ಚಾರ್ವಾಕ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ ಲೋಕಾರ್ಪಣೆ | ಶತಮಾನೋತ್ಸವದ ಸವಿನೆನಪಿಗಾಗಿ ‘ಶತಸಂಭ್ರಮ’ ಸ್ಮರಣ ಸಂಚಿಕೆ ಬಿಡುಗಡೆ | ಸಹಕಾರ ಎಂಬುದು ಪ್ರತಿಯೊಬ್ಬರ ಮನೆ ಹಾಗೂ ಮನದಲ್ಲಿರಬೇಕು : ಶ್ರೀ ವಿದ್ಯಾವಲ್ಲಭ ಸ್ವಾಮೀಜಿ | ಸಹಕಾರ, ಬ್ಯಾಂಕಿಂಗ್, ಪ್ರಜಾಪ್ರಭುತ್ವದಲ್ಲಿ ಪಾಲ್ಗೊಳ್ಳುವಿಕೆ ದ.ಕ ಮತ್ತು ತುಳುನಾಡಿನ ಜನರ ರಕ್ತದಲ್ಲಿದೆ : ಕ್ಯಾ.ಬ್ರಿಜೇಶ್ ಚೌಟ | ಚಾರ್ವಾಕ ಕೃಷಿ ಪತ್ತಿನ ಸಹಕಾರಿ ಸಂಘ ಇತರ ಸಂಘಗಳಿಗೆ ಮಾದರಿಯಾಗಿ ಬೆಳೆದು ನಿಂತಿದೆ : ಶಶಿಕುಮಾರ್ ರೈ ಬಾಲ್ಯೊಟ್ಟು | ಸಹಕಾರಿ ಸಂಘಗಳು ಸಮಾಜದಲ್ಲಿನ ಕಟ್ಟಕಡೆಯ ರೈತರಿಗೆ ಆರ್ಥಿಕ ಶಕ್ತಿಯನ್ನು ತುಂಬಿದೆ : ಪ್ರವೀಣ್ ಕುಮಾರ್
ಕಾಣಿಯೂರು: ಸಹಕಾರ ಕ್ಷೇತ್ರ ನಮ್ಮೆಲ್ಲರ ಏಳಿಗೆಗೆ ಮೂಲ ಸ್ಪೂರ್ತಿಯಾಗಿದ್ದು, ಸಹಕಾರ ಎಂಬುದು ಪ್ರತಿಯೊಬ್ಬರ ಮನೆ ಹಾಗೂ ಮನದಲ್ಲಿರಬೇಕು, ನಾವು ಮಾತ್ಸರ್ಯ, ದ್ವೇಷ ಎಲ್ಲವನ್ನು ಹೊರಗಿಟ್ಟು ಪರಸ್ಪರ ಸಹಕಾರದಲ್ಲಿ ತೊಡಗಿಸಿಕೊಂಡಾಗ ಎಲ್ಲರಿಗೂ ಒಳಿತಾಗಲು ಸಾಧ್ಯ ಎಂದು ಕಾಣಿಯೂರು ರಾಮತೀರ್ಥ ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ನುಡಿದರು. ಅವರು ಚಾರ್ವಾಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾಣಿಯೂರು ಇದರ ಶತಮಾನೋತ್ಸವದ ಸವಿನೆನೆಪಿಗಾಗಿ ನಿರ್ಮಾಣವಾದ ನೂತನ ಕಛೇರಿ ಕಟ್ಟಡವನ್ನು ಲೋಕಾರ್ಪಣೆ ಮಾಡಿ ಬಳಿಕ ಕಾಣಿಯೂರು ರಾಮತೀರ್ಥಮಠದ ಜಾತ್ರಾ ಮೈದಾನದಲ್ಲಿ ನಡೆದ […]