ಕೌಕ್ರಾಡಿ ನಿವಾಸಿ ನಾಪತ್ತೆ
ಪುತ್ತೂರು :ಕೌಕ್ರಾಡಿ ಗ್ರಾಮದ ಮಾಲೇಲೆ ಮನೆ ನಿವಾಸಿ ಶಶಿಕಾಂತ್ (38) ಕಾಣೆಯಾದ ಕುರಿತು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ. ಶಶಿಕಾಂತ್ ಅವರು ಶನಿವಾರ ಪಟ್ರಮೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು ಬಳಿಕ ಫೋನ್ ಕರೆಗೆ ಸಿಗದೆ ನಾಪತ್ತೆಯಾಗಿದ್ದಾರೆ ಎಂದು ಪತ್ನಿ ದಿವ್ಯಾ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೌಕ್ರಾಡಿ ನಿವಾಸಿ ನಾಪತ್ತೆ Read More »