ದುಷ್ಕರ್ಮಿಗಳಿಂದ ಕೆಎಸ್ ಆರ್ ಟಿಸಿ ಬಸ್ ಚಾಲಕ-ನಿರ್ವಾಹಕರಿಗೆ ಹಲ್ಲೆ | ದುಷ್ಕರ್ಮಿಗಳನ್ನು ಬಂಧಿಸುವಂತೆ ಪ್ರಯಾಣಿಕರಿಂದ ಒತ್ತಾಯ
ಕಬಕ: ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಘಟನೆ ಕಬಕದಲ್ಲಿ ಇಂದು ನಡೆದಿದೆ. ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಈ ಹಲ್ಲೆ ನಡೆದಿದ್ದು, ಉರಿಮಜಲು ಬಳಿ ಕಬಕ-ವಿಟ್ಲ ರಸ್ತೆಯಲ್ಲಿನ ಹಾರ್ಡ್ ವೇರ್ ಅಂಗಡಿಯೊಂದಕ್ಕೆ ಸೇರಿದ ಪಿಕಪ್ ವಾಹನದಲ್ಲಿ ಕಬಕದಿಂದ ಹಿಂಬಾಲಿಸಿಕೊಂಡು ಬಂದು ಉರಿಮಜಲು ಎಂಬಲ್ಲಿ ಕೆಎಸ್‌ಆರ್‌ಟಿಸಿ ಚಾಲಕ-ನಿರ್ವಾಹಕನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಪ್ರಯಾಣಿಕರ ಮುಂದೆಯೇ ಬಸ್ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿ ಜೀವಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಕೆಎಸ್‌ಆರ್‌ಟಿಸಿ ಬಸ್ ಸೈಡ್ ಕೊಡಲಿಲ್ಲ […]









