ಸುದ್ದಿ

ಯುದ್ಧಕ್ಕೆ ಹೆದರಿ ಸೇನೆ ತೊರೆಯುತ್ತಿರುವ ಪಾಕ್‌ ಯೋಧರು

ಎರಡು ದಿನದಲ್ಲಿ 5 ಸಾವಿರಕ್ಕೂ ಅಧಿಕ ಸೈನಿಕರ ರಾಜೀನಾಮೆ ಇಸ್ಲಾಮಾಬಾದ್‌: ಪಹಲ್ಗಾಮ್‌ ಉಗ್ರ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ಥಾನ ನಡುವೆ ಉದ್ವಿಗ್ನ ಸ್ಥಿತಿ ಉಂಟಾಗಿ ಯಾವುದೇ ಕ್ಷಣದಲ್ಲಿ ಯುದ್ಧ ಶುರುವಾಗಬಹುದು ಎಂಬ ಪರಿಸ್ಥಿತಿ ಇರುವಾಗಲೇ ಪಾಕಿಸ್ಥಾನ ವಿಚಿತ್ರ ಸಮಸ್ಯೆಯೊಂದರಲ್ಲಿ ಸಿಲುಕಿ ಒದ್ದಾಡುತ್ತಿದೆ. ಯುದ್ಧ ಭೀತಿಯಿಂದ ಪಾಕಿಸ್ಥಾನದ ಸೈನಿಕರು ಸಾಮೂಹಿಕವಾಗಿ ರಾಜೀನಾಮೆ ನೀಡಲು ಶುರು ಮಾಡಿದ್ದಾರೆ. ರಾಜೀನಾಮೆ ನೀಡಿದವರಲ್ಲಿ ಬರೀ ಸೈನಿಕರು ಮಾತ್ರವಲ್ಲ, ಕ್ಯಾಪ್ಟನ್‌, ಕಮಾಂಡರ್‌ಗಳು ಸೇರಿ ಸೇನೆಯ ಉನ್ನತ ಅಧಿಕಾರಿಗಳೂ ಇದ್ದಾರೆ ಎಂದು ಕೆಲವು ಮಾಧ್ಯಮಗಳು […]

ಯುದ್ಧಕ್ಕೆ ಹೆದರಿ ಸೇನೆ ತೊರೆಯುತ್ತಿರುವ ಪಾಕ್‌ ಯೋಧರು Read More »

ವ್ಯಕ್ತಿಯೋರ್ವನ ಕುತ್ತಿಗೆಗೆ ಚೂರಿಯಿಂದ ಇರಿತ | ಗಂಭೀರ ಗಾಯ

ಬೆಳ್ತಂಗಡಿ: ವ್ಯಕ್ತಿಯೊಬ್ಬನ ಕುತ್ತಿಗೆಗೆ ಹಾಗೂ ಎದೆಗೆ ಚೂರಿಯಿಂದ ಇರಿದು ಕೊಲೆ ಮಾಡಲು ಯತ್ನಿಸಿದ ಘಟನೆ ಅಳದಂಗಡಿ ಸಂತೆ ಮಾರುಕಟ್ಟೆಯಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ . ಡೆನ್ನಿಸ್ ಪಿಂಟೋ ಹಲ್ಲೆಗೆ ಒಳಗಾದ ವ್ಯಕ್ತಿಯಾಗಿದ್ದಾರೆ. ಕೊಲೆಗೈದವ ಸ್ಥಳೀಯ ನಿವಾಸಿ ಶೀನ ಎಂಬವರು ಆರೋಪಿಯಾಗಿದ್ದಾನೆ. ಅಳದಂಗಡಿ ಸಂತೆ ಮಾರುಕಟ್ಟೆಯ ಒಳಗೆ ಎ.26 ರಂದು ರಾತ್ರಿಯ ವೇಳೆ ಕ್ಷುಲ್ಲಕ ಕಾರಣಕ್ಕೆ ಆರೋಪಿ ಶೀನ ಎಂಬಾತ ಹಾಗೂ ಡೆನ್ನಿಸ್ ಪಿಂಟೋ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಶೀನ

ವ್ಯಕ್ತಿಯೋರ್ವನ ಕುತ್ತಿಗೆಗೆ ಚೂರಿಯಿಂದ ಇರಿತ | ಗಂಭೀರ ಗಾಯ Read More »

ರಸ್ತೆ ಬದಿಯ ತೆರೆದ ಬಾವಿಗೆ ಬಿದ್ದ ವ್ಯಾನ್‌ : 12 ಮಂದಿ ಸ್ಥಳದಲ್ಲೇ ಸಾವು

ಭೋಪಾಲ : ಮಧ್ಯಪ್ರದೇಶದ ಮಂಡಸೋರ್ ಜಿಲ್ಲೆಯಲ್ಲಿ ಭಾನುವಾರ ವ್ಯಾನ್‌ ಬಾವಿಗೆ ಬಿದ್ದು ಅದರಲ್ಲಿದ್ದ 12 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ಭೀಕರ ಅಪಘಾತ ಸಂಭವಿಸಿದೆ. ಜಿಲ್ಲೆಯ ನಾರಾಯಣಗಢ ಪೊಲೀಸ್ ಠಾಣೆ ವ್ಯಾಪ್ತಿಯ ಕಚರಿಯಾ ಗ್ರಾಮದಲ್ಲಿ ವೇಗವಾಗಿ ಬಂದ ವ್ಯಾನ್‌ ನಿಯಂತ್ರಣ ತಪ್ಪಿ ಆಳವಾದ ಬಾವಿಗೆ ಬಿದ್ದಿದೆ. ರಕ್ಷಿಸಲು ಬಾವಿಗೆ ಹಾರಿದ ಯುವಕನೂ ಸಾವಿಗೀಡಾಗಿದ್ದಾನೆ. ಮೃತಪಟ್ಟವರಲ್ಲಿ ನಾಲ್ವರು ಮಹಿಳೆಯರೂ ಸೇರಿದ್ದಾರೆ. ನಾಲ್ಕು ಮಂದಿಯನ್ನು ರಕ್ಷಿಸಲಾಗಿದೆ. ಉನ್ಹೆಲ್ ಮತ್ತು ರತ್ಲಂ ಜಿಲ್ಲೆಗಳ ಜನರು ವ್ಯಾನಿನಲ್ಲಿ ಪ್ರಯಾಣಿಸುತ್ತಿದ್ದರು. ನೀಮುಚ್ ಜಿಲ್ಲೆಯ ದೇವಸ್ಥಾನಕ್ಕೆ ಭೇಟಿ

ರಸ್ತೆ ಬದಿಯ ತೆರೆದ ಬಾವಿಗೆ ಬಿದ್ದ ವ್ಯಾನ್‌ : 12 ಮಂದಿ ಸ್ಥಳದಲ್ಲೇ ಸಾವು Read More »

ರೈಲ್ವೆ ನೇಮಕಾತಿ ಮಂಡಳಿ ಪರೀಕ್ಷೆಯಲ್ಲಿ ಜನಿವಾರ ತೆಗೆಸದಂತೆ ಸಚಿವ ಸೋಮಣ್ಣ ಸೂಚನೆ

ಸಂಸದ ಕ್ಯಾ.ಬ್ರಿಜೇಶ್‌ ಚೌಟ ಮನವಿಗೆ ಸ್ಪಂದಿಸಿ ಕ್ಷಿಪ್ರ ನಿರ್ಧಾರ ಕೈಗೊಂಡ ಸಚಿವರು ಮಂಗಳೂರು : ರೈಲ್ವೆ ನೇಮಕಾತಿ ಮಂಡಳಿಯ ನರ್ಸಿಂಗ್ ಸೂಪರಿಂಟೆಂಡೆಂಟ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಜನಿವಾರ ಮತ್ತು ಮಂಗಳಸೂತ್ರ ತೆಗೆಸಬಾರದು ಎಂದು ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪರೀಕ್ಷೆಗೆ ಹಾಜರಾಗುವವರು ಧಾರ್ಮಿಕ ಸಂಕೇತಗಳು ಮತ್ತು ಮಂಗಳಸೂತ್ರವನ್ನು ತೆಗೆದು ಬರಬೇಕು ಎಂದು ಪ್ರವೇಶ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಇದಕ್ಕೆ ಹಿಂದೂ ಪರ ಸಂಘಟನೆಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ದಕ್ಷಿಣ ಕನ್ನಡ ಬಿಜೆಪಿ

ರೈಲ್ವೆ ನೇಮಕಾತಿ ಮಂಡಳಿ ಪರೀಕ್ಷೆಯಲ್ಲಿ ಜನಿವಾರ ತೆಗೆಸದಂತೆ ಸಚಿವ ಸೋಮಣ್ಣ ಸೂಚನೆ Read More »

ರೈಲ್ವೆ ನೇಮಕಾತಿ ಮಂಡಳಿ ಪರೀಕ್ಷೆಗೂ ಸುತ್ತಿಕೊಂಡ ಜನಿವಾರ ವಿವಾದ

ಜನಿವಾರ, ಮಂಗಳಸೂತ್ರ ತೆಗೆಯಬೇಕೆಂಬ ಮಾರ್ಗಸೂಚಿಗೆ ವಿರೋಧ ಮಂಗಳೂರು: ಕರ್ನಾಟಕದಲ್ಲಿ ಸಿಇಟಿ ಪರೀಕ್ಷೆಯ ವೇಳೆ ಸೃಷ್ಟಿಯಾದ ಜನಿವಾರ ವಿವಾದ ಈಗ ಕೇಂದ್ರ ಸರಕಾರ ನಡೆಸುವ ರೈಲ್ವೆ ನೇಮಕಾತಿ ಮಂಡಳಿ ಪರೀಕ್ಷೆಗೂ ಸುತ್ತಿಕೊಂಡಿದೆ. ಮಂಡಳಿಯ ಇಲಾಖೆಯ ನರ್ಸಿಂಗ್ ಸೂಪರಿಂಟೆಂಡೆಂಟ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಧಾರ್ಮಿಕ ಚಿಹ್ನೆಗಳಾದ ಮಂಗಳಸೂತ್ರ ಮತ್ತು ಜನಿವಾರ ಕಳಚಿಟ್ಟು ಪರೀಕ್ಷೆ ಬರೆಯಬೇಕೆಂದು ಹೇಳಿರುವುದು ಆಕ್ರೋಶಕ್ಕೆ ಗುರಿಯಾಗಿದೆ. ರೈಲ್ವೆ ನೇಮಕಾತಿ ಮಂಡಳಿಯು ನರ್ಸಿಂಗ್ ಸೂಪರಿಂಟೆಂಡೆಂಟ್ ಪರೀಕ್ಷೆ ಏ.29ರಂದು ಶುರುವಾಗಲಿದೆ. ಈ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪರೀಕ್ಷಾ

ರೈಲ್ವೆ ನೇಮಕಾತಿ ಮಂಡಳಿ ಪರೀಕ್ಷೆಗೂ ಸುತ್ತಿಕೊಂಡ ಜನಿವಾರ ವಿವಾದ Read More »

ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ವಾಲಿಬಾಲ್‌ ಕೋಚ್‌ ವಿರುದ್ಧ ಪೋಕ್ಸೊ ಕೇಸ್‌

ಹಿಂದು ಕಾರ್ಯಕರ್ತರು ಹಲ್ಲೆ ಮಾಡಿದ ಕುರಿತು ಪ್ರತಿದೂರು ದಾಖಲು ಬೆಳ್ತಂಗಡಿ: ಖಾಸಗಿ ಕಾಲೇಜು ವಿದ್ಯಾರ್ಥಿನಿಗೆ ಅಸಭ್ಯ ಮೆಸೇಜ್‌ ಕಳುಹಿಸಿ ಕಿರುಕುಳ ನೀಡುತ್ತಿದ್ದ ವಾಲಿಬಾಲ್ ಕೋಚ್‌ ವಿರುದ್ಧ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪೋಕ್ಸೊ ಕೇಸ್‌ ದಾಖಲಾಗಿದೆ. ಕಾರ್ಕಳದ ಸಯ್ಯದ್ (24) ಎಂಬಾತ ಕಿರುಕುಳ ನೀಡಿದ ಆರೋಪಿ. 17ರ ಹರೆಯದ ವಿದ್ಯಾರ್ಥಿನಿಗೆ ಸಯ್ಯದ್‌ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮೆಸೇಜ್‌ಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಈ ವಿಚಾರ ತಿಳಿದ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಏ.26ರಂದು

ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ವಾಲಿಬಾಲ್‌ ಕೋಚ್‌ ವಿರುದ್ಧ ಪೋಕ್ಸೊ ಕೇಸ್‌ Read More »

ನಿರ್ಜನ ಸ್ಥಳದಲ್ಲಿ ಯುವಕನ ಶವ ಪತ್ತೆ : ಕೊಲೆ ಶಂಕೆ

ಕ್ರಿಕೆಟ್‌ ವಿಚಾರದಲ್ಲಿ ನಡೆದ ಹಲ್ಲೆಯಿಂದ ಸಾವಿಗೀಡಾದ ಅನುಮಾನ ಮಂಗಳೂರು : ನಗರದ ಹೊರವಲಯದ ಕುಡುಪು ಭಟ್ರಕಲ್ಲುರ್ಟಿ ದೈವಸ್ಥಾನದ ಬಳಿ ನಿರ್ಜನ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಭಾನುವಾರ ಸಂಜೆ ವೇಳೆಗೆ ಪತ್ತೆಯಾಗಿದೆ. ವ್ಯಕ್ತಿಯನ್ನು ಹಲ್ಲೈಗೈದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇಲ್ಲಿನ ಸ್ಥಳೀಯರಿಗೆ ಮೃತ ವ್ಯಕ್ತಿಯ ಪರಿಚಯವಿಲ್ಲ. ಆತ ದಿನಗೂಲಿ ಕಾರ್ಮಿಕನಾಗಿರಬಹುದು ಎಂದು ಶಂಕಿಸಲಾಗಿದೆ. ಇಲ್ಲೆ ಸಮೀಪ ಕ್ರಿಕೆಟ್‌ ಪಂದ್ಯಾಟವೊಂದು ನಡೆದಿದ್ದು, ಅದನ್ನು ನೋಡಲು ಬಂದ ವ್ಯಕ್ತಿ ಕೊಲೆಯಾಗಿದ್ದಾನೆಯೇ ಎಂಬ ಅನುಮಾನವೂ ಇದೆ. ಕುಡುಪು ಕಟ್ಟೆ ಸಮೀಪದ

ನಿರ್ಜನ ಸ್ಥಳದಲ್ಲಿ ಯುವಕನ ಶವ ಪತ್ತೆ : ಕೊಲೆ ಶಂಕೆ Read More »

ಪಹಲ್ಗಾಮ್‌ ಸಂತ್ರಸ್ತರ ದುಃಖ ನೋಡುವಾಗ ಭಾರತೀಯರ ರಕ್ತ ಕುದಿಯುತ್ತಿದೆ : ಮೋದಿ

ಮನ್‌ ಕಿ ಬಾತ್‌ನಲ್ಲಿ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮದ ಭರವಸೆ ನವದೆಹಲಿ: ಪಹಲ್ಗಾಮ್ ದಾಳಿಯಿಂದ ಸಂತ್ರಸ್ತರಾಗಿರುವವರು ದುಃಖಿಸುತ್ತಿರುವ ದೃಶ್ಯಗಳನ್ನು ನೋಡುವಾಗ ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ತಿಂಗಳ ರೇಡಿಯೊ ಕಾರ್ಯಕ್ರಮ ‘ಮನ್ ಕಿ ಬಾತ್’ನ 121ನೇ ಸಂಚಿಕೆಯಲ್ಲಿ ಮಾತನಾಡಿದ ಮೋದಿ, ಪಹಲ್ಗಾಮ್ ದಾಳಿಯಿಂದ ನನಗೆ ತುಂಬಾ ನೋವಾಗಿದೆ. ಇದು ಭಯೋತ್ಪಾದನೆಯ ಬೆಂಬಲಿಗರ ಹತಾಶೆ, ಹೇಡಿತನವನ್ನು ತೋರಿಸುತ್ತದೆ. ಸಂತ್ರಸ್ತರ ಕುಟುಂಬಕ್ಕೆ ನ್ಯಾಯ ಸಿಗಲಿದೆ. ಅಪರಾಧ ಎಸಗಿದವರಿಗೆ, ಬೆಂಬಲಿಗರಿಗೆ, ಸೂತ್ರಧಾರಿಗಳ ವಿರುದ್ಧ ಕಠಿಣ

ಪಹಲ್ಗಾಮ್‌ ಸಂತ್ರಸ್ತರ ದುಃಖ ನೋಡುವಾಗ ಭಾರತೀಯರ ರಕ್ತ ಕುದಿಯುತ್ತಿದೆ : ಮೋದಿ Read More »

ನದಿಗೆ ಬಿದ್ದು ಯುವಕ ಸಾವು

ಉಡುಪಿ: ಹೆಬ್ರಿ ಸಮೀಪ ಸೀತಾನದಿ ನದಿಗೆ ಆಕಸ್ಮಿಕವಾಗಿ ಜಾರಿ ಬಿದ್ದು ಯುವಕ ಸಾವನ್ನಪ್ಪಿದ ದುರಂತ ಘಟನೆ ಸಂಭವಿಸಿದೆ. ಮೃತನನ್ನು ಹೆಬ್ರಿಯ ಕಿನ್ನಿಗುಡ್ಡೆ ನಿವಾಸಿ ಸುಧಾಕರ ಶೆಟ್ಟಿ ಅವರ ಪುತ್ರ ಸಂಕೇತ್ ಶೆಟ್ಟಿ (24) ಎಂದು ಗುರುತಿಸಲಾಗಿದೆ. ಸಂಕೇತ್ ತನ್ನ ಸ್ನೇಹಿತರೊಂದಿಗೆ ನದಿಗೆ ಹೋಗಿದ್ದಾಗ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಹೆಬ್ರಿ ಗ್ರಾಮ ಪಂಚಾಯತ್ ಅಡಿಯಲ್ಲಿ ಅಂಗವಿಕಲ ವ್ಯಕ್ತಿಗಳ ಪುನರ್ವಸತಿ ವಿಭಾಗದಲ್ಲಿ ಅವರು ಉದ್ಯೋಗದಲ್ಲಿದ್ದರು ಮತ್ತು ಹೆಬ್ರಿ ಜೆಸಿಐ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ನದಿಗೆ ಬಿದ್ದು ಯುವಕ ಸಾವು Read More »

ಇಂದು ವಿಜ್ಞಾನಿ ಡಾ.ಕಸ್ತೂರಿ ರಂಗನ್‌ ಅಂತ್ಯಕ್ರಿಯೆ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿ ರಂಗನ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಭಾನುವಾರ ನಡೆಸಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ. ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಡಾ.ಕಸ್ತೂರಿ ರಂಗನ್ ನಿನ್ನೆ ಬೆಂಗಳೂರಿನಲ್ಲಿರುವ ಅವರ ನಿವಾಸದಲ್ಲಿ ನಿಧನರಾದರು. ಅವರ ಪಾರ್ಥೀವ ಶರೀರವನ್ನು ಇಂದು ಮಧ್ಯಾಹ್ನ 12 ರವರೆಗೆ ರಾಮನ್ ಸಂಶೋಧನಾ ಸಂಸ್ಥೆಯಲ್ಲಿ ಜನರ ಅಂತಿಮ ದರ್ಶನಕ್ಕಾಗಿ ಇರಿಸಲಾಗುವುದು ಎಂದು ಇಸ್ರೊ ತಿಳಿಸಿದೆ. ಡಾ. ಕಸ್ತೂರಿರಂಗನ್ ಅವರ ಹಿರಿಯ ಮಗ ಸಂಜಯ್ ರಂಜನ್

ಇಂದು ವಿಜ್ಞಾನಿ ಡಾ.ಕಸ್ತೂರಿ ರಂಗನ್‌ ಅಂತ್ಯಕ್ರಿಯೆ Read More »

error: Content is protected !!
Scroll to Top