ಆರ್ಗ್ಯಾನಿಕ್ ಚೀಲದ ಹೆಸರಿನಲ್ಲಿ ಕೋಟಿ ವಂಚನೆ | ಎನ್ವಿ ಗ್ರೀನ್ ಬಯೋಟೆಕ್ ಮಾಲೀಕ ಅಶ್ವತ್ಥ ಹೆಗ್ಡೆ ವಿರುದ್ಧ ಪ್ರಕರಣ ದಾಖಲು
ಬೆಂಗಳೂರು: ಆರ್ಗ್ಯಾನಿಕ್ ಚೀಲದ ಹೆಸರಿನಲ್ಲಿ ಕೋಟಿ ಕೋಟಿ ವಂಚನೆ ಮಾಡಿದ ಆರೋಪದ ಮೇಲೆ ಎನ್ವಿ ಗ್ರೀನ್ ಬಯೋಟೆಕ್ ಮಾಲೀಕ ಅಶ್ವತ್ಥ ಹೆಗ್ಡೆ ಎಂಬವರ ವಿರುದ್ಧ ಉದ್ಯಮಿ ನೀಲಿಮಾ ಎಂಬವರು ನೀಡಿದ ದೂರಿನಂತೆ ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಪ್ಲಾಸ್ಟಿಕ್ ಬದಲು ಆರ್ಗ್ಯಾನಿಕ್ ಬ್ಯಾಗ್ ಕಂಡು ಹಿಡಿದಿದ್ದಾಗಿ ನಂಬಿಸಿದ್ದ ಅಶ್ವತ್ಥ ಹೆಗ್ಡೆ ಬಿಸಿ ನೀರಿನಲ್ಲಿ ಕರಗುವ ಕೈಚೀಲ ಮಾಡುವುದಾಗಿ ಭರವಸೆ ನೀಡಿದ್ದರು. ಯಂತ್ರ ಹಾಗೂ ಕಾರ್ಮಿಕರನ್ನು ಕೊಡುವುದಾಗಿ ಹೇಳಿದ್ದರು. 1.26 ಕೋಟಿ ರೂಪಾಯಿ ಮೌಲ್ಯದ ಯಂತ್ರ […]