ಸಾವರ್ಕರ್, ಆಝಾದ್ ಯುವಪೀಳಿಗೆಗೆ ಮಾದರಿ : ಆದರ್ಶ ಗೋಖಲೆ | ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯಲ್ಲಿ ದೇಶಭಕ್ತರ ಪುಣ್ಯಸ್ಮರಣೆ
ಪುತ್ತೂರು : ಬಾಲ್ಯದಲ್ಲಿರುವಾಗಲೇ ವೀರ ಸಾವರ್ಕರ್ ದೇಶದ ಪರ ಹೋರಾಡಿದ ನಾಯಕ. ಅವರು ಝಾನ್ಸಿ ರಾಣಿಯ ಸಾಹಸದಿಂದ ಪ್ರೇರಿತರಾಗಿ ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿದರು. ಜನರಲ್ಲಿ ದೇಶಪ್ರೇಮ, ದೇಶ ಭಕ್ತಿ ಬಿತ್ತಿದವರು. ಮಹಾರಾಷ್ಟ್ರದಲ್ಲಿ ಪತಿತ ಪಾವನ ಎಂಬ ಮಂದಿರವನ್ನು ಸ್ಥಾಪಿಸಿ ದೇಶದಲ್ಲಿ ಎಲ್ಲರೂ ಒಂದೇ ಎಂಬ ಘೋಷಣೆಯನ್ನು ಸಾರಿದ ದೇಶದ ಹೆಮ್ಮೆಯ ಪುತ್ರ ಎಂದು ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಉಪನ್ಯಾಸಕ ಆದರ್ಶ ಗೋಖಲೆ ಹೇಳಿದರು. ಅವರು ಅಂಬಿಕಾ ಸಿಬಿಎಸ್‌ಇ ವಿದ್ಯಾಲಯದಲ್ಲಿ ಏರ್ಪಡಿಸಿದ್ದ ವೀರ ಸಾವರ್ಕರ್ ಹಾಗೂ ಚಂದ್ರಶೇಖರ್ […]










