ಕ್ಯಾಂಪಸ್‌

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ : ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ಹಲವು ಪ್ರಶಸ್ತಿ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಛೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಮಂಗಳೂರು ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ಮಂಗಳೂರು ರಾಮಕೃಷ್ಣ ಆಂಗ್ಲ ಮಾಧ್ಯಮ ಶಾಲೆ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ರಾಮಕೃಷ್ಣ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿ ಪಡೆದುಕೊಂಡಿದ್ದಾರೆ. ಪ್ರೌಢ ಶಾಲಾ ವಿಭಾಗದಲ್ಲಿ 8ನೇ ತರಗತಿಯ ಕುಮಾರಿ ಸುಪ್ರಜಾ ರಾವ್ ಜನಪದ ಗೀತೆಯಲ್ಲಿ ದ್ವಿತೀಯ, […]

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ : ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ಹಲವು ಪ್ರಶಸ್ತಿ Read More »

ಅಂತರ್ ಜಿಲ್ಲಾ ಕಬಡ್ಡಿ ಪಂದ್ಯಾಟ : ಲಿಟ್ಲ್ ಫ್ಲವರ್ ಶಾಲಾ ಬಾಲಕಿಯರ ತಂಡ ಪ್ರಥಮ

ಸುಳ್ಯ: ಗುತ್ತಿಗಾರು ವೀರಾಂಜನೇಯ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ನಡೆದ ಅಂತರ್ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ದರ್ಬೆ ಲಿಟ್ಲ್ ಫ್ಲವರ್ ಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ. ತಂಡದ ಜುವೆನ್ನಾ ಡ್ಯಾಝಲ್ ಕುಟಿನ್ಹಾ ಸವ್ಯಾಸಾಚಿ ಆಟಗಾರ್ತಿ, ಜೆನಿಟಾ ಸಿಂಧು ಪಸನ್ನ ಅತ್ತ್ಯುತಮ ಹಿಡಿತಗಾರ್ತಿ ಪ್ರಶಸ್ತಿಯನ್ನು ಪಡೆದುಕೊಂಡರು. ತಂಡವನ್ನು ಸನ್ನಿಧಿ, ಜಸ್ಮಿತಾ, ಫಾತಿಮತ್ ಶೈಮಾ, ಹಾರ್ದಿಕ, ನಿಶ್ಮಿತಾ, ದೃಶಾ,ಫಾತಿಮತ್ ಅಫ್ರ ಹಾಗೂ ಸುಶ್ರಾವ್ಯ ಪ್ರತಿನಿಧಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ವೆನಿಶಾ ಬಿ ಎಸ್

ಅಂತರ್ ಜಿಲ್ಲಾ ಕಬಡ್ಡಿ ಪಂದ್ಯಾಟ : ಲಿಟ್ಲ್ ಫ್ಲವರ್ ಶಾಲಾ ಬಾಲಕಿಯರ ತಂಡ ಪ್ರಥಮ Read More »

ಪ್ರೇರಣಾದಿಂದ ಪಿಯುಸಿ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ಪರ್ಧೆ 2023

ಪುತ್ತೂರು: ಪ್ರೇರಣಾ ಸಂಸ್ಥೆಯ ವತಿಯಿಂದ ಪಿಯುಸಿ ವಿದ್ಯಾರ್ಥಿಗಳಿಗಾಗಿ ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆ 2023 ಭಾನುವಾರ ತೆಂಕಿಲ ಚುಂಚಶ್ರೀ ಸಭಾಭವನದಲ್ಲಿ ಜರಗಿತು. ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕ ಚಿದಾನಂದ ಬೈಲಾಡಿ, ಕ್ವಿಜ್ ಸ್ಪರ್ಧೆಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಕಾರಿ. 4 ಮಂದಿಯಿಂದ ಆರಂಭಗೊಂಡ ರೋಟರಿ ಸಂಸ್ಥೆ, ಇಂದು ವಿಶ್ವಾದ್ಯಂತ ಸೇವಾ ಚಟುವಟಿಕೆ ನಡೆಸುತ್ತಾ ಬರುತ್ತಿದೆ. ಅದೇ ರೀತಿ ಪ್ರೇರಣಾ ಸಂಸ್ಥೆಯೂ ಇನ್ನಷ್ಟು ವಿದ್ಯಾರ್ಥಿಗಳ ಭವಿಷ್ಯವನ್ನು ಬೆಳಗಿಸುವಂತಾಗಲಿ ಎಂದು ಶುಭಹಾರೈಸಿದರು. ನ್ಯೂಸ್ ಪುತ್ತೂರು ಅಧ್ಯಕ್ಷ

ಪ್ರೇರಣಾದಿಂದ ಪಿಯುಸಿ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ಪರ್ಧೆ 2023 Read More »

ಕ್ರೀಡಾ ಕಾರಂಜಿಯ ಕ್ರೀಡಾಜ್ಯೋತಿಗೆ ದರ್ಬೆಯಲ್ಲಿ ಭವ್ಯ ಸ್ವಾಗತ

ಪುತ್ತೂರು: ರಾಜ್ಯಮಟ್ಟದ 17ರ ವಯೋಮಾನದ ಪ್ರೌಢಶಾಲಾ ಬಾಲಕ – ಬಾಲಕಿಯರ ಕ್ರೀಡಾಕೂಟಕ್ಕೆ ಶನಿವಾರ ಸಂಜೆ ದರ್ಬೆ ವೃತ್ತದಲ್ಲಿ ಸ್ವಾಗತಿಸಲಾಯಿತು. ಶುಕ್ರವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗ ಕ್ರೀಡಾಕೂಟದ ಜ್ಯೋತಿಗೆ ಚಾಲನೆ ನೀಡಿದ್ದು, ತಾಲೂಕಿನ ವಿವಿಧ ಪ್ರದೇಶಗಳಿಗೆ ಸಂಚರಿಸಿ ಇಂದು ದರ್ಬೆಗೆ ತಲುಪಿತು. ದರ್ಬೆಯಲ್ಲಿ ಕ್ರೀಡಾ ಜ್ಯೋತಿಯನ್ನು ಸ್ವಾಗತಿಸಿ, ಬೃಹತ್ ಮೆರವಣಿಗೆಯಲ್ಲಿ ಕೊಂಬೆಟ್ಟು ತಾಲೂಕು ಕ್ರೀಡಾಂಗಣಕ್ಕೆ ತರಲಾಯಿತು. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ,  ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಸವಣೂರು

ಕ್ರೀಡಾ ಕಾರಂಜಿಯ ಕ್ರೀಡಾಜ್ಯೋತಿಗೆ ದರ್ಬೆಯಲ್ಲಿ ಭವ್ಯ ಸ್ವಾಗತ Read More »

ಡಿ. 3: ಪ್ರೇರಣಾದಿಂದ ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆ – 2023

ಪುತ್ತೂರು: ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಮುನ್ನಡೆಸುತ್ತಿರುವ ಪ್ರೇರಣಾ ಸಂಸ್ಥೆಯ ನೇತೃತ್ವದಲ್ಲಿ ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆ – 2023 ಡಿ. 3ರಂದು ಬೆಳಿಗ್ಗೆ 9.30ಕ್ಕೆ ತೆಂಕಿಲ ಚುಂಚಶ್ರೀ ಸಭಾಭವನದಲ್ಲಿ ಜರಗಲಿದೆ. ಪಿಯುಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿರುವ ಈ ಸ್ಪರ್ಧೆಯು 2 ಸುತ್ತಿನಲ್ಲಿ ನಡೆಯಲಿದೆ. ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕ ಸೀತಾರಾಮ ಕೇವಳ ಅವರು ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿಕೊಡಲಿದ್ದಾರೆ. ಸಭಾ ಕಾರ್ಯಕ್ರಮವನ್ನು ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕ ಚಿದಾನಂದ ಬೈಲಾಡಿ ಉದ್ಘಾಟಿಸುವರು. ಪ್ರೇರಣಾದ ಆಡಳಿತ ಅಧ್ಯಕ್ಷ ಪ್ರವೀಣ್ ಕುಂಟ್ಯಾನ ಅಧ್ಯಕ್ಷತೆ

ಡಿ. 3: ಪ್ರೇರಣಾದಿಂದ ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆ – 2023 Read More »

ಕಾಲೇಜುಗಳಲ್ಲಿ ಸೆಲ್ಫಿ ಪಾಯಿಂಟ್‌ ಸ್ಥಾಪನೆ!

ರಾಷ್ಟ್ರದ ಸಾಧನೆಗಳ ಕುರಿತು ಯುವಜನರಿಗಿರುವ ಮಾಹಿತಿ ಜ್ಞಾನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ದೇಶದ ಎಲ್ಲ ವಿವಿಗಳು, ಕಾಲೇಜುಗಳ ಆವರಣಗಳಲ್ಲಿ ಭಾರತದ ಸಾಧನೆಯ ಚಿತ್ರಣಗಳಿರುವ ಸೆಲ್ಫಿ ಪಾಯಿಂಟ್‌ಗಳನ್ನು ಸ್ಥಾಪಿಸಲು ಯುಜಿಸಿ ನಿರ್ದೇಶಿಸಿದೆ. ಶಿಕ್ಷಣ ಸಚಿವಾಲಯವು ಹಂಚಿಕೊಂಡಿರುವ 3ಡಿ ಲೇಔಟ್‌ಗಳಲ್ಲಿನ ಅನುಮೋದಿತ ವಿನ್ಯಾಸಗಳಿಗೆ ಅನುಗುಣವಾಗಿ ಮಾತ್ರವೇ ಕ್ಯಾಂಪಸ್‌ನಲ್ಲಿ ಸೆಲ್ಫಿ ಪಾಯಿಂಟ್‌ಗಳನ್ನು ಸ್ಥಾಪಿಸಬೇಕಾಗಿದೆ. ಈ ಸೆಲ್ಫಿ ಪಾಯಿಂಟ್ಸ್‌ ದೇಶದ ಹೆಮ್ಮೆಯನ್ನು ಪ್ರತಿನಿಧಿಸುವುದು ಮಾತ್ರವಲ್ಲದೇ, ಜಾಗತಿಕ ಮಟ್ಟದಲ್ಲಿ ಭಾರತದ ಬೆಳವಣಿಗೆಯನ್ನು ಉತ್ತೇಜಿಸಿದ ಉಪಕ್ರಮಗಳ ಬಗ್ಗೆ ಪ್ರತಿಯೊಬ್ಬ ನಾಗರಿಕನಿಗೂ ತಿಳಿಸಲು ನೆರವಾಗಲಿದೆ ಎಂದು ತಿಳಿಸಿದೆ. ವಿದ್ಯಾರ್ಥಿಗಳು

ಕಾಲೇಜುಗಳಲ್ಲಿ ಸೆಲ್ಫಿ ಪಾಯಿಂಟ್‌ ಸ್ಥಾಪನೆ! Read More »

ದ್ವಿತೀಯ ಪಿಯು, ಎಸ್.ಎಸ್.ಎಲ್.ಸಿ. ಪರೀಕ್ಷಾ ವೇಳಾಪಟ್ಟಿ ಪ್ರಕಟ!

ಬೆಂಗಳೂರು: 2023-24ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆಯಾಗಿದೆ. ಈ ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಡಿ. 1ರಿಂದ ಡಿ. 15ರವರೆಗೆ ಅವಕಾಶವಿರುತ್ತದೆ. ಸದ್ಯ ಬಿಡುಗಡೆಯಾಗಿರುವ ವೇಳಾಪಟ್ಟಿ ಪ್ರಕಾರ ದ್ವಿತೀಯ ಪಿಯುಸಿ ಪರೀಕ್ಷೆಯು 2024ರ ಮಾರ್ಚ್ 2ರಿಂದ ಮಾರ್ಚ್ 22ರವರೆಗೆ ನಡೆಯಲಿದೆ. ಅದೇ ರೀತಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಮಾರ್ಚ್ 25ರಿಂದ ಎಪ್ರಿಲ್ 6ರವರೆಗೆ ನಡೆಯಲಿದೆ. ದ್ವಿತೀಯ ಪಿಯುಸಿ ವೇಳಾಪಟ್ಟಿ ಮಾರ್ಚ್ 2: ಕನ್ನಡ, ಅರೇಬಿಕ್ ಮಾರ್ಚ್ 4: ಇತಿಹಾಸ, ಭೌತಶಾಸ್ತ್ರ ಮಾರ್ಚ್

ದ್ವಿತೀಯ ಪಿಯು, ಎಸ್.ಎಸ್.ಎಲ್.ಸಿ. ಪರೀಕ್ಷಾ ವೇಳಾಪಟ್ಟಿ ಪ್ರಕಟ! Read More »

ಹ್ಯಾಮರ್ ತ್ರೋ: ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಪುತ್ತೂರು: ಪದವಿಪೂರ್ವ ಬಾಲಕಿಯರ ವಿಭಾಗದ ರಾಜ್ಯ ಮಟ್ಟದ ಹ್ಯಾಮರ್ ತ್ರೋ ಸ್ಪರ್ಧೆಯಲ್ಲಿ ಪೃಥ್ವಿ ಕೆ. ದ್ವಿತೀಯ ಸ್ಥಾನ ಪಡೆದು, ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಧಾರವಾಡದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದಲ್ಲಿ ಪೃಥ್ವಿ ಕೆ. ಬೆಳ್ಳಿ ಪದಕ ಪಡೆದರು. ಅವರು ಪುತ್ತೂರು ಸಂತ ಫಿಲೋಮಿನ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾಗಿದ್ದು, ಪರ್ಪಂಜ ಸೌಗಂಧಿಕಾ ನರ್ಸರಿ ಮಾಲಕ ಚಂದ್ರ ಸೌಗಂಧಿಕಾ ಮತ್ತು ವಿದ್ಯಾಲಕ್ಷ್ಮಿ ದಂಪತಿ ಪುತ್ರಿ.

ಹ್ಯಾಮರ್ ತ್ರೋ: ರಾಷ್ಟ್ರ ಮಟ್ಟಕ್ಕೆ ಆಯ್ಕೆ Read More »

ಶಾಲೆಗಳಿಗೆ ಬಾಂಬ್ ಬೆದರಿಕೆ: ಇ ಮೇಲ್ ಸಂದೇಶ ರವಾನೆ!! | ಪತ್ತೆಗೆ ಸೂಚನೆ ನೀಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ನಗರದ ಕೆಲವು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್ ಕಳುಹಿಸಿದವರ ಮೂಲ ಪತ್ತೆಹಚ್ಚುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇನೆ. ಇಂತಹ ಘಟನೆಗಳು ಮರುಕಳಿಸಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಗರದ ಹಲವು ಖಾಸಗಿ ಶಾಲೆಗಳಿಗೆ ಈ ರೀತಿ ಬಾಂಬ್ ಬೆದರಿಕೆ ಕರೆಗಳು ಪುನರಾವರ್ತನೆಯಾಗುತ್ತಿರುತ್ತವೆ. ಇಂತಹ ಘಟನೆಗಳು ನಡೆದರೆ ಪೋಷಕರು, ಮಕ್ಕಳು ಮತ್ತು ಶಾಲೆಯ ಶಿಕ್ಷಕರು, ಆಡಳಿತ ಮಂಡಳಿ ಆತಂಕಗೊಳ್ಳುತ್ತಾರೆ. ಇದು ಉತ್ತಮ ಬೆಳವಣಿಗೆಯಲ್ಲ. ಇಂತಹ ಹುಸಿ ಬಾಂಬ್ ಬೆದರಿಕೆಯನ್ನು ಯಾರು

ಶಾಲೆಗಳಿಗೆ ಬಾಂಬ್ ಬೆದರಿಕೆ: ಇ ಮೇಲ್ ಸಂದೇಶ ರವಾನೆ!! | ಪತ್ತೆಗೆ ಸೂಚನೆ ನೀಡಿದ ಸಿಎಂ ಸಿದ್ದರಾಮಯ್ಯ Read More »

ಮಕ್ಕಳಿಗೆ ಮನೆಯಲ್ಲೂ ಗುಣಮಟ್ಟದ ಶಿಕ್ಷಣ ಸಿಗಬೇಕು | ಅಂಬಿಕಾ ವಿದ್ಯಾಲಯದ ಪ್ರತಿಭೋತ್ಸವ ಉದ್ಘಾಟಿಸಿ ಶಾಸಕ ಅಶೋಕ್ ರೈ

ಪುತ್ತೂರು: ಶಾಲೆಯಲ್ಲಿ ಎಲ್ಲವನ್ನೂ ಕಲಿಸುವುದಿಲ್ಲ ಒಬ್ಬ ವ್ಯಕ್ತಿಗೆ ಬೇಕಾದ 40% ವಿದ್ಯೆ ಮಾತ್ರ ಶಾಲೆಯಲ್ಲಿ ದೊರೆಯುತ್ತದೆ ಉಳಿದ ಶಿಕ್ಷಣ ಮನೆಯಲ್ಲಿ ಸಿಗುತ್ತದೆ. ಅದು ಗುಣಮಟ್ಟದಿಂದ ಕೂಡಿರಬೇಕು ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು. ಬಪ್ಪಳಿಗೆ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಹತ್ತನೆಯ ವರ್ಷಾಚರಣೆ ದಶಾಂಬಿಕೋತ್ಸವದ ಅಂಗವಾಗಿ ಆಯೋಜಿಸಲಾದ ಪ್ರತಿಭಾ ತರಂಗಿಣಿ-2023-24 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಉನ್ನತ ಶಿಕ್ಷಣದ‌ ಕನಸು ಕಾಣಬೇಕು. ಕನಸು ನನಸು‌ಮಾಡಲೂ ಪ್ರಯತ್ನ ಅತೀ ಅಗತ್ಯವಾಗಿದೆ ಎಂದು ಹೇಳಿದರು. ಕೇವಲ‌ ಇಂಜಿನಿಯರ್, ಡಾಕ್ಟರ್ ಕಡೆ

ಮಕ್ಕಳಿಗೆ ಮನೆಯಲ್ಲೂ ಗುಣಮಟ್ಟದ ಶಿಕ್ಷಣ ಸಿಗಬೇಕು | ಅಂಬಿಕಾ ವಿದ್ಯಾಲಯದ ಪ್ರತಿಭೋತ್ಸವ ಉದ್ಘಾಟಿಸಿ ಶಾಸಕ ಅಶೋಕ್ ರೈ Read More »

error: Content is protected !!
Scroll to Top