ಅಪರಾಧ

ಮುಮ್ತಾಜ್‌ ಅಲಿ ಆತ್ಮಹತ್ಯೆ ಪ್ರಕರಣ : ಹನಿಟ್ರ್ಯಾಪ್‌ ಮಾಡಿದ ಮಹಿಳೆ ಸಹಿತ 4 ಮಂದಿ ಸೆರೆ

ಮಂಗಳೂರು: ಮಾಜಿ ಶಾಸಕ ಮೊಯಿದ್ದೀನ್‌ ಬಾವಾ ಅವರ ಸಹೋದರ ಉದ್ಯಮಿ ಮುಮ್ತಾಜ್‌ ಅಲಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರಕರಣದ ಮೊದಲ ಆರೋಪಿ ಆಯಿಷಾ ರೆಹಮತ್‌ಳನ್ನು ಕೇರಳದಿಂದ ಬಂಧಿಸಿದ್ದಾರೆ. ಮುಮ್ತಾಜ್‌ ಅಲಿ ನದಿಗೆ ಹಾರಿದ ಸುದ್ದಿ ತಿಳಿದ ಕೂಡಲೇ ಅವಳು ಕೇರಳಕ್ಕೆ ಪರಾರಿಯಾಗಿದ್ದಳು.ಆಯಿಷಾಳ ಪತಿ ರೆಹಮತ್ ಹಾಗೂ ಪ್ರಕರಣ ಐದನೇ ಆರೋಪಿ ಶೊಹೇಬ್ ಮತ್ತು ಸಿರಾಜ್ ಎಂಬವರನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳದ ಕಲ್ಲಡ್ಕ […]

ಮುಮ್ತಾಜ್‌ ಅಲಿ ಆತ್ಮಹತ್ಯೆ ಪ್ರಕರಣ : ಹನಿಟ್ರ್ಯಾಪ್‌ ಮಾಡಿದ ಮಹಿಳೆ ಸಹಿತ 4 ಮಂದಿ ಸೆರೆ Read More »

ಮಲಗಿದಲ್ಲೇ ವ್ಯಕ್ತಿ ಸಾವು

ಸುಳ್ಯ; ಮಲಗಿದಲ್ಲೇ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬಾಳುಗೋಡಿನ ಕಿರಿಭಾಗದಲ್ಲಿ ನಡೆದಿದೆ. ಕಿರಿಭಾಗದ ದಿ. ಸೀತಾರಾಮ ಗೌಡ ಎಂಬವರ ಪುತ್ರ ಪವಿತ್ ಕಿರಿಭಾಗ (35) ಮೃತಪಟ್ಟವರು. ಪವಿತ್ ಹಾಗೂ ಅವರ ತಾಯಿ ಇಬ್ಬರೇ ಮನೆಯಲ್ಲಿ ವಾಸವಿದ್ದು ಅವರ ತಾಯಿ ಕೆಲ ದಿನಗಳ ಹಿಂದೆ ಮೈಸೂರಿನಲ್ಲಿರುವ ತಮ್ಮ ಮಗಳ ಮನೆಗೆ ತೆರಳಿದ್ದರು. ಪವಿತ್ ಒಬ್ಬರೇ ಮನೆಯಲ್ಲಿದ್ದರು. ಅತಿಯಾದ ಮದ್ಯ ಸೇವನೆ ಮಾಡುತ್ತಿದ್ದ ಪವಿತ್ ಕುಡಿದು ಮಲಗಿದವರು ಅಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಮಲಗಿದಲ್ಲೇ ವ್ಯಕ್ತಿ ಸಾವು Read More »

6 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶ : ನೈಜೀರಿಯ ಪ್ರಜೆ ಬಂಧನ

ಮಂಗಳೂರು ಪೊಲೀಸರು ನಡೆಸಿದ ದೊಡ್ಡ ಕಾರ್ಯಾಚರಣೆ ಮಂಗಳೂರು: ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಮಂಗಳೂರು ಸಿಸಿಬಿ ಪೊಲೀಸರು 6 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಿ ಓರ್ವ ನೈಜೀರಿಯ ಪ್ರಜೆಯನ್ನು ಬಂಧಿಸಿದ್ದಾರೆ.ಮಂಗಳೂರು ಪೊಲೀಸ್ ಇತಿಹಾಸದಲ್ಲಿ ಇದು ಅತಿದೊಡ್ಡ ಪ್ರಮಾಣದಲ್ಲಿ ವಶವಾದ ಮಾದಕ ವಸ್ತು. ಇತ್ತೀಚೆಗಿನ ದಿನಗಳಲ್ಲಿ ರಾಜ್ಯದಲ್ಲೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್‌ ಸಿಕ್ಕಿರಲಿಲ್ಲ.ಕದ್ರಿ ಪೊಲೀಸರು ಬಂಧಿಸಿದ್ದ ಡ್ರಗ್‌ ಪೆಡ್ಲರ್ ಹೈದರಾಲಿ ನೀಡಿದ ಮಾಹಿತಿ ಮೇರೆಗೆ ಎಲ್ಲಿಂದ ಡ್ರಗ್ಸ್ ಪೂರೈಕೆ ಆಗುತ್ತೆ ಏಂದು ತನಿಖೆ ಮಾಡಿದಾಗ ನೈಜೀರಿಯ

6 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶ : ನೈಜೀರಿಯ ಪ್ರಜೆ ಬಂಧನ Read More »

28 ಗಂಟೆಗಳ ಬಳಿಕ ಮುಮ್ತಾಜ್ ಅಲಿ ಮೃತದೇಹ ಪತ್ತೆ

ಕೃತ್ಯದ ಹಿಂದೆ ಮಹಿಳೆ ಕೈವಾಡ ಶಂಕೆ; 6 ಜನರ ವಿರುದ್ಧ ಕೇಸ್‌ ಮಂಗಳೂರು : ಮಾಜಿ ಶಾಸಕ ಮೊಯಿದ್ದೀನ್ ಬಾವಾ ಅವರ ಸೋದರ ಮುಮ್ತಾಜ್ ಅಲಿ ನಾಪತ್ತೆಯಾದ ೨೮ ತಾಸುಗಳ ಬಳಿಕ ಪತ್ತೆಯಾಗಿದೆ. ಮೃತದೇಹ ಪತ್ತೆಯಾಗಿದೆ. ಮಂಗಳೂರಿನ ಕೂಳೂರಿನ ಸೇತುವೆ ಬಳಿಯಲ್ಲೇ ಮುಮ್ತಾಜ್ ಅಲಿ ಶವ ಪತ್ತೆಯಾಗಿದೆ. ಮುಳುಗು‌ ತಜ್ಞರು ಮೃತದೇಹವನ್ನು ಹೊರತೆಗೆದಿದ್ದು, ಶವ ಕಂಡು ಮಾಜಿ ಶಾಸಕ ಮೊಯಿದ್ದೀನ್ ಬಾವಾ ಕಣ್ಣೀರು ಹಾಕಿದ್ದಾರೆ. ನಿನ್ನೆ ಮಂಗಳೂರಿನ ಕುಳೂರಿನ ಸೇತುವೆ ಮೇಲೆ ಮುಮ್ತಾಜ್​ರ ಕಾರು ಪತ್ತೆಯಾಗಿತ್ತು. ಬ್ರಿಡ್ಜ್

28 ಗಂಟೆಗಳ ಬಳಿಕ ಮುಮ್ತಾಜ್ ಅಲಿ ಮೃತದೇಹ ಪತ್ತೆ Read More »

ಅಮರ್ ಜವಾನ್ ಜ್ಯೋತಿ ಸ್ಮಾರಕಕ್ಕೆ ದುಷ್ಕರ್ಮಿಗಳ ದಾಳಿ

ಪುತ್ತೂರು: ದಕ್ಷಿಣ ಭಾರತದ ಏಕೈಕ ಯೋಧ ಸ್ಮಾರಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪುತ್ತೂರಿನ ಕಿಲ್ಲೆ ಮೈದಾನದ ಬಳಿಯ ಅಮರ್ ಜವಾನ್ ಜ್ಯೋತಿ ಸ್ಮಾರಕಕ್ಕೆ ಹಾನಿ ಮಾಡುವ ಪ್ರಯತ್ನವನ್ನು ದುಷ್ಕರ್ಮಿಗಳು ಎಸಗಿರುವುದು ಬೆಳಕಿಗೆ ಬಂದಿದೆ. ಸ್ಮಾರಕದಲ್ಲಿ ದೀಪ ಬೆಳಗುವ ವ್ಯವಸ್ಥೆಗಾಗಿ ಜೋಡಣೆ ಮಾಡಲಾಗಿರುವ ಗ್ಯಾಸ್ ಸಿಲಿಂಡರ್‌ನ ರಕ್ಷಣೆಗಾಗಿ ಅಳವಡಿಸಿರುವ ಮುಚ್ಚಳದ ಬೀಗವನ್ನು ಒಡೆದು ಮುಚ್ಚಳಕ್ಕೆ ಹಾನಿ ಮಾಡಲಾಗಿದೆ. ಅಂತೆಯೇ ಮುಚ್ಚಳವನ್ನು ತೆರೆದು ಅದನ್ನು ಹಿಂದಿನ ಗೋಡೆಗೆ ಬಡಿದು ಗೋಡೆಗೂ ಹಾನಿ ಮಾಡಲಾಗಿದೆ. ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ

ಅಮರ್ ಜವಾನ್ ಜ್ಯೋತಿ ಸ್ಮಾರಕಕ್ಕೆ ದುಷ್ಕರ್ಮಿಗಳ ದಾಳಿ Read More »

ಮಾಜಿ ಕ್ರಿಕೆಟಿಗ ಸಲೀಲ್‌ ಅಂಕೋಲಾ ತಾಯಿ ನಿಗೂಢ ಸಾವು

ಫ್ಯ್ಲಾಟ್‌ನಲ್ಲಿ ಕುತ್ತಿಗೆ ಸೀಳಿದ ಸ್ಥಿತಿಯಲ್ಲಿ ಶವ ಪತ್ತೆ ಪುಣೆ: ಭಾರತದ ಮಾಜಿ ಕ್ರಿಕೆಟಿಗ ಸಲೀಲ್‌ ಅಂಕೋಲಾ ಅವರ ತಾಯಿ ಮಾಲಾ ಅಂಕೋಲಾ ನಿನ್ನೆ ಪುಣೆಯಲ್ಲಿರುವ ಫ್ಲ್ಯಾಟ್‌ನಲ್ಲಿ ನಿಗೂಢವಾಗಿ ಸಾವಿಗೀಡಾಗಿದ್ದಾರೆ.ಪುಣೆಯ ಡೆಕ್ಕನ್ ಜಿಮ್ಖಾನಾ ಪ್ರದೇಶದಲ್ಲಿರುವ ಪ್ರಭಾತ್ ರೋಡ್ ಕಾಂಪ್ಲೆಕ್ಸ್‌ನ ಫ್ಲ್ಯಾಟ್‌ನಲ್ಲಿ ಮಾಲಾ ಒಂಟಿಯಾಗಿ ವಾಸ ಮಾಡುತ್ತಿದ್ದರು. ಸಲೀಲ್‌ ಅಂಕೋಲಾ ಕುಟುಂಬದ ಮೂಲ ಉತ್ತರ ಕನ್ನಡದ ಅಂಕೋಲಾ. ಮುಂಬಯಿಯಲ್ಲಿ ನೆಲೆಯಾಗಿದ್ದ ಈ ಕುಟುಂಬ ಬಳಿಕ ಪುಣೆಗೆ ಶಿಫ್ಟ್‌ ಆಗಿತ್ತು. ಸಲೀಲ್‌ ಅಂಕೋಲಾ ಹುಟ್ಟಿ ಬೆಳೆದದ್ದೆಲ್ಲ ಮುಂಬಯಿಯಲ್ಲಿ.ಮನೆಗೆಲಸದಾಕೆ ಬಂದಾಗ ಮಾಲಾ ಸಾವಿಗೀಡಾಗಿರುವ

ಮಾಜಿ ಕ್ರಿಕೆಟಿಗ ಸಲೀಲ್‌ ಅಂಕೋಲಾ ತಾಯಿ ನಿಗೂಢ ಸಾವು Read More »

ಗೆಳೆಯನ ಜೊತೆಗಿದ್ದ ಯುವತಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ

ಮಾನವ ಹಕ್ಕುಗಳ ಕಾರ್ಯಕರ್ತರೆಂದು ಹೇಳಿಕೊಂಡು ಜೋಡಿಯನ್ನು ಬೆದರಿಸಿದ ಪಾತಕಿಗಳು ಪುಣೆ: ಗೆಳೆಯನ ಜೊತೆಗಿದ್ದ ಯುವತಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಸಂಭವಿಸಿದೆ. ಆರೋಪಿಗಳು ತಮ್ಮನ್ನು ಮಾನವ ಹಕ್ಕುಗಳ ಕಾರ್ಯಕರ್ತರೆಂದು ಹೇಳಿಕೊಂಡು ಯುವ ಜೋಡಿಯನ್ನು ಬೆದರಿಸಿ ಯುವಕನನ್ನು ಥಳಿಸಿ ಯುವತಿಯನ್ನು ಕಾರಿನಲ್ಲಿ ಅಪಹರಿಸಿದ್ದಾರೆ. ಘಟನೆಗೆ ಸಂಬಂಧಿಸಿ ರಾಜೇಖಾನ್‌ ಕರೀಂ ಪಠಾಣ್‌ (36) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ ರಾತ್ರಿ 11 ಗಂಟೆ ವೇಳೆಗೆ ಸಂತ್ರಸ್ತ ಯುವತಿ ಆಕೆಯ ಸ್ನೇಹಿತನೊಂದಿಗೆ ಪುಣೆಯ ಬೋಪ್‌ದೇವ್ ಘಾಟ್ ಪ್ರದೇಶಕ್ಕೆ

ಗೆಳೆಯನ ಜೊತೆಗಿದ್ದ ಯುವತಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ Read More »

ಗಾಂಜಾ ಮಾರಾಟ ಆರೋಪಿ ಪೊಲೀಸ್ ವಶಕ್ಕೆ

ಮಂಗಳೂರು : ಗಾಂಜಾ ಮಾರಾಟ ಮಾಡುತ್ತಿದ್ದವನನ್ನು ಪತ್ತೆ ಹಚ್ಚಿ 4 ಕೆ.ಜಿ. ಗಾಂಜಾವನ್ನು ಆರೋಪಿಸಿಯಿಂದ ವಶಪಡಿಸಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮ ಗೋಳಿಯಂಗಡಿ ಹೌಸ್ ನಿವಾಸಿ ಅಬುತಾಹಿರ್ ಯಾನೇ ಅನ್ನಮ್ (25) ಬಂಧಿತ ಆರೋಪಿ, ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಡೀಲ್ ಪರಿಸರದಲ್ಲಿ ವಾಹನವೊಂದರಲ್ಲಿ ಅಕ್ರಮವಾಗಿ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಅತನನ್ನು ವಶಕ್ಕೆ ಪಡೆದಿದ್ದಾರೆ.

ಗಾಂಜಾ ಮಾರಾಟ ಆರೋಪಿ ಪೊಲೀಸ್ ವಶಕ್ಕೆ Read More »

ಈಜಲು ಫಲ್ಗುಣಿ ನದಿಗಿಳಿದ ಇಬ್ಬರು ಯುವಕರು ಮುಳುಗಿ ಸಾವು

ಮಂಗಳೂರು: ಮರವೂರು ಸಮೀಪ ಪಲ್ಗುಣಿ ನದಿಯಲ್ಲಿ ಈಜಲು ಹೋದ ಮಂಗಳೂರಿನ ಇಬ್ಬರು ಯುವಕರು ನೀರುಪಾಲಾದ ಘಟನೆ ಭಾನುವಾರ ಸಂಜೆ ಸಂಭವಿಸಿದೆ. ನಾಪತ್ತೆಯಾದ ಯುವಕರನ್ನು ಮಂಗಳೂರು ಕೊಟ್ಟಾರಚೌಕಿ ನಿವಾಸಿ ಸುಮಿತ್ (20) ಹಾಗೂ ಉರ್ವಸ್ಟೋರ್ ನಿವಾಸಿ ಅನೀಶ್ (19) ಎಂದು ಗುರುತಿಸಲಾಗಿದೆ.ಮರವೂರು ವೆಂಟೆಡ್ ಡ್ಯಾಂನ ಪಕ್ಕದಲ್ಲಿರುವ ರೈಲ್ವೆ ಸೇತುವೆಯ ಬಳಿ ಪಲ್ಗುಣಿ ನದಿಯಲ್ಲಿ ಈಜಲು ನಾಲ್ವರು ಯುವಕರ ತಂಡ ಹೋಗಿದ್ದು, ಕೋಡಿಕಲ್ ನಿವಾಸಿಗಳಾದ ಅರುಣ್ ಹಾಗೂ ದೀಕ್ಷಿತ್ ಅಪಾಯವಿಲ್ಲದೆ ಬಚಾವಾಗಿದ್ದಾರೆ. ನಾಪತ್ತೆಯಾದವರ ಹುಡುಕಾಟಕ್ಕಾಗಿ ಅಗ್ನಿಶಾಮಕ ದಳ ಹಾಗೂ ಮುಳುಗು

ಈಜಲು ಫಲ್ಗುಣಿ ನದಿಗಿಳಿದ ಇಬ್ಬರು ಯುವಕರು ಮುಳುಗಿ ಸಾವು Read More »

ವರ್ಧಮಾನ್‌ ಗ್ರೂಪ್‌ ಎಂಡಿಗೆ 7 ಕೋಟಿ ರೂ. ವಂಚಿಸಿದ ಸೈಬರ್‌ ಖದೀಮರು

ಸಿಬಿಐ ಅಧಿಕಾರಿಗಳಂತೆ ಸೋಗು ಹಾಕಿ ಉದ್ಯಮಿಯನ್ನು ಡಿಜಿಟಲ್‌ ಬಂಧನದಲ್ಲಿಟ್ಟು ವಂಚನೆ ಹೊಸದಿಲ್ಲಿ : ಸಿಬಿಐ ಅಧಿಕಾರಿಗಳ ಸೋಗುಹಾಕಿ ಆನ್‌ಲೈನ್‌ ಮೂಲಕ ವರ್ಧಮಾನ್‌ ಕಂಪನಿ ಮಾಲೀಕ ಎಸ್‌.ಪಿ.ಓಸ್ವಾಲ್‌ ಅವರ ಖಾತೆಯಿಂದ 7 ಕೋ. ರೂ. ಎಗರಿಸಿದ್ದ ಇಬ್ಬರು ಸೈಬರ್‌ ವಂಚಕರನ್ನು ಪಂಜಾಬ್‌ ಪೊಲೀಸರು 48 ತಾಸುಗಳೊಳಗೆ ಬಂಧಿಸಿದ್ದಾರೆ. ಈ ಗ್ಯಾಂಗಿನಲ್ಲಿ ಇನ್ನೂ 7 ಮಂದಿಯಿದ್ದು, ಅವರನ್ನು ಪೊಲೀಸರು ಹುಡುಕುತ್ತಿದ್ದಾರೆ.ಓರ್ವ ಆರೋಪಿ ಸಿಬಿಐ ಅಧಿಕಾರಿಯಂತೆ ಸೋಗು ಹಾಕಿ ಓಸ್ವಾಲ್‌ ಅವರನ್ನು ಸಂಪರ್ಕಿಸಿ ಅವರಿಗೆ ತನ್ನ ನಕಲಿ ಗುರುತಿನ ಕಾರ್ಡ್‌ ತೋರಿಸಿದ್ದ.

ವರ್ಧಮಾನ್‌ ಗ್ರೂಪ್‌ ಎಂಡಿಗೆ 7 ಕೋಟಿ ರೂ. ವಂಚಿಸಿದ ಸೈಬರ್‌ ಖದೀಮರು Read More »

error: Content is protected !!
Scroll to Top