ಕ್ಯಾಂಪಸ್‌

ಮಾರ್ಚ್ 1ರಂದು ನಡೆಯಬೇಕಿದ್ದ ಪದವಿ ಪರೀಕ್ಷೆಗಳು ಮುಂದೂಡಿಕೆ

ಪುತ್ತೂರು: ಸರಕಾರಿ ನೌಕರರು ಮಾರ್ಚ್ 1ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಅಂದು ನಡೆಯಬೇಕಿದ್ದ ಪದವಿ ಪರೀಕ್ಷೆಗಳನ್ನು ಮುಂದೂಡಿ ಮಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವರು ತಿಳಿಸಿದ್ದಾರೆ. ಸರಕಾರಿ ಉದ್ಯೋಗಿಗಳು ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮಾರ್ಚ್ 1ರಂದು ನಡೆಯಬೇಕಿದ್ದ ಮಂಗಳೂರು ವಿಶ್ವವಿದ್ಯಾಲಯದ ಎಲ್ಲಾ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಮುಂದೂಡಲಾದ ಪರೀಕ್ಷೆಗಳ ವೇಳಾಪಟ್ಟಿಯನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ತಿಳಿಸಲಾಗಿದೆ.

ಮಾರ್ಚ್ 1ರಂದು ನಡೆಯಬೇಕಿದ್ದ ಪದವಿ ಪರೀಕ್ಷೆಗಳು ಮುಂದೂಡಿಕೆ Read More »

ಉಚಿತ ಕಾನೂನು ಅರಿವು ನೆರವು ಕಾರ್ಯಕ್ರಮ | ಕಾನೂನು ಮಾಹಿತಿ ಸಮೀಕ್ಷೆ

ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯ, ಪುತ್ತೂರು ರಾಷ್ಟ್ರೀಯ ಸೇವಾ ಯೋಜನೆ ಘಟಕದ ನೇತೃತ್ವದಲ್ಲಿ ಎನ್ ಎಸ್ ಎಸ್ ಕೋಶ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ ಇದರ ಸಹಕಾರದೊಂದಿಗೆ ಮತ್ತು ನರಿಮೊಗರು ಗ್ರಾಮ ಪಂಚಾಯತ್, ತಾಲೂಕು ಕಾನೂನು ಸೇವಾ ಪ್ರಾಧಿಕಾರ ಪುತ್ತೂರು ಘಟಕ ಇದರ ಸಹಯೋಗದಲ್ಲಿ ಉಚಿತ ಕಾನೂನು ಅರಿವು ನೆರವು ಕಾರ್ಯಕ್ರಮ ಹಾಗೂ ಕಾನೂನು ಮಾಹಿತಿ ಸಮೀಕ್ಷೆ ಫೆ. 27ರಂದು ನಡೆಯಿತು. ಗ್ರಾಪಂ ಪಿಡಿಓ ರವೀಂದ್ರ ಯು ಮಾತನಾಡಿ, ಕಾನೂನು ಸಮೀಕ್ಷೆಯಿಂದ ಹಳ್ಳಿ ಜನರ ಎಲ್ಲ

ಉಚಿತ ಕಾನೂನು ಅರಿವು ನೆರವು ಕಾರ್ಯಕ್ರಮ | ಕಾನೂನು ಮಾಹಿತಿ ಸಮೀಕ್ಷೆ Read More »

ದಕ್ಷಿಣ ಭಾರತ ಯೋಗಾಸನ ಸ್ಪರ್ಧೆ | ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಶ್ರೀಮಾ ಕೆ.ಎಚ್. ಅವರಿಗೆ ಪ್ರಶಸ್ತಿ

ಪುತ್ತೂರು : ರಾಷ್ಟ್ರೀಯ ಹಬ್ಬಗಳ ಆಚರಣೆ ಅಂಗವಾಗಿ ಮೈಸೂರಿನಲ್ಲಿ ಭಾನುವಾರ ನಡೆದ ದಕ್ಷಿಣ ಭಾರತ ಯೋಗಾಸನ ಕ್ರೀಡಾ ಸ್ಪರ್ಧೆಯಲ್ಲಿ ಕಾಣಿಯೂರಿನ ವಿದ್ಯಾರ್ಥಿನಿಯೋರ್ವರು ಸಾಧನೆ ಮೆರೆದಿದ್ದಾರೆ. 12-15 ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಶ್ರೀಮಾ ಕೆ.ಎಚ್. 5ನೇ ಸ್ಥಾನ ಹಾಗೂ ಚಾಂಪಿಯನ್‍ ಆಪ್‍ ಚಾಂಪಿಯನ್ ನಲ್ಲಿ 4ನೇ ಸ್ಥಾನ ಪಡೆದು ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ. ಶ್ರೀಮಾ ಅವರು ಮುರುಳ್ಯ ಗ್ರಾಮದ ಹುದೇರಿ ಕುಶಾಲಪ್ಪ ಮತ್ತು ಸುಜಿತಾ ದಂಪತಿ ಪುತ್ರಿ. ಕರ್ನಾಟಕ ಸರಕಾರ, ಜಿಲ್ಲಾಡಳಿ, ಮೈಸೂರು ಜಿಪಂ

ದಕ್ಷಿಣ ಭಾರತ ಯೋಗಾಸನ ಸ್ಪರ್ಧೆ | ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಶ್ರೀಮಾ ಕೆ.ಎಚ್. ಅವರಿಗೆ ಪ್ರಶಸ್ತಿ Read More »

ಸೌಮ್ಯ ಪೆರ್ನಾಜೆಗೆ ಗಡಿನಾಡ ದ್ವನಿ ‘ಮಧು ಭೂಷಣ’ ರಾಜ್ಯ ಪ್ರಶಸ್ತಿ ಪ್ರಧಾನ

ಪುತ್ತೂರು: ಒಡ್ಯ ಸಹಕಾರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಫೆ. 25ರಂದು ಗಡಿನಾಡ ಧ್ವನಿ ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟಿನ 6ನೇ ಕರ್ನಾಟಕ ಗಡಿನಾಡ ಸಮ್ಮೇಳನದಲ್ಲಿ ಸೌಮ್ಯ ಪೆರ್ನಾಜೆ ಅವರಿಗೆ ಮಧುಭೂಷಣ ರಾಜ್ಯ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಮಿತ್ರಂಪಾಡಿ ಜಯರಾಮ್ ರೈ ಅಬುದಾಬಿ ಅವರು ಪ್ರಶಸ್ತಿ ಪ್ರಧಾನ ಮಾಡಿದರು. ಸಮ್ಮೇಳನಾಧ್ಯಕ್ಷ ಮಲಾರ್ ಜಯರಾಮ್ ರೈ, ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ ಪುತ್ತೂರು ಅಧ್ಯಕ್ಷ ಉಮೇಶ್ ನಾಯಕ್, ಗಡಿನಾಡ ದ್ವನಿ ಅಧ್ಯಕ್ಷ ಡಾ. ಹಾಜಿ ಎಸ್. ಅಬ್ಬೂಬಕ್ಕರ್ ಅರ್ಲಪದವು, ಪ್ರ.ಕಾರ್ಯದರ್ಶಿ ಈಶ್ವರ

ಸೌಮ್ಯ ಪೆರ್ನಾಜೆಗೆ ಗಡಿನಾಡ ದ್ವನಿ ‘ಮಧು ಭೂಷಣ’ ರಾಜ್ಯ ಪ್ರಶಸ್ತಿ ಪ್ರಧಾನ Read More »

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಸಂಪೂರ್ಣ ಸುರಕ್ಷಾ ನೋಂದಾವಣೆಗೆ ಚಾಲನೆ

ಪುತ್ತೂರು : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಮೆತ್ತಡ್ಕ ಒಕ್ಕೂಟದ ಸಂಪೂರ್ಣ ಸುರಕ್ಷಾ ನೋಂದಾವಣೆಯ ಉದ್ಘಾಟನೆ ಭಾನುವಾರ ಸಾಮೆತ್ತಡ್ಕ ಶಾಲೆಯಲ್ಲಿ ನಡೆಯಿತು. ಒಕ್ಕೂಟದ ಅಧ್ಯಕ್ಷೆ ಅಹಲ್ಯ ಹಾಗೂ ಸಂಘಗಳ ಸದಸ್ಯರು ದೀಪ ಬೆಳಗಿಸಿ ಸುರಕ್ಷಾ ನೋಂದಣೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಆಂತರಿಕ ಲೆಕ್ಕ ಪರಿಶೋಧಕಿ ಲತಾ ಸಂಪೂರ್ಣ ಸುರಕ್ಷಾ ಕುರಿತು ಮಾಹಿತಿ ನೀಡಿದರು. ಸಾಮೆತ್ತಡ್ಕ ಶಾಲಾ ಟ್ರಸ್ಟ್ ಸದಸ್ಯ ದಿನೇಶ್ ಕಾಮತ್ ಆರೋಗ್ಯ ವಿಮೆ ಕುರಿತು ಮಾಹಿತಿ ನೀಡಿದರು. ಶಾಲಾ ಮುಖ್ಯ ಶಿಕ್ಷಕಿ ಮರಿಯಾ ಟೀಚರ್, ಕಸಬ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಸಂಪೂರ್ಣ ಸುರಕ್ಷಾ ನೋಂದಾವಣೆಗೆ ಚಾಲನೆ Read More »

ಫೆ.28 : ಜಿಲ್ಲಾ ಮಟ್ಟದ ಕ್ರಿಯಾಶೀಲ ಶಾಲಾಭಿವೃದ್ಧಿ ಹಾಗೂ ಮೇಲಸ್ತುವಾರಿ ಸಮಿತಿಗಳಿಗೆ ಅಭಿನಂದನಾ ಸಮಾರಂಭ | ದ.ಕ.ಜಿಲ್ಲಾ ಮಟ್ಟದ ದ್ವಿತೀಯ ಸಮಾವೇಶ

ಪುತ್ತೂರು : ಕರ್ನಾಟಕ ರಾಜ್ಯ ಎಸ್ ಡಿಎಂಸಿ ಜಿಲ್ಲಾ ಸಮನ್ವಯ ವೇದಿಕೆ ವತಿಯಿಂದ ದ,ಕ.ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಎಸ್‍ಡಿಎಂಸಿಯ 21ನೇ ವರ್ಷಾಚರಣೆ ಪ್ರಯುಕ್ತ ಜಿಲ್ಲಾ ಮಟ್ಟದ ಕ್ರಿಯಾಶೀಲ ಶಾಲಾಭಿವೃದ್ಧಿ ಹಾಗೂ ಮೇಲಸ್ತುವಾರಿ ಸಮಿತಿಗಳಿಗೆ ಅಭಿನಂದನಾ ಸಮಾರಂಭ ಹಾಗೂ ದ.ಕ.ಜಿಲ್ಲಾ ಮಟ್ಟದ ದ್ವಿತೀಯ ಸಮಾವೇಶ ಫೆ.28 ಮಂಗಳವಾರ ಮಾಣಿ ನೆರಳಕಟ್ಟೆ ಜಯಪ್ರಿಯ ಗಾರ್ಡನ್ ನಲ್ಲಿ ನಡೆಯಲಿದೆ ಎಂದು ರಾಜ್ಯ ಎಸ್‍ಡಿಎಂಸಿ ಸಮನ್ವಯ ವೇದಿಕೆ ಅಧ್ಯಕ್ಷ  ಮೊಯಿದೀನ್‍ ಕುಟ್ಟಿ ತಿಳಿಸಿದ್ದಾರೆ. ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ

ಫೆ.28 : ಜಿಲ್ಲಾ ಮಟ್ಟದ ಕ್ರಿಯಾಶೀಲ ಶಾಲಾಭಿವೃದ್ಧಿ ಹಾಗೂ ಮೇಲಸ್ತುವಾರಿ ಸಮಿತಿಗಳಿಗೆ ಅಭಿನಂದನಾ ಸಮಾರಂಭ | ದ.ಕ.ಜಿಲ್ಲಾ ಮಟ್ಟದ ದ್ವಿತೀಯ ಸಮಾವೇಶ Read More »

ಮಾಸ್ಟರ್ಸ್  ಅಥ್ಲೆಟಿಕ್ಸ್ | ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕ ವೆಂಕಟೇಶ್ ಪ್ರಸಾದ್ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆ

ಪುತ್ತೂರು : ಕರ್ನಾಟಕ ಮಾಸ್ಟರ್ಸ್ ಆತ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಕೋಲಾರದ ಪೊಲೀಸ್ ಕವಾಯತು ಕ್ರೀಡಾಂಗಣದಲ್ಲಿ ಫೆಬ್ರವರಿ 11 ಮತ್ತು 12ರಂದು ನಡೆದ ರಾಜ್ಯ ಮಟ್ಟದ  41ನೇ ಮಾಸ್ಟರ್ಸ್ ಅಥ್ಲೆಟಿಕ್ಸ್ ನಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಂಸ್ಕೃತ ಶಿಕ್ಷಕ, ಪುತ್ತೂರು ತಾಲೂಕು, ದರ್ಬೆತ್ತಡ್ಕ ನಿವಾಸಿ  ವೆಂಕಟೇಶ್ ಪ್ರಸಾದ್ ಪಾಲ್ಗೊಂಡು ರಾಷ್ಟ್ರಮಟ್ಟದ ಸ್ಪರ್ಧೆಗೆ  ಆಯ್ಕೆಯಾಗಿದ್ದಾರೆ. 45ರ ವಯೋಮಾನ ವಿಭಾಗದ ಎತ್ತರ ಜಿಗಿತದಲ್ಲಿ ಪ್ರಥಮ ಮತ್ತು ಉದ್ದಜಿಗಿತದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಮಾ.27 ರಿಂದ 30 ರ ವರೆಗೆ ಬೆಂಗಳೂರಿನ

ಮಾಸ್ಟರ್ಸ್  ಅಥ್ಲೆಟಿಕ್ಸ್ | ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕ ವೆಂಕಟೇಶ್ ಪ್ರಸಾದ್ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆ Read More »

ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎಂಬಿಎ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

ಪುತ್ತೂರು : ಪ್ರತಿಯೊಬ್ಬನೂ ತಮ್ಮ ವೃತ್ತಿ ಜೀವನದಲ್ಲಿ ಯಶಸ್ವಿಯಾಗಲು ಅಥವಾ ಉದ್ಯಮಿಯಾಗಲು ವಿದ್ಯಾರ್ಥಿ ದೆಸೆಯಿಂದಲೇ ಸರಿಯಾದ ವರ್ತನೆ, ಸಾಮಾನ್ಯ ಜ್ಞಾನ ಹಾಗೂ ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಳ್ಳುವುದು ಆವಶ್ಯಕ ಎಂದು ಖ್ಯಾತ ಸ್ವರ್ಣೋದ್ಯಮಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಬಲರಾಮ ಆಚಾರ್ಯ.ಜಿ. ಹೇಳಿದರು. ಅವರು  ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎಂಬಿಎ ವಿಭಾಗದ ಪ್ರಸಕ್ತ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸಿ ಮಾತನಾಡಿದರು.. ಜೀವನದಲ್ಲಿ ಎಡರು ತೊಡರುಗಳು ಸಾಮಾನ್ಯ, ಆದರೆ ಅದನ್ನು ಸಮರ್ಥವಾಗಿ ಎದುರಿಸಿ

ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎಂಬಿಎ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ Read More »

ಇಸ್ಲಾಂ ಮತ ಪ್ರವಚನಕ್ಕೆ ವಿದ್ಯಾರ್ಥಿಗಳನ್ನು ಕಳುಹಿಸಿದ ಘಟನೆ: ಮುಖ್ಯಶಿಕ್ಷಕ ತಾತ್ಕಾಲಿಕ ಅಮಾನತು

ಪುತ್ತೂರು: ಅಡ್ಯನಡ್ಕ ಜನತಾ ಪ್ರೌಢಶಾಲೆಯಲ್ಲಿ ಸಮೀಪದ ಕಟ್ಟಡದಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಆಯೋಜಿಸಿ, ಅದರಲ್ಲಿ ಇಸ್ಲಾಂ ಮತಪ್ರವಚನ ನೀಡಿದ ಘಟನೆಗೆ ಸಂಬಂಧಪಟ್ಟಂತೆ ಶಾಲಾ ಮುಖ್ಯಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಅಡ್ಯನಡ್ಕ ಎಜ್ಯುಕೇಶನಲ್ ಸೊಸೈಟಿಯ ಕಾರ್ಯದರ್ಶಿಗಳು ಅಧ್ಯಕ್ಷರ ಅನುಮತಿ ಮೇರೆಗೆ ಈ ಆದೇಶ ಹೊರಡಿಸಿದ್ದಾರೆ. ಆದ್ದರಿಂದ ಪ್ರೌಢಶಾಲಾ ಮುಖ್ಯಶಿಕ್ಷಕ ಟಿ.ಆರ್. ನಾಯ್ಕ್ ಅವರನ್ನು ತಾತ್ಕಾಲಿಕವಾಗಿ ಸೇವೆಯಿಂದ ಅಮಾನತುಗೊಳ್ಳಲಿದ್ದಾರೆ. ಫೆ. 18ರಂದು 10ನೇ ತರಗತಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರನ್ನು ಶಾಲಾ ಮುಖ್ಯಶಿಕ್ಷಕ ಟಿ.ಆರ್. ನಾಯ್ಕ್ ಅವರು ಕಾರ್ಯಾಗಾರಕ್ಕೆ ಕಳುಹಿಸಿಕೊಟ್ಟಿದ್ದರು. ಆ

ಇಸ್ಲಾಂ ಮತ ಪ್ರವಚನಕ್ಕೆ ವಿದ್ಯಾರ್ಥಿಗಳನ್ನು ಕಳುಹಿಸಿದ ಘಟನೆ: ಮುಖ್ಯಶಿಕ್ಷಕ ತಾತ್ಕಾಲಿಕ ಅಮಾನತು Read More »

ಉದ್ಯೋಗಾಕಾಂಕ್ಷಿಗಳಿಗೆ ಪ್ರೇರಣಾದಲ್ಲಿ ಸುವರ್ಣಾವಕಾಶ

ಪುತ್ತೂರು: ನೀವು ಉದ್ಯೋಗಾಕಾಂಕ್ಷಿಗಳೇ? ಹೌದಾದಲ್ಲಿ, ಪ್ರೇರಣಾ ಸಂಸ್ಥೆ ನಿಮಗಾಗಿ ಸುವರ್ಣ  ಅವಕಾಶವನ್ನು ಮುಂದಿಟ್ಟಿದೆ. ಪುತ್ತೂರು, ಮಂಗಳೂರು ಮಾತ್ರವಲ್ಲ ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಉದ್ಯೋಗ ಅರಸುವ ಆಕಾಂಕ್ಷಿಗಳಿಗೆ ವಿಫುಲ ಉದ್ಯೋಗ ಅವಕಾಶಗಳನ್ನು ಪ್ರೇರಣಾ ತೆರೆದಿಡುತ್ತಿದೆ. ಪಿಯುಸಿ, ಬಿ.ಎ, ಬಿ.ಕಾಂ, ಬಿ.ಎಸ್.ಸಿ., ಎಂ.ಕಾಂ, ಎಂ.ಎಸ್.ಸಿ, ಇತರ ಪದವೀಧರರ ಜೊತೆಯಲ್ಲಿ ನರ್ಸಿಂಗ್, ಫಾರ್ಮಸಿ, ಡಿಪ್ಲೋಮಾ, ಇಂಜಿನಿಯರಿಂಗ್, ಲಾಜಿಸ್ಟಿಕ್ ಕೋರ್ಸ್ ಮಾಡಿರುವ ಅರ್ಹ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶವನ್ನು ತೆರೆದಿಟ್ಟಿದೆ. ಫೆ. 22ರಿಂದ 28ರ ತನಕ ನೋಂದಾವಣೆಗೆ ಅವಕಾಶವಿದ್ದು, ಸಿವಿ ಕಳುಹಿಸಿದವರಿಗೆ

ಉದ್ಯೋಗಾಕಾಂಕ್ಷಿಗಳಿಗೆ ಪ್ರೇರಣಾದಲ್ಲಿ ಸುವರ್ಣಾವಕಾಶ Read More »

error: Content is protected !!
Scroll to Top