ಸ್ಥಳೀಯ ಸುದ್ದಿ

ಅಕ್ಷಯ ಕಾಲೇಜಿನ ವಿದ್ಯಾರ್ಥಿಗಳು ಮಾರಿಷಸ್‌‌ಗೆ ಇಂಟರ್ನ್‌ಶಿಪ್‌ಗೆ ಆಯ್ಕೆ

ಪುತ್ತೂರು: ಸಂಪ್ಯದ ಅಕ್ಷಯ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟಿನ ಮುಖಾಂತರ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣವನ್ನು ನೀಡುವ ಸಂಸ್ಥೆಯಾಗಿದ್ದು, ಪುತ್ತೂರು ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ ಏವಿಯೇಷನ್(Aviation), ಕೃತಕ ಬುದ್ಧಿಮತ್ತೆ (Artificial Intelligence) ಹಾಗೂ ಹಾಸ್ಪಿಟಾಲಿಟಿ ಸೈನ್ಸ್(Hotel Management) ಕೋರ್ಸ್ಗಳನ್ನು ಪರಿಚಯಿಸಿದ ಪ್ರಥಮ ಕಾಲೇಜು ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಈಗಾಗಲೇ ಸತತ ಮೂರು ವರ್ಷಗಳಿಂದ ಏವಿಯೇಷನ್ ಕೋರ್ಸ್ ಮುಖಾಂತರ ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಲವಾರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಹಾಗೂ ಏರ್‌ಲೈನ್ಸ್‌ಗಳಲ್ಲಿ […]

ಅಕ್ಷಯ ಕಾಲೇಜಿನ ವಿದ್ಯಾರ್ಥಿಗಳು ಮಾರಿಷಸ್‌‌ಗೆ ಇಂಟರ್ನ್‌ಶಿಪ್‌ಗೆ ಆಯ್ಕೆ Read More »

ಫೆ: 22: ಬೃಹತ್ ಉಚಿತ ವೈದ್ಯಕೀಯ ತಪಾಸಣೆ, ಆರೋಗ್ಯ ಮಾಹಿತಿ ಶಿಬಿರ ಮತ್ತು ಉಚಿತ ಓದುವ ಕನ್ನಡಕ ವಿತರಣೆ

ಪುತ್ತೂರು: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ.), ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ), ಎನ್.ಜಿ. ವಲ್ಡ್ ಚಾರಿಟೇಬಲ್ ಟ್ರಸ್ಟ್ (ರಿ), ಮಂಗಳೂರು ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ, ಮಂಗಳೂರು ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಶಾಲಾಭಿವೃದ್ಧಿ ಸಮಿತಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕುದ್ಮಾರು ಇವುಗಳ ಸಹಯೋಗದೊಂದಿಗೆ ಬೃಹತ್ ಉಚಿತ ವೈದ್ಯಕೀಯ ತಪಾಸಣೆ, ಆರೋಗ್ಯ ಮಾಹಿತಿ ಶಿಬಿರ ಮತ್ತು ಉಚಿತ ಓದುವ ಕನ್ನಡಕ ವಿತರಣೆ ಕಾರ್ಯಕ್ರಮ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ

ಫೆ: 22: ಬೃಹತ್ ಉಚಿತ ವೈದ್ಯಕೀಯ ತಪಾಸಣೆ, ಆರೋಗ್ಯ ಮಾಹಿತಿ ಶಿಬಿರ ಮತ್ತು ಉಚಿತ ಓದುವ ಕನ್ನಡಕ ವಿತರಣೆ Read More »

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಸಭೆ

ಮಂಗಳೂರು: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ರಿ. ಮೆಲ್ಕಾರ್ ಬಂಟ್ವಾಳ ಇದರ ಕೇಂದ್ರ ಸಮಿತಿಯ ಸಭೆಯು ಇನೋಳಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ವಠಾರದಲ್ಲಿ ಜರಗಿತು. ದೇವಾಲಯದ ಆಡಳಿತ ಸಮಿತಿಯ ಅಧ್ಯಕ್ಷ ಚಂದ್ರಹಾಸ ಪೂಂಜ ದೀಪ ಬೆಳಗಿಸಿ ಸಭೆಯನ್ನು ಉದ್ಘಾಟಿಸಿ ಹಿರಿಯರ ಸೇವಾ ಪ್ರತಿಷ್ಠಾನದ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷ ಕೆಯ್ಯೂರು ನಾರಾಯಣ ಭಟ್ ವಹಿಸಿದ್ದರು. ಮೇಲ್ಕಾರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಶಂಕರಪತ್ತಿನ ಸಹಕಾರಿ ಸಂಘದ ಶಾಖೆಯನ್ನು ಪುತ್ತೂರು

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಸಭೆ Read More »

ಫೆ.20-24: ಶ್ರೀ ಕಾಣಿಯೂರು ಮಠದಲ್ಲಿ ಜಾತ್ರಾ ಮಹೋತ್ಸವ

ಕಾಣಿಯೂರು: ಶ್ರೀ ಜಗದ್ಗುರು ಶ್ರೀ ಮನ್ಮದ್ವಚಾರ್ಯ ಮೂಲ‌ ಮಹಾಸಂಸ್ಥಾನಂ ಶ್ರೀ ಕಾಣಿಯೂರು ಮಠ, ಕಾಣಿಯೂರಿನ ಜಾತ್ರಾ ಮಹೋತ್ಸವವು ಫೆ. 20 ರಿಂದ 24 ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ನಡೆಯಲಿದೆ. ಫೆ. 13 ರಂದು ಬೆಳಿಗ್ಗೆ 9 ಗಂಟೆಗೆ ಗೊನೆ ಕಡಿಯುವ ಕಾರ್ಯಕ್ರಮದ ಮೂಲಕ ಜಾತ್ರಾ ಸಿದ್ಧತೆಗೆ ಚಾಲನೆ ದೊರೆತಿದೆ. ಫೆ. 18 ರಂದು 10 ಗಂಟೆಗೆ : ಮುಂಡ್ಯ ಹಾಕುವುದು ಫೆ. 20 ರಂದು: ಶ್ರೀ ಲಕ್ಷ್ಮೀನೃಸಿಂಹ ದೇವರು ಮತ್ತು ಮುಖ್ಯಪ್ರಾಣ

ಫೆ.20-24: ಶ್ರೀ ಕಾಣಿಯೂರು ಮಠದಲ್ಲಿ ಜಾತ್ರಾ ಮಹೋತ್ಸವ Read More »

ಲಕ್ಷ್ಯ ಡೇ ಕೇರ್ ಸೆಂಟರ್ ಹಾಗೂ ಲಕ್ಷ್ಯ ಕೌನ್ಸಲಿಂಗ್ ಸೆಂಟರ್ ಲೋಕಾರ್ಪಣೆ

ಪುತ್ತೂರು: ಬೈಪಾಸ್ ರಸ್ತೆಯಲ್ಲಿನ ರವಿಂದ ಕಾಂಪ್ಲೆಕ್ಸ್ ನಲ್ಲಿ ಪ್ರಥಮ ಬಾರಿಗೆ ಸೈಕಾಲಜಿಸ್ಟ್ ಹಾಗೂ ಶಿಕ್ಷಣ ತಜ್ಞರಿಂದಲೇ ನಡೆಸಲ್ಪಡುವ ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಲಕ್ಷ್ಯ ಡೇ ಕೇರ್ ಸೆಂಟರ್ ಹಾಗೂ ಲಕ್ಷ್ಯ ಕೌನ್ಸಲಿಂಗ್ ಸೆಂಟರ್ ಲೋಕಾರ್ಪಣೆಗೊಂಡಿತು. ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷಶ್ರೀ ಜಿತಕಾಮನಂದಜಿ ಉದ್ಘಾಟಿಸಿ ಮಾತನಾಡಿ, ಲಕ್ಷ್ಯ ಡೇ ಕೇರ್ ಒಂದು ವಿನೂತನ ಹೆಜ್ಜೆಯನ್ನು ಇಡುತ್ತಿದೆ. ಮನಃಶಾಸ್ತ್ರದ ಹಾಗೂ ಆತ್ಯಾತ್ಮಿಕ ಹಿನ್ನೆಯಲ್ಲಿ ಮಕ್ಕಳಿಗೆ ಅನೇಕ ಚಟುವಟಿಕೆಗಳನ್ನು ಜೋಡಿಸಿಕೊಂಡಿರುವುದು ಶ್ಲಾಘನೀಯ ಸಂಗತಿ. ಒಂದು ಮಗುವಿಗೆ ಕೇವಲ ಉತ್ತಮ ಆಹಾರಕ್ರಮ

ಲಕ್ಷ್ಯ ಡೇ ಕೇರ್ ಸೆಂಟರ್ ಹಾಗೂ ಲಕ್ಷ್ಯ ಕೌನ್ಸಲಿಂಗ್ ಸೆಂಟರ್ ಲೋಕಾರ್ಪಣೆ Read More »

ಫೆ. 14 – 22: ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ‘ಓಲ್ಡ್ ಗೋಲ್ಡ್ ಎಕ್ಸ್‌ಚೇಂಜ್ ಮೇಳ’

ಪುತ್ತೂರು: ನಗರದ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಜಿ. ಎಲ್. ಆಚಾರ್ಯದಲ್ಲಿ ಫೆ. 14 ರಿಂದ ಫೆ. 22 ರ ವರೆಗೆ ‘ಓಲ್ಡ್ ಗೋಲ್ಡ್ ಎಕ್ಸ್‌ಚೇಂಜ್ ಮೇಳ’ವನ್ನು ಆಯೋಜನೆ ಮಾಡಲಾಗಿದೆ. ಹಳೆಯ ಚಿನ್ನಾಭರಣಗಳನ್ನು ಹೊಸ ವಿನ್ಯಾಸದ ಚಿನ್ನಾಭರಣಗಳ ಜೊತೆಗೆ ಬದಲಾವಣೆ ಮಾಡಿಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ. ಗ್ರಾಹಕರು ನೀಡುವ ಹಳೆಯ ಚಿನ್ನಾಭರಣಗಳನ್ನು ತಕ್ಷಣವೇ ಪರಿಶೀಲನೆ ಮಾಡಿ ಈಗಿರುವ ಮಾರುಕಟ್ಟೆ ದರದ ಅನ್ವಯ ಯಾವುದೇ ಕಡಿತ ಇಲ್ಲದೆ ಈ ವಿನಿಮಯ ಸೌಲಭ್ಯವನ್ನು ಸಂಸ್ಥೆ ಒದಗಿಸುತ್ತಿದೆ. ಜೊತೆಗೆ ಪ್ರತೀ ಗ್ರಾಂ‌ಗೆ ರೂ.

ಫೆ. 14 – 22: ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ‘ಓಲ್ಡ್ ಗೋಲ್ಡ್ ಎಕ್ಸ್‌ಚೇಂಜ್ ಮೇಳ’ Read More »

ಶಾಸಕ ಅಶೋಕ್ ಕುಮಾರ್ ರೈ ಕೇಪು ಕೋಳಿ ಅಂಕ ನಡೆಸಿದ ಪ್ರಕರಣಕ್ಕೆ ತಡೆಯಾಜ್ಞೆ ನೀಡಿದ ಹೈಕೋರ್ಟ್

ಪುತ್ತೂರು: ಕೇಪು ಉಳ್ಳಾಲ್ತಿ ಅಮ್ಮನವರ ಜಾತ್ರಾ ಸಂದರ್ಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರೇ‌ ಮುಂದೆ ನಿಂತು ಕೋಳಿ ಅಂಕ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಕೇಪು ಜಾತ್ರೆಯಲ್ಲಿ ಪ್ರತಿವರ್ಷವೂ ಮೂರು ದಿನಗಳ ಜೂಜು ರಹಿತ ಕೋಳಿ ಅಂಕ ನಡೆಯುತ್ತದೆ. ಆದರೆ ಈ ಬಾರಿ ಕೋಳಿ ಅಂಕ ನಡೆಸಲು ಅವಕಾಶ ಇಲ್ಲ ಎಂದು ಪೊಲೀಸರು ಅದನ್ನು ತಡೆದಿದ್ದರು. ಆದರೆ ಶಾಸಕ ಅಶೋಕ್ ಕುಮಾರ್ ರೈ ಅವರು ಸ್ಥಳಕ್ಕೆ ಬಂದು, ಅಲ್ಲೇ ನಿಂತು ಕೋಳಿ

ಶಾಸಕ ಅಶೋಕ್ ಕುಮಾರ್ ರೈ ಕೇಪು ಕೋಳಿ ಅಂಕ ನಡೆಸಿದ ಪ್ರಕರಣಕ್ಕೆ ತಡೆಯಾಜ್ಞೆ ನೀಡಿದ ಹೈಕೋರ್ಟ್ Read More »

ಕಲಾವಿದರ ಸಂಸ್ಮರಣೆ ಮತ್ತು ತಾಳಮದ್ದಳೆ

ಪುತ್ತೂರು: ಯಕ್ಷಗಾನ ಕಲಾವಿದ, ಸಂಘಟಕ ಪಿ.ಹರಿಶ್ಚಂದ್ರ ಆಚಾರ್ಯ ಇಳಂತಿಲ ಮತ್ತು ಅರ್ಥಧಾರಿ, -ಪ್ರಸಂಗಕರ್ತ ಗಣೇಶ ಆಚಾರ್ಯ ಕುಂಜೂರು ಇವರ ಸಂಸ್ಮರಣೆ ಕಾರ್ಯಕ್ರಮವು 50ನೇ ವರ್ಷಾಚರಣೆಯಲ್ಲಿರುವ ಶ್ರೀ ಕಾಳಿಕಾಂಬಾ ಯಕ್ಷಕಲಾ ಟ್ರಸ್ಟ್ ಸಹಯೋಗದಲ್ಲಿ ಇಚ್ಚೂರು ಶ್ರೀ ಬಾಲಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು ದೇವಳದ ಪ್ರಧಾನ ಅರ್ಚಕ ಸುರೇಶ್ ಪುತ್ತೂರಾಯ ವಹಿಸಿದ್ದರು. ಅತಿಥಿಯಾಗಿ ಅರ್ಥಧಾರಿ ಜಬ್ಬಾರ್ ಸಮೋ , ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷ ಕವಿ ಪ್ರದೀಪ ಹೆಬ್ಬಾರ್ ಚಾರ, ಉಪ್ಪಿನಂಗಡಿ ಕಾಳಿಕಾಂಬಾ

ಕಲಾವಿದರ ಸಂಸ್ಮರಣೆ ಮತ್ತು ತಾಳಮದ್ದಳೆ Read More »

ರಸ್ತೆ ದುರಸ್ಥಿ ಮಾಡಿದ ಸ್ಪೋರ್ಟ್ಸ್ ಕ್ಲಬ್ ಯುವಕರು

ಕಬಕ: ಕೊಡಿಪ್ಪಾಡಿ ಹಾಗೂ ಕುಳ ಗ್ರಾಮದಲ್ಲಿರುವ ವಾಸುಕಿ ಸ್ಪೋರ್ಟ್ಸ್ ಕ್ಲಬ್ (ರಿ) ಟ್ರಸ್ಟ್ ಓಜಾಲ , ಇದರ ಸದಸ್ಯರಿಂದ ಕಬಕ-ಕುಂಡಡ್ಕ ಸಂಪರ್ಕ ರಸ್ತೆಯ ಗುಂಡಿ ಹಾಗೂ ಬದಿಗಳಿಗೆ ಮಣ್ಣು ಹಾಕುವ ಮೂಲಕ ಊರಿನ ವಾಹನ ಸವಾರರಿಗೆ ಹಾಗೂ ರಸ್ತೆಯಲ್ಲಿ ನಡೆದುಕೊಂಡು ಹೋಗುವವರಿಗೆ ಸಹಾಯಕವಾಗುವಂತೆ ಉತ್ತಮ ಕಾರ್ಯವನ್ನು ನಡೆಸಿದ್ದಾರೆ. ವಾಸುಕಿ ಸ್ಪೋರ್ಟ್ಸ್ ಕ್ಲಬ್ (ರಿ) ಟ್ರಸ್ಟ್ ಓಜಾಲ ಇದರ ಅಧ್ಯಕ್ಷ ಮಿಥುನ್ ಓಜಾಲ, ಉಪಾಧ್ಯಕ್ಷ ಕಿರಣ್ ಓಜಾಲ, ಮಾಜಿ ಅಧ್ಯಕ್ಷ ಮುರಳೀಧರ ಕೊರ್ಜೆ ಹಾಗೂ ಎಲ್ಲಾ ಸದಸ್ಯರ ಸಹಕಾರದಿಂದ

ರಸ್ತೆ ದುರಸ್ಥಿ ಮಾಡಿದ ಸ್ಪೋರ್ಟ್ಸ್ ಕ್ಲಬ್ ಯುವಕರು Read More »

ಫೆ.11: ಕರ್ನಾಟಕ ರಾಜ್ಯ ‘ಕನ್ನಡ ಶಾಲೆ ಉಳಿಸಿ ಬೆಳೆಸಿ’ ಅಭಿಯಾನದಿಂದ ಮಂಗಳೂರಿನಲ್ಲಿ ರಾಜ್ಯ ಸಮಾವೇಶ

ಪುತ್ತೂರು: ಕರ್ನಾಟಕ ರಾಜ್ಯ ‘ಕನ್ನಡ ಶಾಲೆ ಉಳಿಸಿ, ಬೆಳೆಸಿ’ಅಭಿಯಾನ ಇದರ ವತಿಯಿಂದ ಕನ್ನಡ ಮನಸ್ಸುಗಳ ಬೃಹತ್ ಸಂಗಮವಾಗಿ ರಾಜ್ಯ ಸಮಾವೇಶ-2026 ಮತ್ತು ಅಭಿಯಾನದ ಅಂಗವಾಗಿ 12 ವರ್ಷದೊಳಗೆ 75 ಶಾಲೆಗಳಿಗೆ ನೀಡಿದ ಜಾರುಬಂಡಿ ಸಹಿತ ವಿವಿಧ ಕ್ರೀಡಾಚಟುವಟಿಗಳಿಗೆ ನೀಡಿದ ಪ್ರೋತ್ಸಾಹದ 75ರ ಸಂಭ್ರಮ ಫೆ. 11ರಂದು ಮಧ್ಯಾಹ್ನ 2 ಗಂಟೆಗೆ ಮಂಗಳೂರು ಪುಭರವನದಲ್ಲಿ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ಪುತ್ತೂರು ತಾಲೂಕು ಅಧ್ಯಕ್ಷೆ ನಿವೃತ್ತ ಶಿಕ್ಷಕಿ ವೇದಾವತಿ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ

ಫೆ.11: ಕರ್ನಾಟಕ ರಾಜ್ಯ ‘ಕನ್ನಡ ಶಾಲೆ ಉಳಿಸಿ ಬೆಳೆಸಿ’ ಅಭಿಯಾನದಿಂದ ಮಂಗಳೂರಿನಲ್ಲಿ ರಾಜ್ಯ ಸಮಾವೇಶ Read More »

error: Content is protected !!
Scroll to Top