ಅಪರಾಧ

ಹಿಜಾಬ್‌ ವಿರೋಧಿ ಪ್ರತಿಭಟನೆ ಬೆಂಬಲಿಸಿದ ನಟಿ ಬಂಧನ

ಓಸ್ಕರ್‌ ಪ್ರಶಸ್ತಿ ವಿಜೇತ ನಟಿ ಟೆಹ್ರಾನ್‌ : ಹಿಜಾಬ್‌ ವಿರೋಧಿ ಪ್ರತಿಭಟನೆಯನ್ನು ಬೆಂಬಲಿಸಿದ ಓಸ್ಕರ್‌ ಪ್ರಶಸ್ತಿ ವಿಜೇತ ನಟಿ ತರನೆಹ್‌ ಅಲಿದೋಸ್ತಿ ಅವರನ್ನು ಇರಾನ್‌ ಪೊಲೀಸರು ಬಂಧಿಸಿದ್ದಾರೆ. ಅಲಿದೋಸ್ತಿ ʼದ ಸೇಲ್ಸ್‌ಮ್ಯಾನ್‌ʼ ಚಿತ್ರಕ್ಕಾಗಿ ಓಸ್ಕರ್‌ ಪ್ರಶಸ್ತಿ ಪಡೆದುಕೊಂಡಿದ್ದಾರೆ ಮತ್ತು ಇರಾನ್‌ನ ಜನಪ್ರಿಯ ನಟಿ.ಇತ್ತೀಚೆಗೆ ಇರಾನ್‌ ಸರಕಾರ ಹಿಜಾಬ್‌ ವಿರೋಧಿ ಹೋರಾಟದಲ್ಲಿದ್ದ ಯುವಕನನ್ನು ಗಲ್ಲಿಗೇರಿಸಿದ್ದು, ಅವರನ್ನು ಬೆಂಬಲಿಸಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಾಕಿರುವುದಕ್ಕೆ ನಟಿಯನ್ನು ಬಂಧಿಸಲಾಗಿದೆ.ಹಿಜಾಬ್‌ ಬೆಂಬಲಿಸಿದ ಅನೇಕ ಗಣ್ಯರಿಗೆ ಇರಾನ್‌ ಪೊಲೀಸರು ನೋಟಿಸ್‌ ಜಾರಿಗೊಳಿಸಿದ್ದಾರೆ. ಅಲಿದೋಸ್ತಿ ತನ್ನ ಪೋಸ್ಟ್‌ […]

ಹಿಜಾಬ್‌ ವಿರೋಧಿ ಪ್ರತಿಭಟನೆ ಬೆಂಬಲಿಸಿದ ನಟಿ ಬಂಧನ Read More »

ಚೆಕ್‌ ಬೌನ್ಸ್‌ ಪ್ರಕರಣ : ಶಾಸಕರಿಗೆ 49.65 ಲಕ್ಷ ರೂ. ದಂಡ

ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣದಲ್ಲಿ ಮಾಲೂರು ಶಾಸಕ ಕೆ.ವೈ. ನಂಜೇಗೌಡ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ 49.65 ಲಕ್ಷ ರೂ.ದಂಡ ವಿಧಿಸಿದೆ.ರಾಮಚಂದ್ರ ಜಿ. ಎಂಬವರಿಂದ ನಂಜೇಗೌಡ ಅವರು 40 ಲಕ್ಷ ರೂಪಾಯಿ ಸಾಲ ಪಡೆದು ಮರುಪಾವತಿಗೆ ಚೆಕ್ ನೀಡಿದ್ದರು. ಆದರೆ ಚೆಕ್ ಬೌನ್ಸ್ ಆಗಿದ್ದರಿಂದ ಅವರನ್ನು ತಪ್ಪಿತಸ್ಥ ಎಂದು ಕೋರ್ಟ್ ತೀರ್ಪು ನೀಡಿದೆ. ದಂಡ ಪಾವತಿಸದಿದ್ದರೆ 6 ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕು ಎಂದು 42ನೇ ಎಸಿಎಂಎಂ ಕೋರ್ಟ್ ಆದೇಶಿಸಿದೆ.

ಚೆಕ್‌ ಬೌನ್ಸ್‌ ಪ್ರಕರಣ : ಶಾಸಕರಿಗೆ 49.65 ಲಕ್ಷ ರೂ. ದಂಡ Read More »

ಬಾಲಕಿಗೆ ಕಿರುಕುಳ: ಯುವಕನನ್ನು ಕಟ್ಟಿ ಹಾಕಿ ಹಲ್ಲೆ

ಮಂಗಳೂರು : ಬಾಲಕಿ ಜತೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯೊಬ್ಬನನ್ನು ಕಟ್ಟಿಹಾಕಿ ಥಳಿಸಿದ ಘಟನೆ ಮೂಲ್ಕಿಯಲ್ಲಿ ಶನಿವಾರ ಸಂಭವಿಸಿದೆ. ಯುವಕನೊಬ್ಬ ಡಿ.13ರಂದು ಬೈಕ್‌ನಲ್ಲಿ ಬಾಲಕಿಯನ್ನು ಹಿಂಬಾಲಿಸಿಕೊಂಡು ಬಂದು ಕಿರುಕುಳ ನೀಡಲು ಯತ್ನಿಸಿದ್ದ. ಇದನ್ನು ಬಾಲಕಿಯ ತಂದೆಯ ಸ್ನೇಹಿತರಿಬ್ಬರು ಗಮನಿಸಿದ್ದರು. ಇದೇ ಯುವಕ ಶನಿವಾರ ಮತ್ತೆ ಬೈಕಿನಲ್ಲಿ ಆ ಜಾಗಕ್ಕೆ ಬಂದಿದ್ದ. ಇದನ್ನು ಗಮನಿಸಿದ ಬಾಲಕಿಯ ಕಡೆಯವರು ಯುವಕನನ್ನು ಹಿಡಿದು ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಪೊಲೀಸರ ವಶಕ್ಕೊಪ್ಪಿಸಿ ಪೋಕ್ಸೊ ಕೇಸು ದಾಖಲಿಸಿದ್ದಾರೆ. ಇದೇ ವೇಳೆ ಆರೋಪಿ ಕೂಡ ತನ್ನ

ಬಾಲಕಿಗೆ ಕಿರುಕುಳ: ಯುವಕನನ್ನು ಕಟ್ಟಿ ಹಾಕಿ ಹಲ್ಲೆ Read More »

ಕುಕ್ಕರ್‌ ಬಾಂಬ್‌ ಉಗ್ರ ಬೆಂಗಳೂರಿಗೆ ಸ್ಥಳಾಂತರ

ನ.19 ರಂದು ನಾಗುರಿ ಬಳಿ ರಿಕ್ಷಾದಲ್ಲಿ ಬಾಂಬ್‌ ಸ್ಫೋಟಗೊಂಡ ಪ್ರಕರಣದ ಶಂಕಿತ ಆರೋಪಿ ಮಂಗಳೂರು: ಕುಕ್ಕರ್‌ ಬಾಂಬ್‌ ಸ್ಫೋಟದ ಉಗ್ರ ಶಾರಿಕ್‌ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿದೆ.ಶನಿವಾರ ಬೆಳಗ್ಗೆ ಶಾರಿಕ್‌ನನ್ನು ಬೆಂಗಳೂರಿಗೆ ಕರೆದೊಯ್ಯಲಾಗಿದೆ ಎಂದು ಪೊಲೀಸ್‌ ಕಮಿಷನರ್‌ ಶಶಿಕುಮಾರ್‌ ತಿಳಿಸಿದ್ದಾರೆ.ನ.19 ರಂದು ಮಂಗಳೂರಿನ ಕಂಕನಾಡಿ ಸಮೀಪ ನಾಗುರಿ ಎಂಬಲ್ಲಿ ರಿಕ್ಷಾದಲ್ಲಿ ಕುಕ್ಕರ್‌ ಬಾಂಬ್‌ ಕೊಂಡೊಯ್ಯುತ್ತಿದ್ದಾಗ ಅದು ಸ್ಫೋಟಿಸಿ ಶಾರಿಕ್‌ ಗಂಭೀರವಾಗಿ ಗಾಯಗೊಂಡಿದ್ದಾನೆ. ಶೆ.60 ರಷ್ಟು ಸುಟ್ಟ ಗಾಯಗಳಾಗಿರುವ ಅವನಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.ಮಂಗಳೂರಿನ ದೇವಸ್ಥಾನಗಳಲ್ಲಿ

ಕುಕ್ಕರ್‌ ಬಾಂಬ್‌ ಉಗ್ರ ಬೆಂಗಳೂರಿಗೆ ಸ್ಥಳಾಂತರ Read More »

ಮಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್‌ಗಿರಿ

ಹುಡುಗಿಯರೊಂದಿಗೆ ಅನುಚಿತ ವರ್ತನೆ ಆರೋಪಿಸಿ ವ್ಯಕ್ತಿ ಮೇಲೆ ಹಲ್ಲೆ ಮಂಗಳೂರು: ಬಸ್ಸಿನಲ್ಲಿ ಬಾಲಕಿಯರ ಜತೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯ ಮೇಲೆ ಮೂವರು ಅಪರಿಚಿತ ವ್ಯಕ್ತಿಗಳು ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಬುಧವಾರ ನಡೆದಿದೆ. ಕಟ್ಟಡ ಕಾರ್ಮಿಕ ಇಸಾಕ್ (43) ಎಂಬವರು ಹಲ್ಲೆಗೊಳಗಾದವರು. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆಬಿ ಮೂಡ ಗ್ರಾಮದ ನಿವಾಸಿಯಾಗಿರುವ ಇಸಾಕ್ ಬುಧವಾರ ಬೆಳಗ್ಗೆ ಮೂಡುಬಿದಿರೆಯಿಂದ ಕೆಲಸಕ್ಕೆ ತೆರಳಲು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ, ಅಪರಿಚಿತ ವ್ಯಕ್ತಿಯೊಬ್ಬ ನನ್ನ ಹತ್ತಿರ ಬಂದು ಬಸ್‌ನಲ್ಲಿದ್ದ ಹುಡುಗಿಯರೊಂದಿಗೆ

ಮಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್‌ಗಿರಿ Read More »

error: Content is protected !!
Scroll to Top