ಅಪರಾಧ

ಪುರುಷರಕಟ್ಟೆ ವ್ಯಕ್ತಿಯ ಕಾರು ಸೋಮೇಶ್ವರ ಸಮುದ್ರದ ರುದ್ರಪಾದೆಯಲ್ಲಿ ಪತ್ತೆ | ವ್ಯಕ್ತಿಗಾಗಿ ಪೊಲೀಸರಿಂದ ಶೋಧ ಕಾರ್ಯ

ಉಳ್ಳಾಲ: ನಾಪತ್ತೆಯಾದ ವ್ಯಕ್ತಿಯೊಬ್ಬರ ಕಾರು ಹಾಗೂ ಚಪ್ಪಲಿ ಸೋಮೇಶ್ವರ ಸಮುದ್ರ ತೀರದ ರುದ್ರಪಾದೆಯಲ್ಲಿ ಪತ್ತೆಯಾಗಿದ್ದು, ಸಂಶಯಕ್ಕೆ ಎಡೆಮಾಡಿದೆ. ಪುರುಷರಕಟ್ಟೆ ನಿವಾಸಿ ವಸಂತ ಎಂಬವರೇ ನಾಪತ್ತೆಯಾಗಿದ್ದ ವ್ಯಕಿಯಾಗಿದ್ದು, ಬುಧವಾರ ಮುಂಜಾನೆ ಮನೆಯಿಂದ ಕಾರಿನಲ್ಲಿ ಸೋಮೇಶ್ವರ ಕಡೆ ತೆರಳಿದ್ದರು. ಬೆಳಿಗ್ಗೆಯಿಂದ ಅವರ ಕಾರು ಸೋಮೇಶ್ವರದ ಸಮುದ್ರದ ಬಳಿ  ಕಂಡು ಬಂದಿದ್ದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಕಾರನ್ನು ಪರಿಶೀಲನೆ ನಡೆಸಿದ್ದು, ಕಾರಿನಲ್ಲಿ ಮೊಬೈಲ್, ಶೂ, ಆಧಾರ್ ಕಾಡ ಪತ್ತೆಯಾಗಿದೆ. ವಸಂತರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು […]

ಪುರುಷರಕಟ್ಟೆ ವ್ಯಕ್ತಿಯ ಕಾರು ಸೋಮೇಶ್ವರ ಸಮುದ್ರದ ರುದ್ರಪಾದೆಯಲ್ಲಿ ಪತ್ತೆ | ವ್ಯಕ್ತಿಗಾಗಿ ಪೊಲೀಸರಿಂದ ಶೋಧ ಕಾರ್ಯ Read More »

ಬೈಕ್ ಸ್ಕಿಡ್ ಆಗಿ ಸವಾರ ಮೃತ್ಯು

ಪುತ್ತೂರು: ಕಡಬ-ಪಂಜ ರಸ್ತೆಯ ಕಲ್ಲಂತಡ್ಕ ಎಂಬಲ್ಲಿ ಬೈಕೊಂದು ಸ್ಕಿಡ್ ಆಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಮೃತರನ್ನು ದಾವಣಗೆರೆ ಮೂಲಕ, ಕಡಬದ ಕೋಡಿಂಬಾಳದಲ್ಲಿ ವಾಸ್ತವ್ಯವಿರುವ ಮಂಜು ಎಂದು ಗುರುತಿಸಲಾಗಿದೆ. ಮಂಜು ಅವರು ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದು, ಬೈಕ್‍ನಲ್ಲಿ ಕೋಡಿಂಬಾಳ ಕಡೆಗೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿ ಬಿದ್ದಿದೆ. ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಬೈಕ್ ಸ್ಕಿಡ್ ಆಗಿ ಸವಾರ ಮೃತ್ಯು Read More »

ಮಂಗಳೂರು : ಜಿಲ್ಲಾಧಿಕಾರಿ ರವಿಕುಮಾರ್‌ಗೆ ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಕರೆ, ದೂರು ದಾಖಲು

ಮಂಗಳೂರು : ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರಿಗೆ ಅಪರಿಚಿತ ವ್ಯಕ್ತಿಯೋರ್ವ ಬೆದರಿಕೆ ಹಾಕಿರುವ ಬಗ್ಗೆ ನಗರದ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಏ. 24 ರಂದು ಪ್ರಕರಣ ದಾಖಲಾಗಿದೆ. ಅಪರಿಚಿತ ವ್ಯಕ್ತಿಯೊಬ್ಬ ಮೊಬೈಲ್ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿದ ಬಗ್ಗೆ ದೂರು ದಾಖಲಾಗಿದೆ. ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಎ. 20ರಂದು ಅಪರಾಹ್ನ 3:28 ಸುಮಾರಿಗೆ ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ವೀಕ್ಷಕರೊಂದಿಗೆ ಸಭೆ ನಡೆಸುತ್ತಿರುವ ಸಂದರ್ಭದಲ್ಲಿ ತನ್ನ ಮೊಬೈಲ್ ಸಂಖ್ಯೆಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ

ಮಂಗಳೂರು : ಜಿಲ್ಲಾಧಿಕಾರಿ ರವಿಕುಮಾರ್‌ಗೆ ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಕರೆ, ದೂರು ದಾಖಲು Read More »

ಲೋಕಾಯುಕ್ತ ದಾಳಿ : ಬೆಳ್ತಂಗಡಿಯ ಕೆಪಿಸಿಸಿ ಉಪಾಧ್ಯಕ್ಷ ಗಂಗಾಧರಗೌಡ ಮನೆಯಲ್ಲಿ 30 ಲಕ್ಷ ಹಣ ಪತ್ತೆ

ಬೆಂಗಳೂರು : ರಾಜ್ಯದಲ್ಲಿಂದು ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು, ಲೋಕಾಯುಕ್ತ ಅಧಿಕಾರಿಗಳು ಹಲವರ ಮನೆ ಬಾಗಿಲು ತಟ್ಟಿದ್ದಾರೆ. ಬೆಂಗಳೂರು, ದಾವಣಗೆರೆ, ಕೋಲಾರ, ಬೀದರ್, ಚಿತ್ರದುರ್ಗ ಸೇರಿದಂತೆ ಅನೇಕ ಕಡೆ ದಾಳಿ ನಡೆದಿದ್ದು ಹಲವು ಅಧಿಕಾರಿಗಳ ಮನೆಯಲ್ಲಿ ಚಿನ್ನ, ನಗದು, ಕಡತ ಸಿಕ್ಕಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂರು ಕಡೆ ಐಟಿ ದಾಳಿ ನಡೆದಿದ್ದು ಬೆಳ್ತಂಗಡಿಯ ಮಾಜಿ ಸಚಿವ, ಕಾಂಗ್ರೆಸ್ ಕೆಪಿಸಿಸಿ ಉಪಾಧ್ಯಕ್ಷ ಗಂಗಾಧರಗೌಡ ಮನೆಯಲ್ಲಿ 30 ಲಕ್ಷ ಹಣ ಪತ್ತೆಯಾಗಿದೆ. ಬೆಳ್ತಂಗಡಿ ತಾಲೂಕು ಆಸ್ಪತ್ರೆ ಬಳಿಯಿರುವ ಗಂಗಾಧರ ಗೌಡ

ಲೋಕಾಯುಕ್ತ ದಾಳಿ : ಬೆಳ್ತಂಗಡಿಯ ಕೆಪಿಸಿಸಿ ಉಪಾಧ್ಯಕ್ಷ ಗಂಗಾಧರಗೌಡ ಮನೆಯಲ್ಲಿ 30 ಲಕ್ಷ ಹಣ ಪತ್ತೆ Read More »

ರಾಷ್ಟ್ರೀಯ ಯುವ ಕಾಂಗ್ರೆಸ್‌ ಅಧ್ಯಕ್ಷ ಶೀನಿವಾಸ ಬಿ. ವಿ. ವಿರುದ್ಧ ಲೈಂಗಿಕ ಕಿರುಕುಳ ಆರೋಪ

ತನಿಖೆಗಾಗಿ ಬೆಂಗಳೂರಿಗೆ ಹೊರಟ ಅಸ್ಸಾಂ ಪೊಲೀಸ್‌ ತಂಡ ದೆಹಲಿ : ಯುವ ಕಾಂಗ್ರೆಸ್‌ನ ಉಚ್ಚಾಟಿತ ಅಧ್ಯಕ್ಷೆ ಅಂಗ್ಕಿತಾ ದತ್ತಾ ರಾಷ್ಟ್ರೀಯ ಯುವ ಕಾಂಗ್ರೆಸ್‌ ಅಧ್ಯಕ್ಷ ಬೆಂಗಳೂರಿನ ಶ್ರೀನಿವಾಸ ಬಿ. ವಿ. ವಿರುದ್ಧ ನೀಡಿರುವ ಲೈಂಗಿಕ ಕಿರುಕುಳದ ತನಿಖೆಗಾಗಿ ಅಸ್ಸಾಂ ಪೊಲೀಸ್‌ ತಂಡವೊಂದು ಬೆಂಗಳೂರಿಗೆ ಹೊರಟಿದೆ. ರಾಷ್ಟ್ರೀಯ ಯುವ ಕಾಂಗ್ರೆಸ್‌ ಅಧ್ಯಕ್ಷ ಶೀನಿವಾಸ ಬಿ. ವಿ. ಅವರು ಲೈಂಗಿಕ ಕಿರುಕುಳ ನೀಡಿದ್ದಾರೆಂದು ಅಂಗ್ಕಿತಾ ದತ್ತ ಬಹಿರಂಗಪಡಿಸಿದ ಬಳಿಕ ಅವರನ್ನು ಕಾಂಗ್ರೆಸ್‌ನಿಂದ ಆರ ವರ್ಷದ ಮಟ್ಟಿಗೆ ಉಚ್ಚಾಟಿಸಲಾಗಿದೆ. ಶ್ರೀನಿವಾಸ ವಿರುದ್ಧ

ರಾಷ್ಟ್ರೀಯ ಯುವ ಕಾಂಗ್ರೆಸ್‌ ಅಧ್ಯಕ್ಷ ಶೀನಿವಾಸ ಬಿ. ವಿ. ವಿರುದ್ಧ ಲೈಂಗಿಕ ಕಿರುಕುಳ ಆರೋಪ Read More »

ಅಫಘಾತದಲ್ಲಿ ಗಾಯಗೊಂಡ ಬಾಲಕಿಯನ್ನು ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದು ಮಾನವೀಯತೆ ಮೆರೆದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ

ಪುತ್ತೂರು: ಅಪಘಾತದಲ್ಲಿ ಗಾಯಗೊಂಡ ಬಾಲಕಿಯನ್ನು ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ತಮ್ಮ ಕಾರಿನಲ್ಲಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕಳುಹಿಸಿಕೊಟ್ಟು ಮಾನವೀಯತೆ ಮೆರೆದ ಘಟನೆ ಶುಕ್ರವಾರ ನಡೆದಿದೆ. ಪ್ರಚಾರದ ಹಿನ್ನಲೆಯಲ್ಲಿ ಜಿಡೆಕಲ್ಲು ರಸ್ತೆಯಾಗಿ ಬರುತ್ತಿದ್ದ ವೇಳೆ ರಸ್ತೆ ದಾಟುತ್ತಿದ್ದ ಬಾಲಕಿಗೆ ವಾಹನವೊಂದು ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡ ಬಾಲಕಿಯನ್ನು ಆಶಾ ತಿಮ್ಮಪ್ಪ ಅವರು ತಮ್ಮ ಕಾರಿನಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ತಮ್ಮ ಕಾರ್ಯಕರ್ತರ ಜತೆ ಮಂಗಳೂರಿನ

ಅಫಘಾತದಲ್ಲಿ ಗಾಯಗೊಂಡ ಬಾಲಕಿಯನ್ನು ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದು ಮಾನವೀಯತೆ ಮೆರೆದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ Read More »

ಭಾರತೀಯ ವಿದ್ಯಾರ್ಥಿ ಅಮೆರಿಕದಲ್ಲಿ ದುಷ್ಕರ್ಮಿಗಳ ಗುಂಡೇಟಿನಿಂದ ಮೃತ್ಯು

ಕೊಲಂಬಸ್ : ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ವಿದ್ಯಾರ್ಥಿಯೋರ್ವ ದುಷ್ಕರ್ಮಿಗಳ ಗುಂಡೇಟಿನಿಂದ ಸಾವನ್ನಪ್ಪಿರುವ ಘಟನೆ ಏ. 21 ರಂದು ಅಮೆರಿಕದಲ್ಲಿ ಸಂಭವಿಸಿದೆ.ಮೃತನನ್ನು ಸಾಯಿಶ್ ವೀರಾ(24) ಎಂದು ಗುರುತಿಸಲಾಗಿದೆ. ಇವರು ಕೊಲಂಬಸ್ ನ ಇಂಧನ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದು ಅಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಗುಂಡೇಟಿನಿಂದ ಸಾವನ್ನಪ್ಪಿದ್ದಾನೆ ಎಂದು ಯುಎಸ್ ರಾಜ್ಯ ಓಹಿಯೋದ ಪೊಲೀಸರು ತಿಳಿಸಿದ್ದಾರೆ. ಸಾಯಿಶ್ ಸ್ನಾತಕೋತ್ತರ ಕೋರ್ಸ್ ಮಾಡುತ್ತಿದ್ದು ಕೇವಲ 10 ದಿನಗಳ ಅಂತರದಲ್ಲಿ ಪದವಿಯೊಂದಿಗೆ H1B ವೀಸಾದ ಅಡಿಯಲ್ಲಿ ಆಯ್ಕೆಯಾಗಿದ್ದರು. ಇಂಧನ

ಭಾರತೀಯ ವಿದ್ಯಾರ್ಥಿ ಅಮೆರಿಕದಲ್ಲಿ ದುಷ್ಕರ್ಮಿಗಳ ಗುಂಡೇಟಿನಿಂದ ಮೃತ್ಯು Read More »

ವಿದ್ಯುತ್ ಕಂಬಕ್ಕೆ ಟಿಪ್ಪರ್ ಡಿಕ್ಕಿ | ಕಂಬ ಮುರಿತ | ಚಾಲಕನಿಗೆ ಗಾಯ

ಪುತ್ತೂರು: ಟಿಪ್ಪರ್ ಲಾರಿಯೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಬೆದ್ರಾಳ ರೈಲ್ವೇ ಸೇತುವೆ ಬಳಿ ಗುರುವಾರ ನಡೆದಿದೆ. ಬೆದ್ರಾಳ ಕಡೆಯಿಂದ ಪುತ್ತೂರಿಗೆ ಬರುತ್ತಿದ್ದ ಟಿಪ್ಪರ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಂಬ ಉರುಳಿ ಬಿದ್ದಿದ್ದು, ತಂತಿಗಳು ತುಂಡಾಗಿದೆ. ಅಪಘಾತದಿಂದ ಟಿಪ್ಪರ್ ಚಾಲಕನ ಕೈಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿದ್ಯುತ್ ಕಂಬಕ್ಕೆ ಟಿಪ್ಪರ್ ಡಿಕ್ಕಿ | ಕಂಬ ಮುರಿತ | ಚಾಲಕನಿಗೆ ಗಾಯ Read More »

ಸೂಕ್ತ ದಾಖಲೆ ಇಲ್ಲದೆ ಬೆಳಗಾವಿಗೆ ಸಾಗಣೆ ಮಾಡುತ್ತಿದ್ದ 1.54 ಕೋಟಿ ನಗದು ವಶ

ರಾಮದುರ್ಗ : ಪಟ್ಟಣದ ಮೂಲಕ ಬೆಳಗಾವಿಗೆ ಸಾಗಣೆ ಮಾಡುತ್ತಿದ್ದ 1.54 ಕೋಟಿ ನಗದನ್ನು ಪೊಲೀಸರು ಗುರುವಾರ ನಸುಕಿನಲ್ಲಿ ವಶಕ್ಕೆ ಪಡೆದಿದ್ದಾರೆ.ಕಾರಿನಲ್ಲಿ ವ್ಯಕ್ತಿಯೊಬ್ಬರು ಈ ಹಣ ಸಾಗಣೆ ಮಾಡುತ್ತಿದ್ದರು. ಬೀಟ್ ನಲ್ಲಿದ್ದ ಪೊಲೀಸರು ತಪಾಸಣೆ ಮಾಡಿದಾಗ 500 ಮುಖಬೆಲೆಯ ನೋಟುಗಳು ಪತ್ತೆಯಾದವು.ಸೂಕ್ತ ದಾಖಲೆಗಳು ಇಲ್ಲದ ಕಾರಣ ಹಣ ಹಾಗೂ ಕಾರನ್ನು ವಶಕ್ಕೆ ಪಡೆದ ಪೊಲೀಸರು ಚಾಲಕನನ್ನು ಬಂಧಿಸಿದ್ದಾರೆ. ಆದಾಯ ತೆರಿಗೆ ಇಲಾಖೆಗೆ ಪ್ರಕರಣ ಒಪ್ಪಿಸಲಾಗಿದೆ ಎಂದು ಎಸ್ಪಿ ಡಾ.ಸಂಜೀವ ಪಾಟೀಲ ತಿಳಿಸಿದ್ದಾರೆ.

ಸೂಕ್ತ ದಾಖಲೆ ಇಲ್ಲದೆ ಬೆಳಗಾವಿಗೆ ಸಾಗಣೆ ಮಾಡುತ್ತಿದ್ದ 1.54 ಕೋಟಿ ನಗದು ವಶ Read More »

ಆಲ್ಟೋ ಕಾರು-ತೂಫಾನ್ ನಡುವೆ ಭೀಕರ ಅಪಘಾತ | ನಾಲ್ವರು ಮೃತ್ಯು

ಸುಬ್ರಹ್ಮಣ್ಯ : ಆಲ್ಟೋ ಕಾರು ಹಾಗೂ ತೂಫಾನ್ ನಡುವೆ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ಮೃತಪಟ್ಟು ಹಲವರು ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ. ಅಪಘಾತದಲ್ಲಿಗಾಯಗೊಂಡವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟವರ ಪರಿಚಯ ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ಆಲ್ಟೋ ಕಾರು-ತೂಫಾನ್ ನಡುವೆ ಭೀಕರ ಅಪಘಾತ | ನಾಲ್ವರು ಮೃತ್ಯು Read More »

error: Content is protected !!
Scroll to Top