ಕ್ಯಾಂಪಸ್‌

ಅಂಬಿಕಾ ಸಿಬಿಎಸ್‌ಇ ಸಂಸ್ಥೆಯಲ್ಲಿ ಆಟಿದ ಕೂಟ ಆಚರಣೆ

ಪುತ್ತೂರು : ಪ್ರಕೃತಿಯಲ್ಲಿರುವ ಪ್ರತಿಯೊಂದು ಗಿಡಗಳೂ ಔಷಧೀಯ ಸಸ್ಯಗಳೇ ಆಗಿವೆ. ಹಾಗಾಗಿ ಪ್ರತಿಯೊಂದು ಗಿಡದಲ್ಲೂ ಸಕಾರಾತ್ಮಕ ಶಕ್ತಿ ಅಡಗಿದೆ. ಗಿಡಮರಗಳಷ್ಟೇ ಅಲ್ಲದೆ ಇಡಿಯ ಪ್ರಕೃತಿಯೇ ತನ್ನೊಳಗೆ ಔಷಧೀಯ ಅಂಶಗಳನ್ನು ಒಳಗೊಂಡಿದೆ ಎಂದು ನಾಟಿ ವೈದ್ಯ ದೇವಿಪ್ರಸಾದ್ ಹೇಳಿದರು. ಬಪ್ಪಳಿಗೆ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಆಯೋಜಿಸಲಾದ ’ಆಟಿದ ಕೂಟ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಕೂಡುಕುಟುಂಬಗಳಿದ್ದಾಗ ಈ ಪ್ರಕೃತಿ ಆಧಾರಿತ ನಾಟಿ ವೈದ್ಯ ಹೆಚ್ಚು ಪ್ರಚಲಿತದಲ್ಲಿತ್ತು. ಆದರೆ ವಿಭಕ್ತ ಕುಟುಂಬಗಳು ಹೆಚ್ಚಾದಂತೆ ನಾಟಿ ಪರಂಪರೆಯೂ ನಶಿಸಿ […]

ಅಂಬಿಕಾ ಸಿಬಿಎಸ್‌ಇ ಸಂಸ್ಥೆಯಲ್ಲಿ ಆಟಿದ ಕೂಟ ಆಚರಣೆ Read More »

ಸಿ ಎ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ

ಪುತ್ತೂರು: ಭಾರತೀಯ ಚಾರ್ಟಡ್ ಅಕೌಂಟೆಂಟ್ಸ್ ಸಂಸ್ಥೆ ಕಳೆದ ಜೂನ್ ನಲ್ಲಿ ನಡೆಸಿದ ಸಿ ಎ ಫೌಂಡೇಶನ್ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ತೇರ್ಗಡೆಯಾಗುವುದರ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳಾದ ಸುದೇಶ್ ಭಟ್-245 ಅಂಕ, ಆದಿತ್ಯ ನಾರಾಯಣ ಪಿ ಎಸ್-239 ಅಂಕ, ಪ್ರದೀಪ್ ಕೃಷ್ಣ ಐ-202 ಅಂಕ  ಮತ್ತು ಎಸ್ ತ್ವಿಷ-200 ಅಂಕಗಳನ್ನು ಪಡೆದು ತೇರ್ಗಡೆಯಾಗುವುದರ ಮೂಲಕ ಮುಂದಿನ ಹಂತದ ಸಿ ಎ ಇಂಟರ್‌ಮಿಡಿಯೆಟ್ ಪರೀಕ್ಷೆಯನ್ನು ಬರೆಯಲು ಅರ್ಹತೆ ಗಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ

ಸಿ ಎ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ Read More »

ಪ್ರತಿಷ್ಠಿತ ಪ್ರೇರಣಾ ತರಬೇತಿ ಸಂಸ್ಥೆಯ ಸ್ಮಿತಾ ಎಸ್ ರೈ ಮತ್ತು ಸಿಮ್ರಾನ್ ತಾಜ್ ಅವರು ಸಿ.ಎ ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ

ಪುತ್ತೂರು: ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ನಗರದ ಪ್ರತಿಷ್ಠಿತ “ಪ್ರೇರಣಾ” ಸಂಸ್ಥೆಯಲ್ಲಿ ತರಬೇತಿ ಪಡೆದ ಇಬ್ಬರು ವಿದ್ಯಾರ್ಥಿನಿಯರು ಉತ್ತಮ ಅಂಕಗಳೊಂದಿಗೆ ತೇರ್ಗಡೆಗೊಂಡಿದ್ದಾರೆ. ಈ ಮೂಲಕ ಸಂಸ್ಥೆಗೆ ಶೇ.100 ಫಲಿತಾಂಶ ಬಂದಿದೆ. ಜೂ.2023 ಪ್ರೇರಣಾ ಸಂಸ್ಥೆಯಿಂದ ಸಿ.ಎ.ಫೌಂಡೇಶನ್ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿಯರಾದ ಸಿಮ್ರನ್ ತಾಜ್ ಹಾಗೂ ಸ್ಮಿತಾ ಎಸ್.ರೈ ಉತ್ತಮ ಅಂಕಗಳೊಂದಿಗೆ ತೇರ್ಗಡೆಗೊಂಡಿದ್ದಾರೆ. ಸಿಮ್ರನ್ ತಾಜ್ ಅವರು ಆರ್ಯಾಪು ಗ್ರಾಮದ ಸಂಪ್ಯ ನಿವಾಸಿಯಾದ ಮುಬಾರಕ್ ಪಾಶಾ ಹಾಗೂ ಸಬಿಹಾ ಖನಮ್ ದಂಪತಿ ಪುತ್ರಿ. ಸ್ಮಿತಾ ಎಸ್. ರೈ ಅವರು ಕೊಳ್ತಿಗೆ

ಪ್ರತಿಷ್ಠಿತ ಪ್ರೇರಣಾ ತರಬೇತಿ ಸಂಸ್ಥೆಯ ಸ್ಮಿತಾ ಎಸ್ ರೈ ಮತ್ತು ಸಿಮ್ರಾನ್ ತಾಜ್ ಅವರು ಸಿ.ಎ ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ Read More »

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿವೇಕ ಸಂಜೀವಿನಿ ಔಷಧಿ ಗಿಡಗಳ ವಿತರಣಾ ಕಾರ್ಯಕ್ರಮ

ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿವೇಕ ಸಂಜೀವಿನಿ ಔಷಧಿ ಗಿಡಗಳ ವಿತರಣಾ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಪುಷ್ಪಲತಾ ಮಾತನಾಡಿ, ಔಷಧೀಯ ಗಿಡಗಳನ್ನು ಬೆಳೆಸುವ ಹವ್ಯಾಸ ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಧರ್ಮೋ ರಕ್ಷತಿ ರಕ್ಷಿತಃ ಎನ್ನುವ ಮಾತು ವೃಕ್ಷಗಳಿಗೂ ಅನ್ವಯಿಸುತ್ತದೆ. ಮರ ಗಿಡಗಳನ್ನು ನಾವು ರಕ್ಷಿಸಿದರೆ ಅವುಗಳು ನಮ್ಮ ಬದುಕನ್ನು ಹಸನಾಗಿಸುತ್ತವೆ. ವಿವೇಕ ಸಂಜೀವಿನಿ ಎಂಬ ಈ ಸುಂದರ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿ

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿವೇಕ ಸಂಜೀವಿನಿ ಔಷಧಿ ಗಿಡಗಳ ವಿತರಣಾ ಕಾರ್ಯಕ್ರಮ Read More »

ನರೇಂದ್ರ ಪ.ಪೂ.ಕಾಲೇಜಿನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದಿಂದ ಪ್ರಾತ್ಯಕ್ಷಿಕೆ

ಪುತ್ತೂರು: ಪಕೃತಿ ವಿಕೋಪ ಸೇರಿದಂತೆ ಇತರೆ ಯಾವುದೇ ರಾಷ್ಟ್ರೀಯ ವಿಪತ್ತು ನಿರ್ವಹಣೆ ಸಂದರ್ಭದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ. ಎನ್.ಡಿ.ಆರ್. ಎಫ್. ಜನರ ಜೀವ ಉಳಿಸುವ ಮಹತ್ವದ ಕಾರ್ಯ ಮಾಡುತ್ತದೆ.ಈ ಸಂದರ್ಭಗಳಲ್ಲಿ ಆಗುವ ಜೀವಹಾನಿಯನ್ನು ಕಡಿಮೆ ಮಾಡಲು ಯೋಜಿತ ರೀತಿಯಲ್ಲಿ ತುರ್ತುಸ್ಥಿತಿಯ ಅರ್ಥದಲ್ಲಿ ವಿಪತ್ತುಗಳಿಗೆ ಪ್ರತಿಕ್ರಿಯಿಸಲು ಈ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವನ್ನು ಯೋಜಿಸಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ 10 ನೇ ಬೆಟಾಲಿಯನ್ ನ ಟೀಮ್ ಕಮಾಂಡರ್ ಅಜಯ್ ಕುಮಾರ್ ಹೇಳಿದರು. ಪ್ರಕೃತಿ ವಿಕೋಪ

ನರೇಂದ್ರ ಪ.ಪೂ.ಕಾಲೇಜಿನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದಿಂದ ಪ್ರಾತ್ಯಕ್ಷಿಕೆ Read More »

ತುಳು 2ನೇ ರಾಜ್ಯಭಾಷೆ ಮಾಡುವಲ್ಲಿ ಪ್ರಯತ್ನ: ಶಾಸಕಿ ಭಾಗೀರಥಿ ಮುರುಳ್ಯ |ಎಸ್‌ಎಸ್‌ಎಲ್‌ಸಿ ತುಳು ಪರೀಕ್ಷೆಯಲ್ಲಿ ಪೂರ್ಣ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ

ರಾಮಕುಂಜ: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ 2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ತೃತೀಯ ಭಾಷೆ ತುಳು ವಿಷಯದಲ್ಲಿ ಪೂರ್ಣಾಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ನೇತ್ರಾವತಿ ತುಳುಕೂಟ ರಾಮಕುಂಜ ಮತ್ತು ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆ, ರಾಮಕುಂಜ ಇದರ ಸಹಯೋಗದಲ್ಲಿ ಆ.6 ಭಾನುವಾರ ಬೆಳಿಗ್ಗೆ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆಯಿತು. ಸುಳ್ಯ ಶಾಸಕ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂಗ್ಲಿಷ್ ವ್ಯಾಮೋಹದ ಇಂದಿನ ಸಂದರ್ಭದಲ್ಲೂ ವಿದ್ಯಾರ್ಥಿಗಳು ತುಳು ಕಲಿಕೆಗೆ ಆಸಕ್ತಿ ತೋರ್ಪಡಿಸುತ್ತಿರುವುದು

ತುಳು 2ನೇ ರಾಜ್ಯಭಾಷೆ ಮಾಡುವಲ್ಲಿ ಪ್ರಯತ್ನ: ಶಾಸಕಿ ಭಾಗೀರಥಿ ಮುರುಳ್ಯ |ಎಸ್‌ಎಸ್‌ಎಲ್‌ಸಿ ತುಳು ಪರೀಕ್ಷೆಯಲ್ಲಿ ಪೂರ್ಣ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ Read More »

ನರೇಂದ್ರ ಪ.ಪೂ.ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ, ವಾಣಿಜ್ಯ, ವಿಜ್ಞಾನ, ಸಾಹಿತ್ಯ ಸಂಘಗಳ ಉದ್ಘಾಟನೆ

ಪುತ್ತೂರು: ಪ್ರಜಾಪ್ರಭುತ್ವದ ಅರಿವು ವಿದ್ಯಾರ್ಥಿಗಳಿಗೆ ಆಗಬೇಕಾದರೆ ವಿದ್ಯಾರ್ಥಿ ಸಂಘಗಳು ಸಕ್ರಿಯವಾಗಬೇಕು. ವಿದ್ಯಾರ್ಥಿ ಶಕ್ತಿ ಅನಾವರಣಗೊಳ್ಳಬೇಕಾದರೆ ಸಾಂಘಿಕ ಪ್ರಯತ್ನ ನಡೆಯಬೇಕು. ಕಲಿಕೆಯ ಜೊತೆಗೆ ಸಮಾಜದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಆಸಕ್ತಿಯನ್ನು ಬೆಳೆಸಿದರೆ ಮಾತ್ರ ಯುವ ಸಮಾಜದ ಸದ್ಬಳಕೆಯಾಗುವುದು ಎಂದು ಬೆಂಗಳೂರಿನ ಹೈಕೋರ್ಟ್ ನ್ಯಾಯವಾದಿ ಸುಯೋಗ್ ಹೇರಳೆ. ಇ. ಹೇಳಿದರು. ನರೇಂದ್ರ ಪ.ಪೂ.ಕಾಲೇಜಿನಲ್ಲಿ 2023-24ನೇ ಸಾಲಿನ ವಿದ್ಯಾರ್ಥಿ ಸಂಘ ಮತ್ತು ವಾಣಿಜ್ಯ,ವಿಜ್ಞಾನ,ಸಾಹಿತ್ಯ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾಯಕತ್ವದ ಬೆಳವಣಿಗೆಗೆ ಹಾಗೂ ಆರೋಗ್ಯಯುತ ಪ್ರಜಾಪ್ರಭುತ್ವದ ನಿರ್ಮಾಣಕ್ಕೆ ವಿದ್ಯಾರ್ಥಿ ಸಂಘಗಳು ಮಾರ್ಗಸೂಚಿಗಳಾಗಲಿವೆ.

ನರೇಂದ್ರ ಪ.ಪೂ.ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ, ವಾಣಿಜ್ಯ, ವಿಜ್ಞಾನ, ಸಾಹಿತ್ಯ ಸಂಘಗಳ ಉದ್ಘಾಟನೆ Read More »

ವಿಟ್ಲ ರೋಟರಿ ಕ್ಲಬ್ ವತಿಯಿಂದ “ವನಸಿರಿ, ವಿದ್ಯಾಸಿರಿ” ವಿಶಿಷ್ಟ ಕಾರ್ಯಕ್ರಮ

ಮಾಣಿಲ : ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಯಶಸ್ಸಿನ ಮೂಲಮಂತ್ರ ಎಂದು ವಿಟ್ಲ ರೋಟರಿ ಕ್ಲಬ್ ನ ಯೋಜನಾ ನಿರ್ವಾಹಕ ಡಾ. ವಿ. ಕೆ ಹೆಗ್ಗಡೆ  ಹೇಳಿದರು. ಅವರು ಮಾಣಿಲ ಸರಕಾರಿ ಪ್ರೌಢ ಶಾಲೆಯಲ್ಲಿ  ವಿಟ್ಲ ರೋಟರಿ ಕ್ಲಬ್ ಪ್ರಾಯೋಜಕತ್ವದಲ್ಲಿ ನಡೆದ ‘ವನಸಿರಿ’ ಹಾಗೂ ‘ವಿದ್ಯಾಸಿರಿ’ ವಿಶಿಷ್ಟ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೌಢ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳು  ಹಾಗೂ  ಗಿಡಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮ ನಡೆಯಿತು. ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ಕಿರಣ್ ಕುಮಾರ್ ಅಧ್ಯಕ್ಷತೆ

ವಿಟ್ಲ ರೋಟರಿ ಕ್ಲಬ್ ವತಿಯಿಂದ “ವನಸಿರಿ, ವಿದ್ಯಾಸಿರಿ” ವಿಶಿಷ್ಟ ಕಾರ್ಯಕ್ರಮ Read More »

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸುಶ್ಮಿತಾ.ಟಿ.ರಾವ್ ಚೆಸ್ ಪಂದ್ಯಾಟದಲ್ಲಿ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆ

ಪುತ್ತೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ದ.ಕ.ಜಿಲ್ಲಾ ಪಂಚಾಯಿತಿ,  ಸುಳ್ಯ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಂಯುಕ್ತ ಆಶ್ರಯದಲ್ಲಿ ಗುರುವಾರ  ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಸುಶ್ಮಿತಾ ಟಿ.ರಾವ್ ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈಕೆ ತ್ರಿವಿಕ್ರಮ್ ರಾವ್ ಮತ್ತು ಶಾರದಾ.ಜಿ ದಂಪತಿ ಪುತ್ರಿ. ಈಕೆಯನ್ನು ಶಾಲಾ ಆಡಳಿತ ಮಂಡಳಿ, ಶಿಕ್ಷಕ ವರ್ಗ, ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸುಶ್ಮಿತಾ.ಟಿ.ರಾವ್ ಚೆಸ್ ಪಂದ್ಯಾಟದಲ್ಲಿ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆ Read More »

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಶಿಕ್ಷಕ-ರಕ್ಷಕ ಸಂಘ ಮತ್ತು ಮಾತೃಭಾರತಿಯ ಪದಾಧಿಕಾರಿಗಳ ಆಯ್ಕೆ

ಪುತ್ತೂರು: ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ 2023-24ನೇ ಸಾಲಿನ ಶಿಕ್ಷಕ – ರಕ್ಷಕ ಸಂಘ ಮತ್ತು ಮಾತೃಭಾರತಿಯ ಪದಾಧಿಕಾರಿಗಳ ಆಯ್ಕೆ ನಡೆಯಿತು. ಪ್ರಸಕ್ತ ವರ್ಷದ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾಗಿ ಜಯಂತ್ ಗೌಡ ಕೆ, ಉಪಾಧ್ಯಕ್ಷರಾಗಿ ಆಶಾ ಕೆ, ಕಾರ್ಯದರ್ಶಿಯಾಗಿ ಯುವರಾಜ ಕೆ, ಆಯ್ಕೆಗೊಂಡರು. ಮಾತೃಭಾರತಿಯ ಅಧ್ಯಕ್ಷೆಯಾಗಿ ಮಂಗಳ ಗೌರಿ, ಉಪಾಧ್ಯಕ್ಷೆಯಾಗಿ ಪ್ರೀತಿಕಲಾ, ಕಾರ್ಯದರ್ಶಿಯಾಗಿ ಮಂಜುಳಾ ಆಯ್ಕೆಗೊಂಡರು.

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಶಿಕ್ಷಕ-ರಕ್ಷಕ ಸಂಘ ಮತ್ತು ಮಾತೃಭಾರತಿಯ ಪದಾಧಿಕಾರಿಗಳ ಆಯ್ಕೆ Read More »

error: Content is protected !!
Scroll to Top