ಅಪರಾಧ

ವಿಟ್ಲ ಶಾಲೆಯೊಂದರ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕಳ

ವಿಟ್ಲ : ವಿಟ್ಲದಲ್ಲಿ ವೀರಕಂಬ ವ್ಯಾಪ್ತಿಯ ಶಾಲೆಯೊಂದರಲ್ಲಿ  ಶಿಕ್ಷಕ ಶಾಲಾ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ನಡೆದಿದೆ. ಈ ಬಗ್ಗೆ  ದೂರಿನ ಆಧಾರದಲ್ಲಿ ಶಿಕ್ಷಕನನ್ನು ವಿಚಾರಿಸಲಾಗಿದೆ. ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಈತ, ಉತ್ತಮ ಶಿಕ್ಷಕ ಎಂಬ ಪ್ರಶಸ್ತಿಯನ್ನು ಪಡೆದಿದ್ದ ಎನ್ನಲಾಗಿದೆ. ಶಾಲೆಯ 10ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಇತರ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಆರೋಪ ಕೇಳಿ ಬಂದಿದ್ದು, ಶಿಕ್ಷಕನ  ವಿರುದ್ದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ತನಿಖೆ ನಡೆಸಲಾಗುತ್ತಿದೆ. ಕೇವಲ ವಿಟ್ಲದ […]

ವಿಟ್ಲ ಶಾಲೆಯೊಂದರ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕಳ Read More »

ಉಳ್ಳಾಲ ಕೋಟೆಕಾರಿನಲ್ಲಿ ಹಾಡಹಗಲೇ ಬ್ಯಾಂಕ್‌ ದರೋಡೆ

ಬಂದೂಕು ತೋರಿಸಿ ಸಿಬ್ಬಂದಿಯನ್ನು ಬೆದರಿಸಿ 10 ಕೋಟಿ ಹಣ, ಚಿನ್ನಾಭರಣ ದೋಚಿಕೊಂಡು ಪರಾರಿ ಮುಖ್ಯಮಂತ್ರಿ ಮಂಗಳೂರಿಗೆ ಆಗಮಿಸುತ್ತಿರುವಾಗಲೇ ಕೃತ್ಯ ಮಂಗಳೂರು : ಉಳ್ಳಾಲ ತಾಲೂಕಿನ ಕೆ.ಸಿ ರೋಡ್​​ನ ಕೋಟೆಕಾರು ಬ್ಯಾಂಕ್​ಗೆ ಇಂದು ಮಧ್ಯಾಹ್ನ ನುಗ್ಗಿದ ಐವರು ಮುಸುಕುಧಾರಿಗಳು ಬಂದೂಕಿನಿಂದ ಬ್ಯಾಂಕ್ ಸಿಬ್ಬಂದಿ, ಅಧಿಕಾರಿಗಳನ್ನು ಬೆದರಿಸಿ ಚಿನ್ನಾಭರಣ, ನಗದು ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಹಾಡಹಗಲೇ ಬ್ಯಾಂಕ್​ಗೆ ನುಗಿದ ಐವರು ದರೋಡೆಕೋರರು ಕೃತ್ಯ ಎಸಗಿದ್ದಾರೆ. ಬಂದೂಕಿನಿಂದ ಬ್ಯಾಂಕ್​​ ಸಿಬ್ಬಂದಿಯನ್ನು ಬೆದರಿಸಿ ಚಿನ್ನಾಭರಣ, ನಗದು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಮಂಗಳೂರಿನಲ್ಲಿ ಮುಖ್ಯಮಂತ್ರಿ

ಉಳ್ಳಾಲ ಕೋಟೆಕಾರಿನಲ್ಲಿ ಹಾಡಹಗಲೇ ಬ್ಯಾಂಕ್‌ ದರೋಡೆ Read More »

ದಾಳಿಕೋರನ ಟಾರ್ಗೆಟ್‌ ಆಗಿದ್ದದ್ದು ಶಾರೂಕ್‌ ಖಾನ್‌

ಶಾರೂಕ್‌ ಮನೆ ಬಳಿ ಹಲವು ಬಾರಿ ಸುಳಿದಾಡಿದ್ದ ಆರೋಪಿ ಮುಂಬಯಿ : ಬಾಲಿವುಡ್ ನಟ ಸೈಫ್ ಅಲಿ ಖಾನ್‌ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಇದಕ್ಕೂ ಮೊದಲು ಸೂಪರ್‌ ಸ್ಟಾರ್‌ ಶಾರೂಕ್‌ ಖಾನ್‌ ಮೇಲೆ ಹಲ್ಲೆಗೆ ಯತ್ನಿಸಿದ್ದ ಎಂಬ ವಿಚಾರ ಬಹಿರಂಗವಾಗಿದ್ದು, ಹೀಗಾಗಿ ಇದು ಹಣಕ್ಕಾಗಿ ಮಾಡಿದ ದರೋಡೆ ಕೃತ್ಯ ಅಲ್ಲ ಎನ್ನಲಾಗಿದೆ.ಸೈಫ್ ಅಲಿ ಖಾನ್‌ ಮೇಲೆ ಹಲ್ಲೆ ಮಾಡುವ ಮುಂಚೆ ಶಾರುಖ್ ಮನೆಯ ಮುಂದೆ ಕೂಡ ಹಲವು ಬಾರಿ ಈ ಆರೋಪಿ ಕಾಣಿಸಿಕೊಂಡಿದ್ದ ಎಂದು ತನಿಖೆಯಲ್ಲಿ

ದಾಳಿಕೋರನ ಟಾರ್ಗೆಟ್‌ ಆಗಿದ್ದದ್ದು ಶಾರೂಕ್‌ ಖಾನ್‌ Read More »

ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌, ಹೆಂಡತಿಗೆ 14 ವರ್ಷ ಜೈಲು

ಭ್ರಷ್ಟಾಚಾರ ಪ್ರಕರಣದಲ್ಲಿ ಸುದೀರ್ಘ ಕಾರಾಗೃಹ ವಾಸ ಇಸ್ಲಾಮಾಬಾದ್‌: ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ಥಾನದ ಮಾಜಿ ಪ್ರಧಾನಿ, ಮಾಜಿ ಕ್ರಿಕೆಟಿಗ ಇಮ್ರಾನ್‌ ಖಾನ್‌ಗೆ ಅಲ್ಲಿನ ನ್ಯಾಯಾಲಯ 14 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇಮ್ರಾನ್‌ ಜೊತೆಗೆ ಅವರ ಪತ್ನಿ ಬುಶ್ರಾ ಬೀಬಿ ಅವರಿಗೂ ಶಿಕ್ಷೆ ವಿಧಿಸಿದೆ. ಇಮ್ರಾನ್ ಖಾನ್ ಪತ್ನಿ ಬುಶ್ರಾ ಬೀಬಿಗೆ 7 ಲಕ್ಷ ರೂ. ಇಮ್ರಾನ್ ಖಾನ್‌ಗೆ 10 ಲಕ್ಷ ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ದಂಡ ಪಾವತಿಸಲು ಸಾಧ್ಯವಾಗದಿದ್ದರೆ ಇಮ್ರಾನ್‌ ಆರು ತಿಂಗಳು ಮತ್ತು ಬುಶ್ರಾ ಮೂರು

ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌, ಹೆಂಡತಿಗೆ 14 ವರ್ಷ ಜೈಲು Read More »

ಸೈಫ್‌ ಅಲಿ ಖಾನ್‌ ಮೇಲೆ ಹಲ್ಲೆ ಮಾಡಿದ ಆರೋಪಿ ಸೆರೆ

ಮುಂಬಯಿ : ಬಾಲಿವುಡ್‌ ನಟ ಸೈಫ್ ಅಲಿ ಖಾನ್ ಮನೆಗೆ ನುಗ್ಗಿ ಇರಿದಿದ್ದ ಆರೋಪಿಯನ್ನು ಪೊಲೀಸರು ಘಟನೆ ನಡೆದ ಸುಮಾರು 30 ತಾಸುಗಳ ಬಳಿಕ ಬಂಧಿಸಿದ್ದಾರೆ. ಆತನನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಸೈಫ್ ಅಲಿ ಖಾನ್ ಲೀಲಾವತಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಪೊಲೀಸರು ಆರೋಪಿಯನ್ನು ಬಾಂದ್ರಾ ಪೊಲೀಸ್‌ ಠಾಣೆಗೆ ಕರೆ ತಂದು ವಿಚಾರಣೆ ನಡೆಸುತ್ತಿದ್ದಾರೆ. ದಾಳಿ ಮಾಡಿರುವುದರ ಹಿಂದಿನ ಉದ್ದೇಶ ಏನು? ಆತ ಸೈಫ್ ಮನೆ ತಲುಪಿದ್ದು ಹೇಗೆ? ಈ ದಾಳಿ ಹಿಂದೆ ಬೇರೆ ಯಾರದ್ದಾದರೂ ಕೈವಾಡ ಇದೆಯೇ

ಸೈಫ್‌ ಅಲಿ ಖಾನ್‌ ಮೇಲೆ ಹಲ್ಲೆ ಮಾಡಿದ ಆರೋಪಿ ಸೆರೆ Read More »

ಗಾಂಜಾ ಸಾಗಿಸುತ್ತಿದ್ದ ಆರೋಪಿಯ ಬಂಧನ

ಉಪ್ಪಿನಂಗಡಿ : ಒಂದೂವರೆ ಕೆಜಿ ತೂಕದ ಗಾಂಜಾವೊಂದನ್ನು ರಿಕ್ಷಾ ಮುಖೇನಾ ಸಾಗಿಸುತ್ತಿರುವುದನ್ನು ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಮಾಲು ಸಹಿತ ಬಂಧಿಸಿದ್ದಾರೆ. 31ನೇ ನೆಕ್ಕಿಲಾಡಿಯಲ್ಲಿ ಎಸ್‌ಐ ಅವಿನಾಶ್ ಎಚ್. ಮತ್ತವರ ತಂಡ ವಾಹನ ತಪಾಸಣೆ ಮಾಡುತ್ತಿದ್ದಾಗ ಬಂಟ್ವಾಳದ ಕಡೆಯಿಂದ ಉಪ್ಪಿನಂಗಡಿಯತ್ತ ಬರುತ್ತಿದ್ದ ರಿಕ್ಷಾವನ್ನು ನಿಲ್ಲಿಸಲು ಸೂಚಿಸಿದ್ದು. ಆದರೆ ಚಾಲಕ ವಾಹನವನ್ನು ನಿಲ್ಲಿಸದೆ ಮುಂದಕ್ಕೆ ಚಲಾಯಿಸಿ ರಿಕ್ಷಾದಿಂದ ಇಳಿದು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಅಬ್ದುಲ್ ಸಲೀಂ (35 ವ) ಆರೋಪಿ

ಗಾಂಜಾ ಸಾಗಿಸುತ್ತಿದ್ದ ಆರೋಪಿಯ ಬಂಧನ Read More »

ಬೈಕ್‍ ನಿಯಂತ್ರಣ ತಪ್ಪಿ ಮೋರಿಗೆ ಡಿಕ್ಕಿ ಹೊಡೆದ ಬಾಲಕ | ಸ್ಥಳದಲ್ಲೆ ಮೃತ್ಯು

ಕಡಬ : ಬೈಕ್ ಸವಾರನ ನಿಯಂತ್ರಣ ತಪ್ಪಿ ಮೋರಿಗೆ ಢಿಕ್ಕಿ ಹೊಡೆದು ಶಾಲಾ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಶುಕ್ರವಾರ ಬೆಳಿಗ್ಗೆ ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪೇರಡ್ಕ ಸಮೀಪ ನಡೆದಿದೆ. ಮೃತ ಬಾಲಕನನ್ನು ಪೇರಡ್ಕದ ಖಾಸಗಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ, ನೂಜಿಬಾಳ್ತಿಲ ಗ್ರಾಮದ ಹೊಸಮನೆ ಕಾನ ನಿವಾಸಿ ವಿಶ್ವನಾಥ್ ಎಂಬವರ ಪುತ್ರ ಆಶಿಶ್(16) ಎನ್ನಲಾಗಿದೆ. ಮನೆಯಿಂದ ಶಾಲೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಬಾಲಕನನ್ನು ಕಡಬದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ  ಗಂಭೀರ

ಬೈಕ್‍ ನಿಯಂತ್ರಣ ತಪ್ಪಿ ಮೋರಿಗೆ ಡಿಕ್ಕಿ ಹೊಡೆದ ಬಾಲಕ | ಸ್ಥಳದಲ್ಲೆ ಮೃತ್ಯು Read More »

ನಟ ಸೈಫ್‌ ಅಲಿ ಖಾನ್‌ ಮೇಲೆ ಹಲ್ಲೆ : ತನಿಖೆಗೆ ದಯಾ ನಾಯಕ್‌ ಎಂಟ್ರಿ

24 ತಾಸು ಕಳೆದರೂ ನಿಗೂಢವಾಗಿ ಉಳಿದ ಪ್ರಕರಣ ಮುಂಬಯಿ : ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ ಅವರ ಮೇಲೆ ಅವರ ಮನೆಯೊಳಗೆ ಆಗಿರುವ ಮಾರಕ ದಾಳಿಯ ಬಗ್ಗೆ ಅನೇಕ ಅನುಮಾನಗಳು ಮೂಡಿರುವಂತೆಯೇ ಈ ಪ್ರಕರಣದ ತನಿಖೆಗೆ ಮುಂಬಯಿಯ ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ಕನ್ನಡಿಗ ದಯಾ ನಾಯಕ್‌ ಎಂಟ್ರಿಯಾಗಿದ್ದಾರೆ. ನಟನ ಮೇಲಾಗಿರುವ ದಾಳಿಯ ತನಿಖೆಗೆ ಏಳು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಈ ಪೈಕಿ ಒಂದು ತಂಡದ ನೇತೃತ್ವ ದಯಾ ನಾಯಕ್‌ಗೆ ನೀಡಲಾಗಿದೆ. ಗುರುವಾರ ನಸುಕಿನ 2.30ರ ವೇಳೆಗೆ ವ್ಯಕ್ತಿಯೊಬ್ಬ

ನಟ ಸೈಫ್‌ ಅಲಿ ಖಾನ್‌ ಮೇಲೆ ಹಲ್ಲೆ : ತನಿಖೆಗೆ ದಯಾ ನಾಯಕ್‌ ಎಂಟ್ರಿ Read More »

ಡಿಜಿಟಲ್‌ ಅರೆಸ್ಟ್‌ ಆಗಿದ್ದ ವೃದ್ಧೆಯ ಕೋಟಿಗಟ್ಟಲೆ ಹಣ ಉಳಿಸಿದ ಬ್ಯಾಂಕ್‌ ಮ್ಯಾನೇಜರ್‌

ಮಂಗಳೂರಿನ ಶಾಖಾ ವ್ಯವಸ್ಥಾಪಕಿಯ ಕಾರ್ಯಕ್ಕೆ ಮೆಚ್ಚುಗೆ ಮಂಗಳೂರು: ಡಿಜಿಟಲ್‌ ಅರೆಸ್ಟ್‌ ಆಗಿದ್ದ ವೃದ್ಧೆಯೊಬ್ಬರ ಕೋಟಿಗಟ್ಟಲೆ ಹಣ ಮಂಗಳೂರಿನ ಬ್ಯಾಂಕ್‌ ಮ್ಯಾನೇಜರ್‌ ಒಬ್ಬರ ಸಮಯ ಪ್ರಜ್ಞೆಯಿಂದಾಗಿ ಉಳಿದಿದೆ. ಸೈಬರ್‌ ವಂಚಕರ ಬಲೆಗೆ ಸಿಲುಕಿದ್ದ ವೃದ್ಧೆಯನ್ನು ಎಚ್‌ಡಿಎಫ್‌ಸಿ ಬ್ಯಾಂಕಿನ ಕಂಕನಾಡಿ ಶಾಖಾ ವ್ಯವಸ್ಥಾಪಕರು ಸ್ವಲ್ಪದರಲ್ಲೇ ಬಚಾವ್‌ ಮಾಡಿದ್ದಾರೆ. ವೃದ್ಧೆಯನ್ನು ಡಿಜಿಟಲ್‌ ಅರೆಸ್ಟ್‌ ಮಾಡಿದ್ದ ಸೈಬರ್‌ ಖದೀಮರು ನಿಮ್ಮ ಡೆಬಿಟ್‌ ಕಾರ್ಡ್‌ ಮೂಲಕ ಅಕ್ರಮವಾಗಿ ಹಣ ವರ್ಗಾವಣೆಯಾಗಿದೆ ಎಂದು ಬೆದರಿಸಿದ್ದರು. ಇದನ್ನು ನಂಬಿದ ವೃದ್ಧೆ ಬ್ಯಾಂಕ್‌ಗೆ ಧಾವಿಸಿ ಠೇವಣಿ ಇರಿಸಿದ್ದ ದೊಡ್ಡ

ಡಿಜಿಟಲ್‌ ಅರೆಸ್ಟ್‌ ಆಗಿದ್ದ ವೃದ್ಧೆಯ ಕೋಟಿಗಟ್ಟಲೆ ಹಣ ಉಳಿಸಿದ ಬ್ಯಾಂಕ್‌ ಮ್ಯಾನೇಜರ್‌ Read More »

ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ದೋಚಿದ ಕಳ್ಳರು| ಪ್ರಕರಣ ದಾಖಲು

ಕಡಬ :  ಮನೆಯೊಳಗೆ ಯಾರು ಇರದಾಗ ನುಗ್ಗಿದ ಕಳ್ಳರು ಚಿನ್ನಾಭರಣಗಳ ಜೊತೆಗೆ ನಗದು ಕಳವು ಮಾಡಿದ ಘಟನೆ ನೆಕ್ಕಿಲಾಡಿ ಗ್ರಾಮ ಕಡಬ ತಾಲೂಕು ಮರ್ಧಾಳ ಎಂಬಲ್ಲಿ ನಡೆದಿದೆ. ಈ ಘಟನೆ ನೆಕ್ಕಿಲಾಡಿ ಗ್ರಾಮ ಕಡಬ ತಾಲೂಕು ಮರ್ಧಾಳ ಕುರಿಯ ಕೋಸ್ ಜೇಮ್ಸ್ ಎಂಬವರ ಮನೆಯಲ್ಲಿ  ನಡೆದಿದೆ. ಕೋಸ್ ಜೇಮ್ಸ್ ದೂರಿನ ಪ್ರಕಾರ ಜ. 12 ರಂದು ಪತ್ನಿ ಹಾಗೂ ಮಗನೊಂದಿಗೆ ಪ್ರಾರ್ಥನೆ ಮಾಡಲು ಬೆಳಿಗ್ಗೆ ಮನೆಗೆ ಬೀಗ ಹಾಕಿ ಹೋಗಿದ್ದರಿಂದ ಪ್ರಾರ್ಥನೆ ಮುಗಿಸಿ ಸಾಯಂಕಾಲ ಅವರ ಮಗ

ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ದೋಚಿದ ಕಳ್ಳರು| ಪ್ರಕರಣ ದಾಖಲು Read More »

error: Content is protected !!
Scroll to Top