ಲೇಖನ

ಮುಂಬಯಿ – ಕನ್ನಡ ಸಾಹಿತ್ಯದ ಶಕ್ತಿಕೇಂದ್ರ

ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯದ ಬೆಳವಣಿಗೆಯಲ್ಲಿ ಮುಂಬಯಿ ಕನ್ನಡಿಗರ ಕೊಡುಗೆ ಭಾರಿ ದೊಡ್ಡದು ಕನ್ನಡ ರಾಜ್ಯೋತ್ಸವ ನಾಡಿನ ಕದವನ್ನು ತಟ್ಟುತ್ತಿರುವಾಗ ದೇಶದಾದ್ಯಂತ ಹರಡಿರುವ ಮತ್ತು ಕನ್ನಡವನ್ನು ಬೆಳೆಸಿರುವ ಮಹನೀಯರ ಕೊಡುಗೆಗಳನ್ನು ಉಲ್ಲೇಖ ಮಾಡದೆ ಮುಂದೆ ಹೋಗುವ ಹಾಗೆಯೇ ಇಲ್ಲ.ಅದರಲ್ಲಿಯೂ ಮಹಾರಾಷ್ಟ್ರದ ನಗರಗಳಾದ ಮುಂಬಯಿ, ಸೊಲ್ಲಾಪುರ, ಪುಣೆ, ನಾಂದೇಡ್, ಸಾಂಗ್ಲಿ, ಕೊಲ್ಲಾಪುರ ಮತ್ತು ಉಸ್ಮಾನಾಬಾದ್‌ಗಳಲ್ಲಿ ನೆಲೆಸಿರುವ ಅಂದಾಜು ಅರುವತ್ತು ಲಕ್ಷದಷ್ಟಿರುವ ಕನ್ನಡಿಗರು ತಮ್ಮ ಕನ್ನಡದ ಪ್ರೀತಿಯನ್ನು, ಅಸ್ಮಿತೆಯನ್ನು ಜತನದಿಂದ ಕಾಪಾಡಿಕೊಂಡು ಬರುತ್ತಿರುವುದನ್ನು ನೋಡಿದಾಗ ಅಭಿಮಾನದಿಂದ ನಮ್ಮ ಎದೆ ಉಬ್ಬುತ್ತದೆ. […]

ಮುಂಬಯಿ – ಕನ್ನಡ ಸಾಹಿತ್ಯದ ಶಕ್ತಿಕೇಂದ್ರ Read More »

ಆರದಿರಲಿ ನಮ್ಮೊಳಗಿನ ಅರಿವಿನ ದೀಪ…

ದೀಪಾವಳಿ ಹಬ್ಬದ ಸಂಭ್ರಮಕ್ಕೆ ವಿಶೇಷ ಲೇಖನ ಕತ್ತಲೆಯ ಮೇಲೆ ಬೆಳಕಿನ ವಿಜಯ, ಕೆಟ್ಟದ್ದರ ಮೇಲೆ ಒಳ್ಳೆಯದರ ಮತ್ತು ಅಜ್ಞಾನದ ಮೇಲೆ ಜ್ಞಾನದ ಗೆಲುವನ್ನು ಸಂಕೇತಿಸುವ ಹಬ್ಬ ದೀಪಾವಳಿ. ಈ ದಿನದಲ್ಲಿ ಯಾರು ಸಂಪತ್ತನ್ನು ಬಯಸುತ್ತಾರೋ ಅವರ ಬಳಿ ಲಕ್ಷ್ಮಿ ಬರುತ್ತಾಳೆ, ಯಾರು ಆರೋಗ್ಯವನ್ನು ಬಯಸುತ್ತಾರೋ ಅವರ ಬಳಿ ಶಕ್ತಿ ಬರುತ್ತಾಳೆ ಮತ್ತು ಯಾರು ಜ್ಞಾನವನ್ನು ಬಯಸುತ್ತಾರೋ ಅವರ ಬಳಿ ಸರಸ್ವತಿ ಬರುತ್ತಾಳೆ ಎಂದು ಹೇಳಲಾಗುತ್ತದೆ. ದೀಪಾವಳಿ ದೇಶದ ಬಹುದೊಟ್ಟ ಹಬ್ಬ. ಕಾಶ್ಮೀರದಿಂದ ಕನ್ಯಾಕುಮಾರಿಯ ತನಕ ಪ್ರತಿ ರಾಜ್ಯದಲ್ಲಿ

ಆರದಿರಲಿ ನಮ್ಮೊಳಗಿನ ಅರಿವಿನ ದೀಪ… Read More »

ನಕ್ಷತ್ರಗಳೇ ಆಕೆಗೆ ಬಾಲ್ಯದಲ್ಲಿ ಗಡಿಯಾರ ಆಗಿತ್ತು

ಭಾರತದ ಅತ್ಯಂತ ಯಶಸ್ವಿ ಹಾಕಿ ಕ್ಯಾಪ್ಟನ್ ರಾಣಿ ರಾಂಪಾಲ್ ಕ್ರಿಕೆಟಿಗೆ ಸಚಿನ್ ತೆಂಡೂಲ್ಕರ್, ಚೆಸ್‌ಗೆ ವಿಶ್ವನಾಥನ್ ಆನಂದ್, ಫುಟ್ಬಾಲ್‌ಗೆ ಸುನೀಲ್ ಚೇತ್ರಿ ಹೇಗೋ ಮಹಿಳಾ ಹಾಕಿಗೆ ಒಂದೇ ಹೆಸರು, ಅದು ರಾಣಿ ರಾಂಪಾಲ್. ಅಂತಹ ರಾಣಿ ರಾಂಪಾಲ್ 15 ವರ್ಷಗಳ ಸುದೀರ್ಘವಾದ ಹಾಕಿ ಜೀವನಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಆ ಶೂನ್ಯವನ್ನು ತುಂಬಿಸಬಲ್ಲ ಇನ್ನೊಬ್ಬ ಹಾಕಿ ಆಟಗಾರ್ತಿ ಭಾರತದಲ್ಲಿ ಈವರೆಗೆ ಬಂದಿಲ್ಲ ಅನ್ನೋದು ಆಕೆಯ ಖದರು. ಆಕೆ ಭಾರತ ಕಂಡ ಅತ್ಯಂತ ಯಶಸ್ವಿ ಮಿಡ್ ಫೀಲ್ಡರ್ ಮತ್ತು

ನಕ್ಷತ್ರಗಳೇ ಆಕೆಗೆ ಬಾಲ್ಯದಲ್ಲಿ ಗಡಿಯಾರ ಆಗಿತ್ತು Read More »

ಜಗದಗಲ ಇವೆ ಅಚ್ಚರಿಯ ಸಂಗತಿಗಳು!

ನಂಬಲು ಕಷ್ಟವಾದರೂ ನಂಬಲೇ ಬೇಕು ನಾವು ಕಣ್ಣು ತೆರೆದು ನೋಡಿದರೆ ಜಗತ್ತಿನಲ್ಲಿ ನಮ್ಮ ಊಹೆಗೂ ಮೀರಿದ ಸಂಗತಿಗಳು ಇವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಪಟ್ಟಿ ಮಾಡೋಣ. 1) ಜಗತ್ತಿನ ಅತಿ ಸಣ್ಣ ದೇಶ ಅಂದರೆ ವ್ಯಾಟಿಕನ್. ಅದರ ಜನಸಂಖ್ಯೆ ಕೇವಲ 453. ಅದರ ವಿಸ್ತೀರ್ಣ 0.44 ಚದರ ಕಿಲೋಮೀಟರ್. ಈ ದೇಶವನ್ನು ಕಾಲ್ನಡಿಗೆಯಲ್ಲಿ ಸುತ್ತಿಬರಲು 30 ನಿಮಿಷ ಸಾಕು. 2) ವ್ಯಾಟಿಕನ್ ದೇಶದಲ್ಲಿ ಆದಾಯ ತೆರಿಗೆ ಇಲ್ಲ. ಅಲ್ಲಿ ಬಸ್ಸು, ರೈಲು, ಕ್ಯಾಬ್‌ಗಳಂತಹ ಸಾರ್ವಜನಿಕ ಸಾರಿಗೆ ಇಲ್ಲವೇ

ಜಗದಗಲ ಇವೆ ಅಚ್ಚರಿಯ ಸಂಗತಿಗಳು! Read More »

ಎರಡು ಕಾಲಿಲ್ಲದಿದ್ದರೂ ಮೌಂಟ್ ಎವರೆಸ್ಟ್ ಏರಿದವನ ಕಥೆ

ಮಾರ್ಕ್ ಇಂಗ್ಲಿಸ್ ಬದುಕು ಯಾರಿಗಾದರೂ ಸ್ಫೂರ್ತಿ ನೀಡಬಲ್ಲದು ಈ ವ್ಯಕ್ತಿಯ ಬದುಕು ಮತ್ತು ಸಾಧನೆಗಳು ನಮಗೆ ಖಂಡಿತ ಸ್ಫೂರ್ತಿ ತುಂಬುವ ಶಕ್ತಿ ಹೊಂದಿದೆ.ಆತನನ್ನು ನಿಮಗೆ ಹೇಗೆ ಪರಿಚಯ ಮಾಡಲಿ? ಅವನೊಬ್ಬ ಪರ್ವತಾರೋಹಿ, ಸಾಹಸಿ, ಉದ್ಯಮಿ, ಲೇಖಕ, ಸೈಕ್ಲಿಸ್ಟ್, ಸಂಶೋಧಕ ಮತ್ತು ಖಂಡಿತವಾಗಿಯು ಅದ್ಭುತ ಸಾಧಕ. ಆತನ ಕಥೆ ಆರಂಭ ಆಗೋದು ಹೀಗೆ… ಆತ ನ್ಯೂಜಿಲ್ಯಾಂಡ್ ದೇಶದವನು. ಹುಟ್ಟಿದ್ದು 1959 ಸೆಪ್ಟೆಂಬರ್ 27ರಂದು. ಆತನಿಗೆ ಬಾಲ್ಯದಿಂದ ಸಾಹಸಿ ಕ್ರೀಡೆಗಳಲ್ಲಿ ಹೆಚ್ಚು ಆಸಕ್ತಿ. ಪರ್ವತಾರೋಹಣ, ಟ್ರೆಕ್ಕಿಂಗ್ ಇವೆಲ್ಲವೂ ಅವನ ಬದುಕಿನ

ಎರಡು ಕಾಲಿಲ್ಲದಿದ್ದರೂ ಮೌಂಟ್ ಎವರೆಸ್ಟ್ ಏರಿದವನ ಕಥೆ Read More »

ವಿಷಾದಭಾವವಿಲ್ಲದೆ ಗುಡ್‌ಬೈ ಹೇಳಿ

ಈ ಜಗತ್ತಿನಿಂದ ನಿರ್ಗಮಿಸುವ ಹೊತ್ತಿನಲ್ಲಿ ನಮಗೆ ಈ 25 ವಿಷಾದಗಳು ಇಲ್ಲದಿರಲಿ 1) ನಮ್ಮ ಬಾಲ್ಯದ ಗೆಳೆಯರನ್ನು ಮತ್ತೆ ಕನೆಕ್ಟ್ ಮಾಡಲು ಆಗಲಿಲ್ಲವಲ್ಲ ಎಂಬ ನೋವು. 2) ನಮ್ಮ ಸುತ್ತಲಿನ ವ್ಯಕ್ತಿಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಆಗಲಿಲ್ಲವಲ್ಲ ಎಂಬ ವಿಷಾದ. 3) ನಮ್ಮ ಪ್ರೀತಿಪಾತ್ರರಿಗೆ ಕೊಟ್ಟ ಯಾವುದೋ ಭರವಸೆಯನ್ನು ಈಡೇರಿಸಲು ಆಗದೇ ಹೋದ ಹತಾಶೆ. 4) ನಮ್ಮ ಕುಟುಂಬಕ್ಕೆ ಸಮಯ ಮತ್ತು ಪ್ರೀತಿ ಹಂಚಲು ಆಗದಷ್ಟು ಒತ್ತಡ ಮಾಡಿಕೊಂಡು ಬದುಕಿದ ಖಾಲಿತನ. 5) ನಮ್ಮ ಶಿಕ್ಷಣ ಪೂರ್ತಿ

ವಿಷಾದಭಾವವಿಲ್ಲದೆ ಗುಡ್‌ಬೈ ಹೇಳಿ Read More »

17 ಬುಲೆಟ್‌ಗಳು ಹೊಕ್ಕಿದ್ದರೂ ಟೈಗರ್ ಹಿಲ್ ಗೆದ್ದು ಬಂದ ಸೈನಿಕ

19 ವರ್ಷ ಪ್ರಾಯದಲ್ಲೇ ಪರಮವೀರ ಚಕ್ರ ಪಡೆದ ವೀರ ಯೋಧ ಆತನ ತಂದೆ ಕರಣ್ ಸಿಂಗ್‌ ಯಾದವ್ 1965-71ರ ಅವಧಿಯಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಹಾಗೆಯೇ ಎರಡು ಇಂಡೋ-ಪಾಕ್ ಯುದ್ಧಗಳಲ್ಲಿ ಧೀರೋದಾತ್ತವಾಗಿ ಹೋರಾಡಿ ಭಾರತವನ್ನು ಗೆಲ್ಲಿಸಿದ್ದರು. ಅದರಿಂದ ಮಗನಿಗೆ ರಾಷ್ಟ್ರಪ್ರೇಮವು ರಕ್ತದಲ್ಲಿಯೇ ಬಂದಿತ್ತು ಅನ್ನಿಸುತ್ತದೆ. ಅದರಿಂದ ಆತ ಭಾರತೀಯ ಸೇನೆಗೆ ಆಯ್ಕೆಯಾಗುವಾಗ ಆತನ ವಯಸ್ಸು ಕೇವಲ 16 ವರ್ಷ 5 ತಿಂಗಳು ಆಗಿತ್ತು. ಅಪ್ಪನ ಭುಜದ ಮೇಲೆ ಮಿಂಚುತ್ತಿದ್ದ ಮೆಡಲ್‌ಗಳೇ ಆತನಿಗೆ ಪ್ರೇರಣೆ ಆತನ ಹೆಸರು

17 ಬುಲೆಟ್‌ಗಳು ಹೊಕ್ಕಿದ್ದರೂ ಟೈಗರ್ ಹಿಲ್ ಗೆದ್ದು ಬಂದ ಸೈನಿಕ Read More »

ದೇವರ ಮೇಲಿನ ನಂಬಿಕೆ ದೊಡ್ಡದಾ, ವಿಜ್ಞಾನದ ಸಿದ್ಧಾಂತ ದೊಡ್ಡದಾ?

ನಂಬಿಕೆ ಮೀರಿದ ವಿಜ್ಞಾನ, ವಿಜ್ಞಾನ ಮೀರಿದ ನಂಬಿಕೆ ಎರಡೂ ಸಮ್ಮತ ಜಗತ್ತಿನ ಮಹಾವಿಜ್ಞಾನಿಗಳು ಕೂಡ ದೇವರ ಅಸ್ತಿತ್ವವನ್ನು ನಂಬುತ್ತಾರೆ ಎಂದರೆ ಆಶ್ಚರ್ಯ ಆಗ್ತಾ ಇದೆಯಾ?There is a SUPER NATURAL POWER which controls the whole world ಎಂದಿದ್ದರು ಮಹಾವಿಜ್ಞಾನಿಯಾದ ಐನಸ್ಟೀನ್. ಅಂದರೆ ಇಂದು ಕೂಡ ಇಡೀ ಜಗತ್ತನ್ನು ನಿಯಂತ್ರಣ ಮಾಡುತ್ತಿರುವ ಒಂದು ಅತೀಂದ್ರಿಯವಾದ ಶಕ್ತಿ ಇದೆ ಎಂದರ್ಥ. ಆ ಶಕ್ತಿಯು ನಮ್ಮ ಇಂದ್ರಿಯಗಳ ಗ್ರಹಿಕೆಗೆ ಮೀರಿದ್ದು. ಆ ಅತೀಂದ್ರಿಯ ಶಕ್ತಿಯನ್ನು ದೇವರು ಎಂದು ನೀವು

ದೇವರ ಮೇಲಿನ ನಂಬಿಕೆ ದೊಡ್ಡದಾ, ವಿಜ್ಞಾನದ ಸಿದ್ಧಾಂತ ದೊಡ್ಡದಾ? Read More »

ನಮ್ಮ ಸಾಮರ್ಥ್ಯವನ್ನು ಅರಿತುಕೊಂಡರೆ ನಾವೂ ʼಸ್ವಯಂಮೇವ ಮೃಗೇಂದ್ರತಾʼ

ನಾವು ಒಳಗಿನಿಂದ ಹೊರಗೆ ಬೆಳೆಯುತ್ತಾ ಹೋಗಬೇಕು ಕಾಡಿನಲ್ಲಿ ಸಿಂಹಕ್ಕೆ ಯಾರೂ ಪಟ್ಟಾಭಿಷೇಕವನ್ನು ಮಾಡುವುದಿಲ್ಲ. ಯಾರೂ ಕಿರೀಟ ಧಾರಣೆ ಮಾಡುವುದಿಲ್ಲ. ಸಿಂಹ ತನ್ನ ಸ್ವಯಂ ಸಾಮರ್ಥ್ಯಗಳನ್ನು ಉದ್ದೀಪನ ಮಾಡಿಕೊಂಡು ‘ಮೃಗಗಳ ರಾಜ’ ಎಂದು ಎಲ್ಲರಿಂದಲೂ ಕರೆಸಿಕೊಳ್ಳುತ್ತದೆ. ಹೀಗೆಂದು ಹೇಳುತ್ತದೆ ಒಂದು ಸಂಸ್ಕೃತದ ಸುಭಾಷಿತ. ಕಾಡಿನಲ್ಲಿ ಸಿಂಹಕ್ಕಿಂತ ಬಲಿಷ್ಠವಾದ ಅದೆಷ್ಟೋ ಪ್ರಾಣಿಗಳು ಇವೆ. ಆದರೂ ಸಿಂಹವು ತನ್ನ ಗತ್ತು, ಗೈರತ್ತು, ಗಾಂಭೀರ್ಯ, ನಡಿಗೆ ಮತ್ತು ನೋಟಗಳಿಂದ ‘ಕಾಡಿನ ರಾಜ’ ಎಂದು ಕರೆಸಿಕೊಳ್ಳುತ್ತದೆ. ನಾವೂ ನಮ್ಮ ಸಾಮರ್ಥ್ಯಗಳ ಅರಿವನ್ನು ಮೂಡಿಸಿಕೊಂಡರೆ ಖಂಡಿತವಾಗಿ

ನಮ್ಮ ಸಾಮರ್ಥ್ಯವನ್ನು ಅರಿತುಕೊಂಡರೆ ನಾವೂ ʼಸ್ವಯಂಮೇವ ಮೃಗೇಂದ್ರತಾʼ Read More »

ಕ್ರಿಕೆಟಿನ ಡಾನ್ – ಬ್ರಾಡ್ಮನ್

ಯಾರೂ ಬ್ರೇಕ್ ಮಾಡಲು ಆಗದ ಅಪೂರ್ವ ದಾಖಲೆಗಳ ಸರದಾರ ಆಗಸ್ಟ್ 14, 1948. ಇಂಗ್ಲೆಂಡಿನ ಮಹೋನ್ನತ ಓವಲ್ ಕ್ರಿಕೆಟ್ ಗ್ರೌಂಡ್, ಅದು ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಗಳ ಮುಖಾಮುಖಿ.ಆಶಸ್ ಸರಣಿಯ ಕೊನೆಯ ಪಂದ್ಯ ಅನ್ನುವುದಕ್ಕಿಂತ ಆ ಲೆಜೆಂಡ್ ಕ್ರಿಕೆಟರ್‌ನ ಕೊನೆಯ ಟೆಸ್ಟ್ ಪಂದ್ಯ ಅನ್ನೋದು ಹೆಚ್ಚು ಸರಿ. ಆತ ಬ್ಯಾಟಿಂಗ್ ಮಾಡಲು ಬ್ಯಾಟ್ ಹಿಡಿದು ಬರುವಾಗ ಇನ್ನೊಂದು ಕುತೂಹಲ ಇತ್ತು.ಆತ ಅಂದು ಕೇವಲ ನಾಲ್ಕು ರನ್ ಮಾಡಿದ್ದರೆ ಆತನ ಟೆಸ್ಟ್ ಕ್ರಿಕೆಟ್ ಬ್ಯಾಟಿಂಗ್ ಸರಾಸರಿ 100 ಆಗುತ್ತಿತ್ತು. ಅದು

ಕ್ರಿಕೆಟಿನ ಡಾನ್ – ಬ್ರಾಡ್ಮನ್ Read More »

error: Content is protected !!
Scroll to Top