ಅಪರಾಧ

ಪುಣೆ ಅತ್ಯಾಚಾರ ಆರೋಪಿ ಕೊನೆಗೂ ಸೆರೆ

13 ತಂಡಗಳಿಂದ 75 ತಾಸುಗಳಲ್ಲಿ ನಿರಂತರ ಹುಡುಕಾಟದ ಬಳಿಕ ಸೆರೆಸಿಕ್ಕ ಆರೋಪಿ ಪುಣೆ: ಇಲ್ಲಿನ ಸ್ವಾರ್ಗೇಟ್‌ ಸರಕಾರಿ ಬಸ್‌ ಡಿಪೊದಲ್ಲಿ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು 75 ತಾಸುಗಳ ತೀವ್ರ ಕಾರ್ಯಾಚರಣೆಯ ಬಳಿಕ ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪುಣೆಯ ಗುನಾತ್ ಗ್ರಾಮದ ದತ್ತಾತ್ರೇಯ ರಾಮದಾಸ್ ಗಡೆ (37) ಎಂದು ಗುರುತಿಸಲಾಗಿದೆ. ಸುಮಾರು 75 ಗಂಟೆಗಳ ಕಾಲ ಆತನ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿ, ಶ್ರೀರೂರ್ ತಾಲೂಕಿನಿಂದ ಬಂಧಿಸಿದ್ದಾರೆ. ಪೊಲೀಸರ ಮೂಗಿನಡಿಯಲ್ಲೇ ನಡೆದ ಈ […]

ಪುಣೆ ಅತ್ಯಾಚಾರ ಆರೋಪಿ ಕೊನೆಗೂ ಸೆರೆ Read More »

ಸ್ನೇಹಮಯಿ ಕೃಷ್ಣ ಮೇಲೆ ಮಾಟಮಂತ್ರ : ಮಹಿಳಾ ಪೊಲೀಸ್‌ ಅಧಿಕಾರಿ ನಂಟು?

ಹೆಸರು ಬಹಿರಂಗವಾದ ಬಳಿಕ ನಾಪತ್ತೆಯಾಗಿರುವ ಉಡುಪಿಯ ಮಹಿಳಾ ಸಬ್‌ಇನ್‌ಸ್ಪೆಕ್ಟರ್‌ ಮಂಗಳೂರು : ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ಹಾಗೂ ಗೋವಿಂದರಾಜು ಸೇರಿ ಹಲವರ ಮೇಲೆ ವಾಮಾಚಾರ ನಡೆಸಿದ ಘಟನೆಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯ ಕೈವಾಡವಿರುವ ಅನುಮಾನ ವ್ಯಕ್ತವಾಗಿದೆ.ವಾಮಾಚಾರಕ್ಕೆ ಸಂಬಂಧಿಸಿ ಈಗಾಗಲೇ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರಿನ ಅಶೋಕ್ ನಗರದ ಸ್ಮಶಾನದಲ್ಲಿ ಇಬ್ಬರು ಆರೋಪಿಗಳು ಕಾಳಿಕಾಂಬಾ ಗುಡಿಯ ಅರ್ಚಕರಿಗೆ ವಿಚಾರ ತಿಳಿಸದೆ ಕುರಿಗಳನ್ನು ಬಲಿ ನೀಡಿ, ವಾಮಾಚಾರ ಮಾಡಿದ್ದಾರೆ ಎಂದು ಪೊಲೀಸರು ತನಿಖೆಯಲ್ಲಿ ತಿಳಿದುಬಂದಿತ್ತು.ಈಗ ವಾಮಾಚಾರ

ಸ್ನೇಹಮಯಿ ಕೃಷ್ಣ ಮೇಲೆ ಮಾಟಮಂತ್ರ : ಮಹಿಳಾ ಪೊಲೀಸ್‌ ಅಧಿಕಾರಿ ನಂಟು? Read More »

ಅಪ್ರಾಪ್ತೆ ಬಾಲಕಿಗೆ ಅಶ್ಲೀಲ ಚಿತ್ರ ತೋರಿಸಿ ಲೈಂಗಿಕ ಕಿರುಕಳ ನೀಡಿದ ಯುವಕ | ಆರೋಪಿ ವಿರುದ್ದ ಫೋಕ್ಸೋ ಪ್ರಕರಣ  ದಾಖಲು

ಪುತ್ತೂರು : ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರಗಳನ್ನು  9 ವರ್ಷದ ಅಪ್ರಾಪ್ತ ಬಾಲಕಿಗೆ  ತೋರಿಸಿ,  ಲೈಂಗಿಕ ಕಿರುಕುಳದ ಆರೋಪದ ಹಿನ್ನಲೆ ಯುವಕನ ವಿರುದ್ಧ ಫೋಕ್ಸೋ ಪ್ರಕರಣ ದಾಖಲಾಗಿದೆ. ಮಹಮ್ಮದ್ ಇರ್ಷಾದ್(20) ಲೈಂಗಿಕ ಕಿರುಕುಳ ನೀಡಿದ ಆರೋಪಿ ಎನ್ನಲಾಗಿದೆ. ಮಹಮ್ಮದ್ ಇರ್ಷಾದ್ ವಿರುದ್ದ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಪ್ರಕರಣ ದಾಖಲಾಗಿದೆ.  ಆರೋಪಿ 9 ವರ್ಷದ ಅಪ್ರಾಪ್ತಗೆ ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರ ತೋರಿಸಿ ಲೈಂಗಿಕ ಕಿರುಕುಳ ನೀಡಿರುವ ಕುರಿತು ಫೆ.21ರಂದು ಅಪ್ರಾಪ್ತೆಯ ಪೋಷಕರು ಹಾಗೂ ಅಪ್ರಾಪ್ತೆ ಬಾಲಕಿ ದೂರು

ಅಪ್ರಾಪ್ತೆ ಬಾಲಕಿಗೆ ಅಶ್ಲೀಲ ಚಿತ್ರ ತೋರಿಸಿ ಲೈಂಗಿಕ ಕಿರುಕಳ ನೀಡಿದ ಯುವಕ | ಆರೋಪಿ ವಿರುದ್ದ ಫೋಕ್ಸೋ ಪ್ರಕರಣ  ದಾಖಲು Read More »

ಪುಣೆ ಸ್ವಾರ್ಗೇಟ್‌ ಬಸ್‌ ನಿಲ್ದಾಣದಲ್ಲಿ ಅತ್ಯಾಚಾರ : ದೇಶಾದ್ಯಂತ ಆಕ್ರೋಶ

ನಿಲ್ಲಿಸಿದ್ದ ಬಸ್‌ಗಳಲ್ಲಿ ರಾಶಿ ರಾಶಿ ಕಾಂಡೋಮ್‌, ಬಿಯರ್‌ ಬಾಟಲಿ, ಒಳ ಉಡುಪು ಪತ್ತೆ ಪುಣೆ : ಪುಣೆಯ ಜನನಿಬಿಡ ಸ್ವಾರ್ಗೇಟ್ ಸರಕಾರಿ ಬಸ್​ ನಿಲ್ದಾಣದಲ್ಲಿ ಮಂಗಳವಾರ ಮುಂಜಾನೆ ನಡೆದಿರುವ ಅತ್ಯಾಚಾರ ಕೃತ್ಯ ದೇಶಾದ್ಯಂತ ಆಕ್ರೋಶದ ಅಲೆಯೆಬ್ಬಿಸಿದೆ. ನಿಲ್ಲಿಸಿದ್ದ ಸ್ಟೇಷನರಿ ಬಸ್ಸಿನೊಳಗೆ 26 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ. ಹಳೆಯ ಬಳಕೆಯಾಗದ ಬಸ್​ಗಳನ್ನು ಅಲ್ಲಿ ನಿಲ್ಲಿಸಲಾಗಿದ್ದು, ಈ ಬಸ್​ಗಳಲ್ಲಿ ರಾಶಿಗಟ್ಟಲೆ ಕಾಂಡೋಮ್, ಮದ್ಯದ ಬಾಟಲಿಗಳು, ಮಹಿಳೆಯರ ಒಳಉಡುಪುಗಳು ಪತ್ತೆಯಾಗಿದ್ದು ಬಹಳ ಕಾಲದಿಂದ ಇಲ್ಲಿ ಅತ್ಯಾಚಾರ ಮತ್ತಿತರ ಅಪರಾಧ

ಪುಣೆ ಸ್ವಾರ್ಗೇಟ್‌ ಬಸ್‌ ನಿಲ್ದಾಣದಲ್ಲಿ ಅತ್ಯಾಚಾರ : ದೇಶಾದ್ಯಂತ ಆಕ್ರೋಶ Read More »

ಸುಳ್ಯದ ವಿದ್ಯಾರ್ಥಿನಿ ಆತ್ಮಹತ್ಯೆ

ಸುಳ್ಯ: ಕೆವಿಜಿ ದಂತ ಮಹಾವಿದ್ಯಾಲಯದ ಬಿಡಿಎಸ್‌ ವಿದ್ಯಾರ್ಥಿನಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬಿಜಾಪುರ ಮೂಲದ ಕೃತಿಕಾ ಹಾಸ್ಟೆಲ್ ನಲ್ಲಿ  ಆತ್ಮಹತ್ಯೆ ಮಾಡಿಕೊಂಡವರು. ಆತ್ಮಹತ್ಯೆ ಹಿಂದೆ ಪುತ್ತೂರಿನ ಪಾಲಿಟೆಕ್ನಿಕ್ ವಿದ್ಯಾರ್ಥಿಯೊರ್ವನ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು,. ಸುಳ್ಯ ಪೋಲಿಸರು ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

ಸುಳ್ಯದ ವಿದ್ಯಾರ್ಥಿನಿ ಆತ್ಮಹತ್ಯೆ Read More »

ತೆಲುಗು ನಟ ಪೋಸಾನಿ ಕೃಷ್ಣ ಮುರಳಿ ಬಂಧನ

ಜನಪ್ರಿಯ ನಟನಿಗೆ ಮುಳುವಾದ ಹೇಳಿಕೆ ಹೈದರಾಬಾದ್‌: ತೆಲುಗು ಚಿತ್ರರಂಗದ ಹಿರಿಯ ನಟ ಹಾಗೂ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಸದಸ್ಯ ಪೋಸಾನಿ ಕೃಷ್ಣ ಮುರಳಿ ಅವರನ್ನು ನಿನ್ನೆ ರಾತ್ರಿ ಆಂಧ್ರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಸಮುದಾಯವೊಂದರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಕುರಿತು ಪೋಸಾನಿ ಕೃಷ್ಣ ಮುರಳಿ ವಿರುದ್ಧ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ನಟನನ್ನು ಬಂಧಿಸಲಾಗಿದೆ. ಈ ಹೇಳಿಕೆಯು ಎರಡು ಗುಂಪುಗಳ ನಡುವೆ ವೈಷಮ್ಯಕ್ಕೂ ಕಾರಣವಾಗಿತ್ತು.ನಟನ ವಿರುದ್ಧ ಓಬುಲವಾರಿಪಲ್ಲಿ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ ಎಸ್‌ಸಿ/ಎಸ್‌ಟಿ ಕಾಯ್ದೆಯ ಅಡಿಯಲ್ಲಿ

ತೆಲುಗು ನಟ ಪೋಸಾನಿ ಕೃಷ್ಣ ಮುರಳಿ ಬಂಧನ Read More »

ಬಿಟ್‌ ಕಾಯಿನ್‌ ಹಗರಣ : 60 ಕಡೆ ಸಿಬಿಐ ದಾಳಿ

ಬೆಂಗಳೂರು: ಬಿಟ್‌ ಕಾಯಿನ್‌ ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸೇರಿ ದೇಶದ 60 ಕಡೆ ಸಿಬಿಐ ದಾಳಿ ನಡೆಸಿದೆ. ಬೆಂಗಳೂರು, ಪುಣೆ, ಚಂಡೀಗಡ, ದೆಹಲಿ ಎನ್‌ಸಿಆರ್, ನಾಂದೇಡ್, ಕೊಲ್ಲಾಪುರ ಸೇರಿದಂತೆ ಹಲವೆಡೆ ಸಿಬಿಐ ದಾಳಿ ನಡೆಸಿ ಶೋಧಕಾರ್ಯ ಮುಂದುವರಿಸಿದೆ. ಪ್ರಮುಖ ಆರೋಪಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ ಮಾಡಿ ಪರಿಶೀಲನೆ ನಡೆಸಿದೆ. ಬಿಟ್ ಕಾಯಿನ್, ಕ್ರಿಪ್ಟೋ ಕರೆನ್ಸಿ ಹಗರಣ ಸಂಬಂಧ ದೇಶದ ಹಲವು ರಾಜ್ಯಗಳಲ್ಲಿ ಎಫ್‌ಐಆರ್ ದಾಖಲಾಗಿತ್ತು. ಬಳಿಕ ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿತ್ತು. ದೊಡ್ಡಮಟ್ಟದ

ಬಿಟ್‌ ಕಾಯಿನ್‌ ಹಗರಣ : 60 ಕಡೆ ಸಿಬಿಐ ದಾಳಿ Read More »

ಉಳ್ಳಾಲ ಕೋಟಕಾರು ಸಿಎ ಬ್ಯಾಂಕ್‍ ದರೋಡೆ | ಮತ್ತೆ ಇಬ್ಬರು ಆರೋಪಿಗಳ ಬಂಧನ

ಉಳ್ಳಾಲ:  ತಾಲ್ಲೂಕಿನ ಕೋಟಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಕೆ.ಸಿ.ರೋಡ್ ಶಾಖೆಯಲ್ಲಿ ಜ.17 ರಂದು ನಡೆದ ದರೋಡೆ ಪ್ರಕರಣದ ಸಂಚು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇಬ್ಬರು ಸ್ಥಳೀಯ ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ಕನ್ಯಾನದ ಭಾಸ್ಕರ್ ಬೆಳ್ಳವಾಡ ಅಲಿಯಾಸ್ ಶಶಿ ಥೇವರ್ (69) ಹಾಗೂ ಉಳ್ಳಾಲ ತಾಲ್ಲೂಕಿನ ಕೆ.ಸಿ.ರೋಡ್‌ನ ಮಹಮ್ಮದ್ ನಜೀರ್ (65) ಬಂಧಿತ ಆರೋಪಿಗಳು. ಈ ಮೂಲಕ ಪ್ರಕರಣದಲ್ಲಿ, ಒಟ್ಟಾರೆ ಆರು ಜನರನ್ನುಈ ವರೆಗೆ ಬಂಧಿಸಲಾಗಿದೆ. ಮುಂಬೈನ ದರೋಡೆಕೋರರ ತಂಡಕ್ಕೆ ಈ

ಉಳ್ಳಾಲ ಕೋಟಕಾರು ಸಿಎ ಬ್ಯಾಂಕ್‍ ದರೋಡೆ | ಮತ್ತೆ ಇಬ್ಬರು ಆರೋಪಿಗಳ ಬಂಧನ Read More »

ಕೆರೆಗೆ ಹಾರಿ ಯುವಕ ಆತ್ಮಹತ್ಯೆ

ಉಪ್ಪಿನಂಗಡಿ: ಯುವಕನೋರ್ವ ತನ್ನ ಮನೆಯ ತೋಟದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಪ್ಪಿನಂಗಡಿ ಸಮೀಪದ ಪೆರಿಯಡ್ಕದಲ್ಲಿ ನಡೆದಿದೆ. ಕಿಂಡೋವು ಜಿನ್ನಪ್ಪ ಗೌಡ ಎಂಬವರ ಪುತ್ರ ಶ್ರೀನಿವಾಸ ಆತ್ಮಹತ್ಯೆಗೈದ ಯುವಕ ಕೂಲಿ ಕಾರ್ಮಿಕನಾಗಿದ್ದ ಶ್ರೀನಿವಾಸ ಸೋಮವಾರ ಸಂಜೆಯಿಂದ ನಾಪತ್ತೆಯಾಗಿದ್ದು, ಮಂಗಳವಾರ ಮುಂಜಾನೆ ಆತನ ಶವ ತೋಟದಲ್ಲಿನ ಕೆರೆಯಲ್ಲಿ ಪತ್ತೆಯಾಗಿತ್ತು ಈತನ ಸಾವಿಗೆ ಕಾರಣ ತಿಳಿದುಬಂದಿಲ್ಲ ಉಪ್ಪಿನಂಗಡಿ ಪೋಲಿಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ

ಕೆರೆಗೆ ಹಾರಿ ಯುವಕ ಆತ್ಮಹತ್ಯೆ Read More »

ಮಲ್ಪೆ ಸೈಂಟ್‌ ಮೇರಿಸ್‌ ದ್ವೀಪದ ಸಮೀಪ ಅನುಮಾನಾಸ್ಪದ ದೋಣಿ ಪತ್ತೆ

ಸತಾಯಿಸುತ್ತಿದ್ದ ಮಾಲೀಕನಿಂದ ಪಾರಾಗಲು ತಪ್ಪಿಸಿಕೊಂಡು ಬಂದ ತಮಿಳುನಾಡಿನ ಮೀನುಗಾರರು 4000 ಕಿ.ಮೀ. ಮೀನುಗಾರಿಕೆ ದೋಣಿಯಲ್ಲೆ ಪ್ರಯಾಣ ಉಡುಪಿ : ಮಲ್ಪೆ ಸೈಂಟ್‌ ಮೇರಿಸ್‌ ದ್ವೀಪದ ಸಮೀಪ ಆಳ ಸಮುದ್ರದಲ್ಲಿ ಅನುಮಾನಸ್ಪದ ವಿದೇಶಿ ಮೀನುಗಾರಿಕೆ ದೋಣಿಯೊಂದು ಪತ್ತೆಯಾಗಿದೆ. ಮಲ್ಪೆಯ ಸೈಂಟ್ ಮೇರಿಸ್ ದ್ವೀಪದಲ್ಲಿ ಓಮಾನ್ ಮೂಲದ ಮೀನುಗಾರಿಕಾ ಬೋಟ್ ಪತ್ತೆಯಾಗಿದ್ದು, ಇದು ಓಮಾನ್ ಹಾರ್ಬರ್​ನಿಂದ ತಪ್ಪಿಸಿಕೊಂಡು ಭಾರತೀಯ ಸಮುದ್ರಕ್ಕೆ ಬಂದಿದ್ದ ಬೋಟ್ ಎಂಬುದು ತಿಳಿದುಬಂದಿದೆ. ಬೋಟ್​​​ನಲ್ಲಿ ತಮಿಳುನಾಡು ಮೂಲದ ಮೀನುಗಾರರು ಪತ್ತೆಯಾಗಿದ್ದಾರೆ.ಓಮಾನ್ ಮೂಲದ ಬೋಟ್​ನಲ್ಲಿ ಮೀನುಗಾರಿಕೆ ವೃತ್ತಿ ನಡೆಸುತ್ತಿದ್ದ

ಮಲ್ಪೆ ಸೈಂಟ್‌ ಮೇರಿಸ್‌ ದ್ವೀಪದ ಸಮೀಪ ಅನುಮಾನಾಸ್ಪದ ದೋಣಿ ಪತ್ತೆ Read More »

error: Content is protected !!
Scroll to Top