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಹುಬ್ಬಳ್ಳಿಯಲ್ಲಿ ಇಬ್ಬರು ಸಹೋದರರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಹುಬ್ಬಳ್ಳಿಯ ಗೌಸಿಯಾ ಟೌನ್ ನಿವಾಸಿ ಸಾಫ್ಟ್ವೇರ್ ಇಂಜಿನಿಯರ್ ಶೋಯೆಬ್ ಮಿರ್ಜಾ ಹಾಗೂ ಆತನ ಸಹೋದರ ಅಜೀಬ್ ಸದ್ಯ ಎನ್ಐಎ ವಶದಲ್ಲಿದ್ದು, ಇವರಿಬ್ಬರೂ ವಿದೇಶಿ ಹ್ಯಾಂಡ್ಲರ್ಗಳ ಸೂಚನೆಯಂತೆ ರಾಮೇಶ್ವರಂ ಕೆಫೆ ಸ್ಫೋಟದ ಪ್ರಮುಖ ಆರೋಪಿಗಳಾದ ಅಬ್ದುಲ್ ಮತೀನ್ ತಾಹ ಹಾಗೂ ಮುಸಾವೀರ್ ಹುಸೇನ್ ಗೆ ಹಣ ಸಹಾಯ ಮಾಡಿದ್ದಾರೆ ಎಂಬ ಮಾಹಿತಿ ಎನ್ಐಎ ಅಧಿಕಾರಿಗಳಿಗೆ

ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ | ಪ್ರಮುಖ ಆರೋಪಿಗಳಿಗೆ ಹಣ ಸಹಾಯ ಮಾಡಿದ ಸಹೋದರರು ಎನ್ ಐ ಎ ವಶಕ್ಕೆ Read More »

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಮತ್ತೊಂದು ಪ್ರಕರಣ ದಾಖಲು

ಬೆಳ್ತಂಗಡಿ: ಪೊಲೀಸರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ತಾಲೂಕು ಕಚೇರಿ ಎದುರು ಅನುಮತಿ ಪಡೆಯದೇ ಪ್ರತಿಭಟನೆ ನಡೆಸಿ ಬೆಳ್ತಂಗಡಿ ಪೊಲೀಸರಿಗೆ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದೆ. ಅರೆಸ್ಟ್ ಆಗಿರುವ ಕಾರ್ಯಕರ್ತರಿಗಾಗಿ ಪೊಲೀಸರ ಕಾಲರ್ ಹಿಡಿಯಲು ಸಿದ್ದ, ಬೆಂಗಳೂರಿನ ಡಿ.ಜೆ ಹಳ್ಳಿ, ಕೆ.ಜೆ ಹಳ್ಳಿಯ ಪೊಲೀಸ್ ಠಾಣೆಗೆ ಆದ ಗತಿಯನ್ನು ಬೆಳ್ತಂಗಡಿ ಠಾಣೆಗೂ ಕಾಣಿಸುತ್ತೇನೆಂದು ಬೆದರಿಕೆ ಹಾಕಿದ್ದರು. ಇದೀಗ ಪೊಲೀಸರಿಗೆ ಜೀವ ಬೆದರಿಕೆ ಒಡ್ಡಿದ ಹಾಗೂ ತಾಲೂಕು

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಮತ್ತೊಂದು ಪ್ರಕರಣ ದಾಖಲು Read More »

ವರ್ಗಾವಣೆ ಪತ್ರ ನೀಡದ ಮುಖ್ಯ ಶಿಕ್ಷಕರು | ವಿದ್ಯಾರ್ಥಿ ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣು

ಉಡುಪಿ : ವರ್ಗಾವಣೆ ಪ್ರಮಾಣ ಪತ್ರ ನೀಡಿಲ್ಲ ಎಂದು ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣನಾದ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಡೆದಿದೆ. ಬೈಂದೂರು ಸರ್ಕಾರಿ ಪ್ರೌಢಶಾಲೆಯ ಹೈಸ್ಕೂಲ್ ವಿದ್ಯಾರ್ಥಿ ನಿತಿನ್ ಆಚಾರಿ ಆತ್ಮಹತ್ಯೆ ಮಾಡಿಕೊಂಡವ. ವರ್ಗಾವಣೆ ಪ್ರಮಾಣ ಪತ್ರ ಟಿಸಿ ಕೊಡದೆ ಮುಖ್ಯ ಶಿಕ್ಷಕರು ಬೈದಿದ್ದಾರೆ ಎಂದು ಡೆತ್‍ ನೋಟ್ ಬರೆದಿಟ್ಟು ನಿತಿನ್ ಮನೆಯಲ್ಲಿ ಫ್ಯಾನ್ ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿತಿನ್ ಪಿಯುಸಿ ಸೇರ್ಪಡೆಯಾಗಲು ಟಿಸಿ ಪಡೆಯಲು ಶಾಲೆಗೆ ಹೋಗಿದ್ದಾನೆ. ಆದರೆ ಮುಖ್ಯ ಶಿಕ್ಷಕ

ವರ್ಗಾವಣೆ ಪತ್ರ ನೀಡದ ಮುಖ್ಯ ಶಿಕ್ಷಕರು | ವಿದ್ಯಾರ್ಥಿ ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣು Read More »

ಕಂಪೌಂಡ್ ಕುಸಿದು ಬಿದ್ದು ಶಾಲಾ ವಿದ್ಯಾರ್ಥಿನಿ ಮೃತ್ಯು

ಕೊಣಾಜೆ : ಶಾಲಾ ಕಂಪೌಂಡ್ ಕುಸಿದು ಬಿದ್ದ ಪರಿಣಾಮ ಹರೇಕಳ ಹಾಜಬ್ಬರ ನ್ಯೂಪಡ್ಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟ ಘಟನೆ ನಡೆದಿದೆ. ನ್ಯೂಪಡ್ಪು ನಿವಾಸಿ ಸಿದ್ದೀಖ್ ಹಾಗೂ ಜಮೀಲಾ ದಂಪತಿ ಪುತ್ರಿ ಶಾಝಿಯಾ ಬಾನು (7) ಮೃತಪಟ್ಟ ಬಾಲಕಿ. ಸಂಜೆ ವೇಳೆ ಸುರಿದ ಮಳೆಯಿಂದಾಗಿ ದುರ್ಘಟನೆ ಸಂಭವಿಸಿದೆ. ಹರೇಕಳ ಹಾಜಬ್ಬರ ಶಾಲೆಯಲ್ಲಿ ಕಳೆದ ಎರಡು ದಿನಗಳಿಂದ ಮುಡಿಪು ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳ ಶಿಬಿರ ನಡೆಯುತ್ತಿದೆ. ಶಾಲೆಯ ವಿದ್ಯಾರ್ಥಿಗಳಿಗೆ

ಕಂಪೌಂಡ್ ಕುಸಿದು ಬಿದ್ದು ಶಾಲಾ ವಿದ್ಯಾರ್ಥಿನಿ ಮೃತ್ಯು Read More »

error: Content is protected !!
Scroll to Top