ಮೌಲ್ಯಗಳು ಪ್ರತಿಯೊಬ್ಬನ ಬದುಕಿಗೂ ಆಧಾರ ಸ್ತಂಭ | ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಿಂದ ಫ್ಯಾಕಲ್ಟಿ ಡೆವಲಪ್ಮೆಂಟ್ ಕಾರ್ಯಕ್ರಮದಲ್ಲಿ ಡಾ. ಗುರುರಾಜ ಕರಜಗಿ
ಪುತ್ತೂರು: ಬುದ್ಧಿಗೆ ಬೋಧಕವಾದ ವಿಚಾರಗಳು ಅಲ್ಪ ಸಮಯ ಮಾತ್ರ ಉಳಿದುಕೊಳ್ಳುತ್ತವೆ. ಆದರೆ ಮನಸ್ಸಿಗೆ ಬೋಧಕವಾದ ವಿಚಾರ ಶಾಶ್ವತವಾಗಿ ಉಳಿದುಕೊಳ್ಳುತ್ತವೆ. ಆದ್ದರಿಂದ ಮನಸ್ಸಿನಲ್ಲಿ ಅಚ್ಚೊತ್ತಬಹುದಾದ ಜೀವನ ಮೌಲ್ಯಗಳು ಪ್ರತಿಯೊಬ್ಬನಿಗೂ ಅತ್ಯಂತ ಅಗತ್ಯ. ಎಲ್ಲರ ಜೀವನದಲ್ಲೂ ಮೌಲ್ಯಗಳು ಮಹತ್ವದ ಪಾತ್ರ ವಹಿಸುತ್ತದೆ. ಅವುಗಳೇ ಬದುಕಿಗೆ ಆಧಾರ ಸ್ತಂಭಗಳಾಗಿವೆ. ನುಡಿದಂತೆ ನಡೆಯುವ, ನಡೆವಂತೆ ನುಡಿಯುವ ವ್ಯಕ್ತಿತ್ವ ಎಲ್ಲರಿಂದಲೂ ಗೌರವಕ್ಕೆ ಪಾತ್ರವಾಗುತ್ತದೆ ಎಂದು ಶಿಕ್ಷಣ ತಜ್ಞ, ಹಿರಿಯ ಪ್ರಾಧ್ಯಾಪಕ ಡಾ. ಗುರುರಾಜ ಕರಜಗಿ ಹೇಳಿದರು. ನಟ್ಟೋಜ ಫೌಂಡೇಶನ್ ಟ್ರಸ್ಟಿನ ಬಪ್ಪಳಿಗೆ ಅಂಬಿಕಾ ಸಿ.ಬಿ.ಎಸ್.ಇ […]