ಸುದ್ದಿ

ಸಾಹಿತ್ಯ ಸಮ್ಮೇಳನ : ಸಾಹಿತ್ಯಕ್ಕಿಂತ ಬಾಡೂಟದ ಚರ್ಚೆಯೇ ಜೋರು

ಸಮ್ಮೇಳನದಲ್ಲಿ ಮಾಂಸಾಹಾರವೂ ಇರಬೇಕೆಂಬ ಬಲವಾದ ಬೇಡಿಕೆ ಬೆಂಗಳೂರು : ಮಂಡ್ಯದಲ್ಲಿ ಡಿ.20ರಿಂದ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿಯಾಗಿ ಈಗ ಸಾಹಿತ್ಯಕ್ಕಿಂತ ಹೆಚ್ಚಾಗಿ ಬಾಡೂಟವೇ ಚರ್ಚೆಗೆ ಈಡಾಗಿದೆ. ಕಳೆದ ಕೆಲವು ವರ್ಷಗಳಿಂದ ಕನ್ನಡಿಗರ ಸಂಭ್ರಮದ ನುಡಿ ಜಾತ್ರೆಯಾಗಬೇಕಾಗಿದ್ದ ಸಾಹಿತ್ಯ ಸಮ್ಮೇಳನ ಬೇರೆ ಬೇರೆ ಕಾರಣಗಳಿಗೆ ವಿವಾದಗಳಿಗೆ ಗುರಿಯಾಗುತ್ತಿದೆ. ಸಮ್ಮೇಳನದ ಅಧ್ಯಕ್ಷರು, ಗೋಷ್ಠಿಗಳು, ಭಾಗವಹಿಸುವವರು, ಅವಕಾಶ ಪಡೆದವರು, ಅವಕಾಶ ವಂಚಿತರು…ಹೀಗೆ ಪ್ರತಿವರ್ಷ ಸಮ್ಮೇಳನಕ್ಕೆ ವಿವಾದ ಸುತ್ತಿಕೊಳ್ಳುತ್ತಲೇ ಇದೆ. ಅವುಗಳೆಲ್ಲ ಸಾಹಿತ್ಯಕ್ಕೆ ಸಂಬಂಧಪಟ್ಟ ವೈಚಾರಿಕ ವಿಚಾರಗಳಾದ […]

ಸಾಹಿತ್ಯ ಸಮ್ಮೇಳನ : ಸಾಹಿತ್ಯಕ್ಕಿಂತ ಬಾಡೂಟದ ಚರ್ಚೆಯೇ ಜೋರು Read More »

ಟೆಕ್ಕಿ ಅತುಲ್‌ ಆತ್ಮಹತ್ಯೆ ಪ್ರಕರಣ : ಪತ್ನಿ ಹರ್ಯಾಣದಲ್ಲಿ ಸೆರೆ

ಹೆಂಡತಿಯ ಕಾಟ ತಡೆಯಲಾಗದೆ ಆತ್ಮಹತ್ಯೆ ಮಾಡಿಕೊಂಡ ಅತುಲ್‌ ಬೆಂಗಳೂರು: ದೇಶಾದ್ಯಂತ ಸಂಚಲನ ಮೂಡಿಸಿರುವ ಬೆಂಗಳೂರಿನ ಸಾಫ್ಟ್‌ವೇರ್‌ ಇಂಜಿನಿಯರ್‌ ಅತುಲ್‌ ಸುಭಾಷ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಅವರ ಪತ್ನಿ ನಿಖಿತಾ ಸಿಂಘಾನಿಯಾಳನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ.ಉತ್ತರ ಪ್ರದೇಶದಲ್ಲಿ ಅತುಲ್‌ ಅತ್ತೆ ನಿಶಾ ಸಿಂಘಾನಿಯಾ ಮತ್ತು ಬಾಮೈದ ಅನುರಾಗ್‌ ಸಿಂಘಾನಿಯಾ ಅರೆಸ್ಟ್‌ ಆಗಿದ್ದರು. ಈಗ ಹರ್ಯಾಣದ ಗುರುಗ್ರಾಮದಲ್ಲಿ ಅತುಲ್‌ ಪತ್ನಿ ನಿಖಿತಾ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ.ಮೂವರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಎಲ್ಲರಿಗೂ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇಪತಿ

ಟೆಕ್ಕಿ ಅತುಲ್‌ ಆತ್ಮಹತ್ಯೆ ಪ್ರಕರಣ : ಪತ್ನಿ ಹರ್ಯಾಣದಲ್ಲಿ ಸೆರೆ Read More »

ತಲೆಬುಡವಿಲ್ಲದ ಆರೋಪಗಳನ್ನು ಮಾಡಿ ಸಂಭ್ರಮಿಸುತ್ತಿದ್ದೀರಿ : ಸಿದ್ದರಾಮಯ್ಯಗೆ ವಿಜಯೇಂದ್ರ ತಿರುಗೇಟು

ಧೈರ್ಯವಿದ್ದರೆ ಮುಡಾ ಹಗರಣವನ್ನು ಸಿಬಿಐಗೊಪ್ಪಿಸಿ ಎಂದು ಸವಾಲು ಬೆಂಗಳೂರು: ವಕ್ಪ್ ವಿವಾದ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಗೋಚರಿಸುತ್ತಿಲ್ಲ. ಬಿಜೆಪಿಗರು ತಮ್ಮ ವಿರುದ್ಧ ಮಾಡಿದ ಆರೋಪಗಳನ್ನೇ ಕಾಂಗ್ರೆಸಿಗರು ತಿರುಗಿಸಿ ಹೊಡೆಯಲು ಬಳಸುತ್ತಿದ್ದಾರೆ. ನಿನ್ನೆಯಿಂದೀಚೆಗೆ ವಕ್ಫ್‌ ಆಸ್ತಿ ಕಬಳಿಕೆಯ ಬಗ್ಗೆ ಮೌನವಾಗಿರಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಮಗೆ 150 ಕೋಟಿ ರೂಪಾಯಿ ಆಮಿಷವೊಡ್ಡಿದ್ದರು ಎಂಬ ಕಾಂಗ್ರೆಸ್‌ ಆರೋಪ ಸುದ್ದಿ ಮಾಡುತ್ತಿದೆ. ಬಿಜೆಪಿ ಸರ್ಕಾರದಲ್ಲಿ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೇರವಾಗಿ

ತಲೆಬುಡವಿಲ್ಲದ ಆರೋಪಗಳನ್ನು ಮಾಡಿ ಸಂಭ್ರಮಿಸುತ್ತಿದ್ದೀರಿ : ಸಿದ್ದರಾಮಯ್ಯಗೆ ವಿಜಯೇಂದ್ರ ತಿರುಗೇಟು Read More »

ಗಂಡು ಕಲೆಯಲ್ಲಿ ಮೆರೆದ ಹೆಣ್ಣು ಕಂಠ ಲೀಲಾವತಿ ಬೈಪಾಡಿತ್ತಾಯ

ಯಕ್ಷಗಾನದ ಹಿರಿಯಕ್ಕ ಖ್ಯಾತಿಯ ಪ್ರಥಮ ಮಹಿಳಾ ಭಾಗವತೆ ಕಲಾಲೀನ ಕಾರ್ಕಳ : ಹೆಣ್ಣುಮಕ್ಕಳು ಯಕ್ಷಗಾನ ನೋಡುವುದಕ್ಕೂ ಸಂಪ್ರದಾಯದ ಕಟ್ಟುಪಾಡುಗಳ ಬೇಲಿ ಇದ್ದ ಕಾಲದಲ್ಲಿ ಮಹಿಳೆಯೊಬ್ಬರು ಯಕ್ಷಗಾನ ಮೇಳದ ಪ್ರಧಾನ ಭಾಗವತರಾಗಿ ಮೇಳದೊಂದಿಗೆ ಊರೂರು ತಿರುಗಾಡಿ ಇಡೀ ರಾತ್ರಿ ವೇದಿಕೆಯಲ್ಲಿ ಹಾಡುತ್ತಾ ಪ್ರಸಂಗವನ್ನು ಮುನ್ನಡೆಸುತ್ತಿದ್ದರು ಎಂಬುದು ಆ ಕಾಲಕ್ಕೊಂದು ಅಚ್ಚರಿಯೇ ಆಗಿತ್ತು. ಗಂಡುಕಲೆಯೆಂದೇ ಅರಿಯಲ್ಪಡುವ ಯಕ್ಷಗಾನದಲ್ಲಿ ಹೆಣ್ಣು ಧ್ವನಿಯೊಂದು ಮೊಳಗಿ ಉಚ್ಛ್ರಾಯ ಸ್ಥಿತಿಗೆ ತಲುಪಿ ಯಕ್ಷಗಾನದ ಅಗಾಧ ಸಾಧ್ಯತೆಗಳಿಗೊಂದು ಮುನ್ನುಡಿ ಬರೆದಿತ್ತು. ಹೀಗೆ ವೃತ್ತಿಪರ ಮೇಳಗಳ ಮೊದಲ ಮಹಿಳಾ

ಗಂಡು ಕಲೆಯಲ್ಲಿ ಮೆರೆದ ಹೆಣ್ಣು ಕಂಠ ಲೀಲಾವತಿ ಬೈಪಾಡಿತ್ತಾಯ Read More »

ಗಾಂಧೀಜಿಯ ಕನಸಿನ ಸ್ವಚ್ಛ ಭಾರತಕ್ಕೆ ನಾವೇ ಅಡ್ಡಿ!

ಕಸದ ಕೊಂಪೆ ಆಗುತ್ತಾ ಇದೆ ಭಾರತ ನಮ್ಮ ಪ್ರಧಾನಮಂತ್ರಿ ಮೋದಿಜಿ ಅವರು ಸ್ವಚ್ಛ ಭಾರತದ ಅಭಿಯಾನಕ್ಕೆ ಕರೆ ನೀಡಿದರು. ಅದನ್ನು ಅವರು ನೂರಕ್ಕೆ ನೂರರಷ್ಟು ಪಾಲಿಸಿದರು. ಸ್ವತಃ ಪ್ರಧಾನಿ ರಸ್ತೆಗೆ ಬಂದು ಕಸಬರಿಕೆ ಹಿಡಿದು ಕಸ ಗುಡಿಸಿದರು. ಗಾಂಧೀಜಿಯವರ ಅತಿದೊಡ್ಡ ಕನಸಿನ ಅಭಿಯಾನಕ್ಕೆ ಚಾಲನೆ ನೀಡಿದರು. ಆದರೆ ಭಾರತ ಬದಲಾಯಿತಾ? 1) ಭಾರತದ 120 ಕೋಟಿ ಜನರಲ್ಲಿ ಅರ್ಧಾಂಶ ಜನ ಮಾತ್ರ ಶೌಚಾಲಯ ಬಳಸುತ್ತಾರೆ. 2) ವಾರ್ಷಿಕ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ 1.86 ಲಕ್ಷ ಮಕ್ಕಳು

ಗಾಂಧೀಜಿಯ ಕನಸಿನ ಸ್ವಚ್ಛ ಭಾರತಕ್ಕೆ ನಾವೇ ಅಡ್ಡಿ! Read More »

ಸವಣೂರು ವಿದ್ಯಾರಶ್ಮಿಯಲ್ಲಿ ವಾರ್ಷಿಕ ಕ್ರೀಡಾಕೂಟ ‘ಕ್ರೀಡಾರಶ್ಮಿ’

 ಸವಣೂರು: ವಿದ್ಯಾರಶ್ಮಿ ವಿದ್ಯಾಲಯದಲ್ಲಿ ವಾರ್ಷಿಕ ಕ್ರೀಡಾಕೂಟ ‘ಕ್ರೀಡಾರಶ್ಮಿ’ ಶನಿವಾರ ನಡೆಯಿತು. ಪುತ್ತೂರು ನಗರ ಠಾಣಾ ಪೋಲೀಸ್ ಉಪ ನಿರೀಕ್ಷಕ ಅಂಜನೇಯ ರೆಡ್ಡಿ ಪಾರಿವಾಳ ಹಾರಿಬಿಡುವ ಮೂಲಕ ಉದ್ಘಾಟಿಸಿ ಮಾತನಾಡಿ, ಇಂದು ಶಿಸ್ತು ಮತ್ತು ಸಮಯ ಪಾಲನೆಗಳೇ ಬದುಕಿನ ಪ್ರಮುಖ ಅಸ್ತ್ರಗಳಾಗಿದ್ದು ಅವುಗಳನ್ನು ರೂಢಿಸಿಕೊಳ್ಳಲು ಕ್ರೀಡಾ ಚಟುವಟಿಕೆಗಳು ಸಹಕಾರಿ. ಸಹಕಾರ ರತ್ನ ಸವಣೂರು ಸೀತಾರಾಮ ರೈಯವರ ಸಂಚಾಲಕತ್ವದಲ್ಲಿ ನಡೆಯುತ್ತಿರುವ ವಿದ್ಯಾರಶ್ಮಿ ಸಂಸ್ಥೆಗಳು ಅವರ ವ್ಯಕ್ತಿತ್ವದಂತೆಯೇ ಶಿಸ್ತುಬದ್ಧವಾಗಿದೆ ಮತ್ತು ಇಲ್ಲಿನ ವಿದ್ಯಾರ್ಥಿಗಳು ಬೌದ್ಧಿಕವಾಗಿ ಬಹು ಎತ್ತರದಲ್ಲಿದ್ದಾರೆ ಎಂದರು. ಮುಖ್ಯ ಅತಿಥಿಯಾಗಿ

ಸವಣೂರು ವಿದ್ಯಾರಶ್ಮಿಯಲ್ಲಿ ವಾರ್ಷಿಕ ಕ್ರೀಡಾಕೂಟ ‘ಕ್ರೀಡಾರಶ್ಮಿ’ Read More »

ರಾಜ್ಯಮಟ್ಟದ ಕಬಡ್ಡಿ ಆಟಗಾರ ಪ್ರೀತಮ್‌ ಶೆಟ್ಟಿ ನಿಧನ

ಕಬಡ್ಡಿ ಆಡುತ್ತಿರುವಾಗಲೇ ಹೃದಯಾಘಾತ ಬೆಂಗಳೂರು : ರಾಜ್ಯಮಟ್ಟದ ಕಬಡ್ಡಿ ಆಟಗಾರ ಕಾರ್ಕಳದ ನಡುಮನೆ ಪ್ರೀತಮ್ ಶೆಟ್ಟಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಶುಕ್ರವಾರ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರೀತಮ್ ಭಾಗವಹಿಸಿದ್ದರು. ಈ ಪಂದ್ಯಾಟದ ನಡುವೆ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಅಂಗಳದಲ್ಲೇ ಕುಸಿದು ಬಿದ್ದ ಅವರನ್ನು ಸಹ ಆಟಗಾರರು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಅಷ್ಟರಲ್ಲಾಗಲೇ ಪ್ರೀತಮ್ ಶೆಟ್ಟಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಟ್ಲುಪಾಡಿ ನಡುಮನೆ ನಿವಾಸಿಯಾಗಿರುವ ಪ್ರೀತಮ್

ರಾಜ್ಯಮಟ್ಟದ ಕಬಡ್ಡಿ ಆಟಗಾರ ಪ್ರೀತಮ್‌ ಶೆಟ್ಟಿ ನಿಧನ Read More »

ಮಾಜಿ ಉಪಪ್ರಧಾನಿ ಆಡ್ವಾಣಿ ಆರೋಗ್ಯದಲ್ಲಿ ಏರುಪೇರು : ಆಸ್ಪತ್ರೆಗೆ ದಾಖಲು

ಹೊಸದಿಲ್ಲಿ: ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರ ಆರೋಗ್ಯದಲ್ಲಿ ಏರುಪೇರು ಆಗಿದ್ದು, ದಿಲ್ಲಿಯ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ತಿಂಗಳು 97ನೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ಅಡ್ವಾಣಿ, ಕಳೆದ ಕೆಲವು ತಿಂಗಳುಗಳಿಂದ ಪದೇಪದೆ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದು ಜುಲೈ ನಂತರ ಅವರ ನಾಲ್ಕನೇ ಬಾರಿಗೆ ಆಸ್ಪತ್ರೆಗೆ ದಾಖಲಾಗಿದೆ. ಅವರು ಈ ಹಿಂದೆ ಅಪೋಲೋ ಆಸ್ಪತ್ರೆ ಮತ್ತು ದಿಲ್ಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ (ಏಮ್ಸ್‌) ಚಿಕಿತ್ಸೆ ಪಡೆದಿದ್ದರು. ಹಿರಿಯ ನಾಯಕ ಶೀಘ್ರ

ಮಾಜಿ ಉಪಪ್ರಧಾನಿ ಆಡ್ವಾಣಿ ಆರೋಗ್ಯದಲ್ಲಿ ಏರುಪೇರು : ಆಸ್ಪತ್ರೆಗೆ ದಾಖಲು Read More »

ಸವಣೂರು ರೈಲ್ವೆ ಗೇಟ್ ಬಳಿ  ಹೊಂಡ, ಗುಂಡಿಗಳು| ಶ್ರಮದಾನದ ಮೂಲಕ ದುರಸ್ತಿಪಡಿಸಿದ ಸ್ಥಳೀಯರು

ಸವಣೂರು : ಸವಣೂರು ರೈಲ್ವೆ ಗೇಟ್ ಬಳಿ ಸಾಕಷ್ಟು ಹೊಂಡ, ಗುಂಡಿಗಳು ಕಂಡು ಬಂದಿದ್ದು, ಹೊಂಡಗಳನ್ನು ಶ್ರಮದಾನದ ಮೂಲಕ ಮುಚ್ಚಲಾಯಿತು. ಶ್ರಮದಾನದಲ್ಲಿ ಸತೀಶ್ ಬಲ್ಯಾಯ, ಚೇತನ್ ಕುಮಾರ್ ಕೋಡಿಬೈಲ್, ಶರತ್ ಕುಮಾರ್ ಕೋಡಿಬೈಲ್, ಕೀರ್ತನ್ ಕೋಡಿಬೈಲ್, ಅಶ್ರಪ್ ಕೋಡಿಬೈಲ್, ಸುಪ್ರಿತ್ ರೈ ಖಂಡಿಗ, ತೇಜಸ್ ಬೇರಿಕೆ, ಕುಮಾರ ಬೇರಿಕೆ, ದಿನೇಶ್ ಬೇರಿಕೆ, ಶೈಲೇಶ್ ಭಂಡಾರಿ, ಬಾಲಚಂದ್ರ ಕನ್ನಡ ಕುಮೇರು , ದಮಾನಂದ ಮೆದು, ಪ್ರಕಾಶ್ ಮಾಲೆತ್ತಾರ್, ಹಿತೇಶ್ ನೆಕ್ಕರೆ, ಸಚಿನ್ ಭಂಡಾರಿ, ರೈಲ್ವೆ ಸಿಬ್ಬಂದಿಗಳಾದ ಪ್ರಜೀತ್, ತೀರ್ಥರಾಮ

ಸವಣೂರು ರೈಲ್ವೆ ಗೇಟ್ ಬಳಿ  ಹೊಂಡ, ಗುಂಡಿಗಳು| ಶ್ರಮದಾನದ ಮೂಲಕ ದುರಸ್ತಿಪಡಿಸಿದ ಸ್ಥಳೀಯರು Read More »

ವಿರಾಸತ್: ರಾಸಲೀಲೆ ನೃತ್ಯದ ವೈಭವ, ಡೊಳ್ಳಿನ ಅಬ್ಬರದ ಅಲೆ

ಕರಾವಳಿಯಲ್ಲಿ ಅವತರಿಸಿದ ಯದುಕುಲ ಲೋಕ ವಿದ್ಯಾಗಿರಿ(ಮೂಡುಬಿದಿರೆ): ಆಳ್ವಾಸ್ ವಿರಾಸತ್‌ನ ನಾಲ್ಕನೇ ದಿನವಾದ ಶುಕ್ರವಾರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಶೈಕ್ಷಣಿಕ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಸಂಚಲನ ಸೃಷ್ಟಿಸಿದರು. ಬಡಗುತಿಟ್ಟಿನ ಯಕ್ಷ ವೇಷಧಾರಿಗಳು ಕೃಷ್ಣನ ರಾಸಲೀಲೆಯನ್ನು ವೇದಿಕೆ ಮೇಲೆ ಪ್ರದರ್ಶಿಸಿದರು.ಮಂಟಪ ಪ್ರಭಾಕರ ಮತ್ತು ವಿದ್ವಾನ್ ಚಂದ್ರಶೇಖರ ನಾವುಡ ನಿರ್ದೇಶನದಲ್ಲಿ ಮೋಡಿಬಂದ ‘ಬಡಗುತಿಟ್ಟು ಯಕ್ಷಗಾನ ರಾಸಲೀಲೆ’ ಯಕ್ಷ ರೂಪಕ ಕೃಷ್ಣನ ಯದುಕುಲ ಲೋಕ ಕರಾವಳಿಯಲ್ಲಿ ಅವತರಿಸಿದಂತೆ ಭಾಸವಾಯಿತು.’ರಂಗನೇತಕೆ ಬಾರನೇ..’ ‘ಕೊಳಲನೂದುತ ಬಂದ ಕೃಷ್ಣ’ ಸಾಲಿಗೆ ಮಕ್ಕಳ ನೃತ್ಯ ಗೋಕುಲವನ್ನೇ

ವಿರಾಸತ್: ರಾಸಲೀಲೆ ನೃತ್ಯದ ವೈಭವ, ಡೊಳ್ಳಿನ ಅಬ್ಬರದ ಅಲೆ Read More »

error: Content is protected !!
Scroll to Top