ಅಪರಾಧ

ಮಂಗಳೂರು ದರೋಡೆ ಕೃತ್ಯ ಆರೋಪಿಗಳ ಬಂಧನಕ್ಕೆ ನೆರವಾದದ್ದು ಹಳೆ ಫಿಯೆಟ್‌ ಕಾರು

ನಾಲ್ಕೇ ದಿನದಲ್ಲಿ ಪ್ರಕರಣ ಭೇದಿಸಲು ನಡೆಸಿದ ತನಿಖೆ ಥ್ರಿಲ್ಲರ್‌ ಸಿನೆಮಾಗಿಂತಲೂ ರೋಚಕ ಮಂಗಳೂರು: ಉಳ್ಳಾಲ ಸಮೀಪದ ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಖದೀಮರನ್ನು ಮಂಗಳೂರು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ತಮಿಳುನಾಡಿನ ತಿರುವನ್ನೇಲಿಯಲ್ಲಿ ಮುರುಗಂಡಿ ಥೇವರ್‌, ಮನಿವೆಣ್ಣನ್ ಹಾಗೂ ಪ್ರಕಾಶ್​ ಅಲಿಯಾಸ್ ಜೋಶ್ವಾ ಎಂಬವರನ್ನು ಬಂಧಿಸಲಾಗಿದೆ. ಮುರುಗಂಡಿ ಥೇವರ್ ಈ ಪ್ರಕರಣದ ಮುಖ್ಯ ಕಿಂಗ್‌ಪಿನ್ ಎನ್ನಲಾಗಿದೆ.ಆದರೆ ಈ ದರೋಡೆ ಕೃತ್ಯದಲ್ಲಿ ಇನ್ನೂ ಏಳು ಮಂದಿ ಇದ್ದಾರೆ. ಈ ಪೈಕಿ ಮೂವರು ನೇರವಾಗಿ ದರೋಡೆ ಕೃತ್ಯದಲ್ಲಿ […]

ಮಂಗಳೂರು ದರೋಡೆ ಕೃತ್ಯ ಆರೋಪಿಗಳ ಬಂಧನಕ್ಕೆ ನೆರವಾದದ್ದು ಹಳೆ ಫಿಯೆಟ್‌ ಕಾರು Read More »

ಗೋ ಸಂರಕ್ಷಣಾ ಸಮಿತಿ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ | ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಸ್ಥಾನವನ್ನು ಪಡೆಯುವ ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕು : ನಾ. ಸೀತಾರಾಮ್

ಪುತ್ತೂರು : ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಸ್ಥಾನವನ್ನು ಪಡೆಯುವ ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕು ಎನ್ನುವ ಒತ್ತಾಯ ಈಗಾಗಲೇ ಇದೆ. ಆದರೆ ಗೋವನ್ನು ` ರಾಷ್ಟ್ರೀಯ ಸಂಪತ್ತು’ ಎಂದು ಘೋಷಿಸುವಂತೆ ಆಗ್ರಹಿಸಬೇಕಾಗಿದೆ. ತಾಯಿ ಸಮಾನಾದ ಗೋವಿನ ಮೇಲೆ ಕ್ರೌರ್ಯ ,  ಮಾನಸಿಕತೆ ಪ್ರದರ್ಶಿಸುವವರು ಮನುಷ್ಯರೇ ಅಲ್ಲ ಎಂದು ರಾಷ್ಟೀಯ ಸ್ವಯಂ ಸೇವಕ ಸಂಘದ ಪ್ರಾಂತ ಸಹ ಸೇವಾ ಪ್ರಮುಖ್ ನಾ. ಸೀತಾರಾಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಗೋಮಾತೆಯ ಕೆಚ್ಚಲು ಕತ್ತರಿಸಿದ ವಿಕೃತ ಮನಸ್ಸುಗಳನ್ನು ಖಂಡಿಸಿ ಪುತ್ತೂರು ಜಿಲ್ಲಾ

ಗೋ ಸಂರಕ್ಷಣಾ ಸಮಿತಿ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ | ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಸ್ಥಾನವನ್ನು ಪಡೆಯುವ ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕು : ನಾ. ಸೀತಾರಾಮ್ Read More »

ರಾಜ್ಯದಲ್ಲಿ ಇನ್ನೊಂದು ದರೋಡೆ : ಉದ್ಯಮಿಯ ಕಾರು, ಹಣ ಕಸಿದುಕೊಂಡು ಪರಾರಿ

ಇನ್ನೊವಾ ಕಾರನ್ನು ಅಡ್ಡಗಟ್ಟಿ ದರೋಡೆ ಮಾಡಿದ ಮುಸುಕುಧಾರಿಗಳು ಮೈಸೂರು : ಉಳ್ಳಾಲ ತಾಲೂಕಿನ ಕೋಟೆಕಾರಿನ ಬ್ಯಾಂಕ್‌ ದರೋಡೆ ಮತ್ತು ಬೀದರ್‌ನಲ್ಲಿ ಇಬ್ಬರನ್ನು ಸಾಯಿಸಿ ಎಟಿಎಂಗೆ ತುಂಬಿಸುವ ಹಣ ದರೋಡೆ ಮಾಡಿದ ಕೃತ್ಯಗಳು ಮರೆಯುವ ಮುನ್ನವೇ ರಾಜ್ಯದಲ್ಲಿ ಇದೇ ಮಾದರಿಯ ಇನ್ನೊಂದ ದರೋಡೆ ನಡೆದಿದೆ. ಮೈಸೂರಿನಲ್ಲಿ ಹಾಡಹಗಲೇ ಕಾರು ಅಡ್ಡಗಟ್ಟಿದ ದುಷ್ಕರ್ಮಿಗಳು ಕಾರು ಸಮೇತ ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ. ಮೈಸೂರು ತಾಲೂಕಿನ ಹಾರೋಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ. ಕೇರಳ ಮೂಲದ ಉದ್ಯಮಿ ಸೂಫಿ ಎಂಬವರಿಗೆ ಸೇರಿದ ಇನ್ನೊವಾ

ರಾಜ್ಯದಲ್ಲಿ ಇನ್ನೊಂದು ದರೋಡೆ : ಉದ್ಯಮಿಯ ಕಾರು, ಹಣ ಕಸಿದುಕೊಂಡು ಪರಾರಿ Read More »

ಮಹಾಕುಂಭಮೇಳದಲ್ಲಿ ಬೆಂಕಿ ಅವಘಡ : ಉನ್ನತ ತನಿಖೆಗೆ ಆದೇಶ

ಸಿಲಿಂಡರ್‌ಗಳು ಸ್ಫೋಟಿಸಿ ಕನಿಷ್ಠ 25 ಟೆಂಟ್‌ಗಳು ಭಸ್ಮ ಪ್ರಯಾಗ್‌ರಾಜ್‌: ಮಹಾಕುಂಭಮೇಳ ನಡೆಯುವ ಸ್ಥಳದಲ್ಲಿ ಸಾಧುಗಳಿಗೆ ತಂಗಲು ನಿರ್ಮಿಸಿದ್ದ ಕನಿಷ್ಠ 25 ಟೆಂಟ್‌ಗಳು ನಿನ್ನೆ ಮಧ್ಯಾಹ್ನ ಸಂಭವಿಸಿದ ಭೀಕರ ಬೆಂಕಿ ದುರಂತದಲ್ಲಿ ಭಸ್ಮವಾಗಿವೆ. ಮಹಾಕುಂಭಮೇಳದ ಸೆಕ್ಟರ್ 19ರಲ್ಲಿ 2-3 ಸಿಲಿಂಡರ್‌ಗಳು ಸ್ಫೋಟಗೊಂಡು ಟೆಂಟ್‌ಗಳಿಗೆ ಬೆಂಕಿ ಹತ್ತಿಕೊಂಡಿತ್ತು. ಅದೃಷ್ಟವಶಾತ್ ಯಾವುದೇ ಸಾವು ಸಂಭವಿಸಿಲ್ಲ. ಟೆಂಟ್​ಗಳು ಮಾತ್ರ ಬೆಂಕಿಗೆ ಆಹುತಿಯಾಗಿವೆ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಯಾರಿಗೂ ಕೂಡ ಗಾಯಗಳಾಗಿಲ್ಲ. ಪರಿಸ್ಥಿತಿ ಹತೋಟಿಗೆ ತರಲಾಗಿದೆ ಎಂದು ಪ್ರಯಾಗ್​ರಾಜ್​​ ಎಡಿಜಿಪಿ ಭಾನು ಭಾಸ್ಕರ್ ತಿಳಿಸಿದ್ದಾರೆ. ಅಗ್ನಿ

ಮಹಾಕುಂಭಮೇಳದಲ್ಲಿ ಬೆಂಕಿ ಅವಘಡ : ಉನ್ನತ ತನಿಖೆಗೆ ಆದೇಶ Read More »

ಕೋಟೆಕಾರು ಬ್ಯಾಂಕ್‌ ದರೋಡೆ : ಸ್ಥಳೀಯ ವ್ಯಕ್ತಿಯ ಕೈವಾಡ ಶಂಕೆ

ಪಕ್ಕಾ ಪ್ಲಾನ್‌ ಮಾಡಿ ನಡೆಸಿದ ಪರ್ಫೆಕ್ಟ್‌ ದರೋಡೆ ಮಂಗಳೂರು: ಇಡೀ ರಾಜ್ಯದಲ್ಲಿ ಸಂಚಲನಕ್ಕೆ ಕಾರಣವಾಗಿರುವ ಕೋಟೆಕಾರು ಸಹಕಾರಿ ಬ್ಯಾಂಕ್‌ ದರೋಡೆ ಕೃತ್ಯದ ಹಿಂದೆ ಸ್ಥಳೀಯರ ಕೈವಾಡವಿರುವ ಬಲವಾದ ಶಂಕೆ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದು ಬಹಳ ವ್ಯವಸ್ಥಿತವಾಗಿ ಪ್ಲಾನ್‌ ರೂಪಿಸಿ ಮಾಡಿದ ದರೋಡೆ. ಸ್ಥಳೀಯ ಎಲ್ಲ ವಿಚಾರಗಳನ್ನು ತಿಳಿದುಕೊಂಡು ಹಾಡಹಗಲೇ ದರೋಡೆ ಮಾಡಲಾಗಿದೆ. ಬ್ಯಾಂಕ್‌ ಇರುವ ಸ್ಥಳ, ಬ್ಯಾಂಕಿನಲ್ಲಿರುವ ಚಿನ್ನ ಮತ್ತು ನಗದು ಹಣದ ಮಾಹಿತಿ ಮತ್ತು ತಪ್ಪಿಸಿಕೊಳ್ಳುವ ದಾರಿ ತಿಳಿದವರು ಯಾರೋ

ಕೋಟೆಕಾರು ಬ್ಯಾಂಕ್‌ ದರೋಡೆ : ಸ್ಥಳೀಯ ವ್ಯಕ್ತಿಯ ಕೈವಾಡ ಶಂಕೆ Read More »

ಸೈಫ್‌ಗೆ ಇರಿದ ಆರೋಪಿ ಬಾಂಗ್ಲಾದೇಶದ ಅಕ್ರಮ ನುಸುಳುಕೋರ

ಹಿಂದು ಹೆಸರು ಇಟ್ಟುಕೊಂಡು ನೌಕರಿಗೆ ಸೇರುತ್ತಿದ್ದ ಆರೋಪಿ ಮುಂಬಯಿ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಹತ್ಯಾಯತ್ನ ಮಾಡಿದ ವ್ಯಕ್ತಿಯನ್ನು ಘಟನೆ ನಡೆದ 70 ಗಂಟೆಗಳ ಬಳಿಕ ಮುಂಬಯಿ ಪೊಲೀಸರು ಬಂಧಿಸಿದ್ದಾರೆ. ಭಾನುವಾರ ಬೆಳ್ಳಂಬೆಳಗ್ಗೆ ಥಾಣೆಯಲ್ಲಿ ಈತ ಸಿಕ್ಕಿಬಿದ್ದಿದ್ದಾನೆ. ವಿಚಾರಣೆಯಿಂದ ಈತ ಬಾಂಗ್ಲಾದೇಶದ ಅಕ್ರಮ ನುಸುಳುಕೋರ ಎಂಬ ಮಾಹಿತಿ ಹೊರಬಿದ್ದಿದೆ.ಬಂಧಿತ ಆರೋಪಿ ಭಾರತೀಯನಲ್ಲ, ಬದಲಿಗೆ ಬಾಂಗ್ಲಾದೇಶದ ನುಸುಳುಕೋರ ಎಂಬ ಅನುಮಾನವಿದೆ ಎಂದು ಡಿಸಿಪಿ ದೀಕ್ಷಿತ್ ಗೆಡಾಮ್‌ ತಿಳಿಸಿದ್ದಾರೆ. ಆರೋಪಿ ಬಳಿ ಭಾರತಕ್ಕೆ ಸಂಬಂಧಿಸಿದ ಆಧಾರ್ ಕಾರ್ಡ್

ಸೈಫ್‌ಗೆ ಇರಿದ ಆರೋಪಿ ಬಾಂಗ್ಲಾದೇಶದ ಅಕ್ರಮ ನುಸುಳುಕೋರ Read More »

ಥೈರಾಯ್ಡ್‌, ಬಿಪಿ, ಶುಗರ್‌ನಿಂದ ಬಳಲುತ್ತಿದ್ದಾರೆ ಶರಣಾದ ನಕ್ಸಲರು

ವೈದ್ಯಕೀಯ ಪರೀಕ್ಷೆ ವೇಳೆ ತೀವ್ರ ಆರೋಗ್ಯ ಸಮಸ್ಯೆಯಿರುವುದು ಪತ್ತೆ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು ಇತ್ತೀಚೆಗೆ ಶರನಾಗಿರುವ ಮಲೆನಾಡಿನ ಆರು ನಕ್ಸಲರು ವಿವಿಧ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಆರು ನಕ್ಸಲರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಚಿಕ್ಕಮಗಳೂರು ನಗರದ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಈ ವೇಳೆ ಅವರು ವೈದ್ಯರ ಬಳಿ ತಮ್ಮ ಅನಾರೋಗ್ಯ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ತನಿಖಾಧಿಕಾರಿ ಕೊಪ್ಪದ ಡಿವೈಎಸ್ಪಿ ಬಾಲಾಜಿ ಸಿಂಗ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತಿನಲ್ಲಿ ನಕ್ಸಲರನ್ನು ಗುರುವಾರ ರಾತ್ರಿಯೇ

ಥೈರಾಯ್ಡ್‌, ಬಿಪಿ, ಶುಗರ್‌ನಿಂದ ಬಳಲುತ್ತಿದ್ದಾರೆ ಶರಣಾದ ನಕ್ಸಲರು Read More »

ವರದಕ್ಷಿಣೆ ಕಿರುಕುಳ, ಅನೈತಿಕ ಸಂಬಂಧ : ಎಸ್‌ಐ ವಿರುದ್ಧ ಪತ್ನಿ ದೂರು

ಕಾಪು ಠಾಣೆಯಲ್ಲಿರುವಾಗ ಅನೈತಿಕ ಸಂಬಂಧವಿತ್ತು ಎಂದು ಆರೋಪಿಸಿದ ಪತ್ನಿ ಚಿಕ್ಕಮಗಳೂರು: ಕಳಸ ಪಿಎಸ್‌ಐ ನಿತ್ಯಾನಂದ ಗೌಡ ವಿರುದ್ಧ ಅವರ ಪತ್ನಿ ವರದಕ್ಷಿಣೆ ಕಿರುಕುಳ ಮತ್ತು ಅನೈತಿಕ ಸಂಬಂಧದ ಕುರಿತು ದೂರು ನೀಡಿದ್ದಾರೆ. ನ್ಯಾಯ ಕೇಳಿಕೊಂಡು ಪೊಲೀಸ್ ಠಾಣೆಗೆ ಬರುವ ಮಹಿಳೆಯರನ್ನು ನಿತ್ಯಾನಂದ ಗೌಡ ಶೋಷಿಸುತ್ತಾರೆ. ತನಗೆ50 ಲಕ್ಷ ರೂ. ವರದಕ್ಷಿಣೆ ತರಲು ಕಿರುಕುಳ ನೀಡುತ್ತಿದ್ದಾರೆ ಎಂದು ಪತ್ನಿ ಗಂಭೀರ ಆರೋಪ ಮಾಡಿದ್ದಾರೆ. ಈ ದೂರಿನ ಆಧಾರದ ಮೇಲೆ ಎಸ್‌ಐ ನಿತ್ಯಾನಂದ ಗೌಡ ವಿರುದ್ಧ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ

ವರದಕ್ಷಿಣೆ ಕಿರುಕುಳ, ಅನೈತಿಕ ಸಂಬಂಧ : ಎಸ್‌ಐ ವಿರುದ್ಧ ಪತ್ನಿ ದೂರು Read More »

ಸೈಫ್‌ ಅಲಿಖಾನ್‌ ಹಲ್ಲೆ ಪ್ರಕರಣ: ಕೊನೆಗೂ ನಿಜವಾದ ಆರೋಪಿ ಸೆರೆ

ಮುಂಬಯಿಯ ಪಕ್ಕದಲ್ಲೇ ಇದ್ದ ಆರೋಪಿ ಮುಂಬಯಿ: ಬಾಲಿವುಡ್‌ ನಟ ಸೈಫ್ ಅಲಿ ಖಾನ್‌ ಮನೆಗೆ ನುಗ್ಗಿ ನಟನಿಗೆ ಇರಿದು ಪಲಾಯನ ಮಾಡಿದ್ದ ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಪಕ್ಕದ ಥಾಣೆಯಲ್ಲೇ ಇದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆತನನ್ನು ಬಾಂದ್ರಾ ಪೊಲೀಸ್‌ ಠಾಣೆಗೆ ತಂದು ಪ್ರಶ್ನಿಸಿದ್ದು, ಈ ವೇಳೆ ಆತ ತಾನು ಸೈಫ್‌ ಅಲಿ ಖಾನ್‌ ಮನೆಗೆ ನುಗ್ಗಿದ್ದನ್ನು ಒಪ್ಪಿಕೊಂಡಿದ್ದಾನೆ. ಮೂಲತಃ ಪಶ್ಚಿಮ ಬಂಗಾಳದವನಾದ ಆತ ಮುಂಬಯಿಯಲ್ಲಿ ಬೇರೆ ಬೇರೆ ಹೆಸರಿಟ್ಟುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಬಂಧಿತ ಆರೋಪಿಯನ್ನು

ಸೈಫ್‌ ಅಲಿಖಾನ್‌ ಹಲ್ಲೆ ಪ್ರಕರಣ: ಕೊನೆಗೂ ನಿಜವಾದ ಆರೋಪಿ ಸೆರೆ Read More »

ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ

ಪುತ್ತೂರು : ಮಹಿಳೆಯೋರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂಬ್ರದ ಶೇಖಮಲೆಯಲ್ಲಿ ನಡೆದಿದೆ. ಶೇಖಮಲೆ ಚೆಕ್ಕನಡ್ಕ ದರ್ಖಾಸ್ ನಿವಾಸಿ ದೀಪಕ್ ಎಂಬವರ ಪತ್ನಿ ಲಲಿತ ರೈ (37) ಮೃತಪಟ್ಟವರು. ಮೃತರು ಒರ್ವ ಪುತ್ರನನ್ನು ಆಗಲಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಅಗ್ನಿಶಾಮಕದಳದವರು ಆಗಮಿಸಿ ಮೃತದೇಹವನ್ನು ಬಾವಿಯಿಂದ ಮೇಲಕ್ಕೆತ್ತಿದ್ದಾರೆ. ಮೃತರ ಪತಿ ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ Read More »

error: Content is protected !!
Scroll to Top