ಅಪರಾಧ

ನಟಿ ಶಿಲ್ಪಾ ಶೆಟ್ಟಿ-ರಾಜ್‌ ಕುಂದ್ರಾ ವಿರುದ್ಧ 60 ಕೋ. ರೂ. ವಂಚನೆ ದೂರು

ಸಾಲ ಪಡೆದು ಹಿಂದಿರುಗಿಸದ ಕುರಿತು ಕೇಸ್‌ ದಾಖಲಿಸಿದ ಉದ್ಯಮಿ ಮುಂಬೈ : ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ವಿರುದ್ಧ 60 ಕೋ. ರೂ. ವಂಚಿಸಿದ ಕುರಿತು ಎಫ್‌ಐಆರ್‌ ದಾಖಲಾಗಿದೆ. ಮುಂಬೈ ಮೂಲದ ಉದ್ಯಮಿಯೊಬ್ಬರು ದಂಪತಿ ವಿರುದ್ಧ ದೂರು ನೀಡಿದ್ದಾರೆ. ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವಿರುದ್ಧ ಜುಹು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಂಚನೆ ಮೊತ್ತ 10 ಕೋಟಿ ರೂ.ಗಳಿಗಿಂತ ಹೆಚ್ಚಿರುವುದರಿಂದ ಪೊಲೀಸರು ಪ್ರಕರಣವನ್ನು ಆರ್ಥಿಕ ಅಪರಾಧಗಳ ವಿಭಾಗಕ್ಕೆ […]

ನಟಿ ಶಿಲ್ಪಾ ಶೆಟ್ಟಿ-ರಾಜ್‌ ಕುಂದ್ರಾ ವಿರುದ್ಧ 60 ಕೋ. ರೂ. ವಂಚನೆ ದೂರು Read More »

ಮಂಗಳೂರು: ನೈತಿಕ ಪೊಲೀಸ್‌ಗಿರಿ ಮಾಡಿದ 6 ಮಂದಿ ಬಂಧನ

ಅನ್ಯಕೋಮಿನ ಯುವಕನ ಜೊತೆ ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ಪ್ರಶ್ನಿಸಿದ್ದಕ್ಕೆ ಕೇಸ್‌ ಮಂಗಳೂರು: ನಗರದಲ್ಲಿ ನೈತಿಕ ಪೊಲೀಸ್‌ಗಿರಿ ಮಾಡಿದ ಆರೋಪದ ಮೇಲೆ ಪಾಂಡೇಶ್ವರ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಗಣೇಶ್, ಶ್ರೇಯಸ್, ಚಿಂಚು, ಚಂದನ್, ನಾಗರಾಜ್ ಹಾಗು ರಾಮಚಂದ್ರ ಎಂದು ಗುರುತಿಸಲಾಗಿದೆ. ಆ.11ರಂದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಅನ್ಯಕೋಮಿನ ಯುವಕ ಜೊತೆ ನಗರದ ಸ್ಟೇಟ್‌ಬ್ಯಾಂಕ್ ಸಮೀಪದ ಸರ್ವಿಸ್ ಬಸ್ ನಿಲ್ದಾಣ ಬಳಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಆರೋಪಿಗಳು ತಡೆದು ಅಡ್ಡಿಪಡಿಸಿ ಜೀವಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಪ.ಪೂ. ಕಾಲೇಜೊಂದರ

ಮಂಗಳೂರು: ನೈತಿಕ ಪೊಲೀಸ್‌ಗಿರಿ ಮಾಡಿದ 6 ಮಂದಿ ಬಂಧನ Read More »

ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಬಂಟ್ವಾಳ ಉಪತಹಶೀಲ್ದಾರ್‌, ಮತ್ತಿಬ್ಬರು

ಪೌತಿ ಖಾತೆ ಮಾಡಿಕೊಡಲು 20 ಸಾವಿರ ರೂ. ಲಂಚ ಸ್ವೀಕರಿಸುವಾಗ ರೆಡ್‌ಹ್ಯಾಂಡ್‌ ಆಗಿ ಹಿಡಿದ ಪೊಲೀಸರು ಬಂಟ್ವಾಳ : ಜಮೀನಿಗೆ ಪೌತಿ ಖಾತೆ ಮಾಡಿಕೊಡಲು 20 ರೂ. ಸಾವಿರ ರೂ. ಲಂಚ ಸ್ವೀಕರಿಸುತ್ತಿರುವಾಗಲೇ ಬಂಟ್ವಾಳ ಉಪತಹಶೀಲ್ದಾರ್‌ ಸೇರಿ ಮೂವರನ್ನು ಲೋಕಾಯುಕ್ತ ಪೊಲೀಸರು ರೆಡ್‌ಹ್ಯಾಂಡ್‌ ಅಗಿ ಹಿಡಿದಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಬುಧವಾರ ಮಧ್ಯಾಹ್ನ ತಾಲೂಕು ಕಚೇರಿಯ ಮೇಲೆ ದಾಳಿ ನಡೆಸಿದ್ದು, ಲಂಚ ಪಡೆಯುತ್ತಿರುವಾಗಲೇ ಉಪತಹಶೀಲ್ದಾರ್ ಸೇರಿದಂತೆ ಮೂವರು ವ್ಯಕ್ತಿಗಳನ್ನು ಹಿಡಿದು ಪ್ರಕರಣ ದಾಖಲಸಿಕೊಂಡಿದ್ದಾರೆ. ಆರೋಪಿಗಳನ್ನು ಉಪತಹಶೀಲ್ದಾರ್ ರಾಜೇಶ್ ನಾಯಕ್,

ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಬಂಟ್ವಾಳ ಉಪತಹಶೀಲ್ದಾರ್‌, ಮತ್ತಿಬ್ಬರು Read More »

ಧರ್ಮಸ್ಥಳ ಪ್ರಕರಣ : ಮುಸುಕುಧಾರಿಯ ಮಂಪರು ಪರೀಕ್ಷೆ ಆಗಲಿದೆಯಾ?

ಗುಂಡಿಗಳಲ್ಲಿ ಹೆಣಗಳ ಕುರುಹು ಪತ್ತೆಯಾಗದಿರುವ ಹಿನ್ನೆಲೆಯಲ್ಲಿ ಹೆಚ್ಚುತ್ತಿದೆ ಅನುಮಾನ ಮಂಗಳೂರು: ಧರ್ಮಸ್ಥಳದಲ್ಲಿ ಶವ ಹೂತಿಟ್ಟೆದ್ದೇನೆ ಎಂದು ಆರೋಪಿಸಿದ ಮುಸುಕುಧಾರಿ ವ್ಯಕ್ತಿ ತೋರಿಸಿದ 16ಕಿಇಂತಲೂ ಹೆಚ್ಚು ಸ್ಥಳಗಳಲ್ಲಿ ಅಗೆದರೂ ಶವದ ಯಾವುದೇ ಕುರುಹುಗಳು ಪತ್ತೆಯಾಗದಿರುವ ಹಿನ್ನೆಲೆಯಲ್ಲಿ ಈ ವ್ಯಕ್ತಿಯನ್ನೇ ವಶಕ್ಕೆ ತೆಗೆದುಕೊಂಡು ತನಿಖೆಗೆ ಒಳಪಡಿಸಬೇಕೆಂಬ ಆಗ್ರಹ ಬಲವಾಗಿ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಅವನನ್ನು ಮಂಪರು ಪರೀಕ್ಷೆಗೆ ಒಳಪಡಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಮುಸುಕುಧಾರಿ ತೋರಿಸಿದ ಬಹುಮುಖ್ಯ ಸ್ಥಳ ಎನ್ನಲಾಗುತ್ತಿದ್ದ 13ನೇ ಪಾಯಿಂಟ್‌ನಲ್ಲಿ ಮಂಗಳವಾರ ಜಿಪಿಆರ್‌

ಧರ್ಮಸ್ಥಳ ಪ್ರಕರಣ : ಮುಸುಕುಧಾರಿಯ ಮಂಪರು ಪರೀಕ್ಷೆ ಆಗಲಿದೆಯಾ? Read More »

ನಿಲ್ಲಿಸಿದ್ದ ಬಸ್ಸಿನ ಒಳಗೆ ಬೆಂಕಿ ಅವಘಡ : ಅಪರಿಚಿತ ವ್ಯಕ್ತಿ ಸಜೀವ ದಹನ

ಮೂರು ತಿಂಗಳಿಂದ ರಸ್ತೆ ಬದಿ ಅನಾಥ ಸ್ಥಿತಿಯಲ್ಲಿದ್ದ ಬಸ್‌ ಬೆಂಗಳೂರು: ಬಾಣಸವಾಡಿ ಅಗ್ನಿಶಾಮಕದಳ ಕಚೇರಿ ಬಳಿಯೇ ಶಾಲಾ ವಾಹನವೊಂದರ ಒಳಗೆ ಬೆಂಕಿ ಅವಘಡ ಸಂಭವಿಸಿ ಅದರೊಳಗಿದ್ದ ವ್ಯಕ್ತಿ ಸಜೀವ ದಹನ ಆದ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ. ಒಎಂಬಿಆರ್‌ ಲೇಔಟ್‌ನಲ್ಲಿ ರಾತ್ರಿ 10 ಗಂಟೆ ವೇಳೆಗೆ ಬಸ್ಸಿನ ಒಳಗೆ ಬೆಂಕಿ ಹತ್ತಿಕೊಂಡಿದೆ. ಕೂಡಲೇ ಅಗ್ನಿಶಾಮಕದಳ ವಾಹನ ದೌಡಾಯಿಸಿ ಬೆಂಕಿ‌ ನಂದಿಸಿದೆ. ಆದರೆ ಬಸ್ಸಿನ ಒಳಗೆ ಇದ್ದ ವ್ಯಕ್ತಿಯನ್ನು ಉಳಿಸಲು ಸಾಧ್ಯವಾಗಿಲ್ಲ. ಬಸ್‌ನ ಒಳಗೆ ಸಂಪೂರ್ಣ ಸುಟ್ಟು ಕರಕಲಾದ

ನಿಲ್ಲಿಸಿದ್ದ ಬಸ್ಸಿನ ಒಳಗೆ ಬೆಂಕಿ ಅವಘಡ : ಅಪರಿಚಿತ ವ್ಯಕ್ತಿ ಸಜೀವ ದಹನ Read More »

ಗಿರೀಶ್‌ ಮಟ್ಟೆಣ್ಣವರ್‌, ಯೂಟ್ಯೂಬರ್‌ ವಿರುದ್ಧ ಜೈನರಿಗೆ ಅಪಮಾನ ಮಾಡಿದ ಕೇಸ್‌

ಧರ್ಮಸ್ಥಳ ಅವಹೇಳನ, ಅಪಪ್ರಚಾರ ವಿರುದ್ಧ ರಾಜ್ಯಾದ್ಯಂತ ಹೆಚ್ಚುತ್ತಿದೆ ಅಸಹನೆ ಧರ್ಮಸ್ಥಳ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಗಿರೀಶ ಮಟ್ಟೆಣ್ಣವರ್‌ ಹಾಗೂ ಯೂಟ್ಯೂಬರ್‌ ವಿರುದ್ಧ ಹುಬ್ಬಳ್ಳಿಯಲ್ಲಿ ಕೇಸ್‌ ದಾಖಲಾಗಿದೆ. ಧರ್ಮಸ್ಥಳಕ್ಕೆ ಸಂಬಂಧಿಸಿ ಮಾತನಾಡುತ್ತ ಜೈನ ಧರ್ಮೀಯರ ವಿರುದ್ಧ ಅವಮಾನಕರ ಹೇಳಿಕೆ, ಜೈನರ ನಂಬಿಕೆಗಳಿಗೆ ಧಕ್ಕೆ ಎಸಗಿದ್ದಾರೆ ಎಂದು ಹುಬ್ಬಳ್ಳಿಯ ಛಬ್ಬಿ ಗ್ರಾಮದ ಅಜೀತ್‌ ಬಸಾಪುರ ಎಂಬವರು ಹುಬ್ಬಳ್ಳಿ ಗ್ರಾಮೀನ ಪೊಲೀಸ್‌ ಟಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇನ್‌ಸ್ಪೆಕ್ಟರ್‌ ಜೀರೊ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ

ಗಿರೀಶ್‌ ಮಟ್ಟೆಣ್ಣವರ್‌, ಯೂಟ್ಯೂಬರ್‌ ವಿರುದ್ಧ ಜೈನರಿಗೆ ಅಪಮಾನ ಮಾಡಿದ ಕೇಸ್‌ Read More »

12ರ ಬಾಲಕಿ ಮೇಲೆ 200 ಮಂದಿಯಿಂದ ಅತ್ಯಾಚಾರ : ಮುಂಬಯಿಯಲ್ಲಿ ಬೆಳಕಿಗೆ ಬಂದ ಭಯಾನಕ ಕೃತ್ಯ

ಅಮಲು ಬರುವ ಪಾನೀಯ, ಚುಚ್ಚುಮದ್ದು ನೀಡಿ ಲೈಂಗಿಕ ಶೋಷಣೆ ಮುಂಬಯಿ : ಬಾಂಗ್ಲಾದೇಶ ಮೂಲದ 12 ವರ್ಷದ ಬಾಲಕಿಯ ಮೇಲೆ ಮೂರು ತಿಂಗಳಲ್ಲಿ 200ಕ್ಕೂ ಹೆಚ್ಚು ಮಂದಿ ಅತ್ಯಾಚಾರವೆಸಗಿದ ಭಯಾನಕ ಕೃತ್ಯವೊಂದು ಮುಂಬಯಿಯಲ್ಲಿ ಬೆಳಕಿಗೆ ಬಂದಿದೆ. ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿದ್ದ ಕಾರಣ ಬೇಸರಗೊಂಡು ಪರಿಚಯಸ್ಥ ಮಹಿಳೆಯೊಬ್ಬಳ ಜತೆಗೆ ದೇಶಬಿಟ್ಟು ಓಡಿಬಂದಿದ್ದ ಬಾಲಕಿ ಮುಂಬಯಿಯಲ್ಲಿ ಮಾನವ ಕಳ್ಳಸಾಗಣೆ ಜಾಲದಲ್ಲಿ ಆಕೆ ಸಿಕ್ಕಿಬಿದ್ದು ನರಕ ಯಾತನೆ ಅನುಭವಿಸಿದ್ದಾಳೆ. ಯಾರೋ ಆಕೆಗೆ ಭಾರತದೊಳಗೆ ನುಸುಳಲು ಅವಕಾಶ ಮಾಡಿಕೊಟ್ಟಿದ್ದರು. ಇಲ್ಲಿ ಮಾನವ ಕಳ್ಳಸಾಗಣೆ ಜಾಲದಲ್ಲಿ

12ರ ಬಾಲಕಿ ಮೇಲೆ 200 ಮಂದಿಯಿಂದ ಅತ್ಯಾಚಾರ : ಮುಂಬಯಿಯಲ್ಲಿ ಬೆಳಕಿಗೆ ಬಂದ ಭಯಾನಕ ಕೃತ್ಯ Read More »

ಮನೆಯ ಸುತ್ತ ಅನುಮಾನಾಸ್ಪದ ವ್ಯಕ್ತಿಗಳ ಓಡಾಟ : ರಕ್ಷಣೆ ಕೋರಿ ಸಂತ್ರಸ್ತ ಯುವತಿಯಿಂದ ಐಜಿಪಿಗೆ ಮನವಿ

ಯಾರೋ ಗೇಟ್‌ ಬಡಿದಂತೆ, ಟೆರೇಸ್‌ ಮೇಲೆ ಹತ್ತಿ ಹೋದಂತಾಗುತ್ತದೆ ಎಂದು ದೂರು ಪುತ್ತೂರು : ಪುತ್ತೂರಿನ ಬಿಜೆಪಿ ನಾಯಕ ಪಿ.ಜಿ.ಜಗನ್ನಿವಾಸ ರಾವ್ ಅವರ ಪುತ್ರ ಶ್ರೀಕೃಷ್ಣ ಜೆ. ರಾವ್ ಅವರಿಂದ ಅತ್ಯಾಚಾರ ಮತ್ತು ವಂಚನೆಗೊಳಗಾಗಿ ತಾಯಿಯಾಗಿರುವ ವಿದ್ಯಾರ್ಥಿನಿ ತನಗೆ ಮತ್ತು ನವಜಾತ ಶಿಶುವಿಗೆ ಬೆದರಿಕೆ ಇದೆ ಎಂದು ಪೊಲೀಸ್ ರಕ್ಷಣೆ ಕೋರಿ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಅವರನ್ನು ಭೇಟಿ ಮಾಡಿ ಮಾನವಿ ನೀಡಿದ್ದಾರೆ. ಸೋಮವಾರ ಸಂತ್ರಸ್ತೆ ಮಂಗಳೂರಿನಲ್ಲಿರುವ ಪಶ್ಚಿಮ ವಲಯ ಐಜಿಪಿ ಕಚೇರಿಗೆ ಭೇಟಿ

ಮನೆಯ ಸುತ್ತ ಅನುಮಾನಾಸ್ಪದ ವ್ಯಕ್ತಿಗಳ ಓಡಾಟ : ರಕ್ಷಣೆ ಕೋರಿ ಸಂತ್ರಸ್ತ ಯುವತಿಯಿಂದ ಐಜಿಪಿಗೆ ಮನವಿ Read More »

ಧರ್ಮಸ್ಥಳ ಪ್ರಕರಣ : ಮಾನವ ಹಕ್ಕು ಆಯೋಗದಿಂದಲೂ ತನಿಖೆ

ಐಪಿಎಸ್‌ ಅಧಿಕಾರಿಯನ್ನೊಳಗೊಂಡಿರುವ ತಂಡದಿಂದ ವಿವಿಧೆಡೆ ತೆರಳಿ ಮಾಹಿತಿ ಸಂಗ್ರಹ ಧರ್ಮಸ್ಥಳ: ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ತನಿಖೆ ಆರಂಭಿಸಿದೆ. ಧರ್ಮಸ್ಥಳ ಗ್ರಾಮ ಪಂಚಾಯತ್‌ಗೆ ಆಯೋಗದ ಅಧಿಕಾರಿಗಳ ತಂಡ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಬೀಡುಬಿಟ್ಟ ನಾಲ್ವರು ಅಧಿಕಾರಿಗಳ ತಂಡದಲ್ಲಿ ಓರ್ವ ಐಪಿಎಸ್ ಅಧಿಕಾರಿ ಇದ್ದಾರೆ. ವಿವಿಧ ಆಯಾಮಗಳಲ್ಲಿ ದಾಖಲೆ ಮತ್ತು ಮಾಹಿತಿಗಳ ಸಂಗ್ರಹ ಮಾಡುತ್ತಿರುವ ತಂಡ ಪಂಚಾಯತ್‌ನಿಂದ ದಾಖಲೆಗಳನ್ನು ಕೇಳಿ ಪರಿಶೀಲನೆ ನಡೆಸುತ್ತಿದೆ. ಮುಂದಿನ

ಧರ್ಮಸ್ಥಳ ಪ್ರಕರಣ : ಮಾನವ ಹಕ್ಕು ಆಯೋಗದಿಂದಲೂ ತನಿಖೆ Read More »

ಧರ್ಮಸ್ಥಳ ಪ್ರಕರಣದ ತನಿಖೆ ಬಳಿಕ ವಾಸ್ತವಾಂಶ ತಿಳಿಯುತ್ತದೆ: ಡಾ. ಜಿ. ಪರಮೇಶ್ವರ್

ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ SIT ತನಿಖೆ ನಡೆಸುತ್ತಿದ್ದು, ಅದು ಪೂರ್ಣವಾಗುವ ವರೆಗೆ ತಾನು ಈ ಸಂಬಂಧ ಮಾತನಾಡುವುದಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ಈ ಬಗ್ಗೆ ಹಲವರು ಸಾಕಷ್ಟು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ನನ್ನ ಗಮನಕ್ಕೂ ಬಂದಿದೆ. ಆದರೆ ತನಿಖೆ ಮುಗಿಯುವ ವರೆಗೆ ಈ ಬಗ್ಗೆ ಮಾತನಾಡುವುದು ಸಮಂಜಸವಲ್ಲ. ತನಿಖೆಯ ಬಳಿಕ ವಾಸ್ತವಾಂಶ ಬೆಳಕಿಗೆ ಬರಲಿದೆ ಎಂದಿದ್ದಾರೆ. ಈ ಬಗ್ಗೆ ಸದನದಲ್ಲಿ ಪ್ರಶ್ನೆಗಳು ಬಂದರೆ ಉತ್ತರ ನೀಡಲಾಗುವುದು ಎಂದು ಅವರು ನುಡಿದಿದ್ದಾರೆ.

ಧರ್ಮಸ್ಥಳ ಪ್ರಕರಣದ ತನಿಖೆ ಬಳಿಕ ವಾಸ್ತವಾಂಶ ತಿಳಿಯುತ್ತದೆ: ಡಾ. ಜಿ. ಪರಮೇಶ್ವರ್ Read More »

error: Content is protected !!
Scroll to Top