ಕ್ಯಾಂಪಸ್‌

ನರೇಂದ್ರ ಪ.ಪೂ.ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

ಪುತ್ತೂರು: ಪ್ರತೀ ವ್ಯಕ್ತಿಯು ತಮ್ಮ ಜೀವನದಲ್ಲಿ ತಂದೆ ತಾಯಿಯ ನಂತರದ ಸ್ಥಾನವನ್ನು ಗುರವಿಗೆ ನೀಡುತ್ತಾರೆ. ಶಿಕ್ಷಣದ ಮೂಲ ಅರ್ಥವನ್ನು ತಿಳಿಸಿ ವ್ಯಕ್ತಿಯ ಬದುಕನ್ನು ಬೆಳಗುವವರು ಶಿಕ್ಷಕರಾಗಿರುವುದರಿಂದ ಇಡೀ ಪ್ರಪಂಚವೇ ಇವರನ್ನು ಅಗ್ರಸ್ಥಾನದಲ್ಲಿಟ್ಟು ಪೂಜಿಸುತ್ತದೆ .ಎಂದು ನರೇಂದ್ರ ಪ.ಪೂ  ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶ್ಯಾನಭಾಗ್ ಹೇಳಿದರು. ನರೇಂದ್ರ ಪ.ಪೂ.ಕಾಲೇಜಿನಲ್ಲಿ ಮಂಗಳವಾರ ನಡೆದ ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ ಅವರು ಮಾತನಾಡಿದರು. ಗುರುಕುಲ ಶಿಕ್ಷಣದಿಂದ ಹಿಡಿದು ಇಂದಿನ ಶಿಕ್ಷಣದವರೆಗೂ ಶಿಕ್ಷಕರು ಇತರರ ಜೀವನವನ್ನು ರೂಪಿಸಲು ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಿದ್ದಾರೆ. ಜೀವನದ ಪ್ರತಿಯೊಂದು […]

ನರೇಂದ್ರ ಪ.ಪೂ.ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ Read More »

ಮೂರ್ತಿಕಲಾ ರಚನಾ ಸ್ಪರ್ಧೆ – ರಾಷ್ಟ್ರಮಟ್ಟಕ್ಕೆ ಆಯ್ಕೆ

ಪುತ್ತೂರು: ವಿದ್ಯಾಭಾರತಿ ಕರ್ನಾಟಕ ವತಿಯಿಂದ ಕಲಬುರಗಿ ಜಿಲ್ಲೆಯ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಮ್ ನಲ್ಲಿ ನಡೆದ ರಾಜ್ಯಮಟ್ಟದ ಗಣಿತ -ವಿಜ್ಞಾನ ಮೇಳದ  ಮೂರ್ತಿಕಲಾ ರಚನಾ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಕಿಶಾನ್ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇವರು ಹರೀಶ್ ಗೌಡ ಮತ್ತು ಸವಿತಾ ದಂಪತಿ ಪುತ್ರ ಇವರಿಗೆ ಶಾಲಾ ಚಿತ್ರಕಲಾ ಶಿಕ್ಷಕ ರುಕ್ಮಯ ತರಬೇತಿ ನೀಡಿರುತ್ತಾರೆ.

ಮೂರ್ತಿಕಲಾ ರಚನಾ ಸ್ಪರ್ಧೆ – ರಾಷ್ಟ್ರಮಟ್ಟಕ್ಕೆ ಆಯ್ಕೆ Read More »

ವಿವೇಕಾನಂದ ಇನ್ಟ್ಸ್ ಟ್ಯೂಟ್  ಆಫ್ ಫಾರ್ಮಾಸ್ಯೂಟಿಕಲ್ ಸೈನ್ಸಸ್  ಉದ್ಘಾಟನೆ | ವಿವೇಕಾನಂದ ವಿದ್ಯಾವರ್ಧಕ ಸಂಘದ 80ನೇ ಸಂಸ್ಥೆ

ಪುತ್ತೂರು : ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ಪುತ್ತೂರಿನಲ್ಲಿ ಪ್ರಥಮ ಬಿ.ಫಾರ್ಮ್‍ ಕಾಲೇಜು  ವಿವೇಕಾನಂದ ಇನ್ಟ್ಸ್ ಟ್ಯೂಟ್  ಆಫ್ ಫಾರ್ಮಾಸ್ಯೂಟಿಕಲ್ ಸೈನ್ಸ್‍ ಉದ್ಘಾಟನಾ ಸಮಾರಂಭ ಸೋಮವಾರ ನಡೆಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ 80ನೇ ಸಂಸ್ಥೆಯಾಗಿದ್ದು, ಕಾಲೇಜಿನ ಕೇಶವ ಸಂಕಲ್ಪ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಶೈಕ್ಷಣಿಕ ವಿಭಾಗವನ್ನು ಭಾರತ ಸರಕಾರದ ರಾಜ್ಯ ಆರೋಗ್ಯ ಸಚಿವೆ ಡಾ.ಭಾರತಿ ಪ್ರವೀಣ್ ಪವಾರ್ ಉದ್ಘಾಟಿಸಿ ಮಾತನಾಡಿ, ಸಾಂಸ್ಕೃತಿಕವಾಗಿ ಶ್ರೀಮಂತಿಕೆಯಿಂದ ಕೂಡಿದ ಪುತ್ತೂರಿನ ಈ ಪ್ರದೇಶದಲ್ಲಿ ವೈದ್ಯಕೀಯ ಶಿಕ್ಷಣವನ್ನು ಕೊಡುವ ಸಂಸ್ಥೆ ಪ್ರಾರಂಭಗೊಂಡಿರುವುದು

ವಿವೇಕಾನಂದ ಇನ್ಟ್ಸ್ ಟ್ಯೂಟ್  ಆಫ್ ಫಾರ್ಮಾಸ್ಯೂಟಿಕಲ್ ಸೈನ್ಸಸ್  ಉದ್ಘಾಟನೆ | ವಿವೇಕಾನಂದ ವಿದ್ಯಾವರ್ಧಕ ಸಂಘದ 80ನೇ ಸಂಸ್ಥೆ Read More »

ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಗೆ ಕರ್ನಾಟಕ ಎಜ್ಯುಕೇಶನಲ್ ಅವಾರ್ಡ್-2023

ಪುತ್ತೂರು: ಕರ್ನಾಟಕ ಎಜ್ಯುಕೇಶನಲ್ ಅವಾರ್ಡ್ ಕೊಡಲಾಗುವ ಬೆಸ್ಟ್ ಕಾಂಪಿಟೇಟಿವ್ ಕೋಚಿಂಗ್ ಇನ್ಸ್ಟಿಟ್ಯೂಟ್ ಪ್ರಶಸ್ತಿಯನ್ನು ಬೆಂಗಳೂರಿನ ನಿಮಾನ್ಸ್ ಕನ್ವೆನ್ಷನ್  ಸೆಂಟರ್ ನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಪುತ್ತೂರಿನ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಪ್ರಫುಲ್ಲ ಗಣೇಶ್ ಅವರಿಗೆ ನೀಡಿ ಗೌರವಿಸಲಾಯಿತು. 2010ರಲ್ಲಿ ಸ್ಥಾಪನೆಗೊಂಡು  ಪುತ್ತೂರು ಮತ್ತು ಸುಳ್ಯದಲ್ಲಿ ಕಾರ್ಯಾಚರಿಸುತ್ತಿರುವ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಣ ಸಂಸ್ಥೆಯಾಗಿರುವ ಐ.ಆರ್.ಸಿ.ಎಂ.ಡಿ ಕಂಪ್ಯೂಟರ್ ಮತ್ತು ಬ್ಯಾಂಕಿಂಗ್ ಪ್ರವೇಶ ಪರೀಕ್ಷಾ ತರಬೇತಿ ಕೇಂದ್ರ  ಶಿಕ್ಷಣ ಕ್ಷೇತ್ರದಲ್ಲಿ ಮಗದೊಂದು ಅದ್ವಿತೀಯ ಸಾಧನೆಯನ್ನು ಮಾಡಿದೆ. ವಿದ್ಯಾರ್ಥಿಗಳನ್ನು ಎಲ್ಲಾ ರೀತಿಯ

ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಗೆ ಕರ್ನಾಟಕ ಎಜ್ಯುಕೇಶನಲ್ ಅವಾರ್ಡ್-2023 Read More »

ಸಂಸ್ಕೃತ ಅತ್ಯಂತ ಶ್ರೇಷ್ಠ ಹಾಗೂ ಪ್ರಸ್ತುತ ಭಾಷೆ : ಡಾ.ಗಣೇಶಕೃಷ್ಣ ಭಟ್ಟ | ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಸಂಸ್ಕೃತೋತ್ಸವ ಕಾರ್ಯಕ್ರಮ

ಪುತ್ತೂರು: ಸಂಸ್ಕೃತ ಅತ್ಯಂತ ಶ್ರೇಷ್ಠವಾದ ಭಾಷೆ. ಮಾತ್ರವಲ್ಲದೆ ಅಂದಿಗೂ ಇಂದಿಗೂ ಎಂದಿಗೂ ಪ್ರಸ್ತುತವಾದ ಭಾಷೆ. ಸಂಸ್ಕೃತ ಅಧ್ಯಯನದಿಂದ ಅನೇಕ ಪ್ರಯೋಜನಗಳನ್ನು ನಾವು ಪಡೆಯಬಹುದು. ಬಹುಜನರು ನಂಬುವ ಜ್ಯೋತಿಷ್ಯ ಶಾಸ್ತ್ರ ಸಂಸ್ಕೃತದ ಒಂದು ಅಂಗವೇ ಆಗಿದೆ ಎಂದು ಗುರುವಾಯೂರಿನ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಜ್ಯೋತಿಷ್ಯ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಡಾ. ಗಣೇಶಕೃಷ್ಣ ಭಟ್ಟ ಹೇಳಿದರು. ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಸಿ.ಬಿ.ಎಸ್.ಇ ವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಲಾದ ಸಂಸ್ಕೃತೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಸಂಸ್ಕೃತ ಅತ್ಯಂತ ಶ್ರೇಷ್ಠ ಹಾಗೂ ಪ್ರಸ್ತುತ ಭಾಷೆ : ಡಾ.ಗಣೇಶಕೃಷ್ಣ ಭಟ್ಟ | ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಸಂಸ್ಕೃತೋತ್ಸವ ಕಾರ್ಯಕ್ರಮ Read More »

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪುತ್ತೂರು ತಾಲೂಕಿನ ಆನಡ್ಕ ಶಾಲಾ ಮುಖ್ಯ ಶಿಕ್ಷಕಿ ಶುಭಲತಾ ಹಾರಾಡಿ ಆಯ್ಕೆ

ಪುತ್ತೂರು: ದ.ಕ.ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದ ಆನಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶುಭಲತಾ ಹಾರಾಡಿ ಭಾಜನರಾಗಿದ್ದಾರೆ. ಶುಭಲತಾ ಅವರು ನೊಣಯ್ಯ ಹಾಗೂ ಗುಲಾಬಿ ದಂಪತಿ ಪುತ್ರಿಯಾಗಿದ್ದು, ಪ್ರಾಥಮಿಕ ಶಿಕ್ಷಣವನ್ನು ಮೂಡಬಿದ್ರೆಯಲ್ಲಿ, ಪ್ರೌಢ ಶಿಕ್ಷಣವನ್ನು ನಾರಾವಿ ಮತ್ತು ವೃತ್ತಿಪರ ಶಿಕ್ಷಣವನ್ನು ಮಂಗಳೂರು ಕಪಿತಾನಿಯೋ ಶಿಕ್ಷಣ ಸಂಸ್ಥೆಯಲ್ಲಿ ಪೂರೈಸಿದ್ದು, ಬಂಟ್ವಾಳ ತಾಲೂಕಿನ ಕೊಯಿಲ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಉಚಿತ ಸೇವೆ ಸಲ್ಲಿಸಿ ಮುಂದೆ ಸರಕಾರಿ ಶಾಲಾ ಶಿಕ್ಷಕಿಯಾಗಿ ನೇಮಕಗೊಂಡು

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪುತ್ತೂರು ತಾಲೂಕಿನ ಆನಡ್ಕ ಶಾಲಾ ಮುಖ್ಯ ಶಿಕ್ಷಕಿ ಶುಭಲತಾ ಹಾರಾಡಿ ಆಯ್ಕೆ Read More »

ದ.ಕ.ಜಿಲ್ಲಾ ಮಟ್ಟದ ಸರಕಾರಿ ಕಿ., ಹಿ. ಪ್ರೌಢಶಾಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ 21 ಶಿಕ್ಷಕರು ಆಯ್ಕೆ

ಮಂಗಳೂರು : ದ.ಕ. ಜಿಲ್ಲಾ ಮಟ್ಟದಲ್ಲಿ 2023-24ನೆ ಸ ಕಿರಿಯ, ಹಿರಿಯ, ಪ್ರೌಢಶಾಲಾ ವಿಭಾಗಗಳಿಂದ ತಾಲೂಕಿ ಶಿಕ್ಷಕರಂತೆ 7 ತಾಲೂಕಿನ ಒಟ್ಟು 21 ಶಿಕ್ಷಕರನ್ನು ಉತ್ತಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ದ.ಕ. ಜಿಲ್ಲಾ ಮಟ್ಟದ ಕ ಸುಳ್ಯ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಸೆ. 5ರಂ 10 ಗಂಟೆಗೆ ಸುಳ್ಯದ ಪರಿವಾರ ಕಾನ ಅಮರಜ್ಯೋತಿ ಕು ಜಾನಕಿ ವೆಂಕಟರಮಣ ಗೌಡ ಸಭಾಭವನದಲ್ಲಿ ನಡೆಯ ಸಂದರ್ಭ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಶಾಲಾ ಇಲಾಖೆಯ ಉಪ ನಿರ್ದೇಶಕ ದಯಾನ

ದ.ಕ.ಜಿಲ್ಲಾ ಮಟ್ಟದ ಸರಕಾರಿ ಕಿ., ಹಿ. ಪ್ರೌಢಶಾಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ 21 ಶಿಕ್ಷಕರು ಆಯ್ಕೆ Read More »

ಆಲಂಗಾರು ಶ್ರೀ ವಿದ್ಯಾಭಾರತಿ  ವಿದ್ಯಾಸಂಸ್ಥೆಯ ಕಬಡ್ಡಿ ಬಾಲಕಿಯರ ತಂಡ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆ

ಪುತ್ತೂರು: ಹೈದರಾಬಾದ್ ನಲ್ಲಿ ನಡೆದ ರಾಜ್ಯಮಟ್ಟದ 14 ರ ವಯೋಮಾನದ ಕಬ್ಬಡ್ಡಿ ಪಂದ್ಯಾಟದಲ್ಲಿ ಆಲಂಗಾರು ಶ್ರೀ ವಿದ್ಯಾಭಾರತಿ ವಿದ್ಯಾಸಂಸ್ಥೆಯ ಬಾಲಕಿಯರ ಕಬ್ಬಡ್ಡಿ ತಂಡ ಪ್ರಥಮ ಸ್ಥಾನದೊಂದಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ. ತೆಲಂಗಾಣ ರಾಜ್ಯವನ್ನು ಅಂತಿಮವಾಗಿ ಸೋಲಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ. ತಂಡವನ್ನು ಹಂಸಿಕ ಅಂಬುಲ,ಯಶಸ್ವಿನಿ.ಬಿ, ಭವ್ಯ. ಕೆ,ಚಿನ್ಮಯಿ, ಇಂಚರ ಎಲ್ ಶೆಟ್ಟಿ, ಅಲ್ವಿತಾ, ವಾತ್ಸಲ್ಯ ಬಿ ಗೌಡ, ಪಲ್ಲವಿ, ಕೃತಿ, ಸಿಂಚನ ಎಸ್, ದೀಕ್ಷಾ ಶ್ರೀ, ಹಂಸಿಕ ಅಂಬುಲ, ಭೂಮಿಕಾ ಜೆ. ಪ್ರತಿನಿಧಿಸಿದ್ದರು. ಉತ್ತರ ಪ್ರದೇಶದಲ್ಲಿ ನಡೆಯುವ ರಾಷ್ಟ್ರಮಟ್ಟದ ಕಬಡ್ಡಿ

ಆಲಂಗಾರು ಶ್ರೀ ವಿದ್ಯಾಭಾರತಿ  ವಿದ್ಯಾಸಂಸ್ಥೆಯ ಕಬಡ್ಡಿ ಬಾಲಕಿಯರ ತಂಡ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆ Read More »

“ಹಸಿರು ಪರಿಸರದಲ್ಲಿ ಸಂತಸದಾಯಕ ಕಲಿಕೆ” ಧ್ಯೇಯ ವಾಕ್ಯದೊಂದಿಗೆ ಕಾರ್ಯಾಚರಿಸುತ್ತಿರುವ ಗ್ರಾಮೀಣ ಪ್ರದೇಶದ ಆನಡ್ಕ ಸರಕಾರಿ ಶಾಲೆ

ಪುತ್ತೂರು: ಈ ಸರಕಾರಿ ಶಾಲೆಯಲ್ಲಿ ಏನಿದೆ,, ಏನಿಲ್ಲ. ಎಲ್ಲವೂ ಇದೆ. ಈ ಶಾಲೆಯ ವಿಶೇಷತೆಯೆಂದರೆ ಬೃಹತ್ ಕೃಷಿ ಭಂಡಾರವನ್ನೇ ಈ ಶಾಲೆ ಹೊಂದಿರುವುದು. ಇದು ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದ ಆನಡ್ಕ ಶಾಲೆಯ ವಿಶೇಷತೆ. “ಹಸಿರು ಪರಿಸರದಲ್ಲಿ ಸಂತಸದಾಯಕ ಕಲಿಕೆ” ಎಂಬ ಧ್ಯೇಯ ವಾಕ್ಯದೊಂದಿಗೆ ತೀರಾ ಗ್ರಾಮೀಣ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಈ ಶಾಲೆಯ ಕೃಷಿ ಕಾಯಕವನ್ನೊಮ್ಮೆ ನೋಡಿದರೆ ಎಂತವರನ್ನೂ ಆಶ್ಚರ್ಯಚಕಿತರನ್ನಾಗಿ ಮಾಡುವುದರಲ್ಲಿ ಸಂಶಯವೇ ಇಲ್ಲ. ಗ್ರಾಮೀಣ ಪ್ರದೇಶಲ್ಲಿ ತನ್ನ ಧ್ಯೇಯ ವಾಕ್ಯಕ್ಕೆ ತಕ್ಕಂತೆ ಹಚ್ಚ ಹರಿಸಿರಿನಿಂದ ಕೂಡಿದ

“ಹಸಿರು ಪರಿಸರದಲ್ಲಿ ಸಂತಸದಾಯಕ ಕಲಿಕೆ” ಧ್ಯೇಯ ವಾಕ್ಯದೊಂದಿಗೆ ಕಾರ್ಯಾಚರಿಸುತ್ತಿರುವ ಗ್ರಾಮೀಣ ಪ್ರದೇಶದ ಆನಡ್ಕ ಸರಕಾರಿ ಶಾಲೆ Read More »

ಶಟಲ್ ಬ್ಯಾಡ್ಮಿಂಟನ್ : ವಿವೇಕಾನಂದ ಪ.ಪೂ ಕಾಲೇಜಿನ ಬಾಲಕರ ಹಾಗೂ ಬಾಲಕಿಯರ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಪುತ್ತೂರು : ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಪುತ್ತೂರಿನ  ಅಂಬಿಕಾ ಪದವಿ ಪೂರ್ವ ಕಾಲೇಜಿನ  ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಬಾಲಕರ ಹಾಗೂ ಬಾಲಕಿಯರ  ತಂಡವು ಪ್ರಥಮ ಸ್ಥಾನವನ್ನು  ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ಬಾಲಕರ ವಿಭಾಗವನ್ನು ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಅಖಿಲೇಶ್ ವರ್ಮ, ವಿಘ್ನೇಶ್ ಜಾಧವ್, ಕೌಶಿಕ್ ಯು, ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ಯಶಸ್ ಪ್ರತಿನಿಧಿಸಿದ್ದರು. ಬಾಲಕಿಯರ ವಿಭಾಗವನ್ನು ದ್ವಿತೀಯ ಪಿಯುಸಿ

ಶಟಲ್ ಬ್ಯಾಡ್ಮಿಂಟನ್ : ವಿವೇಕಾನಂದ ಪ.ಪೂ ಕಾಲೇಜಿನ ಬಾಲಕರ ಹಾಗೂ ಬಾಲಕಿಯರ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ Read More »

error: Content is protected !!
Scroll to Top