ಅಪರಾಧ

ಬೋರ್‍ವೆಲ್ ಲಾರಿ ಢಿಕ್ಕಿ: ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತ್ಯು

ವಿಟ್ಲ: ವಿಟ್ಲದ ಕಾಶಿಮಠದಲ್ಲಿ ನಡೆದ ಬೋರ್‍ವೆಲ್ ಲಾರಿ ಢಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಉಕ್ಕುಡ ಆಲಂಗಾರು ನಿವಾಸಿ ರಂಜಿತ್ (20) ಮೃತ ದುರ್ದೈವಿ. ವಿಟ್ಲ ಕಡೆಯಿಂದ ಉಕ್ಕುಡ ಕಡೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಎದುರಿನಿಂದ ಬಂದ ಬೋರ್‍ವೆಲ್ ಲಾರಿ ಢಿಕ್ಕಿ ಹೊಡೆದಿದೆ. ಪರಿಣಾಮ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸಹಸವಾರ ಅಪಾಯದಿಂದ ಪಾರಾಗಿದ್ದಾರೆ.

ಬೋರ್‍ವೆಲ್ ಲಾರಿ ಢಿಕ್ಕಿ: ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತ್ಯು Read More »

ಗಾಂಜಾ ಮಾರಾಟ ಯತ್ನ : ಆರೋಪಿಯ ಬಂಧನ

ಪುತ್ತೂರು : ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದು ವ್ಯಕ್ತಿಯೋರ್ವನನ್ನು ಪುತ್ತೂರು ನಗರ ಠಾಣೆ ಪೊಲೀಸರು ಕಾರ್ಯಾಚರಣೆಯೊಂದರಲ್ಲಿ ಮುಕ್ರಂಪಾಡಿ ಬಸ್ ತಂಗುದಾಣದಲ್ಲಿ ಬಂಧಿಸಿ ಆತನಿಂದ 40 ಸಾವಿರ ರೂ. ಮೌಲ್ಯದ 1.020 ಕೆ.ಜಿ.ತೂಕದ ಗಾಂಜಾ ವಶಪಡಿಸಿಕೊಂಡಿದ್ದಾರೆ. ಬಲ್ನಾಡು ಗ್ರಾಮದ ಬುಳ್ಳೇರಿಕಟ್ಟೆ ನಿವಾಸಿ ಅಬೂಬಕ್ಕರ್ ಎಂಬವರ ಪುತ್ರ ಇಕ್ಬಾಲ್ ಯಾನೆ ಇಕ್ಕು (35) ಬಂಧಿತ ಆರೋಪಿ. ಆರೋಪಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಮುಕ್ರಂಪಾಡಿ ಎಂಬಲ್ಲಿ ಬಸ್ ತಂಗುದಾಣದಲ್ಲಿ ಗಾಂಜಾ ಮಾರಾಟ ಮಾಡುವ ಉದ್ದೇಶದಿಂದ ತನ್ನ ಬಳಿ ಇಟ್ಟುಕೊಂಡಿದ್ದ. ಖಚಿತ ಮಾಹಿತಿ

ಗಾಂಜಾ ಮಾರಾಟ ಯತ್ನ : ಆರೋಪಿಯ ಬಂಧನ Read More »

ತಾಯಿಯನ್ನು ಕೊಂದು ಹೆಣವನ್ನು 3 ತಿಂಗಳು ಮನೆಯಲ್ಲಿಟ್ಟುಕೊಂಡ ಮಗಳು

ವಾಸನೆ ತಡೆಯಲು 500 ಬಾಟಲಿ ಸೆಂಟ್‌ ಚಿಮುಕಿಸಿದ್ದಳು ಮುಂಬಯಿ : ಮಗಳೇ ತಾಯಿಯನ್ನು ಕೊಂದು ಹೆಣವನ್ನು ಮೂರು ತಿಂಗಳು ಮನೆಯಲ್ಲಿಟ್ಟುಕೊಂಡ ಅಮಾನವೀಯ ಘಟನೆಯೊಂದು ಮುಂಬಯಿಯಲ್ಲಿ ಸಂಭವಿಸಿದೆ. ಮುಂಬಯಿಯ ಲಾಲ್‌ಬಾಗ್‌ನ ರಿಂಪಲ್‌ ಜೈನ್‌ (24) ಈ ಪಾಪಿ ಮಗಳು. ಕಳೆದ ಡಿಸೆಂಬರ್‌ನಲ್ಲಿ ಆಕೆ ತಾಯಿ ಬೀನಾ ಜೈನ್‌ರನ್ನು (55) ಕೊಲೆ ಮಾಡಿದ್ದಳು. ಬಳಿಕ ಶವವನ್ನು ಹಲವಾರು ತುಂಡು ಮಾಡಿ ಪ್ಲಾಸ್ಟಿಕ್‌ ಚೀಲದಲ್ಲಿ ತುಂಬಿಸಿ ಮನೆಯೊಳಗಿಟ್ಟಿದ್ದಳು. ಬುಧವಾರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.ಪ್ಲಾಸ್ಟಿಕ್‌ ಚೀಲದಲ್ಲಿ ತುಂಬಿಸಿಟ್ಟಿದ್ದ ಹೆಣ ಪೊಲೀಸರು ತಪಾಸಣೆ

ತಾಯಿಯನ್ನು ಕೊಂದು ಹೆಣವನ್ನು 3 ತಿಂಗಳು ಮನೆಯಲ್ಲಿಟ್ಟುಕೊಂಡ ಮಗಳು Read More »

ಜಿಲ್ಲೆಯ 11 ಮಂದಿ ಜಿಲ್ಲೆಯಿಂದ 6 ತಿಂಗಳು ಗಡಿಪಾರು | ಗಡಿಪಾರಿಗೊಳಗಾದವರಲ್ಲಿ ಐವರು ಪುತ್ತೂರಿನವರು | ಚುನಾವಣೆಗೆ ಜಿಲ್ಲಾಡಳಿತದ ತಯಾರಿ ಹೀಗಿದೆ

ಪುತ್ತೂರು: ಚುನಾವಣೆ ಸಮೀಪಿಸುತ್ತಿದ್ದಂತೆ ಪೊಲೀಸರು ಜಾಗೃತರಾಗಿದ್ದಾರೆ. ಅಪರಾಧ ಹಿನ್ನೆಲೆಯುಳ್ಳವರನ್ನು ಗುರುತಿಸಿ, ಅವರನ್ನು ಗಡಿಪಾರುಗೊಳಪಡಿಸುವ ಕೆಲಸ ನಡೆಯುತ್ತಿದೆ. ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪ್ರತಿ ಚುನಾವಣೆ ಎದುರಾದಾಗಲೂ ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಪೊಲೀಸ್ ವರಿಷ್ಠಾಧಿಕಾರಿಗಳ ವರದಿಯ ಆಧಾರದ ಮೇಲೆ ಜಿಲ್ಲಾಧಿಕಾರಿಗಳು ವಿಚಾರಣೆ ನಡೆಸಿ, ಗಡಿಪಾರಿಗೆ ಆದೇಶ ನೀಡುತ್ತಾರೆ. ಈ ಬಾರಿ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಒಟ್ಟು 11 ಮಂದಿಯನ್ನು ಗಡಿಪಾರು ಮಾಡಲಾಗಿದೆ. ಇದರಲ್ಲಿ ಐವರು ಪುತ್ತೂರು ತಾಲೂಕಿನವರು. ಮಾರ್ಚ್ 6ರಿಂದಲೇ

ಜಿಲ್ಲೆಯ 11 ಮಂದಿ ಜಿಲ್ಲೆಯಿಂದ 6 ತಿಂಗಳು ಗಡಿಪಾರು | ಗಡಿಪಾರಿಗೊಳಗಾದವರಲ್ಲಿ ಐವರು ಪುತ್ತೂರಿನವರು | ಚುನಾವಣೆಗೆ ಜಿಲ್ಲಾಡಳಿತದ ತಯಾರಿ ಹೀಗಿದೆ Read More »

ಕರ್ನಾಟಕದ ಕರಾವಳಿಯಿಂದ ಉಗ್ರರಿಗೆ ಕೋಟಿಗಟ್ಟಲೆ ಹಣ ರವಾನೆ

ಮಂಗಳೂರು : ಬಂಟ್ವಾಳದ ನಂದವಾರದಿಂದ ರಾಷ್ಟ್ರೀಯ ತನಿಖಾ ಸಂಸ್ಥೆ ಸೆರೆ ಹಿಡಿದಿರುವ ಮೂವರು ಬಿಹಾರದ ಉಗ್ರರಿಗಾಗಿ ಸುಮಾರು 25 ಕೋ. ರೂ. ರವಾನಿಸಿರುವ ಲೆಕ್ಕ ಸಿಕ್ಕಿದೆ. ನಂದಾವರ, ಪುತ್ತೂರು ಮತ್ತು ಕೇರಳದ ಮಂಜೇಶ್ವರದಿಂದ ಎನ್‌ಐಎ ಐವರನ್ನು ಬಂಧಿಸಿದ್ದು, ಇವರೆಲ್ಲ ನಿಷೇಧಿತ ಪಿಎಫ್‌ಐ ಕಾರ್ಯಕರ್ತರಾಗಿದ್ದರು.ವಿಧ್ವಂಸಕ ಕೃತ್ಯ ಎಸಗಿರುವ ಸಂಚಿನಲ್ಲಿ ಸಕ್ರಿಯವಾಗಿ ಭಾಗಿಯಾದ ಆರೋಪ ಅವರ ಮೇಲಿದೆ. ಕರಾವಳಿಯಿಂದ ಬರೀ ಒಂದು ಕೃತ್ಯಕ್ಕೆ ಸುಮಾರು 25 ಕೋ. ರೂ. ರವಾನೆಯಾಗಿರುವುದನ್ನು ಎನ್‌ಐಎ ಪತ್ತೆ ಹಚ್ಚಿದೆ.ಕರಾವಳಿಯಲ್ಲಿ ಉಗ್ರರಿಗೆ ಹಣಕಾಸಿನ ನೆರವು ಒದಗಿಸುವ

ಕರ್ನಾಟಕದ ಕರಾವಳಿಯಿಂದ ಉಗ್ರರಿಗೆ ಕೋಟಿಗಟ್ಟಲೆ ಹಣ ರವಾನೆ Read More »

ಮಂಗಳೂರು ಕುಕ್ಕರ್‌ ಸ್ಫೋಟದ ಉಗ್ರ ಆಸ್ಪತ್ರೆಯಿಂದ ಬಿಡುಗಡೆ

ಎರಡೂವರೆ ತಿಂಗಳು ಸರಕಾರಿ ಖರ್ಚಿನಲ್ಲಿ ಚಿಕಿತ್ಸೆ ಬೆಂಗಳೂರು : ಮಂಗಳೂರು ಆಟೋರಿಕ್ಷಾ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಉಗ್ರ ಮೊಹಮ್ಮದ್ ಶಾರಿಕ್ ಸೋಮವಾರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾನೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅವನನ್ನು ವಶಕ್ಕೆ ತೆಗೆದುಕೊಂಡಿದೆ.ಕಳೆದ ನ.19 ರಂದು ಮಂಗಳೂರಿನ ಕಂಕನಾಡಿ ಬಳಿ ಆಟೋರಿಕ್ಷಾದಲ್ಲಿ ಕುಕ್ಕರ್‌ನಲ್ಲಿ ಬಾಂಬಿಟ್ಟುಕೊಂಡು ಸಾಗಿಸುತ್ತಿದ್ದಾಗ ಅದು ಸ್ಫೋಟಿಸಿ ಶಾರಿಕ್‌ ಜತೆ ರಿಕ್ಷಾ ಚಾಲಕ ಪುರುಷೋತ್ತಮ್ ಗಾಯಗೊಂಡಿದ್ದರು. 24 ವರ್ಷದ ತೀರ್ಥಹಳ್ಳಿ ಮೂಲದ ಆರೋಪಿ ಶಾರಿಕ್ ಗಂಭೀರ ಸ್ವರೂಪದ ಗಾಯವಾಗಿತ್ತು. ಮಂಗಳೂರಿನ

ಮಂಗಳೂರು ಕುಕ್ಕರ್‌ ಸ್ಫೋಟದ ಉಗ್ರ ಆಸ್ಪತ್ರೆಯಿಂದ ಬಿಡುಗಡೆ Read More »

ಹೆಲ್ಮೆಟ್ ಹಾಕಿದ್ದರೂ ತಲೆಗೇ ಬಲವಾದ ಪೆಟ್ಟು ಬಿದ್ದು ಮೃತ್ಯು | ಪೊಲೀಸ್ ಜೀಪ್ ಡಿಕ್ಕಿಯಾಗಿ ಮೃತಪಟ್ಟ ಬೈಕ್ ಸವಾರ ಲಕ್ಷ್ಮಣ್ ನಾಯ್ಕ್ ಅಂತಿಮ ದರ್ಶನ

ಪುತ್ತೂರು: ಎನ್.ಐ.ಎ. ತಂಡಕ್ಕೆ ಬೆಂಗಾವಲು ವಾಹನವಾಗಿ ಸಾಗುತ್ತಿದ್ದ ಪೊಲೀಸ್ ಜೀಪ್ ಡಿಕ್ಕಿಯಾಗಿ ಮೃತಪಟ್ಟ ಬೈಕ್ ಸವಾರ, ಆರ್ಲಪದವಿನ ಪಾಣಾಜೆ ಸಿಎ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಣ್ ನಾಯ್ಕ್ (48) ಅವರ ಮೃತದೇಹದ ಅಂತಿಮ ದರ್ಶನ ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ನಡೆಯಿತು. ಬಳಿಕ ಸ್ವಗೃಹ ಕೋಟೆಯಲ್ಲಿ ಅಂತಿಮ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು. ಪುತ್ತೂರು ಸರಕಾರಿ ಆಸ್ಪತ್ರೆಯಿಂದ ಸೋಮವಾರ ಬೆಳಿಗ್ಗೆ ಮೃತದೇಹವನ್ನು ಆ್ಯಂಬುಲೆನ್ಸ್ ಮೂಲಕ ಆರ್ಲಪದವಿಗೆ ತರಲಾಯಿತು. ಪಾಣಾಜೆ, ನಿಡ್ಪಳ್ಳಿ, ಬೆಟ್ಟಂಪಾಡಿ ಗ್ರಾಮದ ನೂರಾರು

ಹೆಲ್ಮೆಟ್ ಹಾಕಿದ್ದರೂ ತಲೆಗೇ ಬಲವಾದ ಪೆಟ್ಟು ಬಿದ್ದು ಮೃತ್ಯು | ಪೊಲೀಸ್ ಜೀಪ್ ಡಿಕ್ಕಿಯಾಗಿ ಮೃತಪಟ್ಟ ಬೈಕ್ ಸವಾರ ಲಕ್ಷ್ಮಣ್ ನಾಯ್ಕ್ ಅಂತಿಮ ದರ್ಶನ Read More »

ನಂದಾವರ, ಬೆಟ್ಟಂಪಾಡಿಯಲ್ಲಿ ಎನ್‌ಐಎ ಶೋಧ

ಹಲವು ಮನೆಗಳಲ್ಲಿ ಶೋಧ ಕಾರ್ಯಾಚರಣೆ ಮಂಗಳೂರು : ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನಿನ್ನೆ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಕಾರ್ಯಾಚರಣೆ ನಡೆಸಿ ಕೆಲವರನ್ನು ವಿಚಾರಣೆಗೊಳಪಡಿಸಿದೆ ಎಂದು ತಿಳಿದು ಬಂದಿದೆ. ಬಿಹಾರದ ಪಟ್ನಾದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರ ಮೋದಿಯವರ ಚುನಾವಣಾ ರ್ಯಾಲಿಯಲ್ಲಿ ಬಾಂಬ್‌ ಸ್ಫೋಟಿಸಿ ವಿಧ್ವಂಸಕ ಕೃತ್ಯ ಎಸಗಲು ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಈ ಕಾರ್ಯಾಚರಣೆ ನಡೆಸಿದೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದ ಉಗ್ರರಿಗೆ ಹಣಕಾಸಿನ ನೆರವು ನೀಡಿರುವ ವಿಚಾರಕ್ಕೆ ಸಂಬಂಧಿಸಿ ಎನ್‌ಐಎ

ನಂದಾವರ, ಬೆಟ್ಟಂಪಾಡಿಯಲ್ಲಿ ಎನ್‌ಐಎ ಶೋಧ Read More »

ಪೊಲೀಸ್ ಜೀಪ್ – ಬೈಕ್ ಡಿಕ್ಕಿ: ಆರ್ಲಪದವು ಸಿಎ ಬ್ಯಾಂಕ್ ಮ್ಯಾನೇಜರ್ ಮೃತ್ಯು

ಪುತ್ತೂರು: ಸಂಪ್ಯ ಮಸೀದಿ ಮುಂಭಾಗದಲ್ಲಿ ಪೊಲೀಸ್ ಜೀಪ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ, ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಭಾನುವಾರ ರಾತ್ರಿ ನಡೆದಿದೆ. ಮೃತಪಟ್ಟವರನ್ನು ಆರ್ಲಪದವು ಸಿಎ ಬ್ಯಾಂಕ್ ಮ್ಯಾನೇಜರ್ ಲಕ್ಷ್ಮಣ್ ನಾಯ್ಕ್ ಎಂದು ಗುರುತಿಸಲಾಗಿದೆ. ಪುತ್ತೂರಿಗೆ ಆಗಮಿಸುತ್ತಿದ್ದ ಪೊಲೀಸ್ ಜೀಪ್ ಹಾಗೂ ಆರ್ಲಪದವು ಕಡೆ ಸಾಗುತ್ತಿದ್ದ ಬೈಕ್ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಬೈಕ್ ಸವಾರ ಲಕ್ಷ್ಮಣ್ ನಾಯ್ಕ್ ಅವರು ಗಂಭೀರ ಗಾಯಗೊಂಡು, ಕೊನೆಯುಸಿರೆಳೆದರು. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಪೊಲೀಸ್ ಜೀಪ್ – ಬೈಕ್ ಡಿಕ್ಕಿ: ಆರ್ಲಪದವು ಸಿಎ ಬ್ಯಾಂಕ್ ಮ್ಯಾನೇಜರ್ ಮೃತ್ಯು Read More »

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಪಿಎಫ್ಐ ಕಾರ್ಯಕರ್ತ ತುಫೈಲ್ ಎನ್.ಐ.ಎ ವಶ

ಪುತ್ತೂರು: ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣದ ಆರೋಪಿಗಳಲ್ಲಿ ಓರ್ವನಾದ, ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯ ಕಾರ್ಯಕರ್ತ, ಮಡಿಕೇರಿಯ ಎಂ.ಎಚ್‌. ತುಫೈಲ್‌ ಎಂಬಾತನನ್ನು ಎನ್.ಐ.ಎ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಬೆಂಗಳೂರಿನ ದಾಸರಹಳ್ಳಿಯಲ್ಲಿ ಆತನನ್ನು ಸೆರೆ ಹಿಡಿಯಲಾಗಿದೆ ಎಂದು ತಿಳಿದುಬಂದಿದೆ. ತುಫೈಲ್‌ ವಿರುದ್ದ ಲುಕೌಟ್ ನೊಟೀಸ್ ಜಾರಿ ಮಾಡಿದ್ದು, ಮಾಹಿತಿ ನೀಡಿದವರಿಗೆ ತಲಾ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಎನ್.ಐ.ಎ ಘೋಷಣೆ ಮಾಡಿತ್ತು. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಬಗ್ಗೆ ತನಿಖೆ ನಡೆಸಿದ್ದ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಪಿಎಫ್ಐ ಕಾರ್ಯಕರ್ತ ತುಫೈಲ್ ಎನ್.ಐ.ಎ ವಶ Read More »

error: Content is protected !!
Scroll to Top