ಅಪರಾಧ

ಸಾಲದ ಹೊರೆಯಿಂದ ನೊಂದು ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆ

ಕಾರಿನೊಳಗೆ ಕುಳಿತು ವಿಷ ಸೇವಿಸಿದ ಇಡೀ ಕುಟುಂಬ ಹರ್ಯಾಣ: ಸಾಲ ಹೊರೆಯಿಂದ ನೊಂದು ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಹರ್ಯಾಣದ ಪಂಚಕುಲದಲ್ಲಿ ನಡೆದಿದೆ. ಡೆಹ್ರಾಡೂನ್​ನ ಒಂದೇ ಕುಟುಂಬದ 7 ಮಂದಿ ವಿಷ ಸೇವಿಸಿ ಜೀವ ಬಿಟ್ಟಿದ್ದಾರೆ. ಸೆಕ್ಟರ್ 27ರಲ್ಲಿ ಮನೆಯ ಹೊರಗೆ ನಿಲ್ಲಿಸಿದ್ದ ಕಾರಿನೊಳಗೆ ಶವಗಳು ಇರುವುದು ಪತ್ತೆಯಾಗಿದೆ. ಕುಟುಂಬವು ಭಾರಿ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದರಿಂದ ಈ ನಿರ್ಧಾರಕ್ಕೆ ಬಂದಿರಬಹುದು ಎಂದು ಹೇಳಲಾಗಿದೆ. ಡೆಹ್ರಾಡೂನ್‌ನ ನಿವಾಸಿ ಪ್ರವೀಣ್ ಮಿತ್ತಲ್ ಪಂಚಕುಲದ ಬಾಗೇಶ್ವರ […]

ಸಾಲದ ಹೊರೆಯಿಂದ ನೊಂದು ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆ Read More »

ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣ : ಪ್ರತಿಭಟಿಸಿದವರ ಮೇಲೆ ಕೇಸ್‌

ಬಜ್ಪೆ ಚಲೋ ಆಯೋಜಕರು, ಭಾಷಣಕಾರರ ವಿರುದ್ಧ ಎಫ್‌ಐಆರ್‌ ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ವಹಿಸಬೇಕೆಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದ ಸದಸ್ಯರು ನಡೆಸಿದ ಬಜ್ಪೆ ಚಲೋ ಪ್ರತಿಭಟನೆಯ ಆಯೋಜಕರು ಮತ್ತು ಭಾಷಣಕಾರರ ವಿರುದ್ಧ ಮಂಗಳೂರು ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಳೆದ ಭಾನುವಾರ ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ ಬಜ್ಪೆಯ ಶಾರದಾ ಮಂಟಪದ ಬಳಿ ಪ್ರತಿಭಟನೆಯನ್ನು ಪೊಲೀಸರ ಅನುಮತಿಯಿಲ್ಲದೆ ನಡೆಸಲಾಗಿತ್ತು.

ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣ : ಪ್ರತಿಭಟಿಸಿದವರ ಮೇಲೆ ಕೇಸ್‌ Read More »

ಹೆದ್ದಾರಿಯಲ್ಲಿ ಅಸಭ್ಯವಾಗಿ ವರ್ತಿಸಿದವ ಸೆರೆ

ನಡುರಸ್ತೆಯಲ್ಲೇ ಮಾಡಬಾರದ್ದನ್ನೆಲ್ಲ ಮಾಡಿದ್ದ ಲಜ್ಜೆಗೇಡಿ ಭೋಪಾಲ: ಹೆದ್ದಾರಿ ಮಧ್ಯೆಯೇ ಮಹಿಳೆಯೊಂದಿಗೆ ರಾಸಲೀಲೆ ನಡೆಸಿ ತೀವ್ರ ಟೀಕೆಗೆ ಗುರಿಯಾಗಿದ್ದ ಮಧ್ಯಪ್ರದೇಶದ ಮಂಡಸೌರ್‌ ಜಿಲ್ಲೆಯ ಬಿಜೆಪಿ ಸದಸ್ಯ ಮನೋಹರ್ ಲಾಲ್ ಧಕಡ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಕಾರಿನಲ್ಲಿ ಬಂದು ಮಹಿಳೆ ಜೊತೆ ರಾಸಲೀಲೆ ನಡೆಸುತ್ತಿರುವ ಧಕಡ್‌ನ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಕೇಸ್‌ ದಾಖಲಿಸಿಕೊಂಡಿದ್ದರು. ಧಕಡ್‌ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಯ ಎಂಟನೇ ಲೇನ್‌ನಲ್ಲಿ ಕಾರು ನಿಲ್ಲಿಸಿ ಮಹಿಳೆಯ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಇದು ಸಾಲದು ಎಂಬಂತೆ ಬಳಿಕ ಕಾರಿನಿಂದ

ಹೆದ್ದಾರಿಯಲ್ಲಿ ಅಸಭ್ಯವಾಗಿ ವರ್ತಿಸಿದವ ಸೆರೆ Read More »

ಬರ್ತ್‌ಡೇ ನೆಪದಲ್ಲಿ ರೇವ್‌ ಪಾರ್ಟಿ : 31 ಯುವಕ-ಯುವತಿಯರ ಬಂಧನ

ಮಾದಕ ವಸ್ತು, ಮದ್ಯ ಬಳಕೆ ದೃಢ ಬೆಂಗಳೂರು: ದೇವನಹಳ್ಳಿ ತಾಲೂಕಿನ‌ ಕನ್ನಮಂಗಲ ಗೇಟ್ ಸಮೀಪದ ಖಾಸಗಿ ಜಮೀನಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ದೇವನಹಳ್ಳಿ ಪೊಲೀಸರು ದಾಳಿ ಮಾಡಿ 31 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕನ್ನಮಂಗಲ ಗೇಟ್ ಬಳಿಯ ಫಾರ್ಮ್​ ಹೌಸ್​ನಲ್ಲಿ ಪಾರ್ಟಿ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ದೇವನಹಳ್ಳಿ ಪೊಲೀಸರು ಬೆಳಗಿನ ಜಾವ 5 ಗಂಟೆಗೆ ದಾಳಿ ನಡೆಸಿದ್ದಾರೆ. ಪರಿಶೀಲನೆ ನಡೆಸಿದಾಗ ಒಬ್ಬನ ಜನ್ಮದಿನದ ಅಂಗವಾಗಿ ಪಾರ್ಟಿ ಆಯೋಜನೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ. ದೇವನಹಳ್ಳಿ

ಬರ್ತ್‌ಡೇ ನೆಪದಲ್ಲಿ ರೇವ್‌ ಪಾರ್ಟಿ : 31 ಯುವಕ-ಯುವತಿಯರ ಬಂಧನ Read More »

ಸಾಕುನಾಯಿಯನ್ನು ಬೈಕ್‌ಗೆ ಕಟ್ಟಿಕೊಂಡು ಎಳೆದೊಯ್ದ ಮಾಲೀಕ : ಕೇಸ್‌ ದಾಖಲು

ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋ ಉಡುಪಿ: ಸಾಕುನಾಯಿಯನ್ನು ಬೈಕಿಗೆ ಸರಪಳಿಯಿಂದ ಕಟ್ಟಿ ಎಳೆದೊಯ್ಯುತ್ತಿದ್ದ ವೀಡಿಯೊವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಬಳಿಕ ಆರೋಪಿಯ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ. ಯಡ್ತರೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರ ಬೈಂದೂರು–ಕುಂದಾಪುರ ಏಕಮುಖ ರಸ್ತೆಯ ಸರ್ವೀಸ್‌ ರಸ್ತೆಯಲ್ಲಿ ರಾವುತನಕಟ್ಟೆಯಿಂದ ನಾಕಟ್ಟೆ ಸೇತುವೆಯವರೆಗೆ ಪಡುವರಿ ಗ್ರಾಮದ ನಿವಾಸಿಯೊಬ್ಬ ತನ್ನ ಮನೆಯ ಸಾಕುನಾಯಿಯನ್ನು ಆತನ ಬೈಕಿಗೆ ಸರಪಳಿಯಿಂದ ಕಟ್ಟಿ ಚಲಾಯಿಸಿಕೊಂಡು ಹೋಗುತ್ತಿರುವ ಮಾನವೀಯ ಕೃತ್ಯದ ವಿಡಿಯೋ ಮೇ

ಸಾಕುನಾಯಿಯನ್ನು ಬೈಕ್‌ಗೆ ಕಟ್ಟಿಕೊಂಡು ಎಳೆದೊಯ್ದ ಮಾಲೀಕ : ಕೇಸ್‌ ದಾಖಲು Read More »

ಮಗಳು ಅನ್ಯ ಜಾತಿಯ ಯುವಕನನ್ನು ಮದುವೆಯಾದ ದುಃಖದಲ್ಲಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ

ಕಾಲುಗಳಿಗೆ ಹಗ್ಗ ಕಟ್ಟಿಕೊಂಡು ಕೆರೆಗೆ ಹಾರಿದ ಕುಟುಂಬ ಮೈಸೂರು: ಮಗಳು ಅನ್ಯ ಜಾತಿಯವನನ್ನು ಮದುವೆಯಾದ ಹಿನ್ನೆಲೆಯಲ್ಲಿ ಮರ್ಯಾದೆಗೆ ಅಂಜಿ ಒಂದೇ ಕುಟುಂಬದ ಮೂವರು ಕಾಲುಗಳಿಗೆ ಹಗ್ಗ ಕಟ್ಟಿ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಶನಿವಾರ ಮೈಸೂರಿನ ಎಚ್‌.ಡಿ.ಕೋಟೆ ತಾಲೂಕಿನ ಬೂದನೂರು ಗ್ರಾಮದಲ್ಲಿ ನಡೆದಿದೆ. ಮಹದೇವಸ್ವಾಮಿ, ಪತ್ನಿ ಮಂಜುಳಾ ಹಾಗೂ ಕಿರಿಯ ಮಗಳು ಹರ್ಷಿತಾ ಮೃತ ದುರ್ದೈವಿಗಳು. ಮಹದೇವಸ್ವಾಮಿ ಅವರಿಗೆ ಅರ್ಪಿತಾ ಹಾಗೂ ಹರ್ಷಿತಾ ಎಂಬ ಇಬ್ಬರು ಹೆಣ್ಣುಮಕ್ಕಳು. ಮಹದೇವಸ್ವಾಮಿ ಕುಟುಂಬ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಊರು

ಮಗಳು ಅನ್ಯ ಜಾತಿಯ ಯುವಕನನ್ನು ಮದುವೆಯಾದ ದುಃಖದಲ್ಲಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ Read More »

ಚಲಿಸುತ್ತಿದ್ದ ಆಟೋ ರಿಕ್ಷಾದ ಮೇಲೆ ಬಿದ್ದ ಮರ |   ಚಾಲಕನಿಗೆ ಗಾಯ

ಅನಂತಾಡಿ: ದಕ್ಷಿಣ ಕನ್ನಡದಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಅನೇಕ ಅವಘಡವಾಗುತ್ತಿದ್ದು, ಇದೀಗ ಅನಂತಾಡಿ ಗೋಳಿಕಟ್ಟೆಯಲ್ಲಿ ಜೋರಾದ ಗಾಳಿ, ಮಳೆಗೆ ಚಲಿಸುತ್ತಿದ್ದ ಆಟೋ ರಿಕ್ಷಾದ ಮೇಲೆ ಮರ ಬಿದ್ದ ದುರ್ಘಟನೆ ನಡೆದಿದೆ. ಈ ದುರ್ಘಟನೆಯಲ್ಲಿ. ಆಟೋ ಚಾಲಕರಾದ ಪ್ರಕಾಶ್ ಅವರಿಗೆ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಆಟೋರಿಕ್ಷಾ ಸಂಪೂರ್ಣವಾಗಿ ಜಖಂಗೊಂಡಿದೆ. ವಿಟ್ಲ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದು. ಹೆಚ್ಚಿನ ವಿವರಗಳನ್ನು ಕಲೆಹಾಕುತ್ತಿದ್ದಾರೆ.

ಚಲಿಸುತ್ತಿದ್ದ ಆಟೋ ರಿಕ್ಷಾದ ಮೇಲೆ ಬಿದ್ದ ಮರ |   ಚಾಲಕನಿಗೆ ಗಾಯ Read More »

ಮೆಡಿಕಲ್‌ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್‌ರೇಪ್‌ : ಮೂವರು ಸೆರೆ

ಸ್ನೇಹಿತರೇ ಎಸಗಿದ ದುಷ್ಕೃತ್ಯ ಬೆಂಗಳೂರು: ಬೆಳಗಾವಿಯ ಎಂಬಿಬಿಎಸ್‌ ವಿದ್ಯಾರ್ಥಿನಿ ಮೇಲೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಆಕೆಯ ಮೂವರು ಸ್ನೇಹಿತರೇ ಅತ್ಯಾಚಾರ ನಡೆಸಿದ ಘಟನೆ ಬೆಳಕಿಗೆ ಬಂದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸ್ನೇಹಿತರ ಮೇಲೆ ನಂಬಿಕೆಯಿಟ್ಟು 22 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಮೇ 18ರಂದು ರಾತ್ರಿ ಸಿನಿಮಾ ನೋಡಲು ತೆರಳಿದ್ದರು. ಸಿನಿಮಾ ಮುಗಿದ ಬಳಿಕ ತನ್ನೊಂದಿಗೆ ವ್ಯಾಸಂಗ ಮಾಡುತ್ತಿದ್ದ ಸ್ನೇಹಿತನೊಬ್ಬನ ಮನೆಗೆ ಮೂವರೂ ಹೋಗಿದ್ದರು. ಈ ವೇಳೆ ಯುವಕರು, ಆಕೆಗೆ ತಿಳಿಯದಂತೆ ತಂಪು ಪಾನೀಯದಲ್ಲಿ ಪ್ರಜ್ಞೆ ತಪ್ಪುವ ಮಾತ್ರೆ

ಮೆಡಿಕಲ್‌ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್‌ರೇಪ್‌ : ಮೂವರು ಸೆರೆ Read More »

ನಿದ್ರಿಸುತ್ತಿದ್ದಾತನ ಮೇಲೆ ತ್ಯಾಜ್ಯ ಸುರಿದ ಪೌರ ಕಾರ್ಮಿಕರು : ಉಸಿರುಕಟ್ಟಿ ಸಾವು

ಬರೇಲಿ: ಮರದಡಿ ನಿದ್ದೆ ಮಾಡುತ್ತಿದ್ದ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರ ಮೇಲೆ ಪೌರ ಸಿಬ್ಬಂದಿ ಕಸದ ರಾಶಿ ಸುರಿದ ಪರಿಣಾಮ ಆತ ಕಸದ ರಾಶಿಯಡಿ ಸಿಲುಕಿ ಉಸಿರುಕಟ್ಟೆ ಮೃತಪಟ್ಟ ವಿಚಿತ್ರ ಘಟನೆ ಉತ್ತರ ಪ್ರದೇಶದ ಬರೇಲಿ ನಗರದಲ್ಲಿ ನಡೆದಿದೆ. ಬರೇಲಿ ಮಹಾನಗರ ಪಾಲಿಕೆಯ ಪೌರಕಾರ್ಮಿಕರು ಒಳಚರಂಡಿಯಿಂದ ತೆಗೆದಿದ್ದ ಹೂಳು ಮತ್ತು ಕಸವನ್ನು ಟ್ರಾಲಿಯಲ್ಲಿ ತಂದು ಸುನಿಲ್ ಕುಮಾರ್ ಪ್ರಜಾಪತಿ ಎಂಬವರ ಮೇಲೆ ಸುರಿದ ಪರಿಣಾಮ ಈ ದುರಂತ ಸಂಭವಿಸಿದೆ. ತರಕಾರಿ ಮಾರಾಟ ಮಾಡಿ ಕುಟುಂಬ ನಿರ್ವಹಿಸುತ್ತಿದ್ದ ಪ್ರಜಾಪತಿ ಸ್ಥಳದಲ್ಲೇ

ನಿದ್ರಿಸುತ್ತಿದ್ದಾತನ ಮೇಲೆ ತ್ಯಾಜ್ಯ ಸುರಿದ ಪೌರ ಕಾರ್ಮಿಕರು : ಉಸಿರುಕಟ್ಟಿ ಸಾವು Read More »

ಯುವಕನಿಗೆ  ಜಾತಿ ನಿಂದನೆ ಜೀವ ಬೆದರಿಕೆ ಪ್ರಕರಣ | ಇಬ್ಬರು ಆರೋಪಿಗಳು ಬಂಧನ

ಬೆಳ್ತಂಗಡಿ : ಯುವಕನಿಗೆ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿದ ಘಟನೆ ಶಿಬಾಜೆಯಲ್ಲಿ ನಡೆದಿದೆ. ಘಟನಾ ಕುರಿತು ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಿಬ್ಬರನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ. ಶಿಬಾಜೆ ನಿವಾಸಿಗಳಾಗಿರುವ ಆನಂದ ಗೌಡ ಹಾಗೂ ತಿಮ್ಮಪ್ಪ ಪೂಜಾರಿ ಬಂಧಿತ ಆರೋಪಿಗಳಾಗಿದ್ದಾರೆ. ಮೇ 15ರಂದು ಶಿಬಾಜೆಯ ಕುರುಂಜ ಮನೆಯ ಎದುರು ನಿಂತಿದ್ದ ವೇಳೆ ಸ್ಥಳೀಯ ನಿವಾಸಿ ಪ್ರವೀಣ್ ಎಂಬಾತನ ಮೇಲೆ ಆನಂದ ಗೌಡ ಹಾಗೂ ತಿಮ್ಮಪ್ಪ ಪೂಜಾರಿ ಹಲ್ಲೆಗೆ ಯತ್ನಿಸಿದ್ಧಾರೆ. ಆನಂದ ಗೌಡ ಕೈಯಲ್ಲಿ ಕೊಡಲಿಯನ್ನು

ಯುವಕನಿಗೆ  ಜಾತಿ ನಿಂದನೆ ಜೀವ ಬೆದರಿಕೆ ಪ್ರಕರಣ | ಇಬ್ಬರು ಆರೋಪಿಗಳು ಬಂಧನ Read More »

error: Content is protected !!
Scroll to Top