ಅಪರಾಧ

ಬರ್ತ್‌ಡೇ ನೆಪದಲ್ಲಿ ರೇವ್‌ ಪಾರ್ಟಿ : 31 ಯುವಕ-ಯುವತಿಯರ ಬಂಧನ

ಮಾದಕ ವಸ್ತು, ಮದ್ಯ ಬಳಕೆ ದೃಢ ಬೆಂಗಳೂರು: ದೇವನಹಳ್ಳಿ ತಾಲೂಕಿನ‌ ಕನ್ನಮಂಗಲ ಗೇಟ್ ಸಮೀಪದ ಖಾಸಗಿ ಜಮೀನಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ದೇವನಹಳ್ಳಿ ಪೊಲೀಸರು ದಾಳಿ ಮಾಡಿ 31 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕನ್ನಮಂಗಲ ಗೇಟ್ ಬಳಿಯ ಫಾರ್ಮ್​ ಹೌಸ್​ನಲ್ಲಿ ಪಾರ್ಟಿ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ದೇವನಹಳ್ಳಿ ಪೊಲೀಸರು ಬೆಳಗಿನ ಜಾವ 5 ಗಂಟೆಗೆ ದಾಳಿ ನಡೆಸಿದ್ದಾರೆ. ಪರಿಶೀಲನೆ ನಡೆಸಿದಾಗ ಒಬ್ಬನ ಜನ್ಮದಿನದ ಅಂಗವಾಗಿ ಪಾರ್ಟಿ ಆಯೋಜನೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ. ದೇವನಹಳ್ಳಿ […]

ಬರ್ತ್‌ಡೇ ನೆಪದಲ್ಲಿ ರೇವ್‌ ಪಾರ್ಟಿ : 31 ಯುವಕ-ಯುವತಿಯರ ಬಂಧನ Read More »

ಸಾಕುನಾಯಿಯನ್ನು ಬೈಕ್‌ಗೆ ಕಟ್ಟಿಕೊಂಡು ಎಳೆದೊಯ್ದ ಮಾಲೀಕ : ಕೇಸ್‌ ದಾಖಲು

ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋ ಉಡುಪಿ: ಸಾಕುನಾಯಿಯನ್ನು ಬೈಕಿಗೆ ಸರಪಳಿಯಿಂದ ಕಟ್ಟಿ ಎಳೆದೊಯ್ಯುತ್ತಿದ್ದ ವೀಡಿಯೊವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಬಳಿಕ ಆರೋಪಿಯ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ. ಯಡ್ತರೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರ ಬೈಂದೂರು–ಕುಂದಾಪುರ ಏಕಮುಖ ರಸ್ತೆಯ ಸರ್ವೀಸ್‌ ರಸ್ತೆಯಲ್ಲಿ ರಾವುತನಕಟ್ಟೆಯಿಂದ ನಾಕಟ್ಟೆ ಸೇತುವೆಯವರೆಗೆ ಪಡುವರಿ ಗ್ರಾಮದ ನಿವಾಸಿಯೊಬ್ಬ ತನ್ನ ಮನೆಯ ಸಾಕುನಾಯಿಯನ್ನು ಆತನ ಬೈಕಿಗೆ ಸರಪಳಿಯಿಂದ ಕಟ್ಟಿ ಚಲಾಯಿಸಿಕೊಂಡು ಹೋಗುತ್ತಿರುವ ಮಾನವೀಯ ಕೃತ್ಯದ ವಿಡಿಯೋ ಮೇ

ಸಾಕುನಾಯಿಯನ್ನು ಬೈಕ್‌ಗೆ ಕಟ್ಟಿಕೊಂಡು ಎಳೆದೊಯ್ದ ಮಾಲೀಕ : ಕೇಸ್‌ ದಾಖಲು Read More »

ಮಗಳು ಅನ್ಯ ಜಾತಿಯ ಯುವಕನನ್ನು ಮದುವೆಯಾದ ದುಃಖದಲ್ಲಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ

ಕಾಲುಗಳಿಗೆ ಹಗ್ಗ ಕಟ್ಟಿಕೊಂಡು ಕೆರೆಗೆ ಹಾರಿದ ಕುಟುಂಬ ಮೈಸೂರು: ಮಗಳು ಅನ್ಯ ಜಾತಿಯವನನ್ನು ಮದುವೆಯಾದ ಹಿನ್ನೆಲೆಯಲ್ಲಿ ಮರ್ಯಾದೆಗೆ ಅಂಜಿ ಒಂದೇ ಕುಟುಂಬದ ಮೂವರು ಕಾಲುಗಳಿಗೆ ಹಗ್ಗ ಕಟ್ಟಿ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಶನಿವಾರ ಮೈಸೂರಿನ ಎಚ್‌.ಡಿ.ಕೋಟೆ ತಾಲೂಕಿನ ಬೂದನೂರು ಗ್ರಾಮದಲ್ಲಿ ನಡೆದಿದೆ. ಮಹದೇವಸ್ವಾಮಿ, ಪತ್ನಿ ಮಂಜುಳಾ ಹಾಗೂ ಕಿರಿಯ ಮಗಳು ಹರ್ಷಿತಾ ಮೃತ ದುರ್ದೈವಿಗಳು. ಮಹದೇವಸ್ವಾಮಿ ಅವರಿಗೆ ಅರ್ಪಿತಾ ಹಾಗೂ ಹರ್ಷಿತಾ ಎಂಬ ಇಬ್ಬರು ಹೆಣ್ಣುಮಕ್ಕಳು. ಮಹದೇವಸ್ವಾಮಿ ಕುಟುಂಬ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಊರು

ಮಗಳು ಅನ್ಯ ಜಾತಿಯ ಯುವಕನನ್ನು ಮದುವೆಯಾದ ದುಃಖದಲ್ಲಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ Read More »

ಚಲಿಸುತ್ತಿದ್ದ ಆಟೋ ರಿಕ್ಷಾದ ಮೇಲೆ ಬಿದ್ದ ಮರ |   ಚಾಲಕನಿಗೆ ಗಾಯ

ಅನಂತಾಡಿ: ದಕ್ಷಿಣ ಕನ್ನಡದಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಅನೇಕ ಅವಘಡವಾಗುತ್ತಿದ್ದು, ಇದೀಗ ಅನಂತಾಡಿ ಗೋಳಿಕಟ್ಟೆಯಲ್ಲಿ ಜೋರಾದ ಗಾಳಿ, ಮಳೆಗೆ ಚಲಿಸುತ್ತಿದ್ದ ಆಟೋ ರಿಕ್ಷಾದ ಮೇಲೆ ಮರ ಬಿದ್ದ ದುರ್ಘಟನೆ ನಡೆದಿದೆ. ಈ ದುರ್ಘಟನೆಯಲ್ಲಿ. ಆಟೋ ಚಾಲಕರಾದ ಪ್ರಕಾಶ್ ಅವರಿಗೆ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಆಟೋರಿಕ್ಷಾ ಸಂಪೂರ್ಣವಾಗಿ ಜಖಂಗೊಂಡಿದೆ. ವಿಟ್ಲ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದು. ಹೆಚ್ಚಿನ ವಿವರಗಳನ್ನು ಕಲೆಹಾಕುತ್ತಿದ್ದಾರೆ.

ಚಲಿಸುತ್ತಿದ್ದ ಆಟೋ ರಿಕ್ಷಾದ ಮೇಲೆ ಬಿದ್ದ ಮರ |   ಚಾಲಕನಿಗೆ ಗಾಯ Read More »

ಮೆಡಿಕಲ್‌ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್‌ರೇಪ್‌ : ಮೂವರು ಸೆರೆ

ಸ್ನೇಹಿತರೇ ಎಸಗಿದ ದುಷ್ಕೃತ್ಯ ಬೆಂಗಳೂರು: ಬೆಳಗಾವಿಯ ಎಂಬಿಬಿಎಸ್‌ ವಿದ್ಯಾರ್ಥಿನಿ ಮೇಲೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಆಕೆಯ ಮೂವರು ಸ್ನೇಹಿತರೇ ಅತ್ಯಾಚಾರ ನಡೆಸಿದ ಘಟನೆ ಬೆಳಕಿಗೆ ಬಂದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸ್ನೇಹಿತರ ಮೇಲೆ ನಂಬಿಕೆಯಿಟ್ಟು 22 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಮೇ 18ರಂದು ರಾತ್ರಿ ಸಿನಿಮಾ ನೋಡಲು ತೆರಳಿದ್ದರು. ಸಿನಿಮಾ ಮುಗಿದ ಬಳಿಕ ತನ್ನೊಂದಿಗೆ ವ್ಯಾಸಂಗ ಮಾಡುತ್ತಿದ್ದ ಸ್ನೇಹಿತನೊಬ್ಬನ ಮನೆಗೆ ಮೂವರೂ ಹೋಗಿದ್ದರು. ಈ ವೇಳೆ ಯುವಕರು, ಆಕೆಗೆ ತಿಳಿಯದಂತೆ ತಂಪು ಪಾನೀಯದಲ್ಲಿ ಪ್ರಜ್ಞೆ ತಪ್ಪುವ ಮಾತ್ರೆ

ಮೆಡಿಕಲ್‌ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್‌ರೇಪ್‌ : ಮೂವರು ಸೆರೆ Read More »

ನಿದ್ರಿಸುತ್ತಿದ್ದಾತನ ಮೇಲೆ ತ್ಯಾಜ್ಯ ಸುರಿದ ಪೌರ ಕಾರ್ಮಿಕರು : ಉಸಿರುಕಟ್ಟಿ ಸಾವು

ಬರೇಲಿ: ಮರದಡಿ ನಿದ್ದೆ ಮಾಡುತ್ತಿದ್ದ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರ ಮೇಲೆ ಪೌರ ಸಿಬ್ಬಂದಿ ಕಸದ ರಾಶಿ ಸುರಿದ ಪರಿಣಾಮ ಆತ ಕಸದ ರಾಶಿಯಡಿ ಸಿಲುಕಿ ಉಸಿರುಕಟ್ಟೆ ಮೃತಪಟ್ಟ ವಿಚಿತ್ರ ಘಟನೆ ಉತ್ತರ ಪ್ರದೇಶದ ಬರೇಲಿ ನಗರದಲ್ಲಿ ನಡೆದಿದೆ. ಬರೇಲಿ ಮಹಾನಗರ ಪಾಲಿಕೆಯ ಪೌರಕಾರ್ಮಿಕರು ಒಳಚರಂಡಿಯಿಂದ ತೆಗೆದಿದ್ದ ಹೂಳು ಮತ್ತು ಕಸವನ್ನು ಟ್ರಾಲಿಯಲ್ಲಿ ತಂದು ಸುನಿಲ್ ಕುಮಾರ್ ಪ್ರಜಾಪತಿ ಎಂಬವರ ಮೇಲೆ ಸುರಿದ ಪರಿಣಾಮ ಈ ದುರಂತ ಸಂಭವಿಸಿದೆ. ತರಕಾರಿ ಮಾರಾಟ ಮಾಡಿ ಕುಟುಂಬ ನಿರ್ವಹಿಸುತ್ತಿದ್ದ ಪ್ರಜಾಪತಿ ಸ್ಥಳದಲ್ಲೇ

ನಿದ್ರಿಸುತ್ತಿದ್ದಾತನ ಮೇಲೆ ತ್ಯಾಜ್ಯ ಸುರಿದ ಪೌರ ಕಾರ್ಮಿಕರು : ಉಸಿರುಕಟ್ಟಿ ಸಾವು Read More »

ಯುವಕನಿಗೆ  ಜಾತಿ ನಿಂದನೆ ಜೀವ ಬೆದರಿಕೆ ಪ್ರಕರಣ | ಇಬ್ಬರು ಆರೋಪಿಗಳು ಬಂಧನ

ಬೆಳ್ತಂಗಡಿ : ಯುವಕನಿಗೆ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿದ ಘಟನೆ ಶಿಬಾಜೆಯಲ್ಲಿ ನಡೆದಿದೆ. ಘಟನಾ ಕುರಿತು ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಿಬ್ಬರನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ. ಶಿಬಾಜೆ ನಿವಾಸಿಗಳಾಗಿರುವ ಆನಂದ ಗೌಡ ಹಾಗೂ ತಿಮ್ಮಪ್ಪ ಪೂಜಾರಿ ಬಂಧಿತ ಆರೋಪಿಗಳಾಗಿದ್ದಾರೆ. ಮೇ 15ರಂದು ಶಿಬಾಜೆಯ ಕುರುಂಜ ಮನೆಯ ಎದುರು ನಿಂತಿದ್ದ ವೇಳೆ ಸ್ಥಳೀಯ ನಿವಾಸಿ ಪ್ರವೀಣ್ ಎಂಬಾತನ ಮೇಲೆ ಆನಂದ ಗೌಡ ಹಾಗೂ ತಿಮ್ಮಪ್ಪ ಪೂಜಾರಿ ಹಲ್ಲೆಗೆ ಯತ್ನಿಸಿದ್ಧಾರೆ. ಆನಂದ ಗೌಡ ಕೈಯಲ್ಲಿ ಕೊಡಲಿಯನ್ನು

ಯುವಕನಿಗೆ  ಜಾತಿ ನಿಂದನೆ ಜೀವ ಬೆದರಿಕೆ ಪ್ರಕರಣ | ಇಬ್ಬರು ಆರೋಪಿಗಳು ಬಂಧನ Read More »

ಬೇಕರಿ ಮಾಲೀಕನಿಗೆ ರಿಕ್ಷಾ ಚಾಲಕನಿಂದ ಹಲ್ಲೆಗೆ ಯತ್ನ | ಠಾಣೆಗೆ ದೂರು

ತೊಕ್ಕೊಟ್ಟು:  ಬೇಕರಿ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಟೆಂಪೋ ರಿಕ್ಷಾವನ್ನು ಬದಿಗೆ ಸರಿಸಲು ಹೇಳಿದ್ದಕ್ಕೆ ಕುಪಿತಗೊಂಡ ಚಾಲಕ ತನ್ನ ಸಹಚರ ರಿಕ್ಷಾ ಚಾಲಕನೊಂದಿಗೆ ಬೇಕರಿಗೆ ನುಗ್ಗಿ ಮಾಲಕ ಮತ್ತು ಅವರ ತಾಯಿಗೆ ಹಲ್ಲೆಗೆ ಯತ್ನಿಸಿದ್ದು, ರಿಕ್ಷಾ ಚಾಲಕರ ಪುಂಡಾಟಿಕೆಯ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ತೊಕ್ಕೊಟ್ಟು ಜಂಕ್ಷನ್ ನಲ್ಲಿ ಗುರುವಾರ ಮಧ್ಯಾಹ್ನ ಘಟನೆ ನಡೆದಿದೆ. ಮಾರುತಿ ಸ್ವೀಟ್ಸ್ ಮಾಲೀಕರಾದ ಅಶ್ವಿನ್ ಕುಮಾರ್ ಅವರು ತಮ್ಮ ಬೇಕರಿ ಮುಂದುಗಡೆಯೇ ಅಡ್ಡಲಾಗಿ ನಿಲ್ಲಿಸಿದ್ದ ಟೆಂಪೋ ರಿಕ್ಷಾ ಸ್ವಲ್ಪ ಬದಿಗೆ ಸರಿಸುವಂತೆ ಚಾಲಕ ಬಶೀರ್ ನಲ್ಲಿ

ಬೇಕರಿ ಮಾಲೀಕನಿಗೆ ರಿಕ್ಷಾ ಚಾಲಕನಿಂದ ಹಲ್ಲೆಗೆ ಯತ್ನ | ಠಾಣೆಗೆ ದೂರು Read More »

ಮಂಗಳೂರು : ಮದುವೆ ತಕರಾರಿನ ಹಿನ್ನೆಲೆಯಲ್ಲಿ ಇರಿದು ಕೊಲೆ

ಇಬ್ಬರು ಮಕ್ಕಳಿಗೂ ಚೂರಿ ಇರಿತದ ಗಾಯ ಮಂಗಳೂರು: ಮಂಗಳೂರಿನ ಬಳಿ ಮತ್ತೊಂದು ಕೊಲೆ ನಡೆದಿದೆ. ಮದುವೆ ವಿಚಾರಕ್ಕೆ ನಡೆದ ಗಲಾಟೆ ವ್ಯಕ್ತಿಯ ಕೊಲೆಯಲ್ಲಿ ಅಂತ್ಯವಾಗಿದೆ. ಮಂಗಳೂರು ಹೊರವಲಯದ ವಳಚ್ಚಿಲ್ ಬಳಿ ಗುರುವಾರ ತಡರಾತ್ರಿ ಚಾಕುವಿನಿಂದ ಇರಿದು ವಾಮಂಜೂರು ನಿವಾಸಿ ಸುಲೈಮಾನ್‌ (50) ಎಂಬವರನ್ನು ಅವರ ಸಂಬಂಧಿ ಮುಸ್ತಾಫ ಎಂಬಾತ ಕೊಲೆ ಮಾಡಿದ್ದಾನೆ. ಅಷ್ಟೇ ಅಲ್ಲದೆ ಸುಲೈಮಾನ್‌ರ ಇಬ್ಬರ ಪುತ್ರರಾದ ರಿಯಾಬ್​, ಸಿಯಾಬ್​​ ಮೇಲೂ ಹಲ್ಲೆ ನಡೆಸಿ ಮುಸ್ತಾಫ ಪರಾರಿ ಆಗಿದ್ದಾನೆ. ಗಾಯಗೊಂಡ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ

ಮಂಗಳೂರು : ಮದುವೆ ತಕರಾರಿನ ಹಿನ್ನೆಲೆಯಲ್ಲಿ ಇರಿದು ಕೊಲೆ Read More »

ಸೂಟ್‌ಕೇಸ್‌ ನಲ್ಲಿ ಯುವತಿಯೋರ್ವಳ ಮೃತದೇಹ ಪತ್ತೆ

ಬೆಂಗಳೂರು: ಯುವತಿಯ ಮೃತದೇಹವನ್ನು ಸೂಟ್‌ಕೇಸ್‌ ನಲ್ಲಿಟ್ಟ ಘಟನೆ ಬೆಂಗಳೂರಿನ ರೈಲ್ವೆ ಸೇತುವೆಯ ಬಳಿ ನಡೆದಿದ್ದು,  ಈ ಘಟನೆ ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ. ಬೆಂಗಳೂರಿನ ಹೊರವಲಯದಲ್ಲಿರುವ ಹಳೆಯ ಚಂದಾಪುರ ರೈಲ್ವೆ ಸೇತುವೆಯ ಬಳಿ ಸ್ಥಳೀಯ ನಿವಾಸಿಗಳು ಸೂಟ್‌ ಕೇಸ್ ನ್ನು ಪತ್ತೆಹಚ್ಚಿದ್ದು, ಚಲಿಸುವ ರೈಲಿನಿಂದ ಸೂಟ್ ಕೇಸ್ ಹೊರಗೆ ಎಸೆದಿರಬಹುದು ಎಂದು ಅನುಮಾನವನ್ನು ವ್ಯಕ್ತಪಡಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಮಹಿಳೆಯನ್ನು ಬೇರೆಡೆ ಕೊಲೆ ಮಾಡಲಾಗಿದೆ ಮತ್ತು ಸೂಟ್‌ ಕೇಸ್‌ನಲ್ಲಿ ಶವವನ್ನು ತುಂಬಿಸಿ ಚಲಿಸುವ ರೈಲಿನಿಂದ ಹೊರಗೆ ಎಸೆಯಲಾಗಿದೆ

ಸೂಟ್‌ಕೇಸ್‌ ನಲ್ಲಿ ಯುವತಿಯೋರ್ವಳ ಮೃತದೇಹ ಪತ್ತೆ Read More »

error: Content is protected !!
Scroll to Top