ಅಪರಾಧ

ಆಕಸ್ಮಿಕವಾಗಿ ಗುಂಡು ಸಿಡಿದು ಶಾಸಕ ಸಾವು

ಹೊಸದಿಲ್ಲಿ: ಪಂಜಾಬ್‌ನ ಲುಧಿಯಾನ ಕ್ಷೇತ್ರದ ಆಮ್‌ ಆದ್ಮಿ ಪಕ್ಷದ ಶಾಸಕ ಗುರುಪ್ರೀತ್ ಗೋಗಿ ಆಕಸ್ಮಿಕವಾಗಿ ಗುಂಡುಸಿಡಿದು ಶುಕ್ರವಾರ ತಡರಾತ್ರಿ ಸಾವನ್ನಪ್ಪಿದ್ದಾರೆ. ಗುರುಪ್ರೀತ್ ಗೋಗಿ (58) ಅವರ ತಲೆಗೆ ಗುಂಡು ತಗುಲಿದ ನಂತರ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟು ಹೊತ್ತಿಗಾಗಲೇ ಶಾಸಕರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಜಸ್ಕರ್ ಸಿಂಗ್ ತೇಜ ತಿಳಿಸಿದ್ದಾರೆ. ಗೋಗಿ ಅವರ ಮೃತದೇಹವನ್ನು ಡಿಎಂಸಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ತಲೆಗೆ ಆಕಸ್ಮಿಕವಾಗಿ ಗುಂಡು […]

ಆಕಸ್ಮಿಕವಾಗಿ ಗುಂಡು ಸಿಡಿದು ಶಾಸಕ ಸಾವು Read More »

ನಿಷೇಧಿತ ಉಗ್ರ ಸಂಘಟನೆ ಪಿಎಫ್ ಐ ಮುಖಂಡನ ಬಳಿ ಅಕ್ರಮ ಪಿಸ್ತೂಲು | ಹಿಂದೂಗಳ ಹತ್ಯೆಗೆ ಸಂಚು | ಉನ್ನತ ಮಟ್ಟದ ತನಿಖೆಗೆ ವಿಶ್ವ ಹಿಂದೂ ಪರಿಷದ್ ನಿಂದ ಆಗ್ರಹ

ಮಂಗಳೂರು: ಮೂಡುಶೆಡ್ಡೆಯಲ್ಲಿ ನಿಷೇಧಿತ ಉಗ್ರ ಸಂಘಟನೆ ಪಿಫ್ಐ ಮುಖಂಡ ಬದ್ರುದ್ದೀನ್  ಅಕ್ರಮ ಪಿಸ್ತೂಲಿನಿಂದ ಗುಂಡು ಹರಿಸಿದ ಪರಿಣಾಮ ಒಬ್ಬ ವ್ಯಕ್ತಿಗೆ ಗಂಭೀರ ಗಾಯವಾಗಿದೆ. ಅಕ್ರಮವಾಗಿ ಪಿಸ್ತೂಲು ಮದ್ದುಗುಂಡುಗಳನ್ನು ಇಟ್ಟುಕೊಂಡು ಹಿಂದುಗಳ ಮತ್ತು ಹಿಂದೂ ಮುಖಂಡರ ಕೊಲೆಗೆ ಸಂಚು ರೂಪಿಸಿತ್ತಿರುವ ಬಗ್ಗೆ ಸಂಶಯ ವ್ಯಕ್ತವಾಗುತ್ತಿದ್ದು, ಪಿಎಫ್ ಐ ಸಂಘಟನೆಯನ್ನು ಇಂತಹದ್ದೇ ಕಾರಣಕ್ಕಾಗಿ ನಿಷೇದಿಸಿದ್ದು ಅಲ್ಲದೆ ಇದರ ಮುಖಂಡರು ಅಕ್ರಮ ಪಿಸ್ತೂಲು ಹೊಂದಿರುವುದು ಇಡೀ ಜಿಲ್ಲೆಯಲ್ಲಿ ಆತಂಕಕ್ಕೆ ಕಾರಣವಾಗಿದೆ. ಹಾಗಾಗಿ ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ನಡೆಸಲು ವಿಶ್ವ

ನಿಷೇಧಿತ ಉಗ್ರ ಸಂಘಟನೆ ಪಿಎಫ್ ಐ ಮುಖಂಡನ ಬಳಿ ಅಕ್ರಮ ಪಿಸ್ತೂಲು | ಹಿಂದೂಗಳ ಹತ್ಯೆಗೆ ಸಂಚು | ಉನ್ನತ ಮಟ್ಟದ ತನಿಖೆಗೆ ವಿಶ್ವ ಹಿಂದೂ ಪರಿಷದ್ ನಿಂದ ಆಗ್ರಹ Read More »

ಬೈಕ್‌ನಿಂದ ಬಿದ್ದ ಅರ್ಚಕರಿಗೆ ಮಸೀದಿಯಲ್ಲಿ ಚಿಕಿತ್ಸೆ

ಪುತ್ತೂರು  : ಅರ್ಚಕರೊಬ್ಬರು ಬೈಕ್‌ನಿಂದ ರಸ್ತೆ ಬಿದ್ದು ಗಾಯಗೊಂಡ ಘಟನೆ ಪುತ್ತೂರು ತಾಲ್ಲೂಕಿನ ಒಳಮೊಗ್ರು ಗ್ರಾಮದ ಕುಂಬ್ರದಲ್ಲಿ ನಡೆದಿದೆ. ಗಾಯಗೊಂಡ ಅರ್ಚಕರೊರ್ವರ ನೆರವಿಗೆ ದಾವಿಸಿದ್ದು ಸಮೀಪದ ಮಸೀದಿಯಲ್ಲಿರುವವರೆನ್ನಲಾಗಿದೆ. ಅರ್ಚಕರನ್ನು ಮಸೀದಿಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ನೀಡಿ ಉಪಚರಿಸಿದ್ದಾರೆ. ನೆಟ್ಟಣಿಗೆ ಮುನ್ನೂರು ಗ್ರಾಮದ ಈಶ್ವರಮಂಗಲ ಸಮೀಪದ ಮುಂಡ್ಯ ಎಂಬಲ್ಲಿರುವ ಶಾಸ್ತಾರ ದೇವಸ್ಥಾನದಲ್ಲಿ ಅರ್ಚಕರಾಗಿರುವ ರಘುರಾಮ ಭಟ್ ಬುಧವಾರ ಬೈಕ್‌ನಲ್ಲಿ ಬರುವಾಗ, ಕುಂಬ್ರ ಬದ್ರಿಯಾ ಮಸೀದಿಯ ಎದುರು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದು ಗಾಯಗೊಂಡಿದ್ದರು. ಬೈಕ್‍ನಿಂದ ಬಿದ್ದಿದರಿಂದ ಕಾಲಿಗೆ

ಬೈಕ್‌ನಿಂದ ಬಿದ್ದ ಅರ್ಚಕರಿಗೆ ಮಸೀದಿಯಲ್ಲಿ ಚಿಕಿತ್ಸೆ Read More »

ಮಂಗಳೂರಿನಲ್ಲಿ ಹೈಡ್ರೋವಿಡ್ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಮಂಗಳೂರು : ಮಂಗಳೂರು ನಗರ ಪೊಲೀಸರ ಸಿಸಿಬಿ ಘಟಕವು ಗೋವಾದಿಂದ ಮಂಗಳೂರು ಮತ್ತು ಕೇರಳಕ್ಕೆ ಹೈಡೋವಿಡ್ ಗಾಂಜಾ ಸಾಗಾಟ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ಬಂಧಿಸಿ, 73 ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಂಡಿರುವ ಘಟನೆ ನಡೆದಿದೆ. ಬಂಧಿತ ಆರೋಪಿಯನ್ನು ಶಮೀರ್ ಪಿ.ಕೆ (42) ಎಂದು ಪತ್ತೆಹಚ್ಚಲಾಗಿದೆ. ಬಂಧಿತ  ಶಮೀರ್ ಪಿ.ಕೆಯನ್ನು ಮುಲ್ಕಿ ರಾಷ್ಟ್ರೀಯ ಹೆದ್ದಾರಿ ಬಳಿ ಹಿಡಿದು ಬಂದಿಸಲಾಗಿದೆ. ಆತನಿಂದ 738 ಗ್ರಾಂ ಹೈಡ್ರೋವಿಡ್ ಗಾಂಜಾ, ಕಾರು, ಮೊಬೈಲ್ ಫೋನ್ ಸೇರಿದಂತೆ ಒಟ್ಟು 80 ಲಕ್ಷ

ಮಂಗಳೂರಿನಲ್ಲಿ ಹೈಡ್ರೋವಿಡ್ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ Read More »

ಬೈಕ್ ಗೆ  ಬಸ್‌ ಡಿಕ್ಕಿ | ಬೈಕ್‍ ಸವಾರ ಗಂಭೀರ ಗಾಯ

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಬಸ್ ನಿಲ್ದಾಣ ಜಂಕ್ಷನ್ ಬಳಿ ಬೈಕ್ ಗೆ ತಡೆರಹಿತ ಬಸ್ ಡಿಕ್ಕಿಯಾದ ಘಟನೆ ನಡೆದಿದೆ. ಡಿಕ್ಕಿಯಾದ ಪರಿಣಾಮ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಚಿಕಿತ್ಸೆಗೆ  ದಾಖಲಾಗಿದ್ದಾರೆ. ಗಾಯಗೊಂಡವರನ್ನು ಮುಲ್ಕಿ ಅಂಚೆ ಕಚೇರಿಯ ಅಂಚೆಪಾಲಕ ಕೊಲ್ಲೂರು ನಿವಾಸಿ ಪಾಂಡುರಂಗ ರಾವ್ ಎನ್ನಲಾಗಿದೆ. ಗಾಯಾಳು ಪಾಂಡುರಂಗ ರಾವ್ ತಮ್ಮ ಬೈಕ್ ನಲ್ಲಿ ರಾಷ್ಟ್ರೀಯ ಹೆದ್ದಾರಿ ಮುಲ್ಕಿ ಜಂಕ್ಷನ್ ಬಳಿ ಹೆದ್ದಾರಿ ಕ್ರಾಸ್ ಮಾಡುತ್ತಿದ್ದ ವೇಳೆ  ಉಡುಪಿ ಕಡೆಯಿಂದ ಸರ್ವಿಸ್ ರಸ್ತೆಯಲ್ಲಿ ಬಂದ ತಡೆರಹಿತ

ಬೈಕ್ ಗೆ  ಬಸ್‌ ಡಿಕ್ಕಿ | ಬೈಕ್‍ ಸವಾರ ಗಂಭೀರ ಗಾಯ Read More »

ಕಾಡಿನ ರಹಸ್ಯ ಸ್ಥಳದಲ್ಲಿದೆಯೇ ನಕ್ಸಲರ ಶಸ್ತ್ರಾಸ್ತ್ರ?

ನಕ್ಸಲರು ಬಳಸುತ್ತಿದ್ದ ಎಕೆ 47, ಮಷಿನ್‌ ಗನ್‌ ಅರಣ್ಯದೊಳಗೆ ಬಚ್ಚಿಟ್ಟಿರುವ ಶಂಕೆ ಬೆಂಗಳೂರು: ಮುಖ್ಯಮಂತ್ರಿ ಸಮ್ಮುಖದಲ್ಲಿ ಶರಣಾದ ನಕ್ಸಲರು ಆಧುನಿಕ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದ್ದರು. ಆದರೆ ಇನ್ನೂ ಆ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿಲ್ಲ. ಒಪ್ಪಿಸುವ ಪ್ರತಿ ಶಸ್ತ್ರಾಸ್ತ್ರಕ್ಕೆ ಪರಿಹಾರ ರೂಪದಲ್ಲಿ ಹಣ ಕೊಡುವುದಾಗಿ ಸರಕಾರ ಪ್ಯಾಕೇಜ್‌ನಲ್ಲಿ ಘೋಷಿಸಿದೆ. ಹೀಗಾಗಿ ನಕ್ಸಲರ ಶಸ್ತ್ರಾಸ್ತ್ರಗಳು ಎಲ್ಲಿವೆ ಎಂಬ ಕುತೂಹಲ ಇದೆ. ಆಧುನಿಕ ಶಸ್ತ್ರಾಸ್ತ್ರಗಳನ್ನು ನಕ್ಸಲರು ಕಾಡಿನ ರಹಸ್ಯ ಸ್ಥಳದಲ್ಲಿ ಅಡಗಿಸಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಶರಣಾದ ಯಾವೊಬ್ಬ ನಕ್ಸಲ್‌ ಕೂಡ ಆಯುಧಗಳನ್ನು ಪೊಲೀಸರಿಗೆ ನೀಡಿಲ್ಲ.

ಕಾಡಿನ ರಹಸ್ಯ ಸ್ಥಳದಲ್ಲಿದೆಯೇ ನಕ್ಸಲರ ಶಸ್ತ್ರಾಸ್ತ್ರ? Read More »

ಮಹಿಳೆಯ ಬ್ಯಾಗಿನಿಂದ ಚಿನ್ನಾಭರಣ ಕಳವು | ಆರೋಪಿ ನಸೀಮಾ ಬಂಧನ

ಉಪ್ಪಿನಂಗಡಿ: ಮಹಿಳೆಯೋರ್ವರ ಬ್ಯಾಗಿನಿಂದ 114 ಗ್ರಾಂ ತೂಕದ ಚಿನ್ನಾಭರಣದ ಬಾಕ್ಸ್ ಎಗರಿಸಿದ್ದ ಪ್ರಕರಣ ಬಸ್‍ ನಿಲ್ದಾಣದಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸರು ಬಂಟ್ವಾಳ ತಾಲೂಕು ಕೊಮಿನಡ್ಕ ಮನೆ ನಿವಾಸಿ ನಸೀಮಾ (31) ಎಂಬಾಕೆಯನ್ನು ಬಂಧಿಸಿ, ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಕಡಬ ತಾಲೂಕು ಬಂಟಿ ಗ್ರಾಮದ ನೆಕ್ಕಿತದ ನಿವಾಸಿ ಮುಸ್ತಫಾ ಅವರ ಪತ್ನಿ ಅಬೀಬಾ ಅವರು ಭಾವನ ಪತ್ನಿ ಹಸೀರಾಬಾನು ಮದುವೆ ಕಾರ್ಯಕ್ರಮಕ್ಕೆ ಹೊರಡುವ ಮೊದಲು ಮನೆಯಲ್ಲಿದ್ದ ಅವರ ಸುಮಾರು 8 ಗ್ರಾಂ ತೂಕದ ಚಿನ್ನದ ನೆಕ್ಸಸ್ -1

ಮಹಿಳೆಯ ಬ್ಯಾಗಿನಿಂದ ಚಿನ್ನಾಭರಣ ಕಳವು | ಆರೋಪಿ ನಸೀಮಾ ಬಂಧನ Read More »

ಮುಕ್ಕದಲ್ಲಿ ನೆಲೆಸಿದ್ದ ಬಾಂಗ್ಲಾದೇಶದ ಪ್ರಜೆ ಸೆರೆ

ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಬಾಂಗ್ಲಾದೇಶದ ಅಕ್ರಮ ಪ್ರಜೆ ಮಂಗಳೂರು: ಸುರತ್ಕಲ್‌ ಸಮೀಪ ಮುಕ್ಕದಲ್ಲಿ ಅಕ್ರಮವಾಗಿ ವಾಸವಾಗಿದ್ದ ಬಾಂಗ್ಲಾದೇಶದ ಪ್ರಜೆಯೊಬ್ಬನನ್ನು ರಾಜ್ಯ ಆಂತರಿಕ ಭದ್ರತಾ ವಿಭಾಗ ಮತ್ತು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಾಂಗ್ಲಾದೇಶದ ರಾಜಶಾಹಿ ಜಿಲ್ಲೆಯ ಅನರುಲ್ ಶೇಖ್​ (25) ಸೆರೆಯಾದವ.ಅನರುಲ್ ಶೇಖ್ ಮೂರು ವರ್ಷಗಳ ಹಿಂದೆ ಅಂತಾರಾಷ್ಟ್ರಿಯ ಗಡಿರೇಖೆ ಲಾಲ್​​​ಗೋಲ್ ಮೂಲಕ ಅಕ್ರಮವಾಗಿ ಭಾರತದೊಳಗೆ ಪ್ರವೇಶಿಸಿದ್ದ. ಬಳಿಕ ಪಶ್ಚಿಮ ಬಂಗಾಳದ ಮುರ್ಷಿದಾಬಾದ್​ನಿಂದ ಉಡುಪಿಗೆ ಬಂದಿದ್ದ. ಇಲ್ಲಿಂದ ಮಂಗಳೂರು ಹೊರವಲಯದ ಮುಕ್ಕ ಗ್ರಾಮದ ರೋಹನ್ ಎಸ್ಟೇಟ್​​ನಲ್ಲಿ ಕಟ್ಟಡ

ಮುಕ್ಕದಲ್ಲಿ ನೆಲೆಸಿದ್ದ ಬಾಂಗ್ಲಾದೇಶದ ಪ್ರಜೆ ಸೆರೆ Read More »

ಮೇರಠ್‌ : ಒಂದೇ ಕುಟುಂಬದ ಐವರ ಕೊಲೆ

ಮೂರು ಮಕ್ಕಳ ಶವಗಳನ್ನು ಮಂಚದೊಳಗಿಟ್ಟಿದ್ದ ಹಂತಕರು ಲಖನೌ: ಉತ್ತರ ಪ್ರದೇಶದ ಮೇರಠ್‌ ಜಿಲ್ಲೆಯ ಲಿಸಡಿ ಗೇಟ್‌ ಎಂಬಲ್ಲಿ ಒಂದೇ ಕುಟುಂಬದ ಐದು ಮಂದಿ ಕೊಲೆಯಾದ ಸ್ಥಿತಿಯಲ್ಲಿ ಮನೆಯೊಳಗೆ ಪತ್ತೆಯಾಗಿದ್ದಾರೆ. ತಂದೆ, ತಾಯಿ ಮತ್ತು ಮೂರು ಮಕ್ಕಳನ್ನು ಕೊಲೆಮಾಡಿದ್ದಾರೆ. ತಂದೆ, ತಾಯಿ ಶವ ನೆಲದಲ್ಲಿ ಬಿದ್ದಿದ್ದರೆ ಮಕ್ಕಳ ಶವಗಳು ಮಂಚದೊಳಗಿನ ಬಾಕ್ಸ್‌ನಲ್ಲಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯಾದವರನ್ನು ಮೊಯಿನ್‌, ಅವರ ಹೆಂಡತಿ ಅಸ್ಮಾ ಮಕ್ಕಳಾದ ಅಫ್ಸಾ (8), ಅಜೀಜ (4) ಮತ್ತು ಅದಿಬ(1) ಎಂದು ಗುರುತಿಸಲಾಗಿದೆ. ಕೆಲದಿನಗಳಿಂದ ಮನೆಯವರು

ಮೇರಠ್‌ : ಒಂದೇ ಕುಟುಂಬದ ಐವರ ಕೊಲೆ Read More »

ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು: ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರಿನಲ್ಲಿ ನಡೆದಿದೆ. ನರಿಮೊಗರು ಮುಗೇರಡ್ಕ ಮನೆ ನಿವಾಸಿ ವಿದ್ಯಾರ್ಥಿನಿ ದೀಕ್ಷಿತ ಜೋಗಿ (17) ಆತ್ಮಹತ್ಯೆ ಮಾಡಿಕೊಂಡ ಯುವತಿ. ಸಂತ ಫಿಲೋಮಿನಾ ಕಾಲೇಜಿನ ಪ್ರಥಮ ಪಿಯುಸಿ ಓದುತ್ತಿರುವ ದೀಕ್ಷಿತ ಜೋಗಿ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.

ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ Read More »

error: Content is protected !!
Scroll to Top